ಸೂರ್ಯನ ಶಾಖ ಕೊರೊನಾ ಕ್ರಿಮಿಯನ್ನು ಕೊಲ್ಲುತ್ತಾ! ಏನಂತಾರೆ ತಜ್ಞರು?

ಸಾಧು ಶ್ರೀನಾಥ್​

|

Updated on: May 16, 2020 | 3:45 PM

ವಾಷಿಂಗ್ಟನ್: ಇಡೀ ವಿಶ್ವದಾದ್ಯಂತ ಸಿಕ್ಕ ಸಿಕ್ಕವರ ದೇಹ ಹೊಕ್ಕು ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ಹೆಮ್ಮಾರಿಯಿಂದ ಪಾರಾಗಬೇಕಾದ್ರೆ ನಮಗೆ ಸೂರ್ಯನ ಬೆಳಕು ಅತ್ಯವಶ್ಯಕ ಎಂಬ ಮಾತುಗಳು ಕೇಳಿ ಬರುತ್ತಿದೆ. ಸೂರ್ಯನ ಬೆಳಕು ವೈರಸ್‌ನಿಂದ ಜನರನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸೂರ್ಯನ ಶಾಖ ಮುಖ್ಯ: ಸೂರ್ಯನ ಶಾಖದಿಂದ ಕೊರೊನಾ ಬರುವುದಿಲ್ಲ ಎಂಬ ಥಿಯರಿ ಇದೆ. ಈ ಬಗ್ಗೆ ಹಲವು ತಜ್ಞರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಯುಎಸ್​ನಲ್ಲಿ ಕೊವಿಡ್​ 19ಗೆ ಸಂಬಂಧಿಸಿದ […]

ಸೂರ್ಯನ ಶಾಖ ಕೊರೊನಾ ಕ್ರಿಮಿಯನ್ನು ಕೊಲ್ಲುತ್ತಾ! ಏನಂತಾರೆ ತಜ್ಞರು?

ವಾಷಿಂಗ್ಟನ್: ಇಡೀ ವಿಶ್ವದಾದ್ಯಂತ ಸಿಕ್ಕ ಸಿಕ್ಕವರ ದೇಹ ಹೊಕ್ಕು ಕೊರೊನಾ ಕ್ರಿಮಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ಹೆಮ್ಮಾರಿಯಿಂದ ಪಾರಾಗಬೇಕಾದ್ರೆ ನಮಗೆ ಸೂರ್ಯನ ಬೆಳಕು ಅತ್ಯವಶ್ಯಕ ಎಂಬ ಮಾತುಗಳು ಕೇಳಿ ಬರುತ್ತಿದೆ. ಸೂರ್ಯನ ಬೆಳಕು ವೈರಸ್‌ನಿಂದ ಜನರನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತಿದೆ.

ಕೊರೊನಾ ನಿಯಂತ್ರಣಕ್ಕೆ ಸೂರ್ಯನ ಶಾಖ ಮುಖ್ಯ: ಸೂರ್ಯನ ಶಾಖದಿಂದ ಕೊರೊನಾ ಬರುವುದಿಲ್ಲ ಎಂಬ ಥಿಯರಿ ಇದೆ. ಈ ಬಗ್ಗೆ ಹಲವು ತಜ್ಞರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಯುಎಸ್​ನಲ್ಲಿ ಕೊವಿಡ್​ 19ಗೆ ಸಂಬಂಧಿಸಿದ ಮಾಹಿತಿಯನ್ನು ರಿಚರ್ಡ್ ವೆಲ್ಲರ್ ಗಮನಿಸಿದ್ದಾರೆ. ಅದರಂತೆ ಕೊರೊನಾ ನಿಯಂತ್ರಣಕ್ಕೆ ಬರಲು ಸೂರ್ಯನ ಶಾಖ ಮುಖ್ಯ ಎಂದಿದ್ದಾರೆ ಚರ್ಮರೋಗ ವೈದ್ಯ ಮತ್ತು ಸೂರ್ಯನ ಬೆಳಕಿನ ಸಂಶೋಧಕರಾಗಿರುವ ರಿಚರ್ಡ್ ವೆಲ್ಲರ್ ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ:  ಕೊರೊನಾಗಿಂತ ಹಿಂದಿನ ವೈರಸ್​ SARS ಸಹ ಬೇಸಿಗೆ ಕಾಲದಲ್ಲಿ ಕಡಿಮೆ ಅಪಾಯವನ್ನುಂಟು ಮಾಡಿತ್ತು.  ಅದೇ ರೀತಿ, ಈ ಬೇಸಿಗೆಯಲ್ಲಿ ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಪಿಹೆಚ್​ಡಿ ಸಂಶೋಧಕ ಮಾರ್ಕ್ ಅರ್ಬನ್ ಎಂಬುವರು ತಿಳಿಸಿದ್ದಾರೆ.

ವೈರಸ್ ಕಣಗಳನ್ನು ಕೊಲ್ಲುತ್ತೆ: ಕೊವಿಡ್ 19 ಅನ್ನು ಪ್ರತಿರೋಧಿಸುವ ಗುಣಲಕ್ಷಣಗಳು ಸೂರ್ಯನ ಬೆಳಕಿನಲ್ಲಿವೆ ಎಂದು ವೆಲ್ಲರ್ ಎಂಬುವರೂ ಹೇಳಿದ್ದಾರೆ. ಚರ್ಮದ ಮೇಲ್ಮೈನಲ್ಲಿ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸುವುದರ ಜೊತೆಗೆ, ವೈರಸ್ ಕಣಗಳನ್ನು ಸಹ ಆ ಸೂರ್ಯ ರಶ್ಮಿಗಳು ಕೊಲ್ಲುತ್ತವೆ ಎಂದಿದ್ದಾರೆ.

ವೈರಸ್ ಸೇರಿದಂತೆ ಕೆಲವು ಸಾಂಕ್ರಾಮಿಕ ಕಾಯಿಲೆಗಳು ಚಳಿಗಾಲದಲ್ಲೇ ಹೆಚ್ಚಾಗಿ ಹರಡುತ್ತಿವೆ. ಏಕೆಂದರೆ ಚಳಿಗಾಲದ ವಾತಾವರಣವು ವಿವಿಧ ರೀತಿಯ ಉಸಿರಾಟ ಸಂಬಂಧೀ ಸೋಂಕುಗಳ ಹರಡುವಿಕೆಯನ್ನು ಉತ್ತೇಜಿಸುತ್ತದೆ. ಈಗ ತಾಜಾ ಉದಾಹರಣೆಯೆಂದರೆ ಕೊವಿಡ್ 19 ಸಹ ಚಳಿಗಾಲದಲ್ಲೇ ಹೊರಹೊಮ್ಮಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada