AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕ್​ಫಾಸ್ಟ್​​ಗೂ ಮುನ್ನ ಹೈಕಮಾಂಡ್ ಕರೆ ರಹಸ್ಯ: ಸಿಎಂ, ಡಿಸಿಎಂ ನಡುವೆ ಮಧ್ಯಸ್ಥಿಕೆ ವಹಿಸಿದ್ರಾ ಶಾಸಕ ಪೊನ್ನಣ್ಣ?

ಕಳೆದ ಒಂದೂವರೆ ತಿಂಗಳಿಂದ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಸೃಷ್ಟಿಸಿದ್ದ ಪಟ್ಟದಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ ಈ ಬ್ರೇಕ್​​ಫಾಸ್ಟ್​ಗೆ ಹೈಕಮಾಂಡ್ ತೆರೆಮರೆಯಲ್ಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿತ್ತು.

ಬ್ರೇಕ್​ಫಾಸ್ಟ್​​ಗೂ ಮುನ್ನ ಹೈಕಮಾಂಡ್ ಕರೆ ರಹಸ್ಯ: ಸಿಎಂ, ಡಿಸಿಎಂ ನಡುವೆ ಮಧ್ಯಸ್ಥಿಕೆ ವಹಿಸಿದ್ರಾ ಶಾಸಕ ಪೊನ್ನಣ್ಣ?
ಶಾಸಕ ಪೊನ್ನಣ್ಣ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​
ಗಂಗಾಧರ​ ಬ. ಸಾಬೋಜಿ
|

Updated on:Nov 29, 2025 | 7:26 PM

Share

ಬೆಂಗಳೂರು, ನವೆಂಬರ್​ 29: ಕಾಂಗ್ರೆಸ್ ಬಣದಾಟಕ್ಕೆ ಬ್ರೇಕ್​ಫಾಸ್ಟ್ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ ಜೊತೆಯಾಗಿ ಉಪಾಹಾರ ಸೇವಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂದು ಬೆಳಗ್ಗೆಯೇ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್, ಸಿಎಂ ಜೊತೆ ಉಪಾಹಾರಕ್ಕೆ ಜೊತೆಯಾದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಿನುದ್ದಕ್ಕೂ ಪಕ್ಷ ಸಂಘಟನೆ, 2028ರ ಚುನಾವಣೆ ಅಂತಾ ಹೇಳುತ್ತಾ ಒಗ್ಗಟ್ಟನ್ನು ಪ್ರದರ್ಶಿಸಿದರು. ಆದರೆ ಈ ಬ್ರೇಕ್​ಫಾಸ್ಟ್, ಒಗ್ಗಟ್ಟಿನ ಜಪ ಎಲ್ಲವೂ ದಿಢೀರ್ ಆಗಿದ್ದಲ್ಲ. ಈ ಕುರ್ಚಿ ಕದನ ಕ್ಲೈಮ್ಯಾಕ್ಸ್​​ನ ​ಕಥೆ, ಚಿತ್ರಕತೆ, ನಿರ್ದೇಶನ ಎಲ್ಲವೂ ಮಾಡಿದ್ದು ಹೈಕಮಾಂಡ್​ನ ಒಂದು ಕರೆ ಬಳಿಕವೇ.

ಫೋನ್ ಕಾಲ್, ಬ್ರೇಕ್​​ಫಾಸ್ಟ್​ಗೆ ಹೈಕಮಾಂಡ್ ಆ್ಯಕ್ಷನ್, ಕಟ್?

ಇಷ್ಟು ದಿನ ಕೊಟ್ಟ ಮಾತು, ನಂಬಿಕೆ, ಹೈಕಮಾಂಡ್ ಒಪ್ಪಂದ ಅಂತಾ ಟ್ವೀಟು, ಮಾತುಗಳ ಮೂಲಕ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಾತಿಗೆ ಕೌಂಟರ್ ಮಾತು, ಟ್ವೀಟ್​ಗೆ ಮತ್ತೊಂದು ಟ್ವೀಟು ಮಾಡುತ್ತಲೇ ಕೊಟ್ಟ ಮಾತಿನ ಕದನಕ್ಕೆ ಬಂದು ನಿಂತಿತ್ತು. ಇದೀಗ ಈ ಪಟ್ಟದಾಟಕ್ಕೆ ತೆರೆ ಬಿದ್ದಿದೆ. ಆದರೆ ಈ ಬ್ರೇಕ್​​ಫಾಸ್ಟ್​ಗೆ ಹೈಕಮಾಂಡ್ ತೆರೆಮರೆಯಲ್ಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿತ್ತು. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಶಾಸಕ ಎ.ಎಸ್ ಪೊನ್ನಣ್ಣಗೆ ಹೈಕಮಾಂಡ್​​ನಿಂದ ಕರೆಬಂದಿತ್ತು. ಸಿಎಂ ನಿವಾಸದಲ್ಲಿ ಬ್ರೇಕ್​ಫಾಸ್ಟ್ ಮಾಡಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ ಮಾಡಬೇಕು ಅಂತಾ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಹೈಕಮಾಂಡ್ ಫೋನ್ ಕಾಲ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮೊನ್ನೆಯೇ ವೇಣುಗೋಪಾಲ್ ಪೊನ್ನಣ್ಣಗೆ ಹೈಕಮಾಂಡ್ ಕರೆ ಮಾಡಿದ್ದರು. ಡಿ.ಕೆ ಶಿವಕುಮಾರ್​ರವರನ್ನು ಬ್ರೇಕ್​ಫಾಸ್ಟ್​​ಗೆ ಕರೆಯಿರಿ ಅಂತಾ. ಬಳಿಕ ಡಿಕೆ ಶಿವಕುಮಾರ್​ಗೂ ಕರೆ ಮಾಡಿದ್ದರು. ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಡಿಕೆ ಶಿವಕುಮಾರ್​ ಕರೆದಿದ್ದರು. ಹೈಕಮಾಂಡ್ ಬ್ರೇಕ್​ಫಾಸ್ಟ್​ಗೆ ಕರೆಯಲು ಹೇಳಿದ್ದರು. ನಮ್ಮ ಮನೆಯಲ್ಲೇ ಬ್ರೇಕ್​ಫಾಸ್ಟ್ ಮಾಡುವಂತೆ ಹೇಳಿದ್ದೆ. ಇನ್ನೊಂದು ದಿನ ಊಟಕ್ಕೆ ಬರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಮತ್ತು ಡಿಸಿಎಂ ನಡುವೆ ಮಧ್ಯಸ್ಥಿಕೆ ವಹಿಸಿದ್ರಾ ಶಾಸಕ ಪೊನ್ನಣ್ಣ?

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶಾಸಕ ಎ.ಎಸ್. ಪೊನ್ನಣ್ಣ, ಜೊತೆಗಿದ್ದ ಕಾರಣಕ್ಕೆ ಫೋನ್ ಕೊಟ್ಟೆ. ಅವರ ಜೊತೆಗಿದ್ದ ಕಾರಣ ಫೋನ್ ಕೊಡಿ ಅಂದರು. ಹೈಕಮಾಂಡ್ ಹೇಳಿದ್ದಕ್ಕೆ ನಾನು ಫೋನ್ ಕೊಟ್ಟೆ. ಇದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:42 pm, Sat, 29 November 25