ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಇಲ್ಲ, ಜನರಿಗೆ ಬಿಪಿಎಲ್​ ಕಾರ್ಡ್ ಇಲ್ಲ: ಇದು ಬಿಜೆಪಿ ಸರ್ಕಾರದ ಬೀಳ್ಕೊಡಿಗೆ ಭಾಷಣ ಎಂದ ಖಾದರ್

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗುವುದಿಲ್ಲ. ಜನಸಾಮಾನ್ಯರಿಗೆ ಒಂದು ಬಿಪಿಎಲ್ ಕಾರ್ಡ್ ಕೊಡುವುದಿಲ್ಲ. ಗರ್ಭಿಣಿಯರಿಗೆ ತಾಯಿ ಕಾರ್ಡ್ ಕೊಡ್ತಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್​ ಕಿಡಿಕಾರಿದರು.

Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2023 | 6:34 PM

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗುವುದಿಲ್ಲ. ಜನಸಾಮಾನ್ಯರಿಗೆ ಒಂದು ಬಿಪಿಎಲ್ ಕಾರ್ಡ್ ಕೊಡುವುದಿಲ್ಲ. ಗರ್ಭಿಣಿಯರಿಗೆ ತಾಯಿ ಕಾರ್ಡ್ ಕೊಡ್ತಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ (U.T. Khader) ಕಿಡಿಕಾರಿದರು. ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ 7 ಕೆಜಿ ಅಕ್ಕಿ ಕೊಡುತ್ತಿದ್ದಿದ್ದನ್ನು 5 ಕೆಜಿಗೆ ತಂದು ನಿಲ್ಲಿಸಿದ್ದಾರೆ. ಸರಿಯಾದ ಸಮಯದಲ್ಲಿ ಅಕ್ಕಿ ಕೂಡ ಬರಲ್ಲ. ಕ್ವಾಲಿಟಿ ನೋಡಲ್ಲ. ಬಿಪಿಎಲ್ ಕಾರ್ಡ್​ನ್ನು ಇದುವರೆಗೂ ಕೊಟ್ಟಿಲ್ಲ. ಆಸ್ಪತ್ರೆಗೆ ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದರು. ಕಾರ್ಡ್ ಇಲ್ಲದವರು ಎಲ್ಲಿಗೆ ಹೋಗಬೇಕು? ಆಸ್ಪತ್ರೆಯ ಬಿಲ್ ಕಟ್ಟೋದು ಎಲ್ಲಿಂದ? ಇವರು ರಿಪೋರ್ಟ್ ಕಾರ್ಡ್ ಹಿಡಿದಿಕೊಂಡು ಹೋಗುತ್ತಾರಂತೆ. ಕರಾವಳಿಯಲ್ಲಿ ಇದುವರೆಗೂ ಕುಚ್ಚಲಕ್ಕಿ ಕೊಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

ಇದು ಸರ್ಕಾರಕ್ಕೆ ಬೀಳ್ಕೊಡುಗೆ ಭಾಷಣ

ರಾಜ್ಯಪಾಲರ ಭಾಷಣ ಇದು ಸರ್ಕಾರಕ್ಕೆ ಬೀಳ್ಕೊಡುಗೆ ಭಾಷಣ. ಯಡಿಯೂರಪ್ಪ ಪರಿಶ್ರಮದ ಫಲದಿಂದ ಇಂದು ಬಹಳಷ್ಟು ಬಿಜೆಪಿ ನಾಯಕರು ದೆಹಲಿಯಲ್ಲಿ ಇದ್ದಾರೆ. ಆದರೆ ಯಡಿಯೂರಪ್ಪ ಘೋಷಿಸಿರುವ 2 ವರ್ಷದ ಯೋಜನೆ ಸಂಪೂರ್ಣ ಮಾಡಲು ಕೊಡಲಿಲ್ಲ. ಹೈಕಮಾಂಡ್ ಕಿವಿ ಊದಿ ಯಡಿಯೂರಪ್ಪನವರಿಗೆ ಕಣ್ಣೀರು ತರಿಸಿದ್ರು. ಅಲ್ಲದೇ ರಾಜೀನಾಮೆ ಕೊಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ರು. ಬಿಎಸ್​ವೈ ಬಗ್ಗೆ ಮಾತನಾಡುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡಿ ಎಂದು ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪರಿಂದ ಖಾದರ್​​ಗೆ ಸೂಚನೆ ನೀಡಲಾಯಿತು.

ಇದನ್ನೂ ಓದಿ: ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜಡ್ಜ್​ ಹುದ್ದೆಗೆ ರಾಜೀನಾಮೆ, ಯಾವ ಪಕ್ಷ, ಯಾವ ಕ್ಷೇತ್ರ?

ಡಬಲ್ ಇಂಜಿನ್‌ನ ಇಂಧನ ಕೋಮುವಾದದ ಇಂಧನ

ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತದೆ. ಇದು ಡಬಲ್ ಇಂಜಿನ್ ಸರ್ಕಾರದ ಸಮಸ್ಯೆ ಎಂದು ಕಿಡಿಕಾರಿದರು. ಯಾರದ್ದೂ ಇಂಜಿನ್ ವರ್ಕ್ ಆಗಲ್ಲವೆಂದು. ನರಳಾಡಿ ಸತ್ತವನು ಸತ್ತ, ಬದುಕಿದವನು ಬದುಕಿದ. ಡಬಲ್ ಇಂಜಿನ್‌ನ ಇಂಧನ ಕೋಮುವಾದದ ಇಂಧನ. ಇಂಜಿನ್‌ನಿಂದ ಬರುವ ಹೊಗೆ ಸಮಾಜ‌ ಒಡೆಯುವ ವಿಷಕಾರಿ ಹೊಗೆ. ಭ್ರಷ್ಟಾಚಾರದಿಂದಲೇ‌ ಇಂಜಿನ್ ತಯಾರು ಮಾಡಲಾಗಿದೆ ಯು.ಟಿ.ಖಾದರ್ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಬ್ರಾಹ್ಮಣ ಸಿಎಂ ವಿಚಾರ: ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ವಿಧಾನ ಪರಿಷತ್​​ ಮಾಜಿ ಸದಸ್ಯೆ ಎಸ್​ ಆರ್​ ಲೀಲಾ

ಎಪಿಎಲ್ ಆಗಿರುವವರು ಬಿಪಿಎಲ್ ಆಗುತ್ತಾರೆ 

ಆಸ್ಪತ್ರೆಗೆ ಹೋಗುವಾಗ ಎಪಿಎಲ್ ಆಗಿರುತ್ತಾರೆ. ಅಲ್ಲಿಂದ ಬರುವಾಗ ಬಿಪಿಎಲ್ ಆಗಿ ಬರುತ್ತಾರೆ. ಪ್ರತಿ ಕ್ಷೇತ್ರದಲ್ಲಿ 57 ಸಾವಿರ ಮನೆ ಇರುವ ಕಡೆ 60 ಸಾವಿರ ಕಾರ್ಡ್ ಕೊಟ್ಟಿದ್ದಾರೆ. ನಾವು ಬಿಪಿಎಲ್ ಇರುವುದನ್ನು ಎಪಿಎಲ್ ಮಾಡಿರುವ ಬಗ್ಗೆ ರೆಕಾರ್ಡ್ ತೆಗೆದು ನೋಡಲಿ. ಎಷ್ಟೋ ಜನರು ಬಿಪಿಎಲ್​ನಿಂದ ಎಪಿಎಲ್ ಮಾಡಿರುವುದಕ್ಕೆ ನಮ್ಮ ಮೇಲೆ ಬೇಸರ ಆಗಿದ್ದಾರೆ. ಎಷ್ಟೋ ಅನರ್ಹರಿಗೆ ಬಿಪಿಎಲ್ ಕಾರ್ಡ್ ಬದಲಾಗಿ ಎಪಿಎಲ್ ಕೊಡ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. 5% ಕಳ್ಳರನ್ನು ಹಿಡಿಯಲು ಹೋಗಿ 95% ಜನರ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.

ಖಾದರ್​ಗೆ ತಿರುಗೇಟು ನೀಡಿದ ಸಿದ್ದು ಸವದಿ

ಕೋವಿಡ್ ವೇಳೆ ಲಸಿಕೆ ಮಾಡಿದ್ದು ಪ್ರೈವೇಟ್ ಕಂಪನಿ. ಕೋವಿಡ್ ಲಸಿಕೆ ತಯಾರು ಮಾಡಿದವನಿಗೆ ಅವಾರ್ಡ್ ಕೊಡಬೇಕಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಏನೂ ಇಲ್ಲ. ನಮ್ಮ ಗ್ರಹಚಾರ ಪೂನಾವಾಲಾ ದೇಶ ಬಿಟ್ಟು ಓಡಿ ಹೋದ ಎಂದು ಖಾದರ್ ಹೇಳಿದರು. ಮಧ್ಯ ಪ್ರವೇಶ ಮಾಡಿದ ತೇರದಾಳ ಶಾಸಕ ಸಿದ್ದು ಸವದಿ ಪೂನಾವಾಲಾ ಮೇಲೆ ಪ್ರೀತಿ ಇದ್ದರೆ ಅವರ ಲಸಿಕೆ ತಿರಸ್ಕಾರ ಮಾಡಿದ್ರಲ್ಲಾ? ಗಂಡಸ್ತನ ಹೋಗುತ್ತದೆ ಯಾರೂ ಲಸಿಕೆ ತಗೋಬೇಡಿ ಅಂದ್ರಲ್ವಾ? ಆವತ್ತು ನೀವೇ ಲಸಿಕೆ ತೆಗೆದುಕೊಳ್ಳಬೇಡಿ ಸಾಯ್ತಾರೆ ಅಂದ್ರಲ್ವಾ ಎಂದು ಖಾದರ್​ಗೆ ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್