International Women’s Day 2021: ಅದೆಷ್ಟೋ ಕ್ಷೇತ್ರಗಳ ಬಾಗಿಲನ್ನು ತೆರೆದ ಪ್ರಥಮ ಸಾಧಕಿಯರಿಗೆ ಗೂಗಲ್​ ಡೂಡಲ್​ ವಿಶೇಷ ಗೌರವ

Women's Day Google Doodle: ಎಲ್ಲ ಕ್ಷೇತ್ರಗಳ ಮೊದಲುಗಳು ಇಂದು ಅಸಂಖ್ಯಾತ ಮಹಿಳೆಯ ಸಾಧನೆಗೆ ಬುನಾದಿಯಾಗಿವೆ. ಅದೆಷ್ಟೋ ವಿಭಾಗಗಳಲ್ಲಿ ಮಹಿಳೆಯರ ಪಾಲಿಗೆ ಗಾಜಿನ ಬಾಗಿಲುಗಳಿದ್ದವು. ಅಲ್ಲಿ ಮೊದಲು ಪ್ರವೇಶಿಸಿದ ಮಹಿಳೆಯರು ಆ ಗಾಜನ್ನು ಒಡೆದಿದ್ದಾರೆ ಎಂದು ಗೂಗಲ್​ ಡೂಡಲ್​ ತಿಳಿಸಿದೆ.

International Women's Day 2021: ಅದೆಷ್ಟೋ ಕ್ಷೇತ್ರಗಳ ಬಾಗಿಲನ್ನು ತೆರೆದ ಪ್ರಥಮ ಸಾಧಕಿಯರಿಗೆ ಗೂಗಲ್​ ಡೂಡಲ್​ ವಿಶೇಷ ಗೌರವ
ಮಹಿಳಾ ದಿನಾಚರಣೆಗೆ ಡೂಡಲ್​ನಿಂದ ವಿಶೇಷ ಗೌರವ
Follow us
Lakshmi Hegde
| Updated By: Digi Tech Desk

Updated on:Mar 08, 2021 | 6:28 PM

Women’s Day Google Doodle: ಇಂದಿನ ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯಂದು ಗೂಗಲ್ ತನ್ನ ಡೂಡಲ್​ ಮೂಲಕ ವಿಭಿನ್ನವಾಗಿ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಪುರುಷರಿಗಷ್ಟೇ ಸೀಮಿತ ಎಂದುಕೊಂಡಿದ್ದ ಕ್ಷೇತ್ರಗಳಲ್ಲಿ ಒಂದೊಂದೇ ಮಹಿಳಾ ಹೆಜ್ಜೆಗಳು ಮೂಡಿದ ಕ್ಷಣವನ್ನು ಡೂಡಲ್​ ಉಲ್ಲೇಖಿಸಿದೆ. ಅಂದರೆ ವಿಶ್ವದ ಇತಿಹಾಸದಲ್ಲಿ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಪ್ರಥಮಗಳನ್ನು ಸಾಧಿಸಿದ್ದನ್ನು ಒಂದು ಚಿಕ್ಕ ವಿಡಿಯೋದಲ್ಲಿ ಹಿಡಿದಿಟ್ಟಿದೆ.

ಡೂಡಲ್​​ನ ವಿಡಿಯೋದಲ್ಲಿ ಮಹಿಳೆಯರ ಕೈ ಮಾತ್ರ ತೋರಿಸಲಾಗಿದೆ.. ಅಂದರೆ ಶಿಕ್ಷಣ, ವಿಜ್ಞಾನ, ವೈದ್ಯಕೀಯ ಕ್ಷೇತ್ರ, ಗಗನಯಾನ, ಇಂಜಿನಿಯರಿಂಗ, ಇತರ ಹೋರಾಟ, ಕಲೆ.. ಸೇರಿ ವಿವಿಧ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಮಹಿಳೆಯರ ಪ್ರವೇಶವನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಗೂಗಲ್​ ಡೂಡಲ್​, ಇಂದು ವಿಶ್ವದ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯರಾಗಿದ್ದಾರೆ. ಈ ವಿಭಾಗಗಳಿಗೆ ಮಹಿಳೆಯರಿಗೂ ಪ್ರವೇಶ ಇದೆ ಎಂದು ಬಾಗಿಲು ತೆರೆದು ತೋರಿಸಿದವರು ತಲೆಮಾರುಗಳ ಹಿಂದಿನ ಪ್ರಥಮ ಸಾಧಕ ಮಹಿಳೆಯರು. ಇಂದು ಗೂಗಲ್ ಡೂಡಲ್​​ನಲ್ಲಿ ಒಂದು ಚಿಕ್ಕ ವಿಡಿಯೋ ಮೂಲಕ ಅವರಿಗೆಲ್ಲ ಗೌರವ ಸಲ್ಲಿಸಲಾಗುತ್ತಿದೆ ಎಂದು ಬರೆದುಕೊಂಡಿದೆ. ಅದರಲ್ಲಿ ಮಹಿಳೆಯರನ್ನು S(Heroes) ಎಂದು ಉಲ್ಲೇಖಿಸಿದ್ದು ವಿಶೇಷ.

ಎಲ್ಲ ಕ್ಷೇತ್ರಗಳ ಮೊದಲುಗಳು ಇಂದು ಅಸಂಖ್ಯಾತ ಮಹಿಳೆಯ ಸಾಧನೆಗೆ ಬುನಾದಿಯಾಗಿವೆ. ಅದೆಷ್ಟೋ ವಿಭಾಗಗಳಲ್ಲಿ ಮಹಿಳೆಯರ ಪಾಲಿಗೆ ಗಾಜಿನ ಬಾಗಿಲುಗಳಿದ್ದವು. ಅಲ್ಲಿ ಮೊದಲು ಪ್ರವೇಶಿಸಿದ ಮಹಿಳೆಯರು ಆ ಗಾಜನ್ನು ಒಡೆದಿದ್ದಾರೆ. ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಗೂಗಲ್ ತನ್ನ ಡೂಡಲ್ ಮೂಲಕ ತಿಳಿಸಿದೆ.

ಮಹಿಳಾ ದಿನಾಚರಣೆಯನ್ನು 1911ರಿಂದ ಆಚರಿಸಿಕೊಂಡು ಬರಲಾಗಿದ್ದು, ಮಹಿಳಾ ಸಮಾನತೆ, ಹಕ್ಕು ರಕ್ಷಣೆಗಳೇ ಮುಖ್ಯ ಆಶಯ. ಈ ಬಾರಿ Choose to Challenge ಎಂಬ ಥೀಮ್​ನೊಂದಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಮಹಿಳೆಯರು ಸವಾಲುಗಳನ್ನು ಸ್ವೀಕರಿಸಲು ಮತ್ತು ಸವಾಲು ಹಾಕಲು ಸದಾ ಸಿದ್ಧರಿರಬೇಕು ಎಂಬ ಕಾರಣಕ್ಕೆ ಈ ಘೋಷವಾಕ್ಯವನ್ನು ನೀಡಲಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆ 2021: ಬೆಳಕು ಹರಿಯದ ಮುಂಜಾನೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಆಸರೆಯಾದ ಆಟೋ ಚಾಲಕಿ…

International Women’s Day 2021: ‘ಸವಾಲಿಗೆ ಸಿದ್ಧ ನಾವು..’ – ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !

Published On - 11:49 am, Mon, 8 March 21

ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ