ಸಿಎಂ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ 43 ಪ್ರಕರಣಗಳು ದಾಖಲಾಗಿವೆ: ಕಾಂಗ್ರೆಸ್​ ಮುಖಂಡ

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ವಾಗ್ದಾಳಿ ಮಾಡಿದ್ದಾರೆ. ಸ್ನೇಹಮಯಿ ಕೃಷ್ಣ ಓರ್ವ ಬ್ಲಾಕ್​ಮೇಲರ್​ ಎಂದು ಆರೋಪಿಸಿದ್ದಾರೆ.

ಸಿಎಂ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ 43 ಪ್ರಕರಣಗಳು ದಾಖಲಾಗಿವೆ: ಕಾಂಗ್ರೆಸ್​ ಮುಖಂಡ
ಎಂ ಲಕ್ಷ್ಮಣ
Follow us
| Updated By: ವಿವೇಕ ಬಿರಾದಾರ

Updated on:Oct 15, 2024 | 2:25 PM

ಮೈಸೂರು, ಅಕ್ಟೋಬರ್​ 15: ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸ್ನೇಹಮಯಿ ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಬಂಧಿಸಿ ವಿಚಾರ ನಡೆಸುವಂತೆ ಆಗ್ರಹಿಸಿದ್ದಾರೆ. ಪ್ರತಿನಿತ್ಯ ಲೋಕಾಯುಕ್ತ (Lokayukta) ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ (M Laxman) ಆರೋಪ ಮಾಡಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು (ಲಕ್ಷ್ಮಣ್) ಪ್ರತಿನಿತ್ಯ ಲೋಕಾಯುಕ್ತಗೆ ಹೋಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಾನು ಒಮ್ಮೆ ಮಾತ್ರ ಹೋಗಿದ್ದೇನೆ. ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಹೋಟೆಲ್‌ಗೆ ಕಾಫಿ ಕುಡಿಯಲು ಪ್ರತಿನಿತ್ಯ ಹೋಗುತ್ತೇನೆ. ಸ್ನೇಹಮಯಿ ಕೃಷ್ಣ ಓರ್ವ ಬ್ಲಾಕ್​ಮೇಲರ್. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಕೇಂದ್ರ ಸರ್ಕಾರದ ಸೂತ್ರಧಾರರಂತೆ ವರ್ತಿಸುತ್ತಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರನ್ನ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ

ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಯೋತ್ಪಾದಕರು. ಅವರನ್ನು ಭಯೋತ್ಪಾದಕರು ಅಂತ ಘೋಷಣೆ ಮಾಡಬೇಕು. ಬಿಜೆಪಿ ಹಾಗೂ ಆರ್​ಎಸ್​ಎಸ್‌ನವರು ಭಯೋತ್ಪಾದಕರು. ಬಿಜೆಪಿಯವರಿಗೆ ಮುಸ್ಲಿಮರು ಅಂದರೆ ಉರಿ. ದೇಶದಲ್ಲಿ ಮುಸ್ಲಿಮರು ಇರಬಾರದು ಅನ್ನೋದು ಬಿಜೆಪಿ ಮನಸ್ಥಿತಿ ಬಿಜೆಪಿಯ ದೊಡ್ಡ ಮಟ್ಟದ ನಾಯಕರಿಗೆ ಮುಸ್ಲಿಮರ ಜೊತೆ ವ್ಯವಹಾರ ಇದೆ. ಬಹಿರಂಗವಾಗಿ ಸುಮ್ಮನೆ ಬಿಜೆಪಿಯವರು ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:25 pm, Tue, 15 October 24

ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ಓಕಳೀಪುರ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತು ಜನರ ಪರದಾಟ
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್