ದೇವಸ್ಥಾನ ಕಟ್ಟಲು ಅನುಮತಿಗಾಗಿ ಭಿಕ್ಷೆ ಬೇಡಬೇಕು, ಚರ್ಚ್, ಮಸೀದಿಗೆ ಯಾರ ಅನುಮತಿ ಬೇಡ: ಅನಂತಕುಮಾರ್ ಹೆಗಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ಪ್ರಕರಣ ದಾಖಲಿಸಿದ ಕೂಡಲೆ ನನ್ನ ಆರೋಗ್ಯ ಸರಿಯಾಯಿತು. ಸಿದ್ದರಾಮಯ್ಯನವರೇ ನೀವು ಎಷ್ಟು ಬೇಕಾದರೂ ಕೇಸ್​ಗಳನ್ನು ಹಾಕಿ. ಹಿಂದೂ ರಾಷ್ಟ್ರ ನಮ್ಮ ಗುರಿ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ದೇವಸ್ಥಾನ ಕಟ್ಟಲು ಅನುಮತಿಗಾಗಿ ಭಿಕ್ಷೆ ಬೇಡಬೇಕು, ಚರ್ಚ್, ಮಸೀದಿಗೆ ಯಾರ ಅನುಮತಿ ಬೇಡ: ಅನಂತಕುಮಾರ್ ಹೆಗಡೆ
ಸಂಸದ ಅನಂತಕುಮಾರ್ ಹೆಗಡೆ
Edited By:

Updated on: Feb 26, 2024 | 1:48 PM

ಬಾಗಲಕೋಟೆ, ಫೆಬ್ರವರಿ 26: ವಕ್ಫ್​ ಕಾಯ್ದೆ (Waqf Board) ತಂದು ಈ ಜಾಗ ನಮ್ಮದು ಎಂದರೆ ಅವರಿಗೆ ಬಿಟ್ಟುಕೊಡಬೇಕು. ನಮ್ಮ ದೇವಸ್ಥಾನ (Temple) ಕಟ್ಟಲು ಅನುಮತಿಗಾಗಿ ಭಿಕ್ಷೆ ಬೇಡಬೇಕು. ಆದರೆ ಇನ್ಮುಂದೆ ಚರ್ಚ್ (Church), ಮಸೀದಿ (Mosque) ಕಟ್ಟಲು ಯಾರ ಅನುಮತಿ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅನುಮತಿ ಪಡೆದರೆ ಸಾಕು ಎಂದು ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಹೇಳಿದರು. ಮುದೋಳ (Mudol) ತಾಲೂಕಿನ ಶಿರೋಳ ಗ್ರಾಮದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ಇನ್ಮುಂದೆ ಪೇಪರ್​ನಲ್ಲಿ ಮಾತ್ರ ಉಳಿಯುತ್ತೆ. ಮುಸ್ಲಿಮರು ನೆಮ್ಮದಿಯಿಂದ ಬದುಕಬೇಕಾದರೆ ಯುಸಿಸಿ ಒಪ್ಪಿಕೊಳ್ಳಬೇಕು ಎಂದರು.

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡಿದ ಎಂಬ ಕಾಂಗ್ರೆಸ್​ ನಾಯಕರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಇವರಿಗೆ ಇಲ್ಲದ ತೆರಿಗೆ ವಿಚಾರ ರಾಜ್ಯ ಕಾಂಗ್ರೆಸ್​ನವರಿಗೆ ಇದೆ. ದೇಶದಲ್ಲಿ ಶೇಕಡಾ 99.99ರಷ್ಟು ತೆರಿಗೆ ಕಟ್ಟುವವರು ಹಿಂದೂಗಳು ಎಂದು ತಿಳಿಸಿದರು.

ಇದನ್ನೂ ಓದಿ: ಎಲ್ಲಿಯವರೆಗೆ ಇಸ್ಲಾಂ ಇರುತ್ತೋ ಅಲ್ಲಿವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ: ಅನಂತಕುಮಾರ್ ಹೆಗಡೆ

ಹಿಂದೂ ಸಮಾಜ ಜಾತಿ ವಿಷ ಬೀಜ ಮರೆತು ಒಂದಾಗಬೇಕು. ಯಾವ ಋಷಿಗಳು ಬ್ರಾಹ್ಮಣರಿರಲ್ಲ. ನಮ್ಮಲ್ಲಿ ಜಾತಿ ಇರಲಿಲ್ಲ, ಅವನ ಉದ್ಯೋಗದ ಮೇಲೆ ಗುರುತಿಸುತ್ತಿದ್ದರು. ಪೂಜೆ ಮಾಡುವ ದೇವರೆಲ್ಲ ಬ್ರಾಹ್ಮಣ ದೇವರಲ್ಲ. ಒಳ್ಳೆಯದು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮ್ಮಲ್ಲಿ ಬರಲಿ ಅಂತಿವಿ. ಹಿಂದೂ ರಾಷ್ಟ್ರ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ಪ್ರಕರಣ ದಾಖಲಿಸಿದ ಕೂಡಲೆ ನನ್ನ ಆರೋಗ್ಯ ಸರಿಯಾಯಿತು. ಸಿದ್ದರಾಮಯ್ಯನವರೇ ನೀವು ಎಷ್ಟು ಬೇಕಾದರೂ ಕೇಸ್​ಗಳನ್ನು ಹಾಕಿ. ಹಿಂದೂ ರಾಷ್ಟ್ರ ನಮ್ಮ ಗುರಿ. ಈ ಮಾತನ್ನು ಅನಂತಕುಮಾರ್ ಹೆಗಡೆ ಅಲ್ಲದೆ, ಸಿದ್ದರಾಮಯ್ಯನವರು ಹೇಳಲು ಆಗುತ್ತಾ? ಅತ್ಯಂತ ಅಮಷ್ಠಿಯ ಬದಕೂ ನಮ್ಮ ಹಿಂದೂ ರಾಷ್ಟ್ರದ ಕಲ್ಪನೆ. ಮಣ್ಣಿನಲ್ಲಿರುವ ಸಾವಿರಾರು ಜೀವಿಗಳನ್ನ ಕೊಂದು ನಾವು ಬದುಕುತ್ತೇವೆ. ಕಳೆದ ಹತ್ತು ವರ್ಷಗಳಿಂದ ಜೀವ ಚೈತನ್ಯ ಕೃಷಿ ಆರಂಭವಾಗಿದೆ. ಹಿಂದೂ ಸಮಾಜ ಯಾರನ್ನೋ ಕಾಪಿ ಮಾಡಿ ಬದುಕಿದ ಸಮಾಜವಲ್ಲ. ವಿದೇಶಿಗರನ್ನ ಕಾಪಿ ಮಾಡಿ ನಾವು ದರಿದ್ರರಾಗಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us