ಇಂಥ ಅಪರೂಪದಲ್ಲೇ ಅಪರೂಪದ ಪಕ್ಷಿಗಳ ದೇವಾಲಯ ಎಲ್ಲಿಯಾದ್ರೂ ನೋಡಿದ್ದಿರಾ?
ಕೋಲಾರ: ನೂರಾರು ವರ್ಷಗಳಿಂದ ಆ ಪಕ್ಷಿಗಳಿಗೆ ದೇವಾಲಯವೇ ಮನೆ. ಊರ ಜನರೇ ಅವುಗಳ ರಕ್ಷಕರು. ಆ ಊರ ಜನರ ಪ್ರೀತಿಯೇ ನಿತ್ಯ ಆಹಾರ. ಹೀಗೆ ಆ ಊರ ದೇವಾಲಯದಲ್ಲಿ ನೆಲೆ ನಿಂತ ಪಾರಿವಾಳಗಳು ಮತ್ತು ಗ್ರಾಮದ ಜನರ ಅನೋನ್ಯತೆ ಮಾನವ ಮತ್ತು ಪಕ್ಷಿಗಳ ನಡುವಿನ ಬಾಂಧವ್ಯಕ್ಕೆ ಅಪೂರ್ವ ಸಾಕ್ಷಿಯಾಗಿದೆ ಕೋಲಾರ ಜಿಲ್ಲೆಯ ಕಿತ್ತಂಡೂರು ಗ್ರಾಮ. ಪುರಾತನ ದೇವಾಲಯವೇ ಪಾರಿವಾಳಗಳ ಗೂಡು ಹೌದು ದೇವಾಲಯದ ಮೇಲೆ ಸ್ವಚಂದವಾಗಿ ಹಾರಾಡುತ್ತಿರುವ ಪಾರಿವಾಳಗಳ ಹಿಂಡು, ಪಾರಿವಾಳಗಳ ಆಟಾಟೋವನ್ನು ವೀಕ್ಷಣೆ ಮಾಡುತ್ತಿರುವ ಗ್ರಾಮಸ್ಥರು […]
ಕೋಲಾರ: ನೂರಾರು ವರ್ಷಗಳಿಂದ ಆ ಪಕ್ಷಿಗಳಿಗೆ ದೇವಾಲಯವೇ ಮನೆ. ಊರ ಜನರೇ ಅವುಗಳ ರಕ್ಷಕರು. ಆ ಊರ ಜನರ ಪ್ರೀತಿಯೇ ನಿತ್ಯ ಆಹಾರ. ಹೀಗೆ ಆ ಊರ ದೇವಾಲಯದಲ್ಲಿ ನೆಲೆ ನಿಂತ ಪಾರಿವಾಳಗಳು ಮತ್ತು ಗ್ರಾಮದ ಜನರ ಅನೋನ್ಯತೆ ಮಾನವ ಮತ್ತು ಪಕ್ಷಿಗಳ ನಡುವಿನ ಬಾಂಧವ್ಯಕ್ಕೆ ಅಪೂರ್ವ ಸಾಕ್ಷಿಯಾಗಿದೆ ಕೋಲಾರ ಜಿಲ್ಲೆಯ ಕಿತ್ತಂಡೂರು ಗ್ರಾಮ.
ಪುರಾತನ ದೇವಾಲಯವೇ ಪಾರಿವಾಳಗಳ ಗೂಡು ಹೌದು ದೇವಾಲಯದ ಮೇಲೆ ಸ್ವಚಂದವಾಗಿ ಹಾರಾಡುತ್ತಿರುವ ಪಾರಿವಾಳಗಳ ಹಿಂಡು, ಪಾರಿವಾಳಗಳ ಆಟಾಟೋವನ್ನು ವೀಕ್ಷಣೆ ಮಾಡುತ್ತಿರುವ ಗ್ರಾಮಸ್ಥರು ಮತ್ತು ಮಕ್ಕಳು, ಹಾಗೂ ಪಾರಿವಾಳಗಳಿಗೆ ಕಾಳು ಕಡಿ ಹಾಕುತ್ತಿರುವ ಗ್ರಾಮದ ಹಿರಿಯರು ಇದೆಲ್ಲಾ ಕಾಣಸಿಗುವುದು ಕೋಲಾರ ತಾಲ್ಲೂಕು ಕಿತ್ತಂಡೂರು ಗ್ರಾಮದಲ್ಲಿ. ಇಂಥಾದೊಂದು ಸುಂದರ ವಾತಾವರಣ ಇಲ್ಲಿ ನಿರ್ಮಾಣವಾಗಲು ಕಾರಣವಾಗಿದ್ದು ಅದೇ ಶಾಂತಿದೂತ ಪಾರಿವಾಳಗಳು.
ಪಾರಿವಾಳಗಳಿಗಿದೆ ಗ್ರಾಮಸ್ಥರ ರಕ್ಷಣೆ ಈ ಗ್ರಾಮದ ಮಧ್ಯದಲ್ಲಿ ಶತ-ಶತಮಾನಗಳ ಇತಿಹಾಸ ವಿರುವ ವೇಣುಗೋಪಾಲ ಸ್ವಾಮಿಯ ದೇವಸ್ಥಾನವಿದೆ. ಈ ದೇವಸ್ಥಾನದ ಚಿಕ್ಕಗೋಪುರದಲ್ಲಿ ನೂರಾರು ವರ್ಷಗಳಿಂದ ಸಾವಿರಾರು ಸಂಖ್ಯೆಯ ಪಾರಿವಾಳಗಳು ವಾಸವಾಗಿವೆ. ಈ ಗೋಪುರವೆ ಇವುಗಳ ಪಾಲಿನ ಅರಮನೆ. ಅದೇ ರೀತಿ ಈ ಪಾರಿವಾಳಗಳ ಮೇಲೂ ಗ್ರಾಮಸ್ಥರಿಗೆ ಅಪಾರ ಪ್ರೀತಿ. ಇವುಗಳ ಸ್ವಚ್ಛಂದ ಹಾರಾಟ ನೋಡಿ ಗ್ರಾಮದ ಜನರ ನೆಮ್ಮದಿ ಪಡೆಯುತ್ತಾರೆ. ಅಷ್ಟೇ ಅಲ್ಲ ಯಾವುದೆ ದುಷ್ಟ ಶಕ್ತಿಗಳು ಪಕ್ಷಿಗಳನ್ನ ತಾಕದಂತೆ ನೋಡಿಕೊಳ್ಳುತ್ತಿದ್ದಾರೆ ಕೂಡಾ.
ಪಾರಿವಾಳಗಳೊಂದಿಗೆ ಗ್ರಾಮಸ್ಥರಿಗಿದೆ ಅವಿನಾಭಾವ ಸಂಬಂಧ ಇನ್ನು ವೇಣುಗೋಪಾಲ ಸ್ವಾಮಿಗೆ ಪಾರಿವಾಳಗಳ ಗುಡು ಗುಡು ಸದ್ದೇ ಬೆಳಗಿನ ಸುಪ್ರಭಾತ. ಇವುಗಳ ಹಾವ ಭಾವ, ಭಂಗಿಗಳನ್ನ ನೋಡುವುದೆ ಜನರಿಗೊಂದು ಆನಂದ, ಗ್ರಾಮದ ಜನ್ರು ಪ್ರತಿನಿತ್ಯ ಅಕ್ಕಿ, ಗೋದಿ, ವಿವಿದ ರೀತಿಯ ಕಾಳುಗಳನ್ನ ಹಾಕುತ್ತಾರೆ. ಬೆಳಗ್ಗೆ ಏಳು ಗಂಟೆಯಾಗುತ್ತಿದ್ದಂತೆ ಹಾರಿ ಬರುವ ಇವು, ಸಲುಗೆಯಿಂದ ಕುಳಿತುಕೊಂಡು ಆಹಾರ ಸೇವಿಸುತ್ತವೆ. ಆದಾದ ನಂತರ ಹಾರಿ ಹೋಗುತ್ತವೆ.
ಔಷಧೀಯ ಗುಣಹೊಂದಿವೆ ಈ ಪಾರಿವಾಳಗಳು ಇನ್ನೂ ಇಲ್ಲಿನ ಪಾರಿವಾಳಗಳ ವಿಶೇಷತೆ ಎಂದ್ರೆ ಲಕ್ವ ಹೊಡೆದವರಿಗೆ ಈ ಪಾರವಾಳಗಳನ್ನ ಔಷಧವಾಗಿ ಬಳಸುತ್ತಾರೆ. ಇವುಗಳನ್ನ ಪತ್ತೆ ಹಚ್ಚುವುದು ಕಷ್ಟ. ಕಪ್ಪು, ಬಿಳಿ, ಕಪ್ಪು ಬಿಳಿ ಮಿಶ್ರಿತ, ಬೂದಿ ಬಣ್ಣದ ಪಾರಿವಾಳಗಳೆ ಇಲ್ಲಿ ಹೆಚ್ಚು. ಇವುಗಳ ಆಹಾರ ಪದ್ದತಿಯೂ ಸುಲಭ, ಪ್ರತಿ ದಿನ 200-300 ಗ್ರಾಂ ಆಹಾರ ಬೇಕು. ರಾತ್ರಿ ವೇಳೆ ಒಂಟಿ ಕಾಲಲ್ಲಿ ನಿಂತು ನಿದ್ರಿಸುವ ಇವುಗಳ ಅಭ್ಯಾಸವೇ ಈ ಪಾರಿವಾಳಗಳ ವಿಶೇಷತೆ.
ಅಷ್ಟೆ ಅಲ್ಲ ಹಿಂದಿನ ಕಾಲದಲ್ಲಿ ರಾಜ ಮಹರಾಜರು ಇವುಗಳನ್ನ ಸಂದೇಶ ರವಾನೆ ಮಾಡಲು ಬಳಸುತ್ತಿದ್ದರು ಎನ್ನಲಾಗುತ್ತೆ. ಯಾಕಂದ್ರೆ ಇವು ಗಿಣಿಯಂತೆ ಬುದ್ದಿವಂತ ಪಕ್ಷಿ. ಜೊತೆಗೆ ಮನುಷ್ಯನ ಮಾತುಗಳನ್ನು ಗ್ರಹಿಸುತ್ತವೆ ಎನ್ನೋದು ಸ್ಥಳೀಯರ ಅನಿಸಿಕೆ. ಅದಕ್ಕಾಗಿನೇ ಇವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನ ನಿರ್ಮಾಣ ಮಾಡಿ ಪಕ್ಷಿ ಪ್ರೇಮ ಮೆರೆಯುತ್ತಿದ್ರಂತೆ.
ಅವನತಿ ಹಾದಿಯಲ್ಲಿರುವ ಪಕ್ಷಿಗಳಿಗೆ ಇಲ್ಲಿದೆ ರಕ್ಷಣೆ.. ಜಾಗತಿಕ ಯುಗದಲ್ಲಿ ಹಲವು ಕಾರಣಗಳಿಂದ ಈ ಪಕ್ಷಿಗಳು ಅವನತಿಯಾಗುತ್ತಿವೆ. ರಾಜ ಮಹಾರಾಜರು ಇವುಗಳಿಗಾಗಿ ಮಹಲ್ ಗಳನ್ನ ನಿರ್ಮಿಸಿರುವ ಇತಿಹಾಸಗಳು ನಮ್ಮ ಕಣ್ಣ ಮುಂದಿವೆ. ಹೀಗೆನೆ ಈಗಲೂ ಈ ಗ್ರಾಮದ ಜನ ದೇವಾಲಯದಲ್ಲಿಟ್ಟು ಪ್ರೀತಿಯಿಂದ ಈ ಪಾರಿವಾಳಗಳನ್ನು ಪೋಷಣೆ ಮಾಡುತ್ತಿರುವುದು ಅಚ್ಚರಿಯಾದರೂ ಇಲ್ಲಿನ ಜನರ ಪಕ್ಷಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.-ರಾಜೇಂದ್ರ ಸಿಂಹ
Published On - 9:28 pm, Wed, 22 July 20