ಮೈತ್ರಿ ಸರ್ಕಾರ ಪತನವಾಗಲು ಡಿಕೆ ಶಿವಕುಮಾರ್ ಕಾರಣ ಎಂಬ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ತಿರುಗೇಟು
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಏನೆಲ್ಲ ಮಾಡಲು ಸಾಧ್ಯ ಎಲ್ಲವನ್ನೂ ಕುಮಾರಸ್ವಾಮಿ ಹೇಳುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 09: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಏನು ಹೇಳಿದ್ದಾರೋ ಗೊತ್ತಿಲ್ಲ, ಅವರು ದೊಡ್ಡವರು. ಅವರ ನುಡಿಮುತ್ತುಗಳನ್ನು ನೋಡಿ ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮೈತ್ರಿ ಸರ್ಕಾರ ಪತನವಾಗಲು ಡಿಕೆ ಶಿವಕುಮಾರ್ ಕಾರಣ ಎಂಬ ಹೆಚ್ಡಿ ಕುಮಾರಸ್ವಾಮಿ ಆರೋಪಿಕ್ಕೆ ಅವರು ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರ ಪ್ಲ್ಯಾನ್ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲ ಮಾಡಲು ಸಾಧ್ಯ ಎಲ್ಲವನ್ನೂ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಿಂದೆನೂ ಪಾಪ ಮಾಡಿದ್ರಲ್ಲ. ನನ್ನ ತಂಗಿ, ನನ್ನ ತಮ್ಮ, ಹೆಂಡತಿ ಮೇಲೆ ಕೇಸ್ ಹಾಕಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಕಟ್ಟಲು ಯೋಜನೆ
ಬೆಂಗಳೂರು ಯಾವ ನಿಟ್ಟಿನಲ್ಲಿ ಬದಲಾವಣೆ ಆಗಬೇಕು ಅಂತ ಈಗಾಗಲೇ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 1 ಕೋಟಿ 40 ಜನ ವಾಸವಾಗಿದ್ದಾರೆ. ಹೊಸ ಮನೆಗಳು ಬರುವುದು ವಿದ್ಯುತ್ ಸಂಪರ್ಕದಿಂದ ಗೊತ್ತಾಗುತ್ತಿದೆ. ನೀರಿನ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಟ್ರಾಫಿಕ್ ಸಮಸ್ಯೆ ಸಹ ದಟ್ಟವಾಗಿ ಕಾಡುತ್ತಿದೆ. ಟ್ರಾಫಿಕ್ನಲ್ಲಿ ಈ ಹಿಂದೆ ಮಾಡಿದವರು, ಈಗ ಮಾಡುತ್ತಿರುವವರ ಸಲಹೆ ಪಡೆದುಕೊಳ್ಳುತ್ತೇವೆ. 8 ತಂಡ ಮಾಡಿದ್ದೇವೆ ಅವರು ರಿಪೋರ್ಟ್ ನೀಡಲಿದ್ದಾರೆ.
ನಾವು ಸಹ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕಿದೆ. 70 ಸಾವಿರ ಸಲಹೆ ಬಂದಿರುವುದನ್ನ 8 ತಂಡ ನೋಡಿದೆ. ಹೊಸದಾಗಿ ನಾವು ಟ್ಯಾಕ್ಸ್ ಹಾಕಬೇಕು ಅನ್ನುವ ಅವಶ್ಯಕತೆ ಇಲ್ಲ. ಯಾರು ತೆರಿಗೆ ಪಾವತಿ ಮಾಡುತ್ತಿಲ್ಲ ಅಂತ ಅವರ ಆಸ್ತಿ ಪಟ್ಟಿಯನ್ನ ಅವರಿಗೆ ಕೊಡುತ್ತೇವೆ. ಟ್ಯಾಕ್ಸ್ ಕಟ್ಟುವ ಕೆಲಸ ಮಾಡುತ್ತೇವೆ.
ಇದನ್ನೂ ಓದಿ: ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದಂಪತಿ ಭೇಟಿ -ನಾಗಪ್ರತಿಷ್ಠೆ, ತುಲಾಭಾರ
ಮೇಲ್ಸುತುವೆ, ಟನಲ್, ಮೆಟ್ರೋ ಈ ಮೂರರಿಂದ ಮಾತ್ರ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಧ್ಯ. ಇದಕ್ಕೆಲ್ಲ ಜಾಸ್ತಿ ಹಣ ಬೇಕಾಗುತ್ತೆ. ರಾಜಕಾಲುವೆಯಲ್ಲಿ ನೀರು ಹೋಗಬೇಕು ಅಂತ ಬಿಬಿಎಂಪಿ ಸೂಚನೆ ನೀಡಿದ್ದೇವೆ. ಐಟಿ ಪಾರ್ಕ್ ಭಾಗಗಳಲ್ಲಿ ಟೈಂ ಬಗ್ಗೆ ಮಾತನಾಡಲು ಹೇಳಿದ್ದೇವೆ. ಸ್ಕೂಲ್ ಸಮಯ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಸ ವಿಂಗಡಣೆಯ ಬಗ್ಗೆ ಪ್ರತ್ಯೇಕ ಕ್ರಮ ಕೈಗೊಳ್ಳುತ್ತೇವೆ. ಸಿಟಿಯ ಹೊರಭಾಗದಲ್ಲಿ ಕಸ ವಿಂಗಡಣೆ ಆಗುತ್ತಿದೆ. ಅದು ನಗರದಲ್ಲೇ ಆಗಬೇಕು ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ನನ್ನ ಕಚೇರಿಯಿಂದಲೇ ಸಮಸ್ಯೆ ಬಗ್ಗೆ ಬಗೆಹರಿಸುವ ವ್ಯವಸ್ಥೆ ಮಾಡುತ್ತೇನೆ. ಸಹಾಯ ಹಸ್ತ ಅಂತ ವೆಬ್ ಸೈಟ್ ಓಪನ್ ಮಾಡಲಿದ್ದೇವೆ. ನೀರು, ವಿದ್ಯುತ್, ಕಸ ಇತ್ಯಾದಿ ಬಗ್ಗೆ ಜನರು ದೂರು ಸಲ್ಲಿಸಬಹುದು. ಕಾವೇರಿ 5ನೇ ಹಂತ 750 ಎಂಎಲ್‌ಡಿ ನೀರು ಅಂತಿಮ ಹಂತಕ್ಕೆ ಬಂದಿದೆ. ಅತ್ತಿಬೆಲೆ ಸೇರಿ 110 ಹಳ್ಳಿಗಳಿಗೆ ನೀರು ಸರಬರಾಜು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Mon, 9 October 23