ರಾವಣನಂತೆ ಬಿಂಬಿಸಿ ರಾಹುಲ್ ಗಾಂಧಿ ಪೋಸ್ಟರ್: ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರಿಂದ ವಾಗ್ದಾಳಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣನಂತೆ ಬಿಂಬಿಸಿ, ನವಯುಗದ ರಾವಣ ಎಂದು ಪೋಸ್ಟರ್ ಬಿಡುಗಡೆ ಮಾಡಿದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ನಿಗಿ ನಿಗಿ ಕೆಂಡಕಾರುತ್ತಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದರು.
ಬೆಂಗಳೂರು ಅ.07: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ರಾವಣನಂತೆ ಬಿಂಬಿಸಿ, ನವಯುಗದ ರಾವಣ ಎಂದು ಪೋಸ್ಟರ್ ಬಿಡುಗಡೆ ಮಾಡಿದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ (Congress) ನಾಯಕರು ಬಿಜೆಪಿ (BJP) ವಿರುದ್ಧ ನಿಗಿ ನಿಗಿ ಕೆಂಡಕಾರುತ್ತಿದ್ದಾರೆ. ಬಿಜೆಪಿಯವರಿಗೆ ಭಯ ಹುಟ್ಟಿಕೊಂಡಿದೆ. ರಾಹುಲ್ ಗಾಂಧಿ ಅವರನ್ನು ರಾವಣನ ರೀತಿ ಬಿಂಬಿಸಿದ್ದಾರೆ. ಉತ್ತರ ಭಾರತದಲ್ಲಿ ರಾವಣನ್ನೂ ಪೂಜಿಸುವ ಸಂಸ್ಕೃತಿ ಇದೆ. ರಾಹುಲ್ ಗಾಂಧಿ ಮೇಲೆ ಎಷ್ಟು ಭಯ ಇದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು
ಬಿಜೆಪಿ ವಿರುದ್ಧ ಹರಿಹಾಯ್ದ ದಿನೇಶ್ ಗುಂಡೂರಾವ್
ಬಿಜೆಪಿಯವರು ಅವರ ಸಂಸ್ಕೃತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಕೀಳು ಮನಸ್ಥಿತಿ ಎತ್ತು ಹಿಡಿದು ತೋರಿಸುತ್ತಿದೆ. ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಹತಾಶ ಮನೋಭಾವದಿಂದ ಈ ರೀತಿ ಮಾಡುತ್ತಿದ್ದಾರೆ. ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿ ಪ್ರದರ್ಶನ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹರಿಹಾಯ್ದರು.
ಇದನ್ನೂ ಓದಿ:ಬಿಜೆಪಿ, ಕಾಂಗ್ರೆಸ್ ಪೋಸ್ಟರ್ ವಾರ್:ರಾಹುಲ್ ಗಾಂಧಿಯನ್ನು ರಾವಣ ಎಂದ ಬಿಜೆಪಿ, ಮೋದಿ ಸುಳ್ಳುಗಾರ ಎಂದ ಕಾಂಗ್ರೆಸ್
ಬಿಜೆಪಿ ವಿರುದ್ಧ ಸಚಿವ ಎನ್ ಎಸ್ ಬೋಸರಾಜ್ ವ್ಯಂಗ್ಯ
ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡದಿದ್ದರೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅವರಿಗೆ ನಿದ್ದೆ ಬರುವುದಿಲ್ಲ. ರಾಹುಲ್ ಗಾಂಧಿ ಬಗ್ಗೆ ಈಗ ಬಿಜೆಪಿ ಅವರಿಗೆ ಭಯ ಹುಟ್ಟಿದೆ. ಯಾರು ಪವರ್ ಫುಲ್ ಇರುತ್ತಾರೆ ಅವರ ವಿರುದ್ಧ ದೂರು ಇರುತ್ತವೆ. ನಾನು ಸ್ಟ್ರಾಂಗ್ ಇರುವುದರಿಂದ ಜನ ನನಗೆ ಟೀಕೆ, ಟಿಪ್ಪಣಿ ಮಾಡುತ್ತಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಿರುತ್ತಾರೆ ಎಂದು ಸಚಿವ ಎನ್ ಎಸ್ ಬೋಸರಾಜ್ ಹೇಳಿದರು. ಭಾರತ್ ಜೋಡೊ ಯಾತ್ರೆ ಬಳಿಕ ರಾಹುಲ್ ಗಾಂಧಿ ಅವರ ಹೆಸರು ದೇಶ, ವಿದೇಶಗಳಲ್ಲಿ ಚರ್ಚೆಗೆ ಬಂದಿದೆ. ಸಮರ್ಥ ನಾಯಕರು ಅಂತ ಭಾವನೆ ಬಂದಿದೆ. ನಮ್ಮ ಬಗ್ಗೆ ಮಾತನಾಡಲಿ ಅನ್ನೋದಕ್ಕೆ ರಾಜಕೀಯ ಮಾಡುವುದು ಎಂದರು.
ಶಕುನಿ, ದುರ್ಯೋಧನ, ದುಶ್ಯಾಸನರೆಲ್ಲ ಬಿಜೆಪಿಯಲ್ಲಿದ್ದಾರೆ: ರಾಮಲಿಂಗಾ ರೆಡ್ಡಿ
ಬಿಜೆಪಿಯವರು ಹತಾಶರಾಗಿ ನಮ್ಮ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯದ್ದು ವಾಟ್ಸಾಪ್ ವಿವಿ, ಇದರ ಹೆಡ್ ಆಫೀಸ್ ನಾಗ್ಪುರದಲ್ಲಿದೆ. ಇದಕ್ಕೆ ಅಮಿತ್ ಮಾಳವೀಯ ಕುಲಪತಿ. ಕೈಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ ಮಾಡುವುದು. ಬಿಜೆಪಿ ಹಿಟ್ಲರ್ ಇದ್ದಂತೆ. ಬಿಜೆಪಿ ರಾಹುಲ್ ಗಾಂಧಿಯನ್ನು ರಾವಣನಿಗೆ ಹೋಲಿಸಿದೆ. ಶಕುನಿ, ದುರ್ಯೋಧನ, ದುಶ್ಯಾಸನರೆಲ್ಲ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯರಿಗೆ ನ್ಯಾಯ, ನೀತಿ ಅಂತ ಏನೂ ಇಲ್ಲ. ಇದು ಬಿಜೆಪಿಯ ಅವಿವೇಕದ ಪರಮಾವಧಿ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 7 October 23