ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗಲೇಲ್ಲ ಕಾಂಗ್ರೆಸ್ಸಿಗರಿಗೆ ಚಳಿಜ್ವರ: ಸಚಿವ ಶ್ರೀರಾಮುಲು ವ್ಯಂಗ್ಯ‌

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗಲೇಲ್ಲ ಕಾಂಗ್ರೆಸ್​ನವರಿಗೆ ಚಳಿಜ್ವರ ಬರುತ್ತದೆ. ಮೋದಿ ಅವರ ಬಿರುಗಾಳಿಗೆ ಸುನಾಮಿಯಂತೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್​ ವಿರುದ್ಧ ಸಚಿವ ಶ್ರೀರಾಮುಲು ವ್ಯಂಗ್ಯ‌ಭರಿತ ವಾಗ್ದಾಳಿ ಮಾಡಿದರು.

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಾಗಲೇಲ್ಲ ಕಾಂಗ್ರೆಸ್ಸಿಗರಿಗೆ ಚಳಿಜ್ವರ: ಸಚಿವ ಶ್ರೀರಾಮುಲು ವ್ಯಂಗ್ಯ‌
ಶ್ರೀರಾಮುಲು
Follow us
ಗಂಗಾಧರ​ ಬ. ಸಾಬೋಜಿ
|

Updated on: Feb 27, 2023 | 5:36 PM

ವಿಜಯನಗರ: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗಲೇಲ್ಲ ಕಾಂಗ್ರೆಸ್​ (Congress) ನವರಿಗೆ ಚಳಿಜ್ವರ ಬರುತ್ತದೆ. ಮೋದಿ ಅವರ ಬಿರುಗಾಳಿಗೆ ಸುನಾಮಿಯಂತೆ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್​ ವಿರುದ್ಧ ಸಚಿವ ಶ್ರೀರಾಮುಲು ವ್ಯಂಗ್ಯ‌ಭರಿತ ವಾಗ್ದಾಳಿ ಮಾಡಿದರು. ಹೊಸಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿ, ಒಲ್ಲದ ಮನಸ್ಸಿನಿಂದ ಮದುವೆ ಮಾಡಿಕೊಂಡಿರೋ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಿತ್ಯ ಕಚ್ಚಾಡ್ತಾರೆ. ಒಡೆದ ಮನೆಯಂತಾಗಿರೋ ಕಾಂಗ್ರೆಸ್ ನಾಯಕರ ನಾಟಕ ಜನರು ಈ ಬಾರಿ ಬಂದ್ ಮಾಡಲಿದ್ದಾರೆ. ರಾಜ್ಯದ ಅಭಿವೃದ್ಧಿ, ಕೇಂದ್ರದ ಅಭಿವೃದ್ಧಿ ಮೋದಿಯವರ ಕಾರ್ಯವೈಖರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಗಣಿಗಾರಿಕೆ ಮಾಡುವ ಉದ್ದೇಶದಿಂದ ಅಮಿತ್ ಶಾ ಸಂಡೂರಿಗೆ ಬಂದಿದ್ದಾರೆ ಎಂದು ಕಾಂಗ್ರೆಸ್ ‌ನಾಯಕ ಆರೋಪವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮಾಡೋಕೆ ಕೆಲಸವಿಲ್ಲ. ಈವರೆಗೂ ಸಂಡೂರಿನಲ್ಲಿ ಬಿಜೆಪಿ ಒಮ್ಮೆ ಗೆದ್ದಿಲ್ಲ. ಗೆದ್ದಿರೋ ಕಾಂಗ್ರೆಸ್ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸಿದರು. ಈ ಬಾರಿ ಸಂಡೂರಿನಲ್ಲಿ ಬಿಜೆಪಿ ಗೆಲ್ಲೋದು ಖಚಿತ. ಮೋದಿ ರಾಜ್ಯಕ್ಕೆ ಬಂದಂತೆ ಅಮತ್ ಶಾ ಬಳ್ಳಾರಿಗೆ ಬಂದ ಹಿನ್ನಲೆ ಕಾಂಗ್ರೆಸ್​ನವರಿಗೆ ನಿದ್ದೇ ಬಂದಿಲ್ಲ ಎಂದರು. ಗದಗ ಸೇರಿದಂತೆ ಹಲವು ಕಡೆ ಸ್ಪರ್ಧೆ ಮಾಡಲು ಬೇಡಿಕೆ ಇದೆ ಆದ್ರೇ ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧೆ ಮಾಡ್ತೇನೆ. ಸಂಡೂರು ಅಥವಾ ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧೆ ಮಾಡೋದಾಗಿ ಪುನರುಚ್ಚಾರ ಮಾಡಿದರು.

ಇದನ್ನೂ ಓದಿ: ಅನ್ನ ಹಳಸಿತ್ತು ನಾಯಿ ಕಾದಿತ್ತು ಎಂಬಂತೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಯುತ್ತಿದ್ದ ಬಿಜೆಪಿ: ಸಿದ್ದರಾಮಯ್ಯ

ಬೇಡಿಕೆ ಈಡೇರದೇ ಇದ್ದಾಗ ಮತ್ತೊಮ್ಮೆ ರಾಜೀನಾಮೆ: ಆನಂದ ಸಿಂಗ್ 

ಆನಂದ ಸಿಂಗ್​ ಮಾತನಾಡಿ, 2013-18 ನಮ್ಮ ಸರ್ಕಾರ ಇರಲಿಲ್ಲ ಅದಕ್ಕೆ ಅನುದಾನ ಹೆಚ್ಚು ಬರಲೇ ಇಲ್ಲ. ಹೀಗಾಗಿ ಸ್ವಲ್ಪ ಅಭಿವೃದ್ಧಿ ಕುಂಟಿತವಾಯ್ತು. 2018 ಮೇ 15ಕ್ಕೆ ಮೂರನೇ ಬಾರಿ ಬೇರೆ ಪಕ್ಷದಿಂದ ಅಯ್ಕೆಯಾದೆ ( ಕಾಂಗ್ರೆಸ್ ). 14 ತಿಂಗಳು ಶಾಸಕನಾದೆ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟದಲ್ಲಿ ಅಭಿವೃದ್ಧಿ ಬರಲೇ ಇಲ್ಲ. ವಿಜಯನಗರ ಜಿಲ್ಲೆ ಬಗ್ಗೆ ಸಮ್ಮಿಶ್ರ ಸರ್ಕಾರದಲ್ಲಿ ಬೇಡಿಕೆ ಇಟ್ಟರು ಆಗಲ್ಲವೆಂದು ಗೊತ್ತಿದ್ರು‌ ಬೇಡಿಕೆ ಇಟ್ಟೇ. ಬೇಡಿಕೆ ಈಡೇರದೇ ಇದ್ದಾಗ ಮತ್ತೊಮ್ಮೆ ರಾಜೀನಾಮೆ ನೀಡಿ ಸ್ವಂತ ಪಕ್ಷಕ್ಕೆ ಬಂದೆ. ಬೇಡಿಕೆ ಈಡೇರಿಸೋ ಭರವಸೆ ನೀಡಿದ ಮೇಲೆ ಬಿಜೆಪಿಗೆ ಬಂದೆ ಎಂದರು.

ರಾಜೀನಾಮೆ ನೀಡಿದಾಗ ರಾಜಕೀಯ ಜೀವನ ಅಂತ್ಯವೆಂದುಕೊಂಡಿದ್ದೇ. ಮೊದಲು ರಾಜೀನಾಮೆ ಕೊಟ್ಟಾಗ ಎಂಟು ದಿನ ಯಾರು ರಾಜೀನಾಮೆ ಕೊಡಲಿಲ್ಲ. ಆದ್ರೂ ನಾನು ಹೆದರಲಿಲ್ಲ. ಜುಲೈ 1, 2019 ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿದೆ. ನಂತರ ನಮ್ಮನ್ನು ಡಿಸ್ಕ್ ಕೊಲಿಫೈ ಮಾಡಿದ್ರು. ಆದ್ರೇ ಅದೃಷ್ಟ ಮತ್ತೊಮ್ಮೆ ಗೆದ್ದು ಬಂದು ಸಚಿವನಾದೆ. ಸಮ್ಮಿಶ್ರ ಸರ್ಕಾರದಲ್ಲಿ ‌ನಾನಷ್ಟೇ ಅಲ್ಲ, ರಾಜ್ಯದ ಜನರು 23 ತಿಂಗಳು ಕಳೆದುಕೊಂಡವು. ಅಭಿವೃದ್ಧಿಯಲ್ಲಿ ‌ಹಿನ್ನಡೆಯಾಯ್ತು.

ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ: ಇದು ನನ್ನ ಕೊನೆಯ ಚುನಾವಣೆ ಎಂದ ಹೆಚ್​​.ಡಿ.ಕುಮಾರಸ್ವಾಮಿ

ಪ್ರಧಾನಿ ಮೋದಿಯನ್ನು ಹೊಗಳಿದ ಆನಂದ ಸಿಂಗ್  

ಕೊರೊನಾ ಬಂದಾಗ ಮತ್ತೊಮ್ಮೆ ಎರಡು ವರ್ಷ ಹಿನ್ನೆಡೆಯಾಯ್ತು. ಐದು ವರ್ಷದ ಅವಧಿಯ 60 ತಿಂಗಳಲ್ಲಿ ಕೊರೊನಾ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯ 42 ತಿಂಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲ. ಆದ್ರೇ‌, ಉಳಿದ 18 ತಿಂಗಳಲ್ಲಿ ‌ಕೋಟಿ ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇನೆ. ನಾಲ್ಕು ಬಾರಿ ಅಯ್ಕೆ ಮಾಡಿದ ಹೊಸಪೇಟೆ ಜನರ ಋಣ ತೀರಿಸಲಾಗದು. ನೀವು ಕೊಟ್ಟ ಭಿಕ್ಷೆಯಿಂದ ಈ ಹಂತಕ್ಕೆ ಬಂದಿದ್ದೇನೆ. ದೇಶ ಮೊದಲು, ನಂತರ ಪಕ್ಷ ಎನ್ನುವ ಮೋದಿ ದೇಶದ ಯುವಕರಿಗೆ ರೋಲ್ ಮಾಡೆಲ್​ ಎಂದು ಹೇಳಿದರು.

ಸುಳ್ಳಿನ ಪಕ್ಷ ಅಂದ್ರೆ ಕಾಂಗ್ರೆಸ್​: ರವಿಕುಮಾರ್ 

ಇನ್ನು ಪದೇಪದೆ ಮೋದಿ ರಾಜ್ಯ ಭೇಟಿಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಬಿಜೆಪಿ ಎಂಎಲ್​ಸಿ ರವಿಕುಮಾರ್​ ಪ್ರತಿಕ್ರಿಯಿಸಿದ್ದು, ನಮ್ಮ ಪಕ್ಷದಲ್ಲಿ 50 ರಾಜ್ಯ ನಾಯಕರ ಹೆಸರು ಹೇಳುತ್ತೇನೆ. ಕಾಂಗ್ರೆಸ್​ನಲ್ಲಿ ಐವರ ಜನರ ಹೆಸರು ಹೇಳಲಿ ನೋಡೋಣ​. ಕಾಂಗ್ರೆಸ್​ನವರು ನಮ್ಮ ಪ್ರಚಾರದ ಬಗ್ಗೆ ಆಶ್ಚರ್ಯಪಡ್ತಿದ್ದಾರೆ. ಪ್ರವಾಹ ಬಂದಾಗ ಒಂದು ಮನೆಗೆ 90 ಸಾವಿರ ರೂ. ಕೊಡ್ತಿದ್ರು. ನೆರೆಗೆ ಮನೆ ಹಾನಿಯಾದ್ರೆ ನಾವು 5 ಲಕ್ಷ ರೂ. ಕೊಡ್ತಿದ್ದೇವೆ. ಸುಳ್ಳಿನ ಪಕ್ಷ ಅಂದ್ರೆ ಕಾಂಗ್ರೆಸ್​. ಸಿದ್ದರಾಮಯ್ಯ, ಡಿಕೆಶಿ ಒಬ್ಬರಿಗಿಂತ ಒಬ್ಬರು ಸುಳ್ಳು ಹೇಳ್ತಾರೆ. ಕಾಂಗ್ರೆಸ್​​ ಪ್ರಜಾಧ್ವನಿ ಯಾತ್ರೆ ಪಂಚರ್ ಆಗಿದೆ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.