Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯಮಾಡಿ ರೇಪ್ ಅನ್ನೋ ಶಬ್ದ ಬಳಸಬೇಡಿ.. ನಿಮಗೆ ಶೋಭೆ ತರಲ್ಲ -ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ

ಯುವತಿ ಸ್ವಇಚ್ಛೆಯಿಂದ ಮಾತನಾಡಿದ್ದಾಳೋ ಅಥವಾ ಯಾರದ್ದೋ ಒತ್ತಾಯದಿಂದ ಮಾಡಿದ್ದಾರೋ ಗೊತ್ತಿಲ್ಲ. ಹಾಗಾಗಿ, ರೇಪ್ ಕೇಸ್ ಹಾಕಬೇಕು ಅಂತೆಲ್ಲ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ಈ ರೀತಿಯಾಗಿ ಹೇಳುವುದು ಸರಿಯಲ್ಲ. ದಯಮಾಡಿ ರೇಪ್​ ಅನ್ನೋ ಶಬ್ದ ಬಳಸಿಬೇಡಿ. ನಿಮಗೆ ಶೋಭೆ ತರಲ್ಲ. ಯುವತಿಗೆ ರಕ್ಷಣೆ ನೀಡಲು ಗೃಹ ಸಚಿವರು ಸಿದ್ಧರಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ದಯಮಾಡಿ ರೇಪ್ ಅನ್ನೋ ಶಬ್ದ ಬಳಸಬೇಡಿ.. ನಿಮಗೆ ಶೋಭೆ ತರಲ್ಲ -ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ
ಬಾಲಚಂದ್ರ ಜಾರಕಿಹೊಳಿ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Mar 23, 2021 | 5:34 PM

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸಿದ್ದರಾಮಯ್ಯನವರ ವಾದವನ್ನು ಒಪ್ಪುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಆ ಯುವತಿಯ 34 ಸೆಕೆಂಡ್​ನ ವಿಡಿಯೋ ಇಟ್ಟುಕೊಂಡು ರಮೇಶ್ ಮೇಲೆ ಕೇಸ್ ಹಾಕಬೇಕು ಅನ್ನೋದು ಒಪ್ಪಲ್ಲ. ಯುವತಿ ಸ್ವಇಚ್ಛೆಯಿಂದ ಮಾತನಾಡಿದ್ದಾಳೋ ಅಥವಾ ಯಾರದ್ದೋ ಒತ್ತಾಯದಿಂದ ಮಾಡಿದ್ದಾರೋ ಗೊತ್ತಿಲ್ಲ. ಹಾಗಾಗಿ, ರೇಪ್ ಕೇಸ್ ಹಾಕಬೇಕು ಅಂತೆಲ್ಲ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ಈ ರೀತಿಯಾಗಿ ಹೇಳುವುದು ಸರಿಯಲ್ಲ. ದಯಮಾಡಿ ರೇಪ್​ ಅನ್ನೋ ಶಬ್ದ ಬಳಸಬೇಡಿ. ನಿಮಗೆ ಶೋಭೆ ತರಲ್ಲ. ಯುವತಿಗೆ ರಕ್ಷಣೆ ನೀಡಲು ಗೃಹ ಸಚಿವರು ಸಿದ್ಧರಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು. ವಿಧಾನಸೌಧದಲ್ಲಿ ಕೆಂಗಲ್​ ಗೇಟ್​ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾಲಚಂದ್ರ ಜಾರಕಿಹೊಳಿ ಈ ಮನವಿಯನ್ನು ಮುಂದಿಟ್ಟರು.

ನಿನ್ನೆ ಸದನದಲ್ಲಿದ್ದು ನಾನು ಮಾತನಾಡಬೇಕು ಅಂತಿದ್ದೆ. ಅದರೆ, ನಾನು ಸಿದ್ದರಾಮಯ್ಯನವರ ವಾದ ಒಪ್ಪೋದಿಲ್ಲ. ಆ ಯುವತಿಯ 34 ಸೆಕೆಂಡ್​ನ ವಿಡಿಯೋ ಇಟ್ಟುಕೊಂಡು ರಮೇಶ್ ಮೇಲೆ ಕೇಸ್ ಹಾಕಬೇಕು ಅನ್ನೋದು ಒಪ್ಪಲ್ಲ. ಆ ಯುವತಿ ಸ್ವಇಚ್ವೆಯಿಂದ ಮಾತನಾಡಿದ್ದಾಳೋ ಅಥ್ವಾ ಒತ್ತಾಯದಿಂದ ಮಾಡಿದ್ದಾರೋ ಗೊತ್ತಿಲ್ಲ ಎಂದು ಶಾಸಕರು ಹೇಳಿದರು.

ಯುವತಿಯೇ ಬಂದು ದೂರು ನೀಡಲಿ; ತನಿಖೆಯಲ್ಲಿ ರಮೇಶ್ ತಪ್ಪಿತಸ್ಥರಾಗಿದ್ರೆ ಅವರಿಗೆ ಶಿಕ್ಷೆ ಸಿಗಲಿ ಯುವತಿ ಎಲ್ಲಿದ್ದಾಳೆ ಅನ್ನೋದು ಗೊತ್ತಿಲ್ಲ. ಬಲವಂತವಾಗಿ ಅವಳಿಂದ ವಿಡಿಯೋ ಮಾಡಿಸಿರಬಹುದಲ್ವಾ? ಆ ಯುವತಿಯೇ ಬಂದು ನೇರವಾಗಿ ದೂರು ನೀಡಲಿ. ತನಿಖೆಯಲ್ಲಿ ರಮೇಶ್ ಜಾರಕಿಹೊಳಿ ತಪ್ಪಿತಸ್ಥರಾಗಿದ್ರೆ ಅವರಿಗೆ ಶಿಕ್ಷೆ ಸಿಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಎಸ್​ಐಟಿಯವರು ತುಂಬಾ ಚೆನ್ನಾಗಿ ತನಿಖೆ ಮಾಡ್ತಿದ್ದಾರೆ. ಯುವತಿಯ ಪೋಷಕರ ಮನೆ ಬೆಳಗಾವಿಯ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲೇ ಬರುತ್ತದೆ. ಆದ್ದರಿಂದ, ಅವರು ಅಲ್ಲಿ ದೂರು ನೀಡಿದ್ದಾರೆ. ಒಂದು ಟೀಂ ಒತ್ತಾಯಪೂರ್ವಕವಾಗಿ ಯುವತಿಯನ್ನ ಮುಂದಿಟ್ಟುಕೊಂಡು ವಿಡಿಯೋ ಮಾಡಿದ್ದಾರೆ ಅನ್ನೋ ಗುಮಾನಿ ಇದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡ್ತಿದ್ದಾರೆ. ನಾನೂ ತನಿಖೆ ಆದಷ್ಟು ಬೇಗ ಮುಕ್ತಾಯವಾಗಲಿ ಅಂತಾ ಒತ್ತಾಯ ಮಾಡ್ತಿನಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು; ಸಿಡಿ ಯುವತಿಗೆ ರಕ್ಷಣೆ ಕೊಡಬೇಕು -ಸಿದ್ದರಾಮಯ್ಯ

Published On - 5:28 pm, Tue, 23 March 21

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ