Karnataka Assembly Election 2023: ಮುಸ್ಲಿಮರಿಗೆ ಹೊಸ ಆರಂಭವಾಗಲಿದೆಯೇ ಈ ಚುನಾವಣೆ?

ಪ್ರಸ್ತುತ 15ನೇ ವಿಧಾನಸಭೆಯಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಒಂದಂಕಿಗೆ ಇಳಿದಿದೆ. ಸದ್ಯ ರಾಜ್ಯದಲ್ಲಿ 7 ಮುಸ್ಲಿಂ ಶಾಸಕರಿದ್ದು, ಅವರೆಲ್ಲ ಕಾಂಗ್ರೆಸ್​​ನವರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ 8 ಮಂದಿಯನ್ನು ಕಣಕ್ಕಿಳಿಸಿತ್ತು. 2013ರಲ್ಲಿ ರಚನೆಯಾಗಿದ್ದ 14ನೇ ವಿಧಾನಸಭೆಯಲ್ಲಿ 11 ಮಂದಿ ಮುಸ್ಲಿಂ ಶಾಸಕರಿದ್ದರು.

Karnataka Assembly Election 2023: ಮುಸ್ಲಿಮರಿಗೆ ಹೊಸ ಆರಂಭವಾಗಲಿದೆಯೇ ಈ ಚುನಾವಣೆ?
ಕರ್ನಾಟಕದ ಮುಸ್ಲಿಂ ರಾಜಕಾರಣಿಗಳುImage Credit source: Twitter/@BZZameerAhmedK
Follow us
Ganapathi Sharma
|

Updated on: Mar 27, 2023 | 9:24 PM

ಮುಸ್ಲಿಂ ಸಬಲೀಕರಣ, ವೋಟ್ ಬ್ಯಾಂಕ್, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಕೋಮುವಾದ, ಜಾತ್ಯತೀತ ಶಕ್ತಿಗಳು, ಧ್ರುವೀಕರಣದಂತಹ ಪದಗಳು ಇದೀಗ ಚುನಾವಣೆ (Karnataka Assembly Election 2023) ಹೊಸ್ತಿಲಲ್ಲಿ ಆಗಾಗ ಕೇಳಿಬರುವ ಪದಗಳು. ಪ್ರಮುಖ ರಾಜಕೀಯ ನಾಯಕರು ಉರುಳಿಸುವ ಪದ ದಾಳಗಳು. ಕರ್ನಾಟಕದಲ್ಲಿ ಜಾತ್ಯತೀತ ಪಕ್ಷಗಳೆಂದು ಕರೆಸಿಕೊಳ್ಳುವ ಪ್ರಮುಖ ಪಕ್ಷಗಳಲ್ಲಿಯೂ ಪ್ರಚಾರದ ಪೋಸ್ಟರ್​​ಗಳಲ್ಲಿ ಹೆಚ್ಚು ಮುಸ್ಲಿಂ ನಾಯಕರ (Muslim Leaders) ಚಿತ್ರಗಳು ಕಾಣಿಸುತ್ತಿಲ್ಲ. ತಮ್ಮನ್ನು ಜಾತ್ಯತೀತ ಶಕ್ತಿಗಳೆಂದು ಬಿಂಬಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿಯೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವನ್ನು ಲಘುವಾಗಿ ತೆಗೆದುಕೊಂಡಿರುವುದು ಸ್ಪಷ್ಟ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮುಸ್ಲಿಂ ಮತದಾರರನ್ನು ಒಟ್ಟುಗೂಡಿಸುವ ಪ್ರಯತ್ನಗಳನ್ನು ಅವರು ಮಾಡಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ತಾವು ಅಲ್ಪಸಂಖ್ಯಾತರನ್ನು ಓಲೈಸುವವರು ಎಂದು ಬಣ್ಣಿಸಲು ಬಿಜೆಪಿಗೆ ಇದು ಒಂದು ನೆಪವಾಗಿ ಪರಿಣಮಿಸಬಾರದು ಎಂಬುದು ಆ ಪಕ್ಷಗಳ ಕಾಳಜಿಯಾಗಿದೆ. ಆದರೆ ಈ ಬಾರಿ ಕಾಂಗ್ರೆಸ್, ಜೆಡಿಎಸ್​ ಅಷ್ಟೇ ಅಲ್ಲ. ಕಣದಲ್ಲಿ ಇನ್ನೂ ಹಲವಾರು ಪಕ್ಷಗಳಿವೆ.

ಎಸ್​ಡಿಪಿಐ, ಎಐಎಂಐಎಂ, ಬಹುಜನ ಸಮಾಜ ಪಕ್ಷ, ಎಎಪಿ, ತೃಣಮೂಲ ಕಾಂಗ್ರೆಸ್, ಈ ಎಲ್ಲ ಪಕ್ಷಗಳೂ ಮುಸ್ಲಿಂ ಮತಗಳನ್ನು ಸೆಳೆಯಲು ಮುಂದಾಗಿವೆ. ಜತೆಗೆ ಈ ಪಕ್ಷಗಳು ಕಾಂಗ್ರೆಸ್ ಹಾಗೂ ಜೆಡಿಎಸ್​ ರೀತಿಯ ಹುಸಿ ಜಾತ್ಯತೀತರು ತಾವಲ್ಲ ಎಂದು ಬಿಂಬಿಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಪಕ್ಷಗಳು ಈಗಾಗಲೇ ಬೆಂಗಳೂರಿನಲ್ಲಿ ಕಚೇರಿಗಳನ್ನೂ ತೆರೆದಿದ್ದು, ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಎಸ್​​ಡಿಪಿಐ ಹಾಗೂ ಎಐಎಂಐಎಂ ಪಕ್ಷಗಳು ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಪಕ್ಷಗಳು ತಮ್ಮ ಸೀಮಿತ ಸಾಮರ್ಥ್ಯಗಳನ್ನು ತಿಳಿದಿವೆ. ಆದ್ದರಿಂದ, ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಈ ಪಕ್ಷಗಳು ಕಾಂಗ್ರೆಸ್ ಮತ್ತು ಜೆಡಿಎಸ್​​ನೊಂದಿಗೆ ಸ್ಪರ್ಧಿಸಬೇಕಾಗಿದೆ. ಜತೆಗೆ ಕೆಲವು ಕಡೆಗಳಲ್ಲಿ ಇತರ ಪಕ್ಷಗಳೊಂದಿಗೆ ಸೀಟು ಹಂಚಿಕೆಯನ್ನೂ ಮಾಡಿಕೊಳ್ಳಬೇಕಾಗಿದೆ.

ಕ್ಷೀಣಿಸುತ್ತಿರುವ ಶಕ್ತಿ

ಪ್ರಸ್ತುತ 15ನೇ ವಿಧಾನಸಭೆಯಲ್ಲಿ ಕರ್ನಾಟಕದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಒಂದಂಕಿಗೆ ಇಳಿದಿದೆ. ಸದ್ಯ ರಾಜ್ಯದಲ್ಲಿ 7 ಮುಸ್ಲಿಂ ಶಾಸಕರಿದ್ದು, ಅವರೆಲ್ಲ ಕಾಂಗ್ರೆಸ್​​ನವರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ 8 ಮಂದಿಯನ್ನು ಕಣಕ್ಕಿಳಿಸಿತ್ತು. 2013ರಲ್ಲಿ ರಚನೆಯಾಗಿದ್ದ 14ನೇ ವಿಧಾನಸಭೆಯಲ್ಲಿ 11 ಮಂದಿ ಮುಸ್ಲಿಂ ಶಾಸಕರಿದ್ದರು. 1978ರಲ್ಲಿ ಅತಿಹೆಚ್ಚು ಸಂಖ್ಯೆಯ ಮುಸ್ಲಿಂ ಶಾಸಕರು, ಅಂದರೆ 16 ಮಂದಿ ಇದ್ದರು. 1983ರಲ್ಲಿ ಅತಿ ಕಡಿಮೆ, ಅಂದರೆ ಇಬ್ಬರು ಮುಸ್ಲಿಂ ಶಾಕಸರಿದ್ದರು.

ಇದನ್ನೂ ಓದಿ: Karnataka Assembly Election 2023: ಬಿಜೆಪಿ ಭದ್ರಕೋಟೆ ರಾಜಾಜಿನಗರ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಭಾರಿ ಪೈಪೋಟಿ?

2011ರ ಜನಗಣತಿಯ ಪ್ರಕಾರ ಮುಸ್ಲಿಮರ ಸಂಖ್ಯೆ ಶೇ 12.92ರಷ್ಟಿತ್ತು. ಆಗ ಒಟ್ಟು ಜನಸಂಖ್ಯೆ 6.11 ಕೋಟಿ ಇತ್ತು. ಕಳೆದ ದಶಕದಲ್ಲಿ ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿರುವ ಮುಸ್ಲಿಮರ ಸಂಖ್ಯೆಯನ್ನು ನಾವು ಲೆಕ್ಕ ಹಾಕಿದ್ದೇವೆ ಎಂದು ಎಸ್​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟ್ ತಿಳಿಸಿದ್ದಾರೆ. ಸದ್ಯ 75 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಈ ಸಂಖ್ಯೆ ಒಂದು ತಿಂಗಳಲ್ಲಿ 80 ಲಕ್ಷವನ್ನು ದಾಟಬಹುದು. ಯಾಕೆಂದರೆ ಶೀಘ್ರದಲ್ಲೇ 18 ವರ್ಷ ತುಂಬುವ ಯುವಕರು ಅರ್ಹ ಮತದಾರರಾಗುತ್ತಾರೆ ಎಂದಿದ್ದಾರೆ ಅವರು.

ಆರೋಪಗಳ ಮಹಾಪೂರ

ಕಾಂಗ್ರೆಸ್​ನಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡಿರುವ, ಉತ್ತಮ ಸ್ಥಾನಮಾನ ಹೊಂದಿರುವ ಕೆಲವೇ ಮುಸ್ಲಿಂ ನಾಯಕರನ್ನು ಬಿಟ್ಟರೆ ಉಳಿದಂತೆ ಸಮುದಾಯದವರ ಪ್ರಾತಿನಿಧ್ಯ ಕಡಿಮೆಯಾಗಿರುವ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇವೆ. ದಿವಂಗತ ಸಿ.ಕೆ.ಜಾಫರ್ ಷರೀಫ್ ಅವರಂತೆ ಈಗಿನ ನಾಯಕರು ಯುವಕರನ್ನು ರಾಜಕೀಯವಾಗಿ ಬೆಳೆಸುತ್ತಿಲ್ಲ ಎಂಬ ಆರೋಪಗಳು ಬಲವಾಗಿವೆ. ಕಾಂಗ್ರೆಸ್ ದಶಕಗಳಿಂದ ಅಲ್ಪಸಂಖ್ಯಾತರನ್ನು ಲಘುವಾಗಿ ಪರಿಗಣಿಸಿದೆ ಎಂಬುದು ಸಾಮಾನ್ಯ ವಾದ. ದೇಶಾದ್ಯಂತ ಅಲ್ಪಸಂಖ್ಯಾತರ ಪ್ರಸ್ತುತ ಸಾಮಾಜಿಕ ಆರ್ಥಿಕ ಸ್ಥಿತಿಗೆ ಕಾಂಗ್ರೆಸ್ ಅನ್ನು ದೂಷಿಸುವಾಗ ಅವರಿಂದ ಮಾತೇ ಹೊರಡುತ್ತಿಲ್ಲ.

ಬಿಜೆಪಿಯು ಹಿಜಾಬ್ ವಿವಾದ ಸೃಷ್ಟಿಸಿದಾಗ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣದ ಕಾರಣಕ್ಕಾಗಿ ನಿಲ್ಲುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮುಸ್ಲಿಂ ಮುಖಂಡರು ವಿಫಲರಾಗಿದ್ದಾರೆ ಎಂಬ ಆರೋಪ ಇದೆ. ಟಿಪ್ಪು ಜಯಂತಿ ಆಚರಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದಲ್ಲಿ ಯಾವುದೇ ಹುರುಳಿಲ್ಲ. ಮುಸ್ಲಿಮರಿಗೆ ಜಯಂತಿ ಆಚರಿಸುವ ಸಂಪ್ರದಾಯವೂ ಇಲ್ಲ ಎನ್ನಲಾಗಿತ್ತು.

ಮುಸ್ಲಿಮರು ಪ್ರವಾದಿ ಮೊಹಮ್ಮದ್ ಅವರ ಜಯಂತಿಯನ್ನೂ ಆಚರಿಸುವುದಿಲ್ಲ. ಬಿಜೆಪಿಯನ್ನು ರಾಕ್ಷಸ ಎಂದು ಕಾಂಗ್ರೆಸ್ ಬಿಂಬಿಸಿದ್ದು ಬಿಟ್ಟ್ರೆ, ಎಂದಿಗೂ ಅದರ ವಿರುದ್ಧ ಹೋರಾಡಲಿಲ್ಲ ಎಂಬ ದೂರು ಸಾಮಾನ್ಯವಾಗಿದೆ.

ಎಐಎಂಐಎಂ ತಂತ್ರಗಾರಿಕೆ

ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಪ್ರದೇಶಗಳಲ್ಲಿ ಎಸ್​ಡಿಪಿಐ ಗಮನ ಕೇಂದ್ರೀಕರಿಸಿದ್ದರೆ, ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಕಲ್ಯಾಣ ಕರ್ನಾಟಕ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಉಭಯ ಪಕ್ಷಗಳ ಹಾದಿ ಬೇರೆಯಾಗಿದ್ದರೂ ಬಿಜೆಪಿಯನ್ನು ಸಾಮಾನ್ಯ ಶತ್ರುವೆಂದೇ ಭಾವಿಸುತ್ತವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 15 ಸ್ಥಾನಗಳಿಂದ ಸ್ಪರ್ಧಿಸಲು ತಮ್ಮ ಪಕ್ಷ ಚಿಂತನೆ ನಡೆಸಿದೆ ಎಂದು ಎಐಎಂಐಎಂ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ರಹೀಂ ಮಿರ್ಚಿ ತಿಳಿಸಿದ್ದಾರೆ. ಪಕ್ಷವು ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು ಈಗಾಗಲೇ ಘೋಷಿಸಿದೆ. ಒಟ್ಟಾರೆಯಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಏಳು, ಬೀದರ್‌ನಲ್ಲಿ ಐದು, ಯಾದಗಿರಿಯಲ್ಲಿ ಎರಡು ಮತ್ತು ಬೆಳಗಾವಿಯಲ್ಲಿ ಒಂದು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

ಇದೀಗ ಮುಸ್ಲಿಮರ ಮೀಸಲಾತಿಯನ್ನು ಕಿತ್ತು ಒಕ್ಕಲಿಗರು ಮತ್ತು ಲಿಂಗಾಯತರಿಗೆ ನೀಡಿದ ಬಗ್ಗೆಯೂ ಸಮುದಾಯದವರಲ್ಲಿ ಬಹಳಷ್ಟು ಅಸಮಾಧಾನವಿದೆ. ಆದರೆ, ಮುಸ್ಲಿಮರಿಗಾಗಿ ಕಣ್ಣೀರು ಹಾಕುತ್ತಿವೆ ಎನ್ನಲಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಚಾರವಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಮುಸ್ಲಿಂ ಮತಗಳು ಛಿದ್ರವಾಗಿದ್ದರೂ ಹಿಂದಿನಂತೆ ಕೇಸರಿ ಪಡೆಯ ವಿರುದ್ಧ ಕ್ರೋಢೀಕರಿಸಲಾಗಿದೆ ಎಂದೇ ಭಾವಿಸಬಹುದಾಗಿದೆ.

(ಆಶಾ ಕೃಷ್ಣಮೂರ್ತಿ ಅವರು ‘ನ್ಯೂಸ್​9’ನಲ್ಲಿ ಪ್ರಕಟಿಸಿದ ವಿಶ್ಲೇಷಣೆಯ ಸಂಕ್ಷಿಪ್ತ ರೂಪ)

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಅಪ್​ಡೇಟ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್