ಬೆಂಗಳೂರು: ತಮಿಳು ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ದಕ್ಷಿಣ ಭಾರತದ ರಾಜಕೀಯದಲ್ಲಿ ಯಶಸ್ಸು ಕಾಣಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸಲು ಸಜ್ಜಾಗಿರುವ ರಜನಿಕಾಂತ್ ಡಿಸೆಂಬರ್ 31ಕ್ಕೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಆದರೆ ತಮಿಳುನಾಡಿನ ಯಾವುದೇ ರಾಜಕೀಯ ಪಕ್ಷವು ತಮಿಳು ಪಕ್ಷ, ಪ್ರಾದೇಶಿಕ ಪಕ್ಷದೊಂದಿಗೆ ಸಂಬಂಧವಿಲ್ಲದೇ ಮುನ್ನಡೆಯಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಸ್ವತಂತ್ರ ಅಸ್ತಿತ್ವ ಪಡೆಯಲು ಸಾಧ್ಯವಿಲ್ಲ ತಮಿಳುನಾಡಿನಲ್ಲಿ ಕಾಂಗ್ರೆಸ್ ಸ್ವತಂತ್ರ ಅಸ್ತಿತ್ವ ಪಡೆಯಲು ಸಾಧ್ಯವಿಲ್ಲ. ಇದು ಯಾವಾಗಲೂ ಎಐಎಡಿಎಂಕೆ ಅಥವಾ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ದ್ರಾವಿಡ ಸಂಸ್ಕೃತಿ ನೀತಿಗಳು ಯಾವಾಗಲು ತಮಿಳುನಾಡಿನ ರಾಜಕೀಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರುತ್ತದೆ. ಇದರಿಂದ ರಜನಿಕಾಂತ್ ರಾಜಕೀಯ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗುವುದಿಲ್ಲ ಎಂದು ಹಲವಾರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ವಹಿಸಿದ್ದ ಮೊಯಿಲಿ ವ್ಯಾಖ್ಯಾನಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ರಜನಿ ಅಲೆ… ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳ ಪ್ರವಾಹ