ಹಾವಿನ ರಕ್ತ, ಹಾವಿನ ಸೂಪ್ ಕುಡಿಯುತ್ತಾರೆ ಈ ಜನ: ಇದರಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ!

Snake Blood: ಹಾವಿನ ರಕ್ತವನ್ನು ಕುಡಿಯುವ ದೇಶವೊಂದಿದೆ. ಇಲ್ಲಿನ ಜನರು ಇದನ್ನು ನೀರಿನಂತೆ ಕುಡಿಯುತ್ತಾರೆ. ಹಾಗಾದರೆ, ಈ ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ?, ಇದನ್ನು ಕುಡಿಯುವುದರಿಂದ ಏನು ಪ್ರಯೋಜನ?, ಭಾರತೀಯರೂ ಇದನ್ನು ಕುಡಿಯಬಹುದಾ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹಾವಿನ ರಕ್ತ, ಹಾವಿನ ಸೂಪ್ ಕುಡಿಯುತ್ತಾರೆ ಈ ಜನ: ಇದರಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ!
Snake
Follow us
Vinay Bhat
|

Updated on: Apr 22, 2024 | 10:15 AM

ನಮ್ಮ ದೇಶದಲ್ಲಿ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಅದನ್ನು ಕೊಲ್ಲುವುದು ಮಹಾ ಪಾಪ ಎಂಬ ನಂಬಿಕೆಯಿದೆ ಮತ್ತು ಕಾನೂನುಬಾಹಿರವಾಗಿದೆ. ಕೆಲ ಹಾವುಗಳನ್ನು ಕಂಡರೆ ಅದರ ಹತ್ತಿರ ಹೋಗಬೇಡಿ ಮತ್ತು ಅದಕ್ಕೆ ಹಾನಿ ಮಾಡಬೇಡಿ ಎಂದು ಹೇಳುತ್ತಾರೆ. ಅದರಲ್ಲೂ ವಿಷಪೂರಿತ ಹಾವನ್ನು ಕಂಡರೆ ನಾವೆಲ್ಲ ಓಡಿ ಹೋಗುತ್ತೇವೆ. ಆದರೆ, ಇಲ್ಲೊಂದು ದೇಶದಲ್ಲಿ ಚಹಾ, ಕಾಫಿಯಂತೆ ಹಾವಿನ ರಕ್ತವನ್ನು ಕುಡಿಯುತ್ತಾರೆ ಎಂದರೆ ನಂಬಲೇಬೇಕು. ಹಾವಿನ ರಕ್ತವನ್ನು ಕುಡಿಯುವ ದೇಶ ಇಂಡೋನೇಷ್ಯಾ. ಇಲ್ಲಿನ ಜನರು ಇದನ್ನು ನೀರಿನಂತೆ ಕುಡಿಯುತ್ತಾರೆ. ಹಾಗಾದರೆ, ಈ ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ?, ಇದನ್ನು ಕುಡಿಯುವುದರಿಂದ ಏನು ಪ್ರಯೋಜನ?, ಭಾರತೀಯರೂ ಇದನ್ನು ಕುಡಿಯಬಹುದಾ?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂಡೋನೇಷಿಯಾದಲ್ಲಿರುವ ಹೆಚ್ಚಿನ ಹುಡುಗಿಯರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತವನ್ನು ಕುಡಿಯುವುದರಿಂದ ದೇಹವು ಫಿಟ್ ಆಗಿರುತ್ತದೆ ಮತ್ತು ಸುಂದರವಾಗಿ ಕಾಣುತ್ತಾರೆ ಎಂದು ಅವರು ಆಳವಾಗಿ ನಂಬಿದ್ದಾರೆ. ಇಲ್ಲಿ ಹಾವಿನ ರಕ್ತಕ್ಕಾಗಿ ಅಂಗಡಿಗಳಲ್ಲಿ ಸರದಿ ಸಾಲಿನಲ್ಲಿ ಜನ ನಿಂತಿರುತ್ತಾರೆ. ನಮಗೆ ಇದು ಅಚ್ಚರಿ ಮೂಡಬಹುದು. ಆದರೆ, ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಹಾವಿನ ರಕ್ತವನ್ನು ಕುಡಿಯುವುದು ಸಾಮಾನ್ಯ ವಿಷಯವಾಗಿದೆ. ಅಲ್ಲಿನ ಬೀದಿ ಬೀದಿಗಳಲ್ಲಿ ಹಾವಿನ ರಕ್ತ ಮಾರುವ ಕಾಫಿ, ಟೀ ಅಂಗಡಿಗಳು ಕಾಣಿಸುತ್ತವೆ.

ಇಂಡೋನೇಷ್ಯಾದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವಾಗ ಹಾವಿನ ರಕ್ತವನ್ನು ಹೆಚ್ಚಾಗಿ ಕುಡಿಯುತ್ತಾರೆ. ಇದಲ್ಲದೆ, ಜಕಾರ್ತದಲ್ಲಿ ಈ ಹಾವಿನ ರಕ್ತಕ್ಕೆ ಉತ್ತಮ ಬೇಡಿಕೆ ಮತ್ತು ಪ್ರವೃತ್ತಿ ಇದೆ. ಇಲ್ಲಿನ ಜನರು ಪ್ರತಿದಿನ ಸಾವಿರಾರು ಹಾವುಗಳನ್ನು ಕೊಲ್ಲುತ್ತಾರೆ. ಹಾವಿನ ರಕ್ತವನ್ನು ಕುಡಿದ ನಂತರ ಅವರು ಪಾಲಿಸಬೇಕಾದ ಕೆಲ ನಿಯಮಗಳಿವೆ. ಈ ರಕ್ತವನ್ನು ಕುಡಿದ ನಂತರ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಚಹಾ ಮತ್ತು ಕಾಫಿಯನ್ನು ಸೇವಿಸಬಾರದು.

ಹಾವಿನ ರಕ್ತ ಕುಡಿಯುವುದರಿಂದ ಏನು ಪ್ರಯೋಜನ?:

ಇಂಡೋನೇಷಿಯಾದಲ್ಲಿ ಜನರು ಆರೋಗ್ಯವಾಗಿರಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಅದರಲ್ಲೂ ಅಲ್ಲಿನ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇದನ್ನು ಕುಡಿಯಲೇಬೇಕು. ಹಾವಿನ ರಕ್ತದಿಂದಾಗಿ ಚರ್ಮವು ಹಗುರವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಹಾವಿನ ರಕ್ತವನ್ನು ಕುಡಿಯುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ಇಂಡೋನೇಷಿಯಾದ ಜನರಿಗೆ ಬಂದಿದೆ. ಕೇವಲ ಹಾವಿನ ರಕ್ತವನ್ನು ಕುಡಿಯುವುದು ಮಾತ್ರವಲ್ಲದೆ ಅವುಗಳನ್ನು ಆಹಾರವಾಗಿಯೂ ತಿನ್ನುತ್ತಾರೆ.

ಜಕರ್ತಾದ ಮಹಿಳೆ ರಿಕಾ ಎಂಬವರು ಹಾವಿನ ರಕ್ತ ಕುಡಿದು ಉಂಟಾದ ಪ್ರಯೋಜನದ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆ ಇಲ್ಲಿದೆ:

ಹಾವು

ಹಾವು

”ನಾಗರಹಾವಿನ ರಕ್ತ ಮತ್ತು ಅಂಗಗಳನ್ನು ಸೇವಿಸುವುದರಿಂದ ಲೈಂಗಿಕ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಪುರುಷರು ನಂಬುತ್ತಾರೆ. ಆದರೆ, ಇದು ಕೆಲವು ಜನರಿಗೆ ಮಾತ್ರ ಸಹಾಯ ಮಾಡುತ್ತದೆ, ಎಲ್ಲರ ದೇಹದಲ್ಲೂ ಇದು ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವು ಚರ್ಮಕ್ಕೆ ತುಂಬಾ ಒಳ್ಳೆಯದು, ನಾನೇ ಸ್ವತಃ ಇದನ್ನು ಅನುಭವಿಸಿದ್ದೇನೆ. ನನ್ನ ಮುಖದ ಮೇಲಿದ್ದ ಮೊಡವೆಗಳೆಲ್ಲ ಇದನ್ನು ಸೇವಿಸಿದ ಬಳಿಕ ಮಾಯವಾಗಿದೆ. ನನ್ನ ಇಡೀ ಕುಟುಂಬವು ಈಗ ಹಾವಿನ ಪ್ರಯೋಜನಗಳನ್ನು ನಂಬುತ್ತಾರೆ. ಹಾವಿನ ಮಾಂಸವು ವಿಶೇಷವಾಗಿ ಚರ್ಮಕ್ಕೆ ತುಂಬಾ ಒಳ್ಳೆಯದು,” ಎಂಬುದು ರಿಕಾ ಅವರ ಮಾತು.

ಹಾವಿನ ಸೂಪ್ ಕೂಡ ಫೇಮಸ್:

ಹಾವಿನ ರಕ್ತ, ಚರ್ಮ ಮಾತ್ರವಲ್ಲದೆ ಹಾವಿನ ಸೂಪ್ ಅನ್ನು ಕೂಡ ಕುಡಿಯುವವರಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಇದು ಸಾಮಾನ್ಯವಾಗಿದೆ. ಇಲ್ಲಿ ಹಾವಿನ ರೆಸ್ಟೊರೆಂಟ್‌ ಕೂಡ ಇದ್ದು, ಹಾವು-ಸೂಪ್ ಪಿಜ್ಜಾವು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಇದು ವಿಶೇಷವಾಗಿ ಚಳಿಗಾಲದಲ್ಲಿ ಚೀನಾದಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ. ಹಾವಿನ ಸೂಪ್​ನಲ್ಲಿ ಯಾವುದೇ ವಾಸನೆ ಅಥವಾ ರುಚಿ ಇರುವುದಿಲ್ಲವಂತೆ.

ತಜ್ಞರ ಪ್ರಕಾರ, ಹಾವಿನ ಸೂಪ್ ದಕ್ಷಿಣ ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಪಾಕಪದ್ಧತಿಯ ಭಾಗವಾಗಿದೆ. ಕ್ವಿಂಗ್ ರಾಜವಂಶದ ಕೊನೆಯ ಸಾಮ್ರಾಜ್ಯಶಾಹಿ ವಿದ್ವಾಂಸರಲ್ಲಿ ಒಬ್ಬರಾದ ಜಿಯಾಂಗ್ ಕೊಂಗ್ಯಿನ್ (1864-1952) ರಿಂದ ಈ ಪಾಕ ಬಂದಿದೆ ಎಂದು ತಜ್ಞರು ಹೇಳುತ್ತಾರೆ. ಜಿಯಾಂಗ್‌ನ ಪ್ರಸಿದ್ಧ ಪಾಕಗಳಲ್ಲಿ, ಐದು-ಹಾವಿನ ಸೂಪ್ ಅತ್ಯಂತ ಫೇಮಸ್ ಆಗಿದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮತ್ತು ದೇಹದಲ್ಲಿ ತೇವಾಂಶವನ್ನು ಕಡಿಮೆ ಮಾಡುವ ಸಾಂಪ್ರದಾಯಿಕ ಚೀನೀ ಔಷಧೀಯ ಪ್ರಯೋಜನಗಳನ್ನು ಹೊಂದಿದೆ.

ಹಾವಿನ ಸೂಪ್ ಅನ್ನು ಏಕೆ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ?

ಅನೇಕ ದೇಶಗಳಲ್ಲಿ ಹಾವು ಆರೋಗ್ಯಕರ ಎಂದು ನಂಬಲಾಗಿದೆ. ಆದ್ದರಿಂದ ಇದನ್ನು ಬಹಳಷ್ಟು ಚೀನೀಯರು ಔಷಧವಾಗಿ ಉಪಯೋಗಿಸುತ್ತಾರೆ. ತಜ್ಞರ ಪ್ರಕಾರ, ಹಾವಿನ ಪಿತ್ತರಸವು ಮೂಳೆಗಳನ್ನು ಬಲಪಡಿಸಲು ಮತ್ತು ಪುರುಷತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕ್ಷಾರೀಯ ಆಹಾರವಾಗಿದ್ದು, ಅಜೀರ್ಣ ಮತ್ತು ಕ್ಯಾನ್ಸರ್ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಹಾವಿನ ಸೂಪ್‌ನಲ್ಲಿ ಹೆಚ್ಚಿನ ಪ್ರೋಟೀನ್, ಕಡಿಮೆ-ಕೊಬ್ಬು ಇದೆ, ಸಾಕಷ್ಟು ವಿಟಮಿನ್‌ಗಳು ಮತ್ತು ಕಾಲಜನ್ ಇದೆ ಮತ್ತು ಉತ್ತಮ ನಿದ್ರೆಯನ್ನು ನೀಡುತ್ತದೆ. ಆದರೆ, ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಅಥವಾ ಮೂತ್ರಪಿಂಡದ ಕಾಯಿಲೆ ಇರುವವರು ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಹಾವಿನ ಸೂಪ್ ಸೇವಿಸಬಾರದು ಎನ್ನುತ್ತಾರೆ ವೈದ್ಯರು.

ಹಾವಿನ ವಿಷ ಕುಡಿಯುವುದು ಒಳ್ಳೆಯದಾ?

ಹಾವು ಕಡಿತವು ಅಪಾಯಕಾರಿ. ಆದರೆ ನೀವು ಹಾವಿನ ವಿಷವನ್ನು ಕುಡಿಯುವುದರಿಂದ ಪ್ರಯೋಜನ ಇದೆಯೇ?. ವಿಷವು ಹಾವುಗಳ ಬಾಯಿಯ ಗ್ರಂಥಿಗಳಿಂದ ಸ್ರವಿಸುತ್ತದೆ. ಪ್ರಪಂಚದಾದ್ಯಂತ ಸುಮಾರು 3,500 ಜಾತಿಯ ಹಾವುಗಳಿವೆ. ಅವುಗಳಲ್ಲಿ, ಕೇವಲ 25 ಪ್ರತಿಶತವು ವಿಷಕಾರಿಯಾಗಿದೆ ಮತ್ತು ಕಿಂಗ್ ಕೋಬ್ರಾ ವಿಶ್ವದ ಅತ್ಯಂತ ಮಾರಣಾಂತಿಕ ಹಾವುಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಹಾವಿನ ವಿಷವು ಇತರೆ ವಿಷಕ್ಕಿಂತ ಭಿನ್ನವಾಗಿದೆ.

Quora ಬಳಕೆದಾರರಲ್ಲಿ ಒಬ್ಬರು ಹಾವಿನ ವಿಷವು ಪ್ರೋಟೀನ್-ಆಧಾರಿತ ವಿಷವಾಗಿದ್ದು, ನುಂಗಿದರೆ ಹೊಟ್ಟೆಯ ಆಮ್ಲಗಳು ಮತ್ತು ಜೀರ್ಣಕಾರಿ ಕಿಣ್ವಗಳ ಸಹಾಯದಿಂದ ಜೀರ್ಣಕ್ರೀಯೆ ಉತ್ತಮವಾಗುತ್ತದೆ ಎಂದು ಹೇಳಿದ್ದಾರೆ. ಇದು ಹೊಟ್ಟೆಯಲ್ಲಿ ವಿಭಜನೆಯಾಗುತ್ತದೆ ಮತ್ತು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಈ ಧೈರ್ಯದ ಕ್ರಿಯೆಯನ್ನು ನೇರವಾಗಿ ಪ್ರಯತ್ನಿಸುವುದು ಒಳ್ಳೆಯದಲ್ಲ. ಸಂಬಂಧಪಟ್ಟವರ ಬಳಿ ಕೇಳಿ ತೆಗೆದುಕೊಳ್ಳುವುದೇ ಉತ್ತಮ. ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತುಬರಬಹುದು. ಆರೋಗ್ಯ ವೃತ್ತಿಪರರ ಸರಿಯಾದ ಮಾರ್ಗದರ್ಶನವಿಲ್ಲದೆ ಇಂತಹವುಗಳನ್ನು ಎಂದಿಗೂ ಪ್ರಯತ್ನಿಸಬಾರದು ಎಂದಿದ್ದಾರೆ.

ಔಷಧವಾಗಿ ಹಾವಿನ ವಿಷ ಬಳಕೆ!

ಹಾವಿನ ವಿಷವನ್ನು ಇತಿಹಾಸದುದ್ದಕ್ಕೂ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗಿದೆ, ಪ್ರಾಚೀನ ಗ್ರೀಸ್‌ನಲ್ಲಿ ಮೊದಲ ವಿಷ-ಆಧಾರಿತ ಔಷಧವು 380 BC ಯಲ್ಲಿದೆ. 18 ನೇ ಶತಮಾನದ ಯುರೋಪ್ ಮತ್ತು 19 ನೇ ಶತಮಾನದಲ್ಲಿ ವಿವಿಧ ಹಾವಿನ ಎಣ್ಣೆಯನ್ನು ಔಷಧವಾಗಿ ಬಳಸಲಾಗಿದೆ. ಕ್ಯಾಪ್ಟೊಪ್ರಿಲ್‌ನಂತಹ ಅನೇಕ ಅನುಮೋದಿತ ವಿಷ-ಮೂಲದ ಔಷಧಿಗಳಿವೆ. ಇದನ್ನು ಅಧಿಕ ರಕ್ತದೊತ್ತಡ ಮತ್ತು ರಕ್ತ ಕಟ್ಟಿ ಹೃದಯ ಸ್ಥಂಭನಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಭಾರತದಲ್ಲೂ ಈ ಔಷಧ ಲಭ್ಯವಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರತಿ ವರ್ಷ ಸುಮಾರು 5.4 ಮಿಲಿಯನ್ ಹಾವು ಕಡಿತಗಳಿವೆ, ವಾರ್ಷಿಕವಾಗಿ 2.3 ಮಿಲಿಯನ್ ವಿಷಕಾರಿ ಪ್ರಕರಣಗಳು ವರದಿಯಾಗುತ್ತವೆ. ಪ್ರಪಂಚದಾದ್ಯಂತ ಸರಿಸುಮಾರು 100,000 ಸಾವುಗಳು ಸಂಭವಿಸುತ್ತವೆ. ಅಂತೆಯೇ, ಹಾವಿನ ವಿಷವನ್ನು ವ್ಯಾಪಕವಾಗಿ ಸಂಶೋಧಿಸಲಾಗುತ್ತಿದೆ. ಹಾವಿನ ವಿಷವು ನೈಸರ್ಗಿಕ, ಜೈವಿಕ-ಸಕ್ರಿಯ ಮೂಲವಾಗಿದ್ದರೂ ಸಹ, ಆಂಟಿ-ಎನ್ವೆನೊಮೇಷನ್ ಥೆರಪಿಗಳನ್ನು ಸಂಶ್ಲೇಷಿಸಲು ಬಳಸಬಹುದಾಗಿದೆ, ಇದರಲ್ಲಿ ಹೆಚ್ಚಿನವು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ ಎಂಬುದು ಗಮನಾರ್ಹ ಸಂಗತಿ.

ಭಾರತದಲ್ಲಿ ಹಾವನ್ನು ಕೊಲ್ಲುವುದು ನಿಷೇಧ:

ಹಾವನ್ನು ಕೊಲ್ಲುವುದು ಭಾರತದಲ್ಲಿ ನಿಷೇಧವಾಗಿದೆ. ಹಾಗೆಯೆ ಹಾವಿನ ರಕ್ತವನ್ನು ಕುಡಿಯುವುದು ಇಲ್ಲಿನ ವಾಡಿಕೆಯಲ್ಲಿಲ್ಲ. ಹಾವನ್ನು ಕೊಂದರೆ ಭಾರತದ ಕಾನೂನಿನಲ್ಲಿ ಇದಕ್ಕೆ ಕಠಿಣ ಶಿಕ್ಷೆ ಇದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಶೆಡ್ಯೂಲ್ II ರ ಅಡಿಯಲ್ಲಿ ಕಾಳಿಂಗ ಸರ್ಪವನ್ನು ಕೊಂದರೆ ಆರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಹಾಗೆಯೆ ಅಳಿವಿನಂಚಿನಲ್ಲಿರುವ ಹಾವನ್ನು ಕೊಂದರೆ ಜೀವಾವಾಧಿ ಶಿಕ್ಷೆಗೆ ಒಳಗಾಗಬಹುದು.

ವನ್ಯಜೀವಿ ಸಂರಕ್ಷಣಾ (ತಿದ್ದುಪಡಿ) ಕಾಯಿದೆ, 2022 ರ ಸೆಕ್ಷನ್ 9, 39 ರ ಪ್ರಕಾರ, ನಾಗರಹಾವನ್ನು ಕೊಲ್ಲುವುದು ಜಾಮೀನು ರಹಿತ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೆ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ವಿವಿಧ ವೇಳಾಪಟ್ಟಿಗಳ ಅಡಿಯಲ್ಲಿ ಹಾವುಗಳನ್ನು ಅಥವಾ ಕಾಡು ಪ್ರಾಣಿಗಳನ್ನು ಕಾನೂನುಬಾಹಿರವಾಗಿ ಬೇಟೆಯಾಡುವುದು ಮತ್ತು ಅದರ ದೇಹದ ಭಾಗಗಳು, ವಿಷವನ್ನು ಹೊಂದಿರುವುದು ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ.

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ