AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜಡ್ಜ್​ ಹುದ್ದೆಗೆ ರಾಜೀನಾಮೆ, ಯಾವ ಪಕ್ಷ, ಯಾವ ಕ್ಷೇತ್ರ?

ಗದಗ ಜೆಎಂಎಫ್​ಸಿ ಕೋರ್ಟ್​ನ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಬಾಷ್​ಚಂದ್ರ ರಾಠೋಡ ಅವರು ಜಡ್ಜ್​ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದತ್ತ ಮುಖ ಮಾಡುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜಡ್ಜ್​ ಹುದ್ದೆಗೆ ರಾಜೀನಾಮೆ, ಯಾವ ಪಕ್ಷ, ಯಾವ ಕ್ಷೇತ್ರ?
ಸುಬಾಷ್​ಚಂದ್ರ ರಾಠೋಡ, ಹೆಚ್​,ಡಿ ಕುಮಾರಸ್ವಾಮಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 15, 2023 | 5:46 PM

Share

ಗದಗ: ರಾಜಕೀಯ (politics) ಎಂದರೆ ನಮಗೇಕೆ ಅದರ ಉಸಾಬರಿ ನಮ್ಮ ಪಾಡಿಗೆ ನಾವು ಇರೋಣ ಎಂದು ಹೇಳುವ ಜನರೇ ಜಾಸ್ತಿ. ವಿದ್ಯಾವಂತರು, ಪ್ರಾಮಾಣಿಕರು ಮತ್ತು ಯುವಸಮೂಹ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಹೇಳುವವರು ಇನ್ನೊಂದೆಡೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ವ್ಯಕ್ತಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಜಡ್ಜ್​ ಹುದ್ದೆಗೆ ರಾಜಿನಾಮೆ ನೀಡಿ ಜ್ಯಾತ್ಯಾತೀತ ಜನತಾ ದಳ ಪಕ್ಷ ಸೇರ್ಪಡೆಗೊಂಡಿದ್ದಾರೆ. ರಾಜಕೀಯವಾಗಿ ಮತ್ತು ರಾಜ್ಯದಲ್ಲಿ ಬದಲಾವಣೆ ತರಬೇಕು ಎನ್ನುವ ದೊಡ್ಡ ಕನಸಿನೊಂದಿಗೆ ಸುಭಾಷ್​ಚಂದ್ರ ರಾಠೋಡ (Subhash Chandra Rathod) ಅವರು ರಾಕಜೀಯ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೂಲಕ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.

ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ

ಸುಭಾಷ್​ಚಂದ್ರ ರಾಠೋಡ ಅವರು ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನವರು. 2010ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಇರುವ 2016ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡರು. ಕಲಬುರಗಿ, ಚಿತ್ತಾಪುರ ಮತ್ತು ಗದಗ ಜೆಎಂಎಫ್​ಸಿ ಕೋರ್ಟ್​ನ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ರಾಜಕೀಯದತ್ತ ಮುಖ ಮಾಡಿರುವ ಸುಭಾಷ್​ಚಂದ್ರ ಜ.18ರಂದು ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ, ಫೆ.4ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಮಾಜಿ ಸಿಎಂ‌ ಹೆಚ್​.ಡಿ.ಕುಮಾರಸ್ವಾಮಿ ಜೊತೆಗೆ ಟಿಕೆಟ್ ಕುರಿತು ಚರ್ಚೆ ಕೂಡ ನಡೆದಿದ್ದು, ಸುಭಾಷ್​ಚಂದ್ರ ರಾಠೋಡ ಬಹುತೇಕ ಚಿತ್ತಾಪುರ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ.

ಇದನ್ನೂ ಓದಿ: Bangalore, Karnataka News Live: ಜನರಿಗೆ ಕಷ್ಟ ಬಂದಾಗಲೇ ಇಂಜಿನ್​ ಆಫ್​ ಆಗುತ್ತೆ, ಇದು ಡಬಲ್ ಇಂಜಿನ್ ಸರ್ಕಾರದ ಸಮಸ್ಯೆ ಎಂದ ಯು.ಟಿ.ಖಾದರ್

ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಸೆಕೆಂಡ್ ಇನ್ನಿಂಗ್ಸ್

ಕೆಲ ವರ್ಷಗಳ ಹಿಂದಿನವರೆಗೂ ರಾಜಕೀಯಕ್ಕೆ ಸರ್ಕಾರಿ ಅಧಿಕಾರಿಗಳು ಸ್ವಾಮೀಜಿಗಳು ನೇರ ಪ್ರವೇಶ ಮಾಡುವುದು ಬಹಳ ಅಪರೂಪ ಎಂಬಂತಿತ್ತು. ಈಗ ಸರ್ಕಾರಿ ಅಧಿಕಾರಿಗಳು ನಿವೃತ್ತಿ ನಂತರ ಅಥವಾ ರಾಜೀನಾಮೆ ನೀಡಿ ರಾಜಕೀಯ ಹಾದಿ ಹಿಡಿಯುವ ಟ್ರೆಂಡ್ ಶುರುವಾಗಿದೆ. ಮಾಜಿ ಐಎಎಸ್ ಅಧಿಕಾರಿ ಎಸ್ ಜೈಶಂಕರ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೈ ಎನಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಈಗ ತಮಿಳುನಾಡಿನಲ್ಲಿ ಬಿಜೆಪಿಯ ಸ್ಟಾರ್ ಮ್ಯಾನ್ ಆಗಿದ್ದಾರೆ. ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್ ಆದ್ಮಿ ಪಥಕ್ಕೆ ಹೊರಳಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣ ಸಿಎಂ ವಿಚಾರ: ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ವಿಧಾನ ಪರಿಷತ್​​ ಮಾಜಿ ಸದಸ್ಯೆ ಎಸ್​ ಆರ್​ ಲೀಲಾ

ಸರ್ಕಾರಿ ಅಧಿಕಾರಿಗಳ ರಾಜಕೀಯ ಹಾದಿ

ಭಾಸ್ಕರ್ ರಾವ್, ಮಾಜಿ ಐಪಿಎಸ್ ಅಧಿಕಾರಿ: ಎಎಪಿ ಬೆಂಗಳೂರು

ಕೆ ಮಥಾಯ್, ಮಾಜಿ ಐಎಎಸ್ ಅಧಿಕಾರಿ: ಎಎಪಿ ಬೆಂಗಳೂರು

ಹೆಚ್​ಟಿ ಅನಿಲ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ

ಎಂ ಲಕ್ಷ್ಮೀನಾರಾಯಣನ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ

ಸುಧಾಮ್ ದಾಸ್, ಐಆರ್​ಎಸ್ ಅಧಿಕಾರಿ: ಕಾಂಗ್ರೆಸ್

ಸುಭಾಷ್ ಚಂದ್ರ ರಾಥೋಡ್, ಸಿವಿಲ್ ನ್ಯಾಯಾಧೀಶ: ಜೆಡಿಎಸ್

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:44 pm, Wed, 15 February 23