ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್ ಸೇರ್ತಾರಾ ರಮೇಶ್ ಕತ್ತಿ?
‘ಬಿಜೆಪಿ ಮುಖಂಡರು ರಮೇಶ್ ಕತ್ತಿಗೆ ಟಿಕೆಟ್ ಕೊಡ್ತಾರೋ ಅಥವಾ ಈಗಿರುವ ಅಣ್ಣಾಸಾಹೇಬ್ ಜೊಲ್ಲೆಗೆ ಕೊಡುತ್ತಾರೋ ನನಗೆ ಗೊತ್ತಿಲ್ಲ. ಏನ್ ಆಗುತ್ತೆ ನೋಡಿ, ಜಿಲ್ಲೆಯ ಎಲ್ಲ ಹಿರಿಯರ ಜೊತೆ ಮಾತನಾಡಿ ತೀರ್ಮಾನ ಮಾಡ್ತೀನಿ ಎಂದು ರಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ, ಸೆ.30: ಲೋಕಾಸಭಾ ಚುನಾವಣೆ(Loka Sabha Elections)ಇನ್ನೇನು ಹತ್ತಿರ ಬರುತ್ತಿದೆ. ಈ ಹಿನ್ನಲೆ ಚಿಕ್ಕೋಡಿ(Chikkodi) ಲೋಕಸಭಾ ಕಣ ಕಾವೇರಿದೆ. ಹೌದು, ನಿನ್ನೆ(ಸೆ.29) ನಂದಗಾಂವ ಗ್ರಾಮದ ಪಿಕೆಪಿಎಸ್ ಸೊಸೈಟಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ, ಲಕ್ಷ್ಮಣ್ ಸವದಿ(Lakshman Savadi)ಹಾಗೂ ರಮೇಶ್ ಕತ್ತಿ(Ramesh Katti) ಒಂದೇ ವೇದಿಕೆ ಹಂಚಿಕೊಂಡಿದ್ದರು. ಈ ಹಿನ್ನಲೆ ಬಿಜೆಪಿ ಟಿಕೆಟ್ ಸಿಗದಿದ್ರೆ ರಮೇಶ್ ಕತ್ತಿ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾದ ಬೆಳಗಾವಿಯಲ್ಲಿ ಕಾಂಗ್ರೆಸ್ ಮೆಗಾ ಆಪರೇಷನ್ ನಡೆಸಲಿದ್ಯಾ? ಈ ಮೂಲಕ ಮತ್ತೋರ್ವ ಪ್ರಭಾವಿ ಲಿಂಗಾಯತ ನಾಯಕನಿಗೆ ಗಾಳ ಹಾಕಿದ್ಯಾ ಎಂಬ ಪ್ರಶ್ನೆಗಳು ಚಿಕ್ಕೋಡಿ ಲೋಕಸಭಾ ಚುನಾವಣಾ ಕಣದಲ್ಲಿ ಕೇಳಿಬರುತ್ತಿದೆ.
ರಮೇಶ್ ಕತ್ತಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುಳಿವು ಕೊಟ್ರಾ ಲಕ್ಷ್ಮಣ್ ಸವದಿ?
ಇನ್ನು ಈ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ‘ ಆ ಕಾಲ ಸಮೀಪಕ್ಕೆ ಬರಲಿ, ಇನ್ನೂ ಕಾಲ ಪಕ್ವವಾಗಿಲ್ಲ. ಕಾಲ ಪಕ್ವವಾದ ಮೇಲೆ ಯಾವ್ಯಾವ ಬಿಜೆಪಿ ನಾಯಕರು ಕಾಂಗ್ರೆಸ್ ಬರ್ತಾರೆ, ಅಭ್ಯರ್ಥಿಗಳಾಗ್ತಾರೆ ಗೊತ್ತಾಗುತ್ತದೆ ಎಂದರು. ಇನ್ನು ರಮೇಶ್ ಕತ್ತಿ ನಿನ್ನೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಅವರು ‘ರಾಜಕಾರಣ ನಿಂತ ನೀರಲ್ಲ ಎಂಬ ಮಾತು ಹೇಳಿದ್ದಾರೆ. ನಮ್ಮ ಮನೆಗೆ ಬಂದು ಟೀ ಕುಡಿದು ಹೋಗಿದ್ದಾರೆ. ಆಗ ಮಾಧ್ಯಮದವರು ಚುನಾವಣೆಯಲ್ಲಿ ಏನ್ ಮಾಡ್ತೀರಿ ಎಂದಾಗ ‘ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದಿದ್ದೀನಿ, ಟಿಕೆಟ್ ಕೊಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ರಮೇಶ್ ಕತ್ತಿ ತಿಳಿಸಿದ್ದಾರೆ ಎಂದು ಹೇಳಿದರು.
‘ಬಿಜೆಪಿ ಮುಖಂಡರು ರಮೇಶ್ ಕತ್ತಿಗೆ ಟಿಕೆಟ್ ಕೊಡ್ತಾರೋ ಅಥವಾ ಈಗಿರುವ ಅಣ್ಣಾಸಾಹೇಬ್ ಜೊಲ್ಲೆಗೆ ಕೊಡುತ್ತಾರೋ ನನಗೆ ಗೊತ್ತಿಲ್ಲ. ಏನ್ ಆಗುತ್ತೆ ನೋಡಿ, ಜಿಲ್ಲೆಯ ಎಲ್ಲ ಹಿರಿಯರ ಜೊತೆ ಮಾತನಾಡಿ ತೀರ್ಮಾನ ಮಾಡ್ತೀನಿ ಎಂದು ರಮೇಶ್ ಕತ್ತಿ ಹೇಳಿದ್ದಾರೆ. ಈ ಕುರಿತು ರಮೇಶ್ ಕತ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲಿ ನಿಂತು ಕೇಳಿದ್ದೇನೆ ಎಂದರು.
ರಮೇಶ್ ಕತ್ತಿಗೆ ಕಾಂಗ್ರೆಸ್ ಟಿಕೆಟ್ ಕೋಡ್ತಿರಾ?
ರಮೇಶ್ ಕತ್ತಿಗೆ ಬಿಜೆಪಿಗೆ ಟಿಕೆಟ್ ನೀಡದಿದ್ರೆ ಕಾಂಗ್ರೆಸ್ಗೆ ಕರೆತಂದು ಟಿಕೆಟ್ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ ‘ನಮ್ಮದು ರಾಷ್ಟ್ರೀಯ ಪಕ್ಷ, ನಾನೇನು ಪಕ್ಷದ ಅಧ್ಯಕ್ಷನಲ್ಲ. ಆ ರೀತಿ ಹೇಳಿಕೆ ನೀಡುವ ಜವಾಬ್ದಾರಿಯೂ ಇಲ್ಲ. ಅವರೇನಾದರೂ ಬರೋದಾದ್ರೆ ಆ ವಿಚಾರವನ್ನು ಪಕ್ಷದ ಹಿರಿಯರಿಗೆ ಹೇಳಿ ಕನ್ವೇ ಮಾಡುವ ಕೆಲಸ ಮಾಡುತ್ತೇನೆ ಎಂದು ಅಥಣಿಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Sat, 30 September 23