ಸಿಸೋಡಿಯಾ ಮೇಲಿನ ಆರೋಪ ಸುಳ್ಳು, ನಾವು ಜೈಲಿಗೆ ಹೆದರುವುದಿಲ್ಲ: ಅರವಿಂದ ಕೇಜ್ರಿವಾಲ್

ಪಂಜಾಬ್​​ನಲ್ಲಿ ಸರ್ಕಾರ ರಚಿಸಿದ ನಂತರ ಆಪ್ ಬೆಳೆಯುತ್ತಲೇ ಇದೆ. ಅವರಿಗೆ ನಾವು ರಾಷ್ಟ್ರಮಟ್ಟದಲ್ಲಿ ಬೆಳೆಯುವುದನ್ನು ನೋಡಲಾಗುವುದಿಲ್ಲ. ಹಾಗಾಗಿ ಅವರು ಇಂಥಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.  ಆದರೆ ಯಾರಿಗೂ ನಮ್ಮನ್ನು ತಡೆಯುವುದಕ್ಕೆ ಆಗಲ್ಲ..

ಸಿಸೋಡಿಯಾ ಮೇಲಿನ ಆರೋಪ ಸುಳ್ಳು, ನಾವು ಜೈಲಿಗೆ ಹೆದರುವುದಿಲ್ಲ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 22, 2022 | 2:18 PM

ಸಿಸೋಡಿಯಾ (Manish Sisodia) ಮೇಲಿನ ಆರೋಪ ಸುಳ್ಳು. ಕಳೆದ 22 ವರ್ಷಗಳಿಂದ ನಾನು ಅವರನ್ನು ಬಲ್ಲೆ. ಅವರು ಸಚಿವರಾದ ಹೊತ್ತಲ್ಲಿ ದೆಹಲಿಯ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿತ್ತು. ನ್ಯಾಯಮೂರ್ತಿಗಳ ಮಗು ಮತ್ತು ರಿಕ್ಷಾ ಚಾಲಕನ ಮಗು ಜತೆಯಲ್ಲೇ ಕುಳಿತು ಓದುವಂತಾ ಪರಿಸರ ಕಲ್ಪಿಸಲು ಅವರು ದಿನರಾತ್ರಿ ದುಡಿದು ಶಾಲೆಯ ಗುಣಮಟ್ಟ ಹೆಚ್ಚಿಸಿದರು. ನಾವು ಜೈಲಿಗೆ ಹೆದರುವುದಿಲ್ಲ, ಕುಣಿಕೆ ಬಗ್ಗೆಯೂ ಹೆದರುವುದಿಲ್ಲ. ನಮ್ಮ ಜನರ ವಿರುದ್ಧ  ಹಲವಾರು ಪ್ರಕರಣ ದಾಖಲಿಸಲಾಗಿದೆ. ಪಂಜಾಬ್​​ನಲ್ಲಿ ಸರ್ಕಾರ ರಚಿಸಿದ ನಂತರ ಆಪ್ (AAP) ಬೆಳೆಯುತ್ತಲೇ ಇದೆ. ಅವರಿಗೆ ನಾವು ರಾಷ್ಟ್ರಮಟ್ಟದಲ್ಲಿ ಬೆಳೆಯುವುದನ್ನು ನೋಡಲಾಗುವುದಿಲ್ಲ. ಹಾಗಾಗಿ ಅವರು ಇಂಥಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.  ಆದರೆ ಯಾರಿಗೂ ನಮ್ಮನ್ನು ತಡೆಯುವುದಕ್ಕೆ ಆಗಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.

ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾಗಿಯಾಗಿದ್ದಾರೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಶಿಕ್ಷಣ ವ್ಯವಸ್ಥೆಯನ್ನು ಸುದೃಢಗೊಳಿಸಲು ಸಿಸೋಡಿಯಾ ಕಠಿಣ ಪ್ರಯತ್ನ ಮಾಡಿದ್ದಾರೆ. ಹಾಗಾಗಿಯೇ ಕೇಂದ್ರ ಸರ್ಕಾರ ಅವರಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಒತ್ತಾಯವನ್ನು ಉಲ್ಲೇಖಿಸದೇ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರ, ಆಮ್ ಆದ್ಮಿ ಪಕ್ಷಗ ನಾಯಕರ ಕೆಲಸವನ್ನು ತಡೆಯಲು ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ ಎಂದಿದ್ದಾರೆ.

ಮೊದಲು ಯಾರನ್ನು ಜೈಲಿಗೆ ಹಾಕಬೇಕು ಎಂಬುದು ಭಾರತದಲ್ಲಿ ಹೊಸ ನಿಯಮ ಇದೆ ಎಂದು ಅನಿಸುತ್ತಿದೆ. ಆಮೇಲೆ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸಲಾಗತ್ತದೆ ಎಂದು ಕೇಂದ್ರ ವಿರುದ್ಧ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಮೋದಿ ನೇತೃತ್ವದ ಸರ್ಕಾರ ತಮ್ಮ ರಾಜಕೀಯ ಹಗೆತನ ತೀರಿಸಲು ತನಿಖಾ ಸಂಸ್ಥೆಗಳನ್ನು ಬಳಸುವುದರ ಬಗ್ಗೆ ಹಲವು ವಿರೋಧ ಪಕ್ಷಗಳು ಟೀಕಿಸಿವೆ.

ಬಿಜೆಪಿ ನಾಯಕನ್ನು ಸಾವರ್ಕರ್ ಕಾ ಔಲಾದ್ (ಸಾವರ್ಕರ್ ವಂಶಜರು) ಎಂದು ಕರೆದ ಕೇಜ್ರಿವಾಲ್, ನಮ್ಮ ಪಕ್ಷದ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿ, ಅವರ ಮುಂದೆ ತಲೆಬಾಗದೆ ನೇಣಿಗೇರಿದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪುತ್ರರು. ನಾವು ಜೈಲಿಗೆ ಹೋಗಲು ಹೆದರುವುದಿಲ್ಲ ಎಂದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು ನಿಲ್ಲಿಸಲು ಅವರು ಬಯಸುತ್ತಾರೆ. ಜಗತ್ತಿನಾದ್ಯಂತವಿರುವ ಮೇಯರ್ ಗಳನ್ನು ಸಿಂಗಾಪುರ್ ಆಮಂತ್ರಿಸಿದೆ, ದೆಹಲಿ ಮಾಡೆಲ್ ಬಗ್ಗೆ ವಿವರಿಸುವಂತೆ ಅವರನು ನನ್ನನ್ನೂ ಕರೆದಿದ್ದಾರೆ. ಆದೆರ ಅವರಿಗೆ ಇದನ್ನೆಲ್ಲ ತಡೆಯಬೇಕು. ನಿಮ್ಮನ್ನು ಲೂಟಿ ಮಾಡುವ ಉದ್ದೇಶದಿಂದ ಅವರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ.

Published On - 1:39 pm, Fri, 22 July 22