Rajiv Gandhi Death Anniversary 2021: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮರಣಾರ್ಥ ನಾಳೆ ಸೇವಾ ಮತ್ತು ಸದ್ಭಾವನಾ ದಿನ ಆಚರಣೆಗೆ ಕಾಂಗ್ರೆಸ್ ಕರೆ

Anti Terrorism Day 2021: ಕೊವಿಡ್ ವಿಪರೀತವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್​ನ ಎಲ್ಲಾ ಕಾರ್ಯಕರ್ತರು ಕೊವಿಡ್ ಸೋಂಕಿತರಿಗೆ ಅಗತ್ಯವಿರುವ ಸಹಾಯ ಮಾಡಬೇಕು. ಆಕ್ಸಿಜನ್ ಸಿಲಿಂಡರ್, ಮಾಸ್ಕ್, ಔಷಧ, ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಬೇಕು. ರಾಜೀವ್ ಗಾಂಧಿಯವರ ಸ್ಮರಣಾರ್ಥ ಕೊವಿಡ್ ವಿರುದ್ಧ ಹೋರಾಡಬೇಕು. ಕೊವಿಡ್ ಲಸಿಕೆ ಪಡೆಯಲು ನೋಂದಣಿ ಮಾಡಿಸಲು ಬಡಜನರಿಗೆ ಸಹಾಯ ಮಾಡಬೇಕು ಎಂದು ಸಹ ಅವರು ಕರೆ ನೀಡಿದ್ದಾರೆ.

Rajiv Gandhi Death Anniversary 2021: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮರಣಾರ್ಥ ನಾಳೆ ಸೇವಾ ಮತ್ತು ಸದ್ಭಾವನಾ ದಿನ ಆಚರಣೆಗೆ ಕಾಂಗ್ರೆಸ್ ಕರೆ
ರಾಜೀವ್ ಗಾಂಧಿ
Follow us
|

Updated on: May 20, 2021 | 7:38 PM

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಶ್ರೀಲಂಕಾದ ಎಲ್​ಟಿಟಿಇ ಉಗ್ರರ ಮಾನವ ಬಾಂಬ್ ದಾಳಿಯಿಂದ ಮೃತಪಟ್ಟು ನಾಳೆಗೆ 30 ವರ್ಷ. ರಾಜೀವ್ ಗಾಂಧಿ ಪುಣ್ಯತಿಥಿಯ ಸ್ಮರಾಣಾರ್ಥ ದೇಶದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ನಾಳೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೊವಿಡ್ ಪಿಡುಗು ವ್ಯಾಪಕವಾಗಿ ಹಬ್ಬಿರುವ ಈ ದಿನದಲ್ಲಿ ರಾಜೀವ್ ಗಾಂಧಿಯವರನ್ನು ಹತ್ಯೆಗೈದ ದಿನವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುವುದು ಇನ್ನಷ್ಟು ಮಹತ್ವ ಪಡೆದಿದೆ. ಅದರಲ್ಲೂ ಕಾಂಗ್ರೆಸ್ ನಾಳೆ ‘ಸೇವಾ ಮತ್ತು ಸದ್ಭಾವನಾ ದಿನ’ವನ್ನಾಗಿ ಆಚರಿಸಲು ತೀರ್ಮಾನಿಸಿದೆ. ಈ ಕುರಿತು ಕಾಂಗ್ರೆಸ್​ನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ರಾಜೀವ್ ಗಾಂಧಿಯವರ ಸ್ಮರಣಾರ್ಥ ಕಾಂಗ್ರೆಸ್​ನ ವಿಧಾನಸಭಾ ಮತ್ತು ವಿಧಾನಪರಿಷತ್ ಸದಸ್ಯರಿಗೆ ತಮ್ಮ ಕ್ಷೇತ್ರಕ್ಕೆ ಕನಿಷ್ಠ ಎರಡು ಆ್ಯಂಬುಲೆನ್ಸ್​ಗಳನ್ನು ಕೊಡುಗೆ ನೀಡಲು ಕೆ.ಸಿ.ವೇಣುಗೋಪಾಲ್ ಕರೆ ನೀಡಿದ್ದಾರೆ. ಅಲ್ಲದೇ, ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ಸಾಮೂಹಿಕ ಮಾಸ್ಕ್ ವಿತರಣೆ ಮಾಡಲು ಅವರು ಸೂಚನೆ ನೀಡಿದ್ದಾರೆ.

ಕೊವಿಡ್ ವಿಪರೀತವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್​ನ ಎಲ್ಲಾ ಕಾರ್ಯಕರ್ತರು ಕೊವಿಡ್ ಸೋಂಕಿತರಿಗೆ ಅಗತ್ಯವಿರುವ ಸಹಾಯ ಮಾಡಬೇಕು. ಆಕ್ಸಿಜನ್ ಸಿಲಿಂಡರ್, ಮಾಸ್ಕ್, ಔಷಧ, ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಬೇಕು. ರಾಜೀವ್ ಗಾಂಧಿಯವರ ಸ್ಮರಣಾರ್ಥ ಕೊವಿಡ್ ವಿರುದ್ಧ ಹೋರಾಡಬೇಕು. ಕೊವಿಡ್ ಲಸಿಕೆ ಪಡೆಯಲು ನೋಂದಣಿ ಮಾಡಿಸಲು ಬಡಜನರಿಗೆ ಸಹಾಯ ಮಾಡಬೇಕು ಎಂದು ಸಹ ಅವರು ಕರೆ ನೀಡಿದ್ದಾರೆ.

ದೇಶ ಕಂಡ ಅತಿ ಕಿರಿಯ ಪ್ರಧಾನಿ ರಾಜೀವ್ ಗಾಂಧಿ ದೇಶ ಕಂಡ ಅತ್ಯಂತ ಕಿರಿಯ ಪ್ರಧಾನಿ. ತಮ್ಮ 40ನೇ ವಯಸ್ಸಿನಲ್ಲೇ ಪ್ರಧಾನಿ ಪಟ್ಟ ಏರಿದ್ದ ಅವರದ್ದು ಮಹತ್ವಾಕಾಂಕ್ಷೆಯ ವ್ಯಕ್ತಿತ್ವ. ತಾಯಿ, ದಿವಂಗತ ಇಂದಿರಾ ಗಾಂಧಿ ತಮ್ಮ ಅಂಗರಕ್ಷಕರ ಗುಂಡಿಗೇ ಆಹುತಿಯಾದ ನಂತರ ದೇಶದ ರಾಜಕೀಯದಲ್ಲಿ ದೇಶದ ಸಾರ್ಥ್ಯ ವಹಿಸುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಒಮ್ಮೆಲೆ ಸಾರ್ವತ್ರಿಕ ಚುನಾವಣೆ ಎದುರಾಯಿತು. ಕಾಂಗ್ರೆಸ್ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದು ಅಭೂತಪೂರ್ವ ವಿಜಯ ಸಾಧಿಸಿತು. ಅಂದಿನ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳನ್ನು ಮೊಗೆದು ಬಾಚಿಕೊಂಡಿತು. ಇಂದಿರಾ ಗಾಂಧಿಯವರ ಮಗ ರಾಜೀವ್ ಗಾಂಧಿ ಪ್ರಧಾನಿಯಾದರು.

ಇದನ್ನೂ ಓದಿ: Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್ (Congress plans to step up relief activities to mark Rajiv Gandhis death anniversary)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ