AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಆರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮಗಳು ಯಾವುವು?

ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.

ದೇವರ ಆರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮಗಳು ಯಾವುವು?
ಸಂಗ್ರಹ ಚಿತ್ರ
ಆಯೇಷಾ ಬಾನು
ಆಯೇಷಾ ಬಾನು|

Updated on: Apr 15, 2021 | 6:35 AM

Share

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನ ಪೂಜೆಗೆ ವಿಶೇಷ ಮಹತ್ವ ಇದೆ. ಭಗವಂತನನ್ನು ಆರಾಧಿಸೋದು ಅಂದ್ರೆ ಅದು ವಿಗ್ರಹಾರಾಧನೆ. ಕೆಲ ಪುರಾಣಗಳ ಪ್ರಕಾರ, ಸಾವಿರಾರು ವರ್ಷಗಳಿಂದಲೂ ಮುಕ್ಕೋಟಿ ದೇವತೆಗಳ ಪೈಕಿ ಒಂದೊಂದು ದೇವರಿಗೆ, ಒಂದೊಂದು ಮೂರ್ತಿ ರೂಪವನ್ನು ನೀಡಿ ಭಕ್ತಿ-ಭಾವದಿಂದ ಆರಾಧಿಸಿಕೊಂಡು ಬರಲಾಗಿದೆ. ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗಾದ್ರೆ ವಿಗ್ರಹಾರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ಆ ನಿಯಮಗಳು ಯಾವುವು? ಅನ್ನೋದನ್ನು ಇಲ್ಲಿ ತಿಳಿಯಿರಿ.

ವಿಗ್ರಹಾರಾಧನೆಯ ನಿಯಮಗಳು 1.ವಿಗ್ರಹಾರಾಧನೆ ಮಾಡೋಕು ಮುನ್ನ ತಲೆಸ್ನಾನ ಮಾಡಬೇಕು. 2.ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. 3.ನಂತರ ಹಣೆಗೆ ಕುಂಕುಮ ಇಡಬೇಕು. 4.ಹಾಲು, ಹಣ್ಣುಗಳನ್ನ ನೈವೇದ್ಯಕ್ಕಾಗಿ ತಂದಿಟ್ಟುಕೊಳ್ಳಬೇಕು. 5.ವಿಗ್ರಹಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. 6.ವಿಗ್ರಹಗಳಿಗೆ ಅರಿಶಿನ, ಕುಂಕುಮ ಹಚ್ಚಬೇಕು. 7.ದೇವರ ವಿಗ್ರಹಗಳಿಗೆ ನೀರನ್ನು ಸಿಂಪಡಿಸಿದ ಹೂಗಳನ್ನು ಇಡಬೇಕು. 8.ದೇವರ ಪೂಜೆ ಮಾಡೋಕೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. 9.ಪೂಜೆ ಮಾಡೋಕೆ ನೆಲದ ಮೇಲೆ ಆಸನ ಹಾಕಿಕೊಂಡು ಕುಳಿತುಕೊಳ್ಳಬೇಕು. 10.ದೇವರ ಮುಂದೆ ದೀಪ ಹಚ್ಚಬೇಕು. 11.ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಬಾರದು. 12.ಪ್ರತಿದಿನ ಪೂಜಿಸುವಾಗ ಪಂಚ ದೇವತೆಗಳಾದ ಸೂರ್ಯ, ಗಣೇಶ, ದುರ್ಗೆ, ಈಶ್ವರ ಹಾಗೂ ಮಹಾವಿಷ್ಣುವನ್ನು ತಪ್ಪದೇ ಸ್ಮರಿಸಬೇಕು. 13.ನಂತರ ಕುಲದೇವತೆಯನ್ನು ಪ್ರಾರ್ಥಿಸಬೇಕು. 14.ದೇವರಿಗೆ ಅಗರಬತ್ತಿ, ಧೂಪ, ದೀಪ, ಕರ್ಪೂರದಿಂದ ಬೆಳಗಿ ಶ್ರದ್ಧಾ ಭಕ್ತಿಯಿಂದ ನಮಿಸಬೇಕು. 15.ಭಗವಂತನಿಗೆ ಮಂಗಳಾರತಿ ಮಾಡಿ ಆರತಿಯನ್ನು ಕಣ್ಣಿಗೊತ್ತಿಕೊಳ್ಳಬೇಕು. 16.ಇಷ್ಟಾರ್ಥಗಳು ಈಡೇರಬೇಕೆಂದು ಭಗವಂತನಲ್ಲಿ ಭಕ್ತಿಯಿಂದ ಸಂಕಲ್ಪ ಮಾಡಿಕೊಳ್ಳಬೇಕು. 17.ಮನೆಯಲ್ಲಿ ಪೂಜಿಸುವ ದೇವರ ವಿಗ್ರಹಗಳು ಸಮ ಸಂಖ್ಯೆಯಲ್ಲಿರಬೇಕು.

ಈ ರೀತಿ ನಿಯಮಬದ್ಧವಾಗಿ ವಿಗ್ರಹಗಳಿಗೆ ಪ್ರತಿದಿನ ಸರಳವಾಗಿಯಾದರೂ ಪೂಜೆ ಮಾಡಿದ್ರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಶುಭ ಫಲಗಳು ಉಂಟಾಗುತ್ತವೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. (How To Perform Puja or How To Worship God Idols) ಇದನ್ನೂ ಓದಿ: ಶಕ್ತಿ ದೇವತೆ ಬನಶಂಕರಿಯ ಅಮ್ಮಗೆ ಯುಗಾದಿಯಂದು ವಿಶೇಷ ಪೂಜೆ

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ