Freedom Of Expression : ‘ಸಾಮಾಜಿಕ ಜಾಲತಾಣಗಳಲ್ಲಿಯೂ ನಮ್ಮ ಕೈಕಾಲು ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ‘

Cartoon : ‘ಸೋಶಿಯಲ್ ಮೀಡಿಯಾ ನಿಜಕ್ಕೂ ಸ್ವತಂತ್ರ ಧ್ವನಿಗೆ ತಕ್ಕದಾದ ವೇದಿಕೆ. ಅನ್ನ ನೀಡಲು ಇದು ನಿಮ್ಮಿಂದ ಬಹಳಷ್ಟು ಸರ್ಕಸ್ ನಿರೀಕ್ಷಿಸಬಹುದು. ಆದರೆ ನಿಮ್ಮ ಧ್ವನಿಗೆ ಹತ್ತು ಪಟ್ಟಿನ ಶಕ್ತಿ ನೀಡೋ ತಾಕತ್ತಿರೋದು ಈ ವೇದಿಕೆಗೆ ಅಷ್ಟೇ. ಈ ಕಾರಣಕ್ಕಾಗಿಯೇ ಸರಕಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕಾರ್ಟೂನುಗಳ ಬಗ್ಗೆ ಎಲ್ಲಿಲ್ಲದ ದ್ವೇಷ. ಕಾರ್ಟೂನುಗಳ ವೈರಲ್ ಓಡಾಟವನ್ನು ತಡೆಗಟ್ಟುವಷ್ಟು ಹತಾಶೆಯ ಮಟ್ಟಕ್ಕೆ ನಮ್ಮ ಆಳುವವರು ಇಳಿದಿದ್ದಾರೆ.‘ ಸತೀಶ್ ಆಚಾರ್ಯ

Freedom Of Expression : ‘ಸಾಮಾಜಿಕ ಜಾಲತಾಣಗಳಲ್ಲಿಯೂ ನಮ್ಮ ಕೈಕಾಲು ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ‘
ಖ್ಯಾತ ವ್ಯಂಗ್ಯಚಿತ್ರಕಲಾವಿದರಾದ ದಿನೇಶ ಕುಕ್ಕುಜಡ್ಜ, ಪಿ ಮಹಮ್ಮದ, ಸತೀಶ ಆಚಾರ್ಯ
Follow us
ಶ್ರೀದೇವಿ ಕಳಸದ
|

Updated on:Jun 25, 2021 | 8:55 PM

ಮುದ್ರಣ ಮಾಧ್ಯಮ ಸಮೃದ್ಧವಾಗಿದ್ದ ಕಾಲದ ತನಕ ವ್ಯಂಗ್ಯಚಿತ್ರಕಲಾವಿದರು ತಮ್ಮ ವೃತ್ತಿಜೀವನವನ್ನು ಯಾವುದೇ ಅಡೆತಡೆಯಿಲ್ಲದೆ ನಿಭಾಯಿಸಬಹುದಾಗಿತ್ತು. ಆದರೆ ಯಾವಾಗ ಇಂಗ್ಲಿಷ್ ಮತ್ತು ಕನ್ನಡದ ದಿನಪತ್ರಿಕೆಗಳು, ವೆಬ್​ಸೈಟ್​ಗಳು ವ್ಯಂಗ್ಯಚಿತ್ರಕಲಾವಿದರನ್ನು ಗುತ್ತಿಗೆ ಅಥವಾ ಫ್ರೀಲಾನ್ಸ್​ನಡಿ ನೇಮಿಸಿಕೊಳ್ಳಲು ಶುರುಮಾಡಿದವೋ ಆಗ ವೃತ್ತಿಭದ್ರತೆಯ ಬಗ್ಗೆ ಅಷ್ಟೇ ಅಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಆತಂಕ ಶುರುವಾಯಿತು. ಅಷ್ಟೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉಸಿರಾಡಲು ಜಾಗ ದೊರೆತು ಆರ್ಥಿಕವಾಗಿ ಏನೂ ಲಾಭವಿಲ್ಲದಿದ್ದರೂ ಅವರವರ ಧ್ವನಿಗೆ, ರಾಜಕೀಯ ಸಿದ್ಧಾಂತಗಳಿಗೆ ತಕ್ಕಂತೆ ಇಂಬು ದೊರೆಯುತ್ತ ಹೋಯಿತು. ಜೊತೆಗೆ ಸಾಮಾಜಿಕ ಜಾಲತಾಣಗಳ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಅವರವರ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಟ್ರೆಂಡ್ ಕೂಡ ಬೆಳೆಯುತ್ತಾ ಹೋಯಿತು. ಈ ಎಲ್ಲದರ ಪರಿಣಾಮವಾಗಿ ಈಗ ಅವರವರ ಅಭಿವ್ಯಕ್ತಿಗೆ ಅವರವರೇ ಜವಾಬ್ದಾರರು ಎಂಬಂಥ ಪರಿಸ್ಥಿತಿ ಬಂದೊಂದಿಗೆ. ಕೆಲ ದಿನಗಳ ಹಿಂದೆ ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜಳ್ ಅವರ ಟ್ವಿಟರ್ ಖಾತೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಟ್ವಿಟರ್​ಗೆ ನೋಟೀಸ್ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವ್ಯಂಗ್ಯಚಿತ್ರಗಳ ಮೂಲಕ ನಾಡಿನ ಗಮನ ಸೆಳೆದ ಕನ್ನಡದ ಕಲಾವಿದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಈ ಚರ್ಚೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ.

*

ಪಿ. ಮಹಮ್ಮದ್, ಹಿರಿಯ ವ್ಯಂಗ್ಯಚಿತ್ರಕಲಾವಿದರು

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಂಗ್ಯಚಿತ್ರಕಲಾವಿದರು; ಈ ವಿಷಯವಾಗಿ ವಾಸ್ತವ ಬೇರೆಯೇ ಇದೆ. ಮೊದಲಾದರೆ ಆಯಾ ಪತ್ರಿಕೆಗಳು ವ್ಯಂಗ್ಯಚಿತ್ರಕಲಾವಿದರನ್ನು ಕಾಯಂ ಉದ್ಯೋಗಿಯಂತೆ ನೇಮಿಸಿಕೊಳ್ಳುತ್ತಿದ್ದವು. ಆಗ ಪತ್ರಿಕೆಯ ಸಂಪಾದಕೀಯ ಧೋರಣೆಯ ಚೌಕಟ್ಟಿನಲ್ಲಿ ಕಲಾವಿದರು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಬಹುದಾಗಿತ್ತು. ಈಗ ವ್ಯಂಗ್ಯಚಿತ್ರಕಲಾವಿದರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಸ್ತಿತ್ವ ಕಂಡುಕೊಂಡ ಹಿನ್ನೆಲೆಯಲ್ಲಿ ವ್ಯಂಗ್ಯಚಿತ್ರಗಳು ತಮ್ಮ ಸ್ವರೂಪವನ್ನು ಬದಲಿಸಿಕೊಂಡು ‘ಮೀಮ್‘ಗಳಾಗಿ ಮಾರ್ಪಾಡಾಗುತ್ತಿವೆ. ಎರಡು ಪಾತ್ರಗಳ ನಡುವೆ ಸಂಭಾಷಣೆ ಮತ್ತದಕ್ಕೊಂದು ಪಂಚ್ ಸಾಕು, ವೈರಲ್ ಆಗಿಬಿಡುತ್ತವೆ. ಕೆಲವರು ಟ್ರೆಂಡಿಂಗ್ ಟಾಪಿಕ್​ಗಳನ್ನು ಕೈಗೆತ್ತಿಕೊಂಡು ಉತ್ಪ್ರೇಕ್ಷಿತ ಅಭಿವ್ಯಕ್ತಿಯೊಂದಿಗೆ ಗಮನ ಸೆಳೆಯುತ್ತಿದ್ದಾರೆ ನಿಜ. ಆದರೆ ವಿಚಾರ ಸ್ಪಷ್ಟತೆ ಮತ್ತು ಆಳವೂ ಅಷ್ಟೇ ಮುಖ್ಯ.

freedom of expression

ವ್ಯಂಗ್ಯಚಿತ್ರ : ಪಿ. ಮಹಮ್ಮದ್

ಇನ್ನು ಅಭಿರುಚಿಯ ವಿಷಯವಾಗಿ ಕೆಲವರಿಗೆ ಎನ್. ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ಇಷ್ಟವಾದರೆ ಇನ್ನೂ ಕೆಲವರಿಗೆ ಆರ್. ಕೆ. ಲಕ್ಷ್ಮಣ ಅವರ ವ್ಯಂಗ್ಯಚಿತ್ರಗಳು ಇಷ್ಟವಾಗುತ್ತವೆ. ಅದು ಅವರವರ ಆಸಕ್ತಿ ಮತ್ತು ಆಯ್ಕೆ. ನಾನು ಕೆಲಸ ಮಾಡಿದ ಸಂಸ್ಥೆ ಪ್ರಗತಿಪರ ನಿಲುವಿನಿಂದ ಕೂಡಿದ್ದರಿಂದ ಸಂಪಾದಕೀಯ ಸಲಹೆಗಳನ್ನು ಪಾಲಿಸುತ್ತ ಅದರಡಿಯೇ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಯಿತು.  ಹೀಗಿದ್ದಮೇಲೂ ಅಪಾಯ ಒದಗಿತು, ಒದಗುತ್ತದೆ ಎಂದರೆ ಅದು ಹೊರಗಿನ ಯಾವುದೋ ಒಂದು ಶಕ್ತಿ, ರಾಜಕೀಯ ವ್ಯವಸ್ಥೆ ಪತ್ರಿಕಾ ಸಂಸ್ಥೆಯ ಮೇಲೆ ಹೇರಿದ ಒತ್ತಡದ ಪರಿಣಾಮದಿಂದಾಗಿ ಮಾತ್ರ.

*

ಸತೀಶ್ ಆಚಾರ್ಯ, ವ್ಯಂಗ್ಯಚಿತ್ರಕಲಾವಿದರು

ಮುದ್ರಣ ಮಾಧ್ಯಮಗಳು ಕಾರ್ಟೂನುಗಳನ್ನು ಬೆಂಬಲಿಸುತ್ತ ಇದ್ದ ಸಮಯದಲ್ಲೂ ಸೋಶಿಯಲ್ ಮೀಡಿಯಾ ಮಾಧ್ಯಮ ಮುದ್ರಣ ಮಾಧ್ಯಮವನ್ನು ಮೀರಿ ಬೆಳೆದ ವೇದಿಕೆಯಾಗಿತ್ತು. ಕಾರ್ಟೂನುಗಳು ಜನಸಾಮಾನ್ಯರನ್ನು ತಲುಪಲು, ಯುವ ಜನರು ಕಾರ್ಟೂನು ಕಲೆಯತ್ತ ಒಲವು ತೋರಲು ಸೋಶಿಯಲ್ ಮೀಡಿಯಾ ಬಹಳ ಮುಖ್ಯ ಕಾರಣವಾಗಿತ್ತು. ಇದು ಕೇಜ್ರಿವಾಲ್ ಮುಂದಾಳತ್ವದ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲೇ ಶುರುವಾಗಿತ್ತು.

freedom of expression

ವ್ಯಂಗ್ಯಚಿತ್ರ : ಸತೀಶ ಆಚಾರ್ಯ

ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮುದ್ರಣ ಮಾಧ್ಯಮಗಳು ಸರಕಾರದ ಬಿಗಿಮುಷ್ಟಿಯಲ್ಲಿ ನಲುಗಲಾರಂಭಿಸಿತು. ಇಲ್ಲಿ ಮೊದಲು ಒದೆ ತಿಂದು ಹೊರ ಬಂದವರು ವ್ಯಂಗ್ಯಚಿತ್ರಕಾರರು. ಆಗ ವ್ಯಂಗ್ಯಚಿತ್ರಕಾರರಿಗೆ ಸ್ವತಂತ್ರ ನೆಲೆಯ ಆಶ್ರಯ ನೀಡಿದ್ದು ಸೋಶಿಯಲ್ ಮೀಡಿಯಾ. ಸಂಪಾದಕರ ಹದ್ದುಬಸ್ತಿನ ಗೋಜಿಲ್ಲ. ಪತ್ರಿಕೆಯ ಮಾಲೀಕರು ನಡುರಾತ್ರಿಯಲ್ಲಿ ಪ್ರಿಂಟಿಗೆ ಹೊರಟ ಪುಟದಿಂದ ಕಾರ್ಟೂನು ಕಿತ್ತು ಎಸೆಯುವ ಕಸಿವಿಸಿಯಿಲ್ಲ. ಬೆಳಗಾಗುವುದರೊಳಗೆ ನೌಕರಿ ಕಳೆದುಕೊಳ್ಳುವ ಭಯವಿಲ್ಲ. ಸೋಶಿಯಲ್ ಮೀಡಿಯಾ ನಿಜಕ್ಕೂ ಸ್ವತಂತ್ರ ಧ್ವನಿಗೆ ತಕ್ಕದಾದ ವೇದಿಕೆ. ಅನ್ನ ನೀಡಲು ಇದು ನಿಮ್ಮಿಂದ ಬಹಳಷ್ಟು ಸರ್ಕಸ್ ನಿರೀಕ್ಷಿಸಬಹುದು. ಆದರೆ ನಿಮ್ಮ ಧ್ವನಿಗೆ ಹತ್ತು ಪಟ್ಟಿನ ಶಕ್ತಿ ನೀಡೋ ತಾಕತ್ತಿರೋದು ಈ ವೇದಿಕೆಗೆ ಅಷ್ಟೇ. ಈ ಕಾರಣಕ್ಕಾಗಿಯೇ ಸರಕಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕಾರ್ಟೂನುಗಳ ಬಗ್ಗೆ ಎಲ್ಲಿಲ್ಲದ ದ್ವೇಷ. ಕಾರ್ಟೂನುಗಳ ವೈರಲ್ ಓಡಾಟವನ್ನು ತಡೆಗಟ್ಟುವಷ್ಟು ಹತಾಶೆಯ ಮಟ್ಟಕ್ಕೆ ನಮ್ಮ ಆಳುವವರು ಇಳಿದಿದ್ದಾರೆ.

*

ದಿನೇಶ ಕುಕ್ಕುಜಡ್ಕ, ವ್ಯಂಗ್ಯಚಿತ್ರಕಲಾವಿದರು

2012ರ ನಂತರ ನಮ್ಮ ವ್ಯಂಗ್ಯಚಿತ್ರಗಳಿಗೆ ವಿರೋಧಗಳು ಮಾತ್ರವಲ್ಲ ನಿತ್ಯವೂ ಜೀವಬೆದರಿಕೆಗಳು ಬರಲು ಶುರುವಾದವು. ಆರಂಭದಲ್ಲಿ ಧೃತಿಗೆಟ್ಟೆವು. ಆದರೆ ಬರುಬರುತ್ತ ಅಭ್ಯಾಸವಾದಂತಾಗಿ ಹೆಚ್ಚು ವ್ಯಂಗ್ಯಚಿತ್ರಗಳನ್ನು ಚಿತ್ರಿಸತೊಡಗಿದೆವು. ಈಗಿನ ಪರಿಸ್ಥಿತಿಯಲ್ಲಿ ಆರ್. ಕೆ. ಲಕ್ಷ್ಮಣ, ರಾಮಮೂರ್ತಿ, ಶಂಕರ್ ಅಂಥ ಕಲಾವಿದರ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದರೆ ಅವರು ಖಂಡಿತ ಜೈಲಿಗೆ ಹೋಗುತ್ತಿದ್ದರು. ಅಭಿವ್ಯಕ್ತಿಯನ ಇವೆಲ್ಲ ಫ್ಯಾಸಿಸಂನ ಲಕ್ಷಣಗಳು. ಯಾವಾಗ ಮಾಧ್ಯಮ ಕಾರ್ಪೋರೇಟ್ ಪರಿಧಿಗೆ ಬರತೊಡಗಿತೋ ಆಗಿನಿಂದಲೇ ಮಾಧ್ಯಮ ತನ್ನ ಸಿದ್ಧಾಂತಗಳನ್ನು ಗಾಳಿಗೆ ತೂರಿಕೊಂಡುಬಿಟ್ಟಿತು.

freedom of expression

ವ್ಯಂಗ್ಯಚಿತ್ರ : ದಿನೇಶ್ ಕುಕ್ಕುಜಡ್ಕ

ಪತ್ರಿಕೋದ್ಯಮವೆಂದರೆ ಪ್ರಭುತ್ವದ ವಿರುದ್ಧ ಮಾತನಾಡುವಂಥದ್ದು. ಇಲ್ಲವಾದರೆ ಅದು ಕರಪತ್ರವಾಗಿಬಿಡುತ್ತದೆ. ಇದನ್ನೇ ವ್ಯಂಗ್ಯಚಿತ್ರಕಲೆಗೂ ಅನ್ವಯಿಸಿ ನೋಡಿ. ಪ್ರಭುತ್ವ ತನ್ನನ್ನು ಪ್ರಶ್ನಿಸುವವರನ್ನು ಸಹಿಸುತ್ತಿಲ್ಲ. ಯಾರೆಲ್ಲ ಪ್ರಶ್ನಿಸುತ್ತಾರೆ ಅವರೆಲ್ಲರ ಧ್ವನಿ ಅಡಗಿಸುತ್ತಿದೆ. ಇದ್ಯಾವುದಕ್ಕೂ ಬಗ್ಗದಿದ್ದಲ್ಲಿ ಹಲ್ಲೆ. 2019ರ ತನಕ ನಾನು ಕೆಲಸ ಮಾಡಿದ ಪತ್ರಿಕೆಯ ಧೋರಣೆ ಭಿನ್ನವಾಗಿದ್ದರೂ ನನ್ನ ಸಿದ್ಧಾಂತಕ್ಕೆ ಪೂರಕವಾಗಿ ಮತ್ತು ವ್ಯಂಗ್ಯಚಿತ್ರದ ತತ್ವಕ್ಕೆ ಅನುಗುಣವಾಗಿ ಪ್ರಭುತ್ವವನ್ನು ಪ್ರಶ್ನೆ ಮಾಡುತ್ತಲೇ ಕೆಲಸ ಮಾಡಿದೆ. ಹಾಗೆ ನೋಡಿದರೆ ವ್ಯಂಗ್ಯಚಿತ್ರದ ಕಾಲ ಮುದ್ರಣಮಾಧ್ಯಮಕ್ಕೆ ಅವಸಾನ ಕಂಡಂತೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಉಸಿರಾಡುತ್ತಿದೆ ಎನ್ನುವ ಸಮಾಧಾನವಿತ್ತು. ಆದರೆ ಈಗ ಅಲ್ಲಿಯೂ ನಮ್ಮ ಕೈಕಾಲು ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ. ಇದು ಉಸಿರುಗಟ್ಟಿಸುವ ವಿಷಯ.

ಇದನ್ನೂ ಓದಿ : ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ

Published On - 8:35 pm, Fri, 25 June 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್