ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟಿಕಾಯತ್ ಎಂಬ ಹೆಸರು ಕೇಳಿದರೆ ರೈತರಲ್ಲಿ ಶಕ್ತಿಸಂಚಯವಾಗುತ್ತದೆ. ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯತ್ ಎಂಬ ಇಬ್ಬರು ಅಣ್ಣ ತಮ್ಮಂದಿರು ಭಾರತೀಯ ಕಿಸಾನ್ ಯೂನಿಯನ್​ನ ರೈತ ಸಂಘಟನೆಯ ವಕ್ತಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 40ಕ್ಕಿಂತ ಹೆಚ್ಚು ಬಾರಿ ರೈತ ಹೋರಾಟಗಳಲ್ಲಿ ಭಾಗಿಯಾಗಿ ಜೈಲುಪಾಲಾದ ಹಿನ್ನೆಲೆ ರಾಕೇಶ್ ಟಿಕಾಯತ್​ ಅವರದು.

ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್
ಭಾರತೀಯ ಕಿಸಾನ್ ಯೂನಿಯನ್​ ಮುಖಂಡ ರಾಕೇಶ್ ಟಿಕಾಯತ್
Follow us
guruganesh bhat
|

Updated on:Jan 26, 2021 | 8:37 PM

ಮನೆ ಹತ್ತಿ ಉರಿಯಲು ಚಿಕ್ಕ ಕಿಡಿ ಸಾಕು ಎಂಬ ಹಿರಿಯರ ಮಾತು ಇಂದು ಮತ್ತೊಮ್ಮೆ ಸಾಬೀತಾಗಿದೆ. ದೆಹಲಿ ಚಲೋ ಎಂಬ ಚಳುವಳಿಯಿಂದ ದೇಶದ 72ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಆದ ಘಟನೆಗಳು ಒಂದೆರಡಲ್ಲ. ಅವುಗಳನ್ನು ಪದಗಳಲ್ಲಿ ಹೇಳುವುದೂ ಕಷ್ಟವೇ. ದೇಶಕ್ಕೆ ದೇಶವನ್ನೇ ಭುಗಿಲೇಳುವ ಮನಸ್ಥಿತಿಗೆ ತರಬಲ್ಲ ಎಲ್ಲ ಕೃತ್ಯಗಳೂ ದೆಹಲಿಯಲ್ಲಿ ನಡೆದವು. ಎರಡು ತಿಂಗಳಿಂದ ಶಾಂತಿಯ ಅಪ್ಪಟ ಪ್ರತಿರೂಪವಾಗಿ ನಡೆದ ಪ್ರತಿಭಟನೆ ಇಂದು ಮಾತ್ರ ಹಿಂಸೆಯ ಕಾವಿಗೆ ಬದಲಾಯಿತು.

ಎರಡು ತಿಂಗಳು. ಬರೋಬ್ಬರಿ ಎರಡು ತಿಂಗಳು. ಈ ಕಾಲದಲ್ಲಿ ಓರ್ವ ವ್ಯಕ್ತಿಯ ಮಾತನ್ನು ಇನ್ನೊಬ್ಬ ಕೇಳಿಸಿಕೊಳ್ಳುವುದೇ ಕಷ್ಟ ಎಂಬಂತಿರುವಾಗ ಎರಡು ತಿಂಗಳ ಕಾಲ ಸಾವಿರಾರು ಮಂದಿಯನ್ನು ಒಂದೆಡೆ ಸೇರಿಸಿ ಪ್ರತಿಭಟನೆ ನಡೆಸುವುದು ಸುಲಭದ ಮಾತಲ್ಲ. ಜತೆಗೆ, ಒಂದು ಹೆಜ್ಜೆ ಅತ್ತಿತ್ತ ವಾಲದೇ ಎಲ್ಲರ ಮನಸ್ಥಿತಿಯನ್ನು ಸರಿದೂಗಿಸಿಕೊಳ್ಳುವುದು ಸಾಹಸವೇ ಸರಿ. ಇವೆಲ್ಲವೂ ನೆರವೇರಿದ ದೆಹಲಿ ಚಲೋ ಎಂಬ ಇಂತಹ ಚಳುವಳಿಯ ಹಿಂದಿನ ಮುಖ್ಯ ಶಕ್ತಿ 41 ರೈತ ಸಂಘಟನೆಗಳು. ಅದರಲ್ಲೂ ಪ್ರಮುಖಾತಿಪ್ರಮುಖ ಭಾರತೀಯ ಕಿಸಾನ್ ಯೂನಿಯನ್, ಮತ್ತದರ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್.

ಆಗ ಅಪ್ಪ, ಈಗ ಮಕ್ಕಳು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟಿಕಾಯತ್ ಎಂಬ ಹೆಸರು ಕೇಳಿದರೆ ರೈತರಲ್ಲಿ ಶಕ್ತಿಸಂಚಯವಾಗುತ್ತದೆ. ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯತ್ ಎಂಬ ಇಬ್ಬರು ಅಣ್ಣ ತಮ್ಮಂದಿರು ಭಾರತೀಯ ಕಿಸಾನ್ ಯೂನಿಯನ್​ನ ರೈತ ಸಂಘಟನೆಯ ವಕ್ತಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 40ಕ್ಕಿಂತ ಹೆಚ್ಚು ಬಾರಿ ರೈತ ಹೋರಾಟಗಳಲ್ಲಿ ಭಾಗಿಯಾಗಿ ಜೈಲುಪಾಲಾದ ಹಿನ್ನೆಲೆ ರಾಕೇಶ್ ಟಿಕಾಯತ್​ ಅವರದು.

ಅದು 1985ನೇ ಇಸವಿ. ಉತ್ತರ ಪ್ರದೇಶ ಪೊಲೀಸ್ ಸೇವೆಗೆ ಸಬ್ ಇನ್ಸ್​ಪೆಕ್ಟರ್​ ಆಗಿ ರಾಕೇಶ್ ಟಿಕಾಯತ್​ ಆಯ್ಕೆಯಾಗಿದ್ದರು. ಆದರೆ, ಸರ್ಕಾರಿ ಒತ್ತಡಗಳಿಂದ 1993ರಲ್ಲಿ ಅವರು ಕೆಲಸಕ್ಕೆ ರಾಜೀನಾಮೆ ನೀಡುವಂತಾಯಿತು. ಸತತ ರೈತ ಹೋರಾಟದ  ಅವರ ಕುಟುಂಬದ ಹಿನ್ನೆಲೆ ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಅವಕಾಶ ನೀಡಲಿಲ್ಲ.

ಕುಟುಂಬಕ್ಕೆ ಕುಟುಂಬವೇ ರೈತ ಹೋರಾಟದಲ್ಲಿ ಭಾಗಿ ರಾಕೇಶ್ ಟಿಕಾಯತ್ ಅವರ ತಂದೆ ಚೌಧರಿ ಮಹೇಂದ್ರ ಸಿಂಗ್ ಅವರು ಸಹ ರೈತ ಹೋರಾಟಗಾರರೇ. ರೈತರ ಪಾಲಿನ ದೇವದೂತ ಎಂಬ ಬಿರುದು ಅವರಿಗಿತ್ತು. 2011ರಲ್ಲಿ ಚೌಧರಿ ಮಹೇಂದ್ರ ಸಿಂಗ್ ಅವರು ಇಹಲೋಕ ತ್ಯಜಿಸಿದಾಗ ರೈತ ಹೋರಾಟದ ಮುಂಚೂಣಿ ನೇರವಾಗಿ ಟಿಕಾಯತ್ ಸಹೋದರದ್ವಯರ ಹೆಗಲ ಮೇಲೆ ಬಿತ್ತು.

7ನೇ ಶತಮಾನದಲ್ಲಿ ಉತ್ತರ ಪ್ರದೇಶದ ಥಾಣೇಸರ್ ಪ್ರದೇಶದವನ್ನು ‘ರಾಜಾ ಹರ್ಷವರ್ಧನ’ ಎಂಬ ರಾಜ ಆಳುತ್ತಿದ್ದ. ಬಾಲಿಯಾನ್ ಖಾಪ್​ನ್ನು ಮುನ್ನಡೆಸುತ್ತಿದ್ದ ಜಾಟ್ ಸಮುದಾಯದ ಟಿಕಾಯತ್ ಕುಟುಂಬಕ್ಕೆ ಚೌಧರಿ ಎಂಬ ಬಿರುದನ್ನು ನೀಡಿ ಗೌರವಿಸಿದವರು ಇದೇ ಹರ್ಷವರ್ಧನ ದೊರೆ. ಬಹು ಹಿಂದಿನಿಂದಲೂ ಇಡೀ ಖಾಪ್​ನ್ನು ನಿಯಂತ್ರಿಸುವ, ನಿರ್ವಹಿಸುವ ಜವಾಬ್ದಾರಿಯನ್ನು ಈ ಟಿಕಾಯತ್ ಕುಟುಂಬ ಹೊತ್ತಿತ್ತು.

ಇದನ್ನೂ ಓದಿ: Photo Gallery | ಇಂದು ದೆಹಲಿಯನ್ನು ನೋಡಿದ ಕಣ್ಣುಗಳು

ಚೌಧರಿ ಮಹೇಂದ್ರ ಸಿಂಗ್ ಟಿಕಾಯತ್ (ಚಿತ್ರಸೌಜನ್ಯ: ವಿಕಿಪಿಡಿಯಾ)

ನಂತರ ಕಾಲ ಬದಲಾಯಿತು. ರಾಜಾಡಳಿತ, ಬ್ರಿಟಿಷ್ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಜಾರಿಗೆ ಬಂತು. ಆದರೆ ಉತ್ತರ ಪ್ರದೇಶದ ಗ್ರಾಮೀಣ ಭಾಗಗಳ ಕೆಲ ಸಮುದಾಯಗಳು ಖಾಪ್​ಗಳ ಅಧಿಕಾರವನ್ನು ಸಾಂಪ್ರದಾಯಿಕವಾಗಿ ಒಪ್ಪಿಕೊಂಡಿದ್ದವು. ತಂದೆಯ ಮರಣದ ನಂತರ ಮಹೇಂದ್ರ ಸಿಂಗ್ ಟಿಕಾಯತ್ ಕೇವಲ 8ನೇ ವಯಸ್ಸಿಗೆ ‘ಚೌಧರಿ’ ಪಟ್ಟಕ್ಕೇರಿದರು. ನಂತರ, ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಮರಣಾನಂತರ ಮಹೇಂದ್ರ ಸಿಂಗ್ ಟಿಕಾಯತ್​ರನ್ನು ಈ ಪ್ರಾಂತ್ಯದ ಜನತೆ ದೇವದೂತನೆಂದು ಭಾವಿಸಿತ್ತು. ಅದನ್ನು ಉಳಿಸಿಕೊಂಡ ಮಹೇಂದ್ರ ಟಿಕಾಯತ್ ರೈತರನ್ನು ಒಗ್ಗೂಡಿಸಿದರು. ಭಾರತೀಯ ಕಿಸಾನ್ ಯೂನಿಯನ್​ಸ್ಥಾಪಿಸಿದರು. ಈ ಹಿನ್ನೆಲೆಯ ರೈತ ನಾಯಕನ ಮಕ್ಕಳೇ ರಾಕೇಶ್ ಟಿಕಾಯತ್ ಮತ್ತು ನರೇಶ್ ಟಿಕಾಯತ್.

ರಾಕೇಶ್ ಟಿಕಾಯತ್​ ಅವರ ಪತ್ನಿ ಸುನಿತಾ ದೇವಿಯವರೂ ಸಕ್ರಿಯ ರೈತ ಹೋರಾಟಗಾರರು. ಈ ರೈತ ಹೋರಾಟಗಾರ ದಂಪತಿಗೆ ಇಬ್ಬರು ಬಾಲಕಿಯರು ಮತ್ತು ಓರ್ವ ಮಗ ಸೇರಿ ಮೂವರು ಮಕ್ಕಳು. ರಾಕೇಶ್ ಟಿಕಾಯತ್ ಸೋದರಳಿಯ ಗೌರವ್ ಟಿಕಾಯತ್, ಚರಣ್ ಸಿಂಗ್ ಎಲ್ಲರೂ ರೈತ ಹೋರಾಟಗಾರರೇ ಎಂಬುದು ವಿಶೇಷ.

ಚುನಾವಣೆಯಲ್ಲೂ ಸ್ಪರ್ಧಿಸಿದ್ದರು ರಾಕೇಶ್ ಟಿಕಾಯತ್ ರೈತ ಹೋರಾಟಗಳ ಜತೆಗೆ ರಾಕೇಶ್ ಟಿಕಾಯತ್ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮುಜಾಫರ್​ನಗರದ ಖತೌಲಿ ವಿಧಾನಸಭಾ ಕ್ಷೇತ್ರದಿಂದ 2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಜತೆಗೆ, 2014 ಲೋಕಸಭಾ ಚುನಾವಣೆಯಲ್ಲಿ ಅಮ್ರೊಹಾ ಕ್ಷೇತ್ರದಿಂದ ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಎರಡೂ ಚುನಾವಣೆಗಳಲ್ಲಿ ಅವರಿಗೆ ಸೋಲೇ ಕಾದಿತ್ತು.

ಖಾಫ್​ ಪಂಚಾಯತ್​ನ ನಾಯಕರಾಗಿ, ರೈತ ಹೋರಾಟಗಾರರಾಗಿ, ಭಾರತಿಯ ಕಿಸಾನ್ ಯೂನಿಯನ್​ನ ವಕ್ತಾರರಾಗಿ ಟಿಕಾಯತ್ ಸಹೋದರರು ಸಕ್ರಿಯರಾಗಿದ್ದಾರೆ. ದೆಹಲಿ ಚಲೋ ಚಳುವಳಿಯಿಂದ ಅವರ ಹೆಸರು ದೇಶದೆಲ್ಲೆಡೆ ಮುಂಚೂಣಿಗೆ ಬಂದಿದೆ. ಮೊದಲಿಂದಲೂ ಅಹಿಂಸಾ ಪ್ರತಿಭಟನೆ ನಡೆಸುತ್ತೇವೆ ಎಂದೇ ರಾಕೇಶ್ ಟಿಕಾಯತ್ ತಿಳಿಸಿದ್ದರು. ಆದರೆ, ಇಂದಿನ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿದೆ. ಈ ಕುರಿತು ಸ್ಪಷ್ಟೀಕರಣ ನೀಡಿರುವ ರಾಕೇಶ್ ಟಿಕಾಯತ್ ಈ ಹಿಂಸೆಯ ಹಿಂದೆ ರಾಜಕೀಯ ಪಕ್ಷಗಳ ಕೈವಾಡವಿದೆ ಎಂದಿದ್ದಾರೆ.

ಇಂದಿನ ಘಟನೆಯಿಂದ ದೇಶದಲ್ಲಿ ಇಷ್ಟು ದಿನ ರೈತರ ಪರವಾಗಿ ನೆಲೆಯೂರಿದ್ದ ಕರುಣೆಯ ಮನೋಭಾವ ದೂರಾಗಬಹುದು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್​ ಪ್ರತಿಕ್ರಿಯೆಗಳನ್ನು ಸಹ ಕಾದುನೋಡಬೇಕಿದೆ. ದೆಹಲಿ ಚಲೋದ ಜತೆಜತೆಗೆ ರಾಕೇಶ್ ಟಿಕಾಯತ್ ಮತ್ತು ಟಿಕಾಯತ್ ಕುಟುಂಬದ ಮುಂದಿನ ನಡೆಗಳನ್ನು ಸಹ ದೇಶ ಸೂಕ್ಷ್ಮವಾಗಿ ಗಮನಿಸಲಿದೆ.

In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?

In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?

Live Updates | ಸಹಜ ಸ್ಥಿತಿಗೆ ಮರಳುತ್ತಿರುವ ದೆಹಲಿ

Published On - 8:30 pm, Tue, 26 January 21

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ