Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೃಷ್ಟಿ ವಿಶೇಷ ಚೇತನನಾಗಿದ್ದರೂ ಟ್ಯಾಲೆಂಟ್​ಗೇನು ಕಡಿಮೆ ಇಲ್ಲ: ಈ ಪ್ರತಿಭಾವಂತ ವ್ಯಕ್ತಿ ಯಾರು ಗೊತ್ತಾ?

ವೈಟೇಕರ್ ತನ್ನ ಮೂರನೇ ವಯಸ್ಸಿನಲ್ಲಿಯೇ ಸ್ವರಮೇಳಗಳನ್ನು ಮತ್ತು ಮಧುರವಾದ ಹಾಡನ್ನು ಒಂದೇ ಸಮಯದಲ್ಲಿ ನುಡಿಸುತ್ತಿದ್ದ. ಆದರೆ ಇಲ್ಲಿನ ಪ್ರಶ್ನೆ ಏನೆಂದರೆ ವೈಟೇಕರ್‌ಗೆ ಈ ರೀತಿಯಾಗಿ ಪಿಯಾನೋ ನುಡಿಸುವುದು ಹೇಗೆ ಸಾಧ್ಯವಾಯಿತು ಎನ್ನುವುದಾಗಿತ್ತು.

ದೃಷ್ಟಿ ವಿಶೇಷ ಚೇತನನಾಗಿದ್ದರೂ ಟ್ಯಾಲೆಂಟ್​ಗೇನು ಕಡಿಮೆ ಇಲ್ಲ: ಈ ಪ್ರತಿಭಾವಂತ ವ್ಯಕ್ತಿ ಯಾರು ಗೊತ್ತಾ?
ಮ್ಯಾಥ್ಯೂ ವಿಟೇಕರ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 01, 2021 | 2:55 PM

ವಾಷಿಂಗ್ಟನ್​: ಟ್ಯಾಲೆಂಟ್ ಎನ್ನುವುದು ವ್ಯಕ್ತಿಗತವಾಗಿರುವಂತದ್ದು, ಅದು ಆ ವ್ಯಕ್ತಿಯ ಸಾಮರ್ಥ್ಯದ ಮೇಲೆ ನಿಂತಿರುತ್ತದೆ. ಕೆಲವೊಮ್ಮೆ ಇಂತಹ ಟ್ಯಾಲೆಂಟ್ ಪ್ರದರ್ಶನಕ್ಕೆ ದೈಹಿಕ ಬಲಹೀನತೆಗಳು ಅಡ್ಡಿಬರುವುದಿಲ್ಲ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ.

ಆತನ ಹೆಸರು ಮ್ಯಾಥ್ಯೂ ವೈಟೇಕರ್. 11ನೇ ವಯಸ್ಸಿಗೇ ಇವರು ದೃಷ್ಟಿ ಕಳೆದುಕೊಂಡರು. ಆದರೆ, ಇವರು ಜಾಜ್ ಪಿಯಾನೋ ನುಡಿಸುವುದರಲ್ಲಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ಕುರುಡನಾಗಿಯೂ ಇವರು ಸಂಗೀತವನ್ನು ಹೇಗೆ ಕರಗತ ಮಾಡಿಕೊಂಡಿದ್ದಾರೆ ಎಂಬುದನ್ನು ಸದ್ಯ ವಿಜ್ಞಾನಿಗಳಲ್ಲಿ ಕುತೂಹಲ ಉಂಟುಮಾಡಿದೆ.

ಈ ನಿಟ್ಟಿನಲ್ಲಿ ವಿಜ್ಞಾನಿಗಳು ವೈಟೇಕರ್‌ ಅವರ ಮೆದುಳಿನ ಪರೀಕ್ಷೆಗೆ ಮುಂದಾಗಿದ್ದು, ಆ ಮೂಲಕ ಸಂಗೀತದ ಬಗೆಗಿನ ಅವರ ದೃಷ್ಟಿಕೊನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ. ಎಂಆರ್‌ಐ ಮೆದುಳಿನ ಸ್ಕ್ಯಾನ್​ಗೆ ವೈಟೇಕರ್​ನನ್ನು ಒಳಪಡಿಸಿ ಪಿಯಾನೋ ಧ್ವನಿಗಳನ್ನು ಕೇಳಿಸಲಾಗಿದೆ. ಸಂಗೀತ ಕೇಳಿದಾಗ ಕಲ್ಪನೆಗಳು ಆತನಲ್ಲಿ ಸಕ್ರಿಯಗೊಂಡಿದ್ದವು ಎನ್ನುವುದು ತಿಳಿದು ಬಂದಿದೆ.

ವೈಟೇಕರ್ ಬೂಟುಗಳನ್ನು ಬಿಚ್ಚಿ ಪಿಯಾನೋ ನುಡಿಸುತ್ತಾರೆ. ಇದರಿಂದ ಅವರು ಸಂಗೀತವನ್ನುಆಸ್ವಾದಿಸುತ್ತಾರೆ. ತಲೆಯನ್ನು ಅಲ್ಲಾಡಿಸುವ ಮೂಲಕ ಜನರು ಎಷ್ಟು ನೆರೆದಿದ್ದಾರೆ ಎನ್ನುವುದನ್ನು ಅವರು ಫೀಲ್​ ಮಾಡುತ್ತಾರೆ.

ಪಿಯಾನೋ ನುಡಿಸುತ್ತಿರುವ ವೈಟೇಕರ್‌

ನ್ಯೂಜೆರ್ಸಿಯ ಹ್ಯಾಕೆನ್‌ಸಾಕ್‌ನ ವೈಟೇಕರ್ ತನ್ನ 3ನೇ ವಯಸ್ಸಿನಲ್ಲಿ ಅಜ್ಜನಿಂದ ಉಡುಗರೆಯಾಗಿ ಪಡೆದ ಸಣ್ಣ ಯಮಹಾ ಕೀಬೋರ್ಡ್​ನಲ್ಲಿ ತನ್ನ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದ್ದ. ಆರಂಭದಲ್ಲಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್​ ಸ್ಟಾರ್ ನುಡಿಸುತ್ತಿದ್ದ ಎಂದು ಆತನ ಪಾಲಕರು ಹೇಳಿದ್ದಾರೆ.

ವೈಟೇಕರ್ ಮೂರನೇ ವಯಸ್ಸಿನಲ್ಲಿಯೇ ಅದ್ಭುತ ಹಾಡುಗಳನ್ನು ನುಡಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಈ ಹಾಡುಗಳನ್ನು ನುಡಿಸೋಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ವಿಜ್ಞಾನಿಗಳದ್ದು.

ಹ್ಯಾಮಂಡ್ ಬಿ3 ಸಂಗೀತದ ಪರಿಕರವನ್ನು ಮೊದಲು ಅಂದರೆ ತನ್ನ 9ನೇ ವಯಸ್ಸಿನಲ್ಲಿ ನುಡಿಸಲು ಸ್ವತಃ ತಾನೆ ಕಲಿತುಕೊಂಡಿದ್ದು. 200ಕ್ಕೂ ಹೆಚ್ಚು ಕ್ಲಬ್‌ಗಳಲ್ಲಿ ಮತ್ತು ಸಂಗೀತ ಕಚೇರಿಗಳಲ್ಲಿ ತನ್ನ ಸಂಗೀತ ಪ್ರತಿಭೆಯನ್ನು ವಿಶ್ವದಾದ್ಯಂತ ಪ್ರದರ್ಶಿಸಿದ್ದಾರೆ.

ಡಾ. ಚಾರ್ಲ್ಸ್ ಲಿಂಬ್‌, ಮ್ಯಾಥ್ಯೂ ವೈಟೇಕರ್ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅವರಿಗೆ ಉಪನ್ಯಾಸ ಮತ್ತು ಸಂಗೀತ ಎರಡನ್ನು ಕೇಳಿಸಲಾಗಿತ್ತು. ಉಪನ್ಯಾಸದ ಸಂದರ್ಭದಲ್ಲಿ ದೃಶ್ಯ  ಯಾವುದೇ ಬದಲಾವಣೆಗಳಾಗಲಿಲ್ಲ. ಆದರೆ ಸಂಗೀತವನ್ನು ಆಲಿಸುವಾಗ ಬದಲಾವಣೆಗಳಾಗಿದ್ದನ್ನು ಲಿಂಬ್ ಗಮನಿಸಿದ್ದರು.

ಟೈಪ್‌ರೈಟರ್‌ನಲ್ಲಿ ಶ್ರೀರಾಮನ ಚಿತ್ರ ಬಿಡಿಸಿ ರಾಮ ಮಂದಿರಕ್ಕೆ ಅರ್ಪಿಸಿದ ಬೆಂಗಳೂರಿಗ