ಗೆಲ್ಲುವುದು 20 ಅಂತೆ ಹೇಳಿಕೊಳ್ಳುವುದು 120 ಅಂತೆ: ಜೆಡಿಎಸ್ ಟಾರ್ಗೆಟ್ ಬಗ್ಗೆ ಸಚಿವ ಅಶೋಕ್ ವ್ಯಂಗ್ಯ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಚಿಂತಾಮಣಿ ನಗರದ ಪಂಚಮುಖಿ ಆಂಜನೇಯ ದೇವಸ್ಥಾನದಿಂದ ಬಾಗೇಪಲ್ಲಿ ವೃತ್ತದವರೆಗೂ ಬಿಜೆಪಿ ನಾಯಕರಿಂದ ರೋಡ್‌ಶೋ ನಡೆಯಿತು. ನಂತರ ನಡೆದ ಸಮಾವೇಶದಲ್ಲಿ ಭಾಷಣ ಮಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಗೆಲ್ಲುವುದು 20 ಅಂತೆ ಹೇಳಿಕೊಳ್ಳುವುದು 120 ಅಂತೆ: ಜೆಡಿಎಸ್ ಟಾರ್ಗೆಟ್ ಬಗ್ಗೆ ಸಚಿವ ಅಶೋಕ್ ವ್ಯಂಗ್ಯ
ಕಂದಾಯ ಸಚಿವ ಆರ್.ಅಶೋಕ್
Follow us
Rakesh Nayak Manchi
|

Updated on:Mar 14, 2023 | 6:29 PM

ಚಿಕ್ಕಬಳ್ಳಾಪುರ: ವಿಧಾನಸಭೆಯ ಚುನಾವಣೆಯಲ್ಲಿ (Karnataka Assembly Election 2023) ಮತ್ತೆ ಲಾಟರಿ ಹೊಡೆಯುತ್ತದೆ ಎಂದು ಜೆಡಿಎಸ್ (JDS Karnataka)​​ ಪಕ್ಷದವರು ಕಾಯುತ್ತಿದ್ದಾರೆ. ಜೆಡಿಎಸ್​ ಪಕ್ಷದವರ ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ. ಈ ಬಾರಿ ಹೋಮ ಹವನಕ್ಕೆ ಲಾಟರಿ ಹೊಡೆಯುವುದಿಲ್ಲ. ಅವರು ಗೆಲ್ಲುವುದು 20 ಅಂತೆ ಹೇಳಿಕೊಳ್ಳುವುದು 120 ಅಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ (R. Ashok) ವ್ಯಂಗ್ಯವಾಡಿದರು. ಜಿಲ್ಲೆಯ ಚಿಂತಾಮಣಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆದ್ದಾರಿ ಟೋಲ್ ಸಂಗ್ರಹದ (Bengaluru-Mysuru Expressway Toll Collection) ಬಗ್ಗೆ ಮಾತನಾಡಿದ ಅವರು, ದೇಶದ ಪ್ರಮುಖ ರಸ್ತೆಗಳು ಎಲ್ಲಾ ಟೋಲ್ ರಸ್ತೆಗಳಾಗಿವೆ. ಮೊದಲು ಇವರು ಬೇರೆ ರಸ್ತೆಗಳಿಗೆ ಯಾಕೆ ಪ್ರತಿಭಟನೆ ಮಾಡಲಿಲ್ಲ ಎಂದು ಹೇಳಲಿ. ವಿಧಾನಸಭೆ ಚುನಾವಣೆ ಬಂದಿದೆ ಅಂತ ಡ್ರಾಮಾ ಮಾಡುತ್ತಾ ಜೆಡಿಎಸ್, ಕಾಂಗ್ರೆಸ್​​ನವರು ಥಕ ಥಕ ಕುಣಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹೊಟ್ಟೆ ಉರಿ ಉಂಟಾಗಿದೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ಕಂಡು ಅವರ ಹೊಟ್ಟೆಕಿಚ್ಚು ಮತ್ತಷ್ಟು ಹೆಚ್ಚಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಮುಂದುವರಿದ ಮಾತನಾಡಿದ ಅವರು, ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್​ಗೆ ಸವಾಲು ಹಾಕಿದ ಆರ್.ಅಶೋಕ್

ಇನ್ನೇನು ಕೆಲವೆ ದಿನಗಳಲ್ಲಿ ಬಿಜೆಪಿ ಪ್ಯಾಕಪ್ ಮಾಡಲಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶೋಕ್, ನಾವು ಪ್ಯಾಕಪ್ ಮಾಡುವ ಹಾಗಿದ್ದರೆ ನಾಲ್ಕು ವರ್ಷಗಳ ಹಿಂದೆ ಅವರು ತಮ್ಮ ಶಾಸಕರನ್ನು ಯ್ಯಾಕೆ ತಡೆಯಲಿಲ್ಲ? ಅಂದು ನಿಮ್ಮದೇ ಸರ್ಕಾರದಲ್ಲಿ ನಿಮ್ಮದೇ ಶಾಸಕರನ್ನು ನಾವು ಎಗರಿಸಿದೇವು. ಅಂದು ಸರ್ಕಾರ ನಿಮ್ಮದೇ, ಪೊಲೀಸ್ ಅಧಿಕಾರ ನಿಮ್ಮದೇ ಇತ್ತು. ಆದರೂ ತಡೆಯಲಾಗಿಲ್ಲ. ಇನ್ನೂ ಈಗ ನಮ್ಮ ಸ್ಪೀಡ್ ಅನ್ನು ತಡೆಯಲು ಆಗುತ್ತಾ? ನಿಮ್ಮ ಶಾಸಕರನ್ನೇ ತಡೆಯಲು ಆಗದ ನಿಮಗೆ ನಮ್ಮನ್ನು ತಡೆಯಲು ಆಗಲ್ಲ. ನಮ್ಮ ರಸ್ತೆಗೆ ಅಡ್ಡ ಹಾಕಿದರೆ ಪುಡಿ ಪುಡಿ ಮಾಡಿ ಮುಂದೆ ಹೊಗುತ್ತೇವೆ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಮನೆ ಅಥವಾ ಸೈಟು ನೋಂದಣಿ ಮಾಡಿಸಿಕೊಳ್ಳಲು ಇನ್ನು ಉಪ-ನೋಂದಾಣಿಧಿಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ: ಆರ್ ಅಶೋಕ, ಕಂದಾಯ ಸಚಿವ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಚಿಂತಾಮಣಿ ನಗರದ ಪಂಚಮುಖಿ ಆಂಜನೇಯ ದೇವಸ್ಥಾನದಿಂದ ಬಾಗೇಪಲ್ಲಿ ವೃತ್ತದವರೆಗೂ ಬಿಜೆಪಿ ನಾಯಕರಿಂದ ರೋಡ್‌ಶೋ ಕೂಡ ನಡೆಯಿತು. ಈ ವೇಳೆ ಯಾತ್ರೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೋಲಾರ ಸಂಸದ ಎಸ್.ಮುನಿಸ್ವಾಮಿ, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸಂಬಾವ್ಯ ಅಭ್ಯರ್ಥಿ ಜಿ.ಎನ್.ವೇಣುಗೋಪಾಲ ಭಾಗಿಯಾದರು. ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು.

ಯಾವುದೇ ಕಾರಣಕ್ಕೂ ಟಿಪ್ಪು ವಿಶ್ವವಿದ್ಯಾಲಯ ಮಾಡಲು ಬಿಡಲ್ಲ

ಕೋಲಾರ: ಟಿಪ್ಪು ವಿವಿ ಸ್ಥಾಪನೆ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅಶೋಕ್, ಯಾವುದೇ ಕಾರಣಕ್ಕೂ ಟಿಪ್ಪು ವಿಶ್ವವಿದ್ಯಾಲಯ ಮಾಡಲು ಬಿಡುವುದಿಲ್ಲ. ಬೇಕಾದರೆ ಡಾ.ಅಬ್ದುಲ್ ಕಲಾಂ ಹೆಸರಿನಲ್ಲಿ ವಿವಿ ಸ್ಥಾಪಿಸಲಾಗುವುದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಂ ನಾಯಕರ ಹೆಸರಿನಲ್ಲಿ ವಿವಿ ಸ್ಥಾಪನೆಗೆ ಅಡ್ಡಿ ಇಲ್ಲ. ದೇಶಕ್ಕೆ ಮುಸ್ಲಿಂ ಸಮುದಾಯದ ಕೆಲವರ ಕೊಡುಗೆ ದೊಡ್ಡದಿದೆ. ಬಿಜೆಪಿ ಮುಸ್ಲಿಂ ಸಮಾಜದ ವಿರೋಧಿಯಲ್ಲ. SDPI, PFI, ಪಾಕ್​ನ ಏಜೆಂಟ್​ಗಳು, ಮತಾಂಧರಿಗೆ ವಿರುದ್ಧವಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Tue, 14 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್