ಸಿದ್ದು, ಡಿಕೆಶಿ ಇಬ್ಬರಿಗೂ ಸಾಬ್ರೇ ಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಆಗುತ್ತೆ; ಸಂಸದ ಪ್ರತಾಪ್ ಸಿಂಹ ಹೇಳಿಕೆ

| Updated By: ಆಯೇಷಾ ಬಾನು

Updated on: May 15, 2022 | 5:15 PM

ಕಾಂಗ್ರೆಸ್​ನಲ್ಲಿ ಇವತ್ತು ಎರಡು ಟೀಂ ಇದೆ. ಒಂದು ಸಿದ್ದರಾಮಯ್ಯ ಟೀಂ. ಮತ್ತೊಂದು ಡಿ.ಕೆ.ಶಿವಕುಮಾರ್ ಟೀಂ. ಗೋರಿ ಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್. ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್ ಗೋರಿ ಪಾಳ್ಯದ ಬಸ್ಸು, ಜಮೀರಣ್ಣ.

ಸಿದ್ದು, ಡಿಕೆಶಿ ಇಬ್ಬರಿಗೂ ಸಾಬ್ರೇ ಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಆಗುತ್ತೆ; ಸಂಸದ ಪ್ರತಾಪ್ ಸಿಂಹ ಹೇಳಿಕೆ
ಸಂಸದ ಪ್ರತಾಪ್ ಸಿಂಹ
Follow us on

ಮಂಡ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಬ್ಬರಿಗೂ ಸಾಬ್ರೇ ಬೇಕು ಎಂದು ಶ್ರೀರಂಗಪಟ್ಟಣದಲ್ಲಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ (Prathap Simha), ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಬರುತ್ತದೆ. ಶ್ರೀರಂಗಪಟ್ಟಣಕ್ಕೆ ಟಿಪ್ಪು ಕೊಡುಗೆ ಏನಿದೆ? ಸಿದ್ದರಾಮಯ್ಯರಿಗೆ ಸಿಎಂ ಆಗಿದ್ದಾಗ ಯದು ವಂಶದವರು ನೆನಪಾಗಲಿಲ್ಲ. ಯದುವಂಶವನ್ನು ನಾಶ ಮಾಡಲು ಹೊರಟ ಟಿಪ್ಪು ಜಯಂತಿ ಮಾಡಿದ್ದರು. ಸಿದ್ದರಾಮಯ್ಯರಿಗೆ ಕಾನೂನು ಪದವಿ ಕೊಟ್ಟ ವಿವಿ ನಾಲ್ವಡಿ ಅವರು ಕಟ್ಟಿದ್ದು. ನಾಲ್ವಡಿ ಅವರು ಕೆಆರ್​ಎಸ್​ ಡ್ಯಾಂ ಕಟ್ಟಿ, ನೀರು ಕೊಟ್ಟರು. ಆದರೂ ಅವರಿಗೆ ನೆನಪಾಗಿದ್ದು ಹೈದರಾಲಿ ಮಗ ಟಿಪ್ಪು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ 5 ವರ್ಷದಲ್ಲಿ ಏನು ಕೆಲಸ ಮಾಡಿದ್ದರು. ಡಿಕೆಶಿ ವಿರುದ್ಧ ಒಳಗಿಂದಲೇ ಪಿತೂರಿ ಮಾಡುತ್ತಿದ್ದಾರೆ. ಡಿಕೆಶಿ ತುಳಿದು ಮತ್ತೆ ಸಿಎಂ ಆಗಲು ಹೊರಟಿದ್ದಾರೆ. ಐದು ವರ್ಷದಲ್ಲಿ ಅವರು ಕೊಟ್ಟ ಒಂದೇ ಒಂದು ಕೊಡುಗೆ ನೆನಪಾಗುತ್ತಾ? ಸಿದ್ದರಾಮಯ್ಯ ಅಂದರೆ ಟಿಪ್ಪು ಜಯಂತಿ ಮಾಡಿದ್ದು. ನಮ್ಮ ಕಾರ್ಯಕರ್ತರನ್ನ ಹತ್ಯೆ ಮಾಡಿಸಿದ್ದು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದ್ದು ನೆನಪಾಗುತ್ತದೆ. ಅದನ್ನ ಬಿಟ್ಟು ಯಾವುದೇ ಅಭಿವೃದ್ಧಿ ನೆನಪಾಗಲ್ಲ. ಸಿದ್ದರಾಮಯ್ಯ ಅಂದರೆ ನಮಗೆ ಹ್ಯೂಬ್ಲೋಟ್ ವಾಚ್ ನೆನಪಾಗುತ್ತದೆ. ವೈಟ್ ಟ್ಯಾಪಿಂಗ್ ಮಾಡಿ ಕಾಸ್ ಹೊಡೆದವರು ನೆನಪಾಗುತ್ತಾರೆ. ಆದರೂ ಒಂದು ಚಹಾ ಕುಡಿಸದೆ ಮುಖ್ಯಮಂತ್ರಿ ಆದೆ ಅಂತಾರೆ. ಈ ಮಾತನ್ನ ನಂಬೋಕೆ ಆಗುತ್ತಾ? ಬಹುಶಃ ಸೋನಿಯಾ, ರಾಹುಲ್ ಚಹಾ ಕುಡಿಯಲ್ಲ, ಬೇರೇನೋ ಕುಡಿಯುತ್ತಾರೆ. ಅವರಿಗೆ ಅದನ್ನ ಕೊಟ್ಟಿದ್ದಾರೆ ಅನಿಸುತ್ತೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಕಾಂಗ್ರೆಸ್​ನಲ್ಲಿ ಇವತ್ತು ಎರಡು ಟೀಂ ಇದೆ. ಒಂದು ಸಿದ್ದರಾಮಯ್ಯ ಟೀಂ. ಮತ್ತೊಂದು ಡಿ.ಕೆ.ಶಿವಕುಮಾರ್ ಟೀಂ. ಗೋರಿ ಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್. ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್ ಗೋರಿ ಪಾಳ್ಯದ ಬಸ್ಸು, ಜಮೀರಣ್ಣ. ಡಿಕೆ ಶಿವಕುಮಾರ್ ಟೀಂನ ವೈಸ್ ಕ್ಯಾಪ್ಟನ್ ನಲಪಾಡ್ ಎಂದು ಮಾತನಾಡಿದ ಪ್ರತಾಪ್ ಸಿಂಹ. ಇಬ್ಬರಿಗೂ ಸಾಬ್ರೇ ಬೇಕು. ಕಾಂಗ್ರೆಸ್ನಲ್ಲಿ ಹಿಂದೂಗಳಿಗೆ ಯಾರಿದ್ದಾರೆ? ಹಿಂದೂಗಳ ಪರವಾಗಿ ಧ್ವನಿ ಎತ್ತುವವರು ಯಾರಿದ್ದಾರೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಬರುತ್ತದೆ. ಈ ಬಗ್ಗೆ ಇವತ್ತಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಮತ್ತೆ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವು, ನೀವೆಲ್ಲಾ ಕೆಲಸ ಮಾಡೋಣ ಎಂದು ಶ್ರೀರಂಗಪಟ್ಟಣದಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ
Andrew Symonds death: ದಾಖಲೆಗಳ ಸರದಾರ ಈ ಆಸೀಸ್ ಆಟಗಾರ; ಆಂಡ್ರ್ಯೂ ಸೈಮಂಡ್ಸ್ ವಿಶೇಷ​​ ರೆಕಾರ್ಡ್​​ಗಳು ಇಲ್ಲಿವೆ
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
Climate Change: ದೆಹಲಿಯಲ್ಲಿ ದಾಖಲೆ ಬಿಸಿಲು, ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆ ಮುನ್ಸೂಚನೆ
ಕರ್ನಾಟಕ ಮದರಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ಒತ್ತಾಯ; ಹಿಂದೂಪರ ಸಂಘಟನೆಗಳಿಂದ ಅಭಿಯಾನ ಶುರು

ಸಿಎಂ ರೇಸ್​ನಲ್ಲಿ ಸಂಸದ ಪ್ರತಾಪ್ ಸಿಂಹ ಇದ್ದಾರೆ
ಕಾಂಗ್ರೆಸ್​ಗೆ ಅಧಿಕಾರ ಕೊಟ್ರೆ ತಾಲಿಬಾನ್​ಗೆ ಕೊಟ್ಟಂತೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಮಾಜಿ ಶಾಸಕ ಜಿ.ಎಸ್​.ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಬಳಿಕ ಸಿಎಂ ರೇಸ್​ನಲ್ಲಿ ಸಂಸದ ಪ್ರತಾಪ್ ಸಿಂಹ ಕೂಡ ಇದ್ದಾರೆ. ಆರ್​ಎಸ್​ಎಸ್​ ಪ್ರೀತಿ ಗಿಟ್ಟಿಸಿಕೊಳ್ಳಲು ಹೀಗೆ ಮಾತಾಡಿದ್ದಾರೆ. ಮುಂದೆ ಸಿಎಂ ಸೀಟು ಗಿಟ್ಟಿಸಲು ಪ್ರತಾಪ್ ಸಿಂಹ ಯತ್ನಿಸುತ್ತಿದ್ದಾರೆ ಎಂದು ಗದಗದಲ್ಲಿ ಮಾಜಿ ಶಾಸಕ ಜಿ.ಎಸ್.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

Published On - 9:14 am, Sun, 15 May 22