ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ಎಂದ ನೂತನ ಸಚಿವ ಎಂಬಿ ಪಾಟೀಲ್
ನನಗೆ ವಾರ್ನ್ ಮಾಡಿಲ್ಲ, ನಾನು ಯಾರಿಗೂ ವಾರ್ನ್ ಮಾಡಿಲ್ಲ. ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ಎಂದ ನೂತನ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರು: ನನಗೆ ವಾರ್ನ್ ಮಾಡಿಲ್ಲ, ನಾನು ಯಾರಿಗೂ ವಾರ್ನ್ ಮಾಡಿಲ್ಲ. ವಾರ್ನ್ ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ಎಂದ ನೂತನ ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ಎಂ.ಬಿ.ಪಾಟೀಲ್ ಯಾರಿಗೂ ಹೆದರಲ್ಲ, ನಾನು ವಿಜಯಪುರದವನು ಎಂದಿದ್ದಾರೆ.
ವಿಧಾನಸೌಧದಲ್ಲಿ ಬಹಳ ಪ್ರೀತಿಯಿಂದ ಎಂ.ಬಿ.ಪಾಟೀಲ್ರೇ ಅಂತಾ ಸಂಸದ ಡಿ.ಕೆ.ಸುರೇಶ್ ಕರೆದಿದ್ದು ನಿಜ. ಅವರ ಮತ್ತು ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಕಚೇರಿಯೊಳಗೆ ಬನ್ನಿ ಮಾತಾಡೋಣ ಅಂತಾ ಹೇಳಿ ಹೋದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಎದುರಿಗೆ ಸಿಕ್ಕ ಎಂ.ಬಿ. ಪಾಟೀಲ್ಗೆ ಗುರಾಯಿಸಿ ವಾರ್ನ್ ಮಾಡಿದ ಡಿಕೆ ಸುರೇಶ್: ಏನ್ರೀ ಇದು ರೌಡಿಸಂ ಎಂದ ಶಾಸಕರು
ಸಚಿವ ಎಂ.ಬಿ.ಪಾಟೀಲ್ಗೆ ಡಿಕೆ ಸುರೇಶ್ ಖಡಕ್ ಎಚ್ಚರಿಕೆ
ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್ ಆಡಿದ ಈ ಮಾತುಗಳು ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್ಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಇಂದು(ಮೇ 23) ಮಾಧ್ಯಮಗಳ ಜೊತೆ ಮಾಡಿದ ಡಿಕೆ ಸುರೇಶ್, ಇದೆಲ್ಲ ಬೇಡ ಅಂತ ಸಚಿವ ಎಂ.ಬಿ.ಪಾಟೀಲ್ಗೆ ಹೇಳಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಎನ್ನುವ ಎಂಬಿ ಪಾಟೀಲ್ ಹೇಳಿಕೆಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆ ಸುರೇಶ್
ಎಂ.ಬಿ.ಪಾಟೀಲ್ಗೆ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಿ. ಎಂ.ಬಿ.ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ನೀಡಲು ಬರುತ್ತೆ. ಆದರೆ ಈಗಲೇ ಅದೆಲ್ಲ ಬೇಡ ಎಂದರು. ಈ ಮೂಲಕ ಬಹಿರಂಗವಅಗಿಯೇ ಎಂಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದರು.
ಎಂ.ಬಿ ಪಾಟೀಲ್ ವಿರುದ್ಧ ಸಂಸದ ಡಿ.ಕೆ ಸುರೇಶ್ ಕಿಡಿ
ಎಂ.ಬಿ.ಪಾಟೀಲ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ಮಾಡಿದ್ದು, M.B.ಪಾಟೀಲ್ ಕೂಡ ಸಿಎಂ ಆಗಲಿ, ಯಾರೂ ಬೇಡ ಎಂದಿಲ್ಲ. ಈ ಹಿಂದೆ ಸಿದ್ದರಾಮಯ್ಯ 5 ವರ್ಷ ರಾಜ್ಯದ ಸಿಎಂ ಆಗಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಐದು ವರ್ಷ ಬೇಕಾದರೂ ಸಿದ್ದರಾಮಯ್ಯ ಸಿಎಂ ಆಗಿರಲಿ. ಮತ್ತೆ 5 ವರ್ಷ ಕಾಲ ಸಿಎಂ ಆಗಿ, ಯಾರೂ ಬೇಡ ಎಂದಿಲ್ಲ. ಎಂ.ಬಿ.ಪಾಟೀಲ್ ಕೂಡ ಸಿಎಂ ಆಗಲಿ ಬಿಡಿ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:41 pm, Wed, 24 May 23