ಬಿವಿ ಶ್ರೀನಿವಾಸ್ಗೆ ಉಜ್ವಲ ಭವಿಷ್ಯವಿದೆ; ರಾಜಕಾರಣದಲ್ಲಿ ಅಲ್ಲ, ಓಟದ ಸ್ಪರ್ಧೆಯಲ್ಲಿ- ಬಿಜೆಪಿ ನಾಯಕ ಸಿಟಿ ರವಿ ವ್ಯಂಗ್ಯ
ನಾನು ನೋಡ್ತಾ ಇದ್ದೆ, ಕ್ಷಣಮಾತ್ರದಲ್ಲಿ ಮಿಂಚಿನ ಓಟ. ಯಾವುದಾದರೂ ಅಥ್ಲೆಟಿಕ್ಸ್ಗೆ ಹೋದರೆ ಪ್ರಶಸ್ತಿ ಸಿಗುತ್ತೆ ಎಂದು ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ಗೆ (BV Srinivas) ರೇಸ್ನಲ್ಲಿ ಉಜ್ವಲ ಭವಿಷ್ಯವಿದೆ. ಆದರೆ ರಾಜಕಾರಣದಲ್ಲಿ ಅಲ್ಲ, ಓಟದ ಸ್ಪರ್ಧೆಯಲ್ಲಿ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ. ನಾನು ನೋಡ್ತಾ ಇದ್ದೆ, ಕ್ಷಣಮಾತ್ರದಲ್ಲಿ ಮಿಂಚಿನ ಓಟ. ಯಾವುದಾದರೂ ಅಥ್ಲೆಟಿಕ್ಸ್ಗೆ ಹೋದರೆ ಪ್ರಶಸ್ತಿ ಸಿಗುತ್ತೆ ಎಂದು ಟಾಂಗ್ ಕೊಟ್ಟಿರುವ ರವಿ, ನಾನು ಚಳವಳಿ ಮೂಲಕ ಬಂದು ಜೈಲಿಗೆ ಹೋಗಿದ್ದೇನೆ. ಹತ್ತಾರು ಪೊಲೀಸ್ ಸ್ಟೇಷನ್ಗನ್ಗಳಲ್ಲಿ ನಾನು ಒದೆ ತಿಂದಿದ್ದೇನೆ. ಆದರೆ ಪೊಲೀಸರಿಗೆ ಬೆನ್ನು ತೋರಿಸಿ ಎಂದೂ ಓಡಿ ಹೋಗಿಲ್ಲ. ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಶ್ರೀನಿವಾಸ್ ಮಾದರಿ ಎಂದು ಕಾಲೆಳೆದರು.
ಇನ್ನು ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಟಿ ರವಿ, ಭ್ರಷ್ಟಾಚಾರ ಮಾಡಿದ್ರೂ ಯಾರು ಕೂಡ ಕ್ರಮ ತೆಗೆದುಕೊಳ್ಳಬಾರದಾ? ಸಿದ್ದರಾಮಯ್ಯನವರು ಇದನ್ನೇ ಓದಬೇಕಾದ್ರೆ ಕಲಿತಿದ್ದ? ಸಂವಿಧಾನದ ಪಾಠವನ್ನು ವಿಧಾನಸೌಧದಲ್ಲಿ ಮಾಡ್ತಾ ಇದ್ರು. ಭ್ರಷ್ಟರನ್ನು ರಕ್ಷಣೆ ಮಾಡಿ ಎಂದು ಅಂಬೇಡ್ಕರ್ ಹೇಳಿದ್ದಾರಾ? ದೊಡ್ಡ ದೊಡ್ಡವರು ಭ್ರಷ್ಟಾಚಾರ ಮಾಡಿದ್ದರೆ ಅವರ ಸಮರ್ಥನೆಗೆ ನಿಲ್ಲಬೇಕು. ಸಮರ್ಥನೆಗೆ ನಿಲ್ಲಬೇಕೆಂದು ನಿಮ್ಮ ಮಾಸ್ಟ್ರು ನಿಮಗೆ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಿಮ್ಸ್ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆ, ಬೆಳೆದ ಮಗಳನ್ನು ಕೈಯಲ್ಲಿ ಹೊತ್ತು ತಿರುಗಾಡಿದ ತಂದೆ
ಕಾಂಗ್ರೆಸ್ಗೆ ಆರ್ ಅಶೋಕ್ ತಿರುಗೇಟು! ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ವಾತಂತ್ರ್ಯ ಬರುವ ಮೊದಲು ಪ್ರಾರಂಭ ಆದ ಪತ್ರಿಕೆ. ಸ್ವಾತಂತ್ರ್ಯ ಯೋಧರು ಹಣ ಹಾಕಿ ಪ್ರಾರಂಭ ಮಾಡಿದ ಪತ್ರಿಕೆ. ಸ್ವಾತಂತ್ರ್ಯ ಯೋಧರ ಪತ್ರಿಕೆಗೆ ಅಂದಿನ ಸರ್ಕಾರಗಳು ಜಮೀನು ನೀಡಿವೆ. ಅದರ ಜಮೀನು ಭೂ ಕಬಳಿಕೆ ಮಾಡಿಕೊಳ್ಳುವುದಕ್ಕೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೊರಟಿದ್ದಾರೆ. ಇದು ಕಾಂಗ್ರೆಸ್ಗೆ ಸಂಬಂಧಿಸಿದ ಕೇಸ್ ಅಲ್ಲ, ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಕೇಸ್. ಇಡಿ ಸಿಬಿಐ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇದ್ದವು. ತಪ್ಪು ಮಾಡಿದವರಿಗೆ ನೋಟಿಸ್ ಕೊಡೋದು ಸಹಜ ಪ್ರಕ್ರಿಯೆ. ಇದೇನು ಇಟಲಿ ಅಲ್ಲ, ಭಾರತ ಇದು ಸಂವಿಧಾನ ಇದೆ ಇಲ್ಲಿ. ರಾಜಕೀಕರಣ ಮಾಡುವುದು ಸರಿಯಲ್ಲ ಎಂದು ಆರ್ ಅಶೋಕ್ ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Tue, 14 June 22