ಪ್ರಕೃತಿ ವಿಕೋಪವಾಗಿದ್ದಾಗ ಬಂದಿಲ್ಲ, ಈಗ ಬರುತ್ತಿದ್ದಾರೆ- ಮೋದಿ ವಿರುದ್ಧ ಶಿವಾನಂದ ಪಾಟೀಲ್ ಪರೋಕ್ಷ ವಾಗ್ದಾಳಿ
ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರೆಲ್ಲ ಬೀದಿಗೆ ಬಿದ್ದಿದ್ದರು. ಪ್ರಕೃತಿ ವಿಕೋಪ ಉಂಟಾದಾಗ ಸರ್ಕಾರಗಳು ಗಮನಹರಿಸಬೇಕು. ಯೋಗ ನಿರಂತರ ನಡೆಯುವ ಪ್ರಕ್ರಿಯೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ವಿಜಯಪುರ: ರಾಜ್ಯದಲ್ಲಿ ಪ್ರಕೃತಿ ವಿಕೋಪವಾಗಿದ್ದ ಸಂದರ್ಭದಲ್ಲಿ ಬಂದಿಲ್ಲ. ಈಗ ಬರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಬಸವನಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ (Shivanand Patil) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಯೋಗ ದಿನಾಚರಣೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರೆಲ್ಲ ಬೀದಿಗೆ ಬಿದ್ದಿದ್ದರು. ಪ್ರಕೃತಿ ವಿಕೋಪ ಉಂಟಾದಾಗ ಸರ್ಕಾರಗಳು ಗಮನಹರಿಸಬೇಕು. ಯೋಗ ನಿರಂತರ ನಡೆಯುವ ಪ್ರಕ್ರಿಯೆ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ಅಗ್ನಿಪಥ್ ಯೋಜನೆ ಜಾರಿಯಲ್ಲಿ ಕೇಂದ್ರ ಸ್ವಲ್ಪ ಆತುರಕ್ಕೆ ಬಿದ್ದಿದೆ ಎಂದು ಮಾತನಾಡಿದ ಶಾಸಕ ಶಿವಾನಂದ ಪಾಟೀಲ್, 7-8 ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಖಾಲಿ ಇರುವ 60 ಲಕ್ಷ ಹುದ್ದೆಗಳನ್ನು ಕೇಂದ್ರ ಭರ್ತಿ ಮಾಡಿಲ್ಲ. ಇದನ್ನು ಬಿಜೆಪಿ ಸಂಸದ ವರುಣ್ ಗಾಂಧಿಯೇ ಹೇಳಿದ್ದಾರೆ. ಈ ರೀತಿಯ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದರೆ ಕಷ್ಟವಾಗುತ್ತೆ. ಕೇಂದ್ರದ ಅಗ್ನಿಪಥ್ ಯೋಜನೆ ಉದ್ಯೋಗ ಭದ್ರತೆ ನೀಡಲ್ಲ. ಉದ್ಯೋಗ ಅಭದ್ರತೆಯಿಂದಾಗಿ ಯುವಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಧಾನಿ ಮೋದಿಯವರನ್ನು ಮುತ್ತಿಗೆ ಹಾಕಬೇಕೆಂದಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ
ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ 5 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಕೇಂದ್ರ ಕೂಡ 50ರಿಂದ 60 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ದೇಶದ ಮುಂದಿನ ಭವಿಷ್ಯ ಕಗ್ಗತ್ತಿಲಿನಲ್ಲಿ ಸಾಗುತ್ತಿದೆ ಎಂದು ವಿಜಯಪುರ ನಗರದಲ್ಲಿ ಶಾಸಕ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಮ್ಯಾಟ್ ಇಲ್ಲದೆ ಪರದಾಟ: ಹಾಸನ: ಕೇಂದ್ರ ಸಚಿವರ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳು ಮ್ಯಾಟ್ ಇಲ್ಲದೆ ಪರದಾಡುತ್ತಿದ್ದಾರೆ. ಟವೆಲ್, ಬ್ಲಾಂಕೆಟ್, ವೇಲ್, ಹಳೆ ಬಟ್ಟೆಯನ್ನೆ ಮ್ಯಾಟ್ ಮಾಡಿಕೊಂಡು ಮಕ್ಕಳು ಯೋಗಾಭ್ಯಾಸ ಮಾಡುತ್ತಿದ್ದಾರೆ. ನಾಳೆ ಬೇಲೂರು ತಾಲೂಕಿನ ಐತಿಹಾಸಿಕ ಹಳೆಬೀಡು ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಸಚಿವರ ಜೊತೆಯಲ್ಲಿ ಸಾವಿರಾರು ಶಾಲಾ ಮಕ್ಕಳು ಯೋಗ ಮಾಡಲಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Mon, 20 June 22