ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ ರೋಡ್‌ಶೋ ರದ್ದು: ಹೆಚ್ಡಿ ಕುಮಾರಸ್ವಾಮಿ
ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ ರೋಡ್‌ಶೋ ರದ್ದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ಠಕ್ಕರ್ ನೀಡಲು ರೋಡ್‌ಶೋ ಆಯೋಜಿಸಲಾಗಿತ್ತು.
ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ (H. D. Deve Gowda) ರೋಡ್‌ಶೋ ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ಠಕ್ಕರ್ ನೀಡಲು ರೋಡ್‌ಶೋ ಆಯೋಜಿಸಲಾಗಿತ್ತು. ಆದರೆ ಹೆಚ್.ಡಿ.ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ರದ್ದು ಪಡಿಸಿದ್ದು, ಮಾರ್ಚ್ 26ರಂದು ಕುಂಬಳಗೋಡಿನಿಂದ ಮೈಸೂರಿನವರೆಗೆ ರೋಡ್ ಶೋ ನಡೆಸಲು ಜೆಡಿಎಸ್ ಮುಂದಾಗಿತ್ತು. ರೋಡ್ ಶೋ ಕುರಿತು ಹೆಚ್.ಡಿ. ಕುಮಾರಸ್ವಾಮಿ (H. D. Kumaraswamy), ಸಿ.ಎಂ.ಇಬ್ರಾಹಿಂ ಇಂದು ಸಭೆ ನಡೆಸಿದ್ದರು. ರೋಡ್ ಶೋ ರದ್ದು ಮಾಡುವ ಕುರಿತು ಸಭೆಯಲ್ಲಿ ಕುಮಾರಸ್ವಾಮಿ ಚರ್ಚೆ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ರದ್ದು ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯದ 85 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದೆ. ಮಾ. 26ರಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶ ಆಯೋಜಿಸಿದ್ದು, ಕನಿಷ್ಠ 10 ಲಕ್ಷ ಅಭಿಮಾನಿಗಳು, ಮತದಾರರು ಸೇರಿಸಲು ನಿರ್ಧಾರ ಮಾಡಲಾಗಿದೆ. ಅಭ್ಯರ್ಥಿಗಳು, ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿದ್ದೇವೆ. ಯಾವ ರೀತಿ ಕೆಲಸ ಮಾಡಬೇಕೆಂದು ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಸಿನಿಮಾ ಮಾಡಿ ಹಣ ಮಾಡಬಹುದಷ್ಟೇ, ಬದಲಾವಣೆ ಸಾಧ್ಯವಿಲ್ಲ
ಉರಿಗೌಡ, ದೊಡ್ಡ ನಂಜೇಗೌಡ ಇದ್ರೋ ಇಲ್ಲವೋ ಗೊತ್ತಿಲ್ಲ. ಜೀವಂತವಿರುವ ಉರಿಗೌಡ, ನಂಜೇಗೌಡ ಬಗ್ಗೆ ಯೋಚಿಸಬೇಕು. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಈ ವಿಚಾರವನ್ನು ಎತ್ತಿಕಟ್ಟುತ್ತಿದೆ. ಉರಿಗೌಡ, ನಂಜೇಗೌಡ ಬಗ್ಗೆ ಹೇಳುವಂತೆ ಬಿಜೆಪಿಗೆ ಕೇಳಿದ್ಯಾರು ಎಂದು ಪ್ರಶ್ನಿಸಿದರು. ಈ ಘಟನೆಯಿಂದ ಒಕ್ಕಲಿಗರ ಮತ ಬದಲಾಗಲ್ಲ. ಯಾವ್ಯಾವ ವಿಷಯವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಉರಿಗೌಡ, ನಂಜೇಗೌಡ ಹೆಸರಲ್ಲಿ ಸಿನಿಮಾ ಮಾಡಿ ಹಣ ಮಾಡಬಹುದಷ್ಟೇ, ಬದಲಾವಣೆ ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ
ಮತದಾರರು ಜೆಡಿಎಸ್ ಪರ ಇದ್ದಾರೆ
ಕೋಲಾರದಲ್ಲಿ ಸಿದ್ದರಾಮಯ್ಯ ನಿಂತರು ನಮಗೆ ಸಮಸ್ಯೆ ಇಲ್ಲ. ಮತದಾರರು ಜೆಡಿಎಸ್ ಪರ ಇದ್ದಾರೆ. ಯಾರು ಅಭ್ಯರ್ಥಿ ನಿಲ್ಲುತ್ತಾರೆ ಮುಖ್ಯ ಅಲ್ಲ. ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ಈಗಾಗಲೇ ಶ್ರೀನಾಥ್ ಕೆಲಸ ಆರಂಭಿಸಿದ್ದು, ಕಳೆದ ಏಳೆಂಟು ತಿಂಗಳಿನಿಂದ ಸಂಘಟನೆ ನಡೆಯುತ್ತಿದೆ. ಅಲ್ಲಿ ವಿಶೇಷವಾಗಿ ಯಾರು ಪ್ರಮುಖ ಅಭ್ಯರ್ಥಿ ಬರ್ತಾರೆ ಅಂತ ಲೆಕ್ಕಾಚಾರ ಹಾಕಿಲ್ಲ ಎಂದರು.
ಇದನ್ನೂ ಓದಿ: HD Kumaraswamy: ಉರಿಗೌಡ ನಂಜೇಗೌಡ ಸಿನಿಮಾ ಮಾಡಿ ಒಕ್ಕಲಿಗರ ಗೌರವ ಮೂರಾಬಟ್ಟೆ ಮಾಡಲು ಹೊರಟಿದೆ ಬಿಜೆಪಿ; ಕುಮಾರಸ್ವಾಮಿ ಕಿಡಿ
ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಲ್ಲ
ಸಿದ್ದರಾಮಯ್ಯ ಕೋಲಾರ ನಿಲ್ಲದಂತೆ ರಾಹುಲ್ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನಾನು ಸಿದ್ದರಾಮಯ್ಯ ಅವರು ಎಲ್ಲಿ ಸರ್ಧಿಸುತ್ತಾರೆ ಎಂಬುದರ ಬಗ್ಗೆ ಲಘುವಾಗಿ ಮಾತಾಡಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆದವರು. ಕಳೆದ ಆರು ಏಳು ತಿಂಗಳಿಂದ ಈ ರೀತಿಯ ಹೊರಗಡೆ ಜನ ಚರ್ಚೆ ಮಾಡುವುದು ಬೇಕಾಗಿರಲಿಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಈ ಮಟ್ಟದ ನಡೆದಿರುವ ಬೆಳವಣಿಗೆ ನಿಜಕ್ಕೂ ಜನಗಳಲ್ಲಿ ಈ ರೀತಿ ತೀರ್ಮಾನಗಳು ಬಾಲಿಶಃ ವಿಷಯವಾಗಿವೆ. ಇಲ್ಲ ಅವರ ಶಕ್ತಿ ಕುಗ್ಗಿದಿಯೋ ಅಂತ ಜನ ಮಾತಾಡುತ್ತಾರೆ. ಈ ರೀತಿ ಆಗಬಾರದಿದ್ದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:32 pm, Sat, 18 March 23