ಬಿಜೆಪಿ ಅಂದ್ರೆ ಬೆಚೋ ರೋಜಗಾರ್ ಪಾರ್ಟಿ : ಹೊಸ ಹೆಸರಿಟ್ಟ ಸುರ್ಜೇವಾಲ

ಬಿಜೆಪಿ ಅಂದ್ರೆ ಬೆಚೋ ರೋಜಗಾರ್ ಪಾರ್ಟಿ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೊಸ ಹೆಸರಿನಿಂದ ಕರೆದಿದ್ದಾರೆ.

TV9kannada Web Team

| Edited By: Ramesh B Jawalagera

Sep 27, 2022 | 6:11 PM

ಚಿತ್ರದುರ್ಗ: ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ಭಾರತ ಐಕ್ಯತಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಭಾಷಣ ಮಾಡಿದ ಸುರ್ಜೆವಾಲ, ಬಿಜೆಪಿ ಕೇವಲ ಹಿಂದೂ-ಮುಸ್ಲಿಂ ನಡುವೆ ಸಂಘರ್ಷ ಸೃಷ್ಠಿಸುತ್ತದೆ. ಧರ್ಮ ಸಂಘರ್ಷದ ಮೂಲಕ ಮತ ಗಳಿಕೆಯ ಕುತಂತ್ರ.ಕೊರೋನಾ ವೇಳೆ ಸಾವಿರಾರು ಜನ ಸಾವಿಗೀಡಾದರು ಸರ್ಕಾರ ಏನೂ ಮಾಡಲಿಲ್ಲ. ಭಾರತ್ ಜೋಡೋ ಯಾತ್ರೆ ಬಿಜೆಪಿ ಸರ್ಕಾರ ತೊಲಗಿಸುವ ಮೈಲಿಗಲ್ಲು. ಬಿಜೆಪಿ ಅಂದರೆ ಬೆಚೋ ರೋಜಗಾರ್ ಪಾರ್ಟಿ ಎಂದು ವ್ಯಂಗ್ಯವಾಡಿದರು.

ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ, ತರಕಾರಿ ದರ ಗಗನಕ್ಕೇರಿದೆ. ಬೆಲೆ ಏರಿಕೆ ಎಂಬುದು ಹಿಂದೂ, ಮುಸ್ಲಿಂ ಎಲ್ಲರಿಗೂ ಒಂದೇ. ಲೆ ಏರಿಕೆ ಎಂಬುದು ಜನರಲ್ಲಿ ತಲ್ಲಣ ಸೃಷ್ಟಿಸಿದೆ. ಬೆಲೆ ಏರಿಕೆಗೆ ಸಿಎಂ ಬೊಮ್ಮಾಯಿ, ಪಿಎಂ ಮೋದಿ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.

ಇದನ್ನೂ ಓದಿ:ತಾನು ಕಳ್ಳ ಪರರ ನಂಬಾ ಎನ್ನುವಂತಿದೆ ಕಾಂಗ್ರೆಸ್​​​ ವರ್ತನೆ – ಕಾಂಗ್ರೆಸ್​ನಿಂದ ‘ಪೇ ಸಿಎಂ’ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪಆಕ್ರೋಶ

ಬಿಜೆಪಿ ಸರ್ಕಾರದ ಅವಧಿಯ ಪಿಎಸ್​ಐ, KPSC ಹಗರಣ ಬಯಲಾಗಿದೆ. ಕರ್ನಾಟಕದಲ್ಲಿ ಯುವಕರ ಭವಿಷ್ಯವನ್ನು ಮಾರಾಟ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರಿಂದಲೂ 40% ಕಮಿಷನ್​ ಪಡೆಯುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಲಂಚ ನೀಡದೆ ಕೆಲಸವಾಗಲ್ಲ. ಮಠಗಳಿಗೆ ಸಹಾಯಧನ ನೀಡಲು ಕಮಿಷನ್​ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ ಎಂದು ಹೇಳಿದರು.

ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಮಠಗಳಿಂದ 30% ಲಂಚ ಕೇಳುತ್ತದೆ. ಓರ್ವ ಮಂತ್ರಿಯಿಂದ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ. ಮತ್ತೋರ್ವ ಮಂತ್ರಿಯಿಂದ ಮಕ್ಕಳ ಪುಸ್ತಕ, ಬಟ್ಟೆಗಳಲ್ಲಿ ಹಗರಣ. ನೌಕರಿಗಳನ್ನು ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಮಂತ್ರಿಯೊಬ್ಬರು ನಾವು ಸರ್ಕಾರ ನಡೆಸುತ್ತಿಲ್ಲ, ಟೈಮ್ ಪಾಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಶಾಸಕರನ್ನು ಖರೀದಿಸಿ ಆಡಳಿತಕ್ಕೆ ಬಂದಿದೆ ಎಂದು ಕಿಡಿಕಾರಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada