ನುಡಿನಮನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬುಡಕಟ್ಟು ವಾದ್ಯ ಕಡ್ಡಾಯಿ ಕಲಾವಿದ ಗುರುವ ಕೊರಗ ನಿಧನ

Guruva Koraga: ತಮ್ಮ ಕಲೆ, ಅನುಭವ ಮತ್ತು ಹಿರಿತನದ ಮೂಲಕ‌ ಸಮಾಜದ ಮುಖ್ಯ ನೆಲೆಯಿಂದ ಕಡೆಗಣಿಸಲ್ಪಟ್ಟಿದ್ದ ಬುಡಕಟ್ಟು ಸಮುದಾಯದ ಡೋಲು ವಾದನವನ್ನು ಮುಖ್ಯ ವಾಹಿನಿಗೆ ತೋರಿದ ಹಿರಿಮೆ ಗುರುವರಿಗೆ ಸಲ್ಲುತ್ತದೆ.

ನುಡಿನಮನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬುಡಕಟ್ಟು ವಾದ್ಯ ಕಡ್ಡಾಯಿ ಕಲಾವಿದ ಗುರುವ ಕೊರಗ ನಿಧನ
ಗುರುವ ಕೊರಗ ಅವರಿಗೆ ಟಿವಿ9 ಕನ್ನಡ ಡಿಜಿಟಲ್ ನುಡಿನಮನ ಸಲ್ಲಿಸುತ್ತಿದೆ.
Follow us
|

Updated on:Aug 23, 2021 | 12:15 PM

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮುಖ್ಯವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗ ಪರಂಪರೆಯ ವಾದ್ಯ ‘ಕಡ್ಡಾಯಿ’ (ಡೋಲು) ನುಡಿಸುವುದರ ಮೂಲಕ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿದ ಗುರುವ ಕೊರಗ, ಉಡುಪಿ ಜಿಲ್ಲೆ, ಹಿರಿಯಡ್ಕದ ಗುಡ್ಡೆಅಂಗಡಿಯ ತಮ್ಮ ಸ್ವಗೃಹದಲ್ಲಿ ಭಾನುವಾರ (ಆಗಸ್ಟ್ 22) ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 106 ವರ್ಷ ವಯಸ್ಸಾಗಿತ್ತು.

ತಮ್ಮ ಕಲೆ, ಅನುಭವ ಮತ್ತು ಹಿರಿತನದ ಮೂಲಕ‌ ಸಮಾಜದ ಮುಖ್ಯ ನೆಲೆಯಿಂದ ಕಡೆಗಣಿಸಲ್ಪಟ್ಟಿದ್ದ ಬುಡಕಟ್ಟು ಸಮುದಾಯದ ಡೋಲು ವಾದನವನ್ನು ಮುಖ್ಯ ವಾಹಿನಿಗೆ ತೋರಿದ ಹಿರಿಮೆ ಗುರುವರಿಗೆ ಸಲ್ಲುತ್ತದೆ. ಹಿರಿಯಡ್ಕದ ತೋಮ ಮತ್ತು ತುಂಬೆ ದಂಪತಿಗಳ ಮಗನಾದ ಗುರುವ ‘ಕೊರಗ’ ಬುಡಕಟ್ಟು ಸಮಾಜಕ್ಕೆ ಸೇರಿದವರು. ಇವರು ಡೋಲು ಬಾರಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಇವರ ಸಾಧನೆಗೆ 2018 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2017ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಕೂಡ ಲಭಿಸಿದೆ. ಕೊರಗ ಸಮುದಾಯಕ್ಕೆ ಮೊದಲ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟ ಗರಿಮೆಯೂ ಇವರದಾಗಿದೆ.

ಕೊರಗರ ಡೋಲು ಎಂಬುದನ್ನು ಹೊರಗಿಟ್ಟು ಕರಾವಳಿ ಸಂಸ್ಕೃತಿಯನ್ನು ನೋಡಲು ಸಾಧ್ಯವಿಲ್ಲ. ಕರಾವಳಿಯ ಪ್ರತಿಯೊಂದು ಆಚರಣೆಗಳಲ್ಲಿ ಡೋಲು ಬೇಕೇಬೇಕು. ಉತ್ಸವ, ಜಾತ್ರೆ, ಹಬ್ಬ, ಗ್ರಾಮದ ಆಚರಣೆಗಳು, ಕೋಲ, ನೇಮ, ಸಾವು, ಹುಟ್ಟು ಇತ್ಯಾದಿ ಸಂದರ್ಭಗಳಲ್ಲಿ ಡೋಲು ಬಾರಿಸುವ ಸಂಪ್ರದಾಯ ಕರಾವಳಿ ಭಾಗದಲ್ಲಿದೆ. ಈ ಸಂಪ್ರದಾಯ ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಅದರ ಉಳಿವಿಗೆ ಶ್ರಮಿಸಿದವರು ಗುರುವ. ಅವರು ವರ್ಷಂಪ್ರತಿ ಹಿರಿಯಡ್ಕದ ಸಿರಿ ಜಾತ್ರೆ, ಪಡ್ಡಂಬೂಡು ಗರೋಡಿಯಲ್ಲಿ ಡೋಲು ನುಡಿಸುವುದು ದೇವರ ಸೇವೆ ಎಂದು ತಮ್ಮ ಆದಿಂ- ಕಲೆಯನ್ನು ಪ್ರಸಾರ ಮಾಡುತ್ತಿದ್ದರು. ಅನೇಕ ಯುವಜನರಿಗೆ ಡೋಲು ಬಾರಿಸುವ ಸಂಪ್ರದಾಯದ ಕ್ರಮಗಳನ್ನು ಕಲಿಸಿಕೊಟ್ಟಿದ್ದಾರೆ.

ಗುರುವರ ಬಗ್ಗೆ ಅವರ ಒಡನಾಡಿ ಗಣೇಶ್ ರಂಗನಕೇರಿ ಮಾತನಾಡಿದ್ದಾರೆ ಶತಾಯುಷಿ ಗುರುವಜ್ಜರನ್ನು ನಮ್ಮ ಸಮುದಾಯ ಕಳೆದುಕೊಂಡಿದೆ. ಡೋಲನ್ನು ಅವರು ಬಹಳ‌ ಪ್ರೀತಿಯಿಂದ ಕಾಣುತ್ತಿದ್ದರು. ತಮ್ಮ ಕುಲಕಸುಬಿನ ಬಗ್ಗೆ ಅವರಿಗೆ ಅಪಾರ ಪ್ರೀತಿ, ಗೌರವ ಇತ್ತು. ಯುವಕರಾಗಿದ್ದಾಗ ಡೋಲು ತಯಾರು ಮಾಡುತ್ತಿದ್ದರು. ಅವರು ಆಗ ಬಳಸುತ್ತಿದ್ದ ತಮ್ಮ ಡೋಲಿನ ಗಾತ್ರವೂ ದೊಡ್ಡದಾಗೇ ಇತ್ತು. ಇಳಿ ವಯಸ್ಸಿನಲ್ಲಿ ಕೂಡ ಡೋಲು ಹೊರುವವರೆಗೆ ಮಾತ್ರ ಸುಸ್ತು‌. ಒಮ್ಮೆ ಅದನ್ನು ಹೊತ್ತುಕೊಂಡರೆ ಆಯಾಸ ಇರುವುದಿಲ್ಲ ಎಂದು ಉತ್ಸಾಹ ತೋರುತ್ತಿದ್ದರು. ಅವರು ವಿನಯವಂತರು. ತಮಗಿಂತ ಕಿರಿಯರನ್ನೂ ಬಹುವಚನ ಬಳಸಿ ಮಾತನಾಡಿಸುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ ಬಂದ ಮೇಲೆ ಹಲವರು ಅವರನ್ನು ಗುರುತಿಸಿ ಸನ್ಮಾನಕ್ಕೆ ಕರೆಯುತ್ತಿದ್ದರು. ಅದನ್ನು ಆದರದಿಂದ ಕಾಣುತ್ತಿದ್ದರು. ಬಳಿಕ, ಚುನಾವಣಾ ಪ್ರಚಾರಕ್ಕೂ ಪಕ್ಷಗಳು ಅವರನ್ನು ಕರೆಯುತ್ತಿದ್ದವು. ಆಗೆಲ್ಲಾ ಕಿರಿಕಿರಿ ಅನುಭವಿಸಿದ್ದನ್ನು ಕೂಡ ನನ್ನ ಬಳಿ ಹೇಳಿಕೊಂಡಿದ್ದರು.

ಉಡುಪಿ ಯಕ್ಷಗಾನ‌ ಕಲಾರಂಗದ‌, ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ಸಮ್ಮಾನ ಕಾರ್ಯಕ್ರಮ, ಸುವರ್ಣ ಸಂಭ್ರಮವನ್ನು ಗುರುವ ಕೊರಗರು ಡೋಲು ಬಾರಿಸುವ ಮೂಲಕ ಉದ್ಘಾಟಿಸಲಾಗಿತ್ತು. ಉಡುಪಿ ಪುರಭವನದ ವೇದಿಕೆಯಲ್ಲಿ ಹಾಗೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೇಲೆ, ಇಂತಹಾ ಕಾರ್ಯಕ್ರಮ ಇದ್ದರೆ ಖಂಡಿತಾ ಹೇಳಿ ಬರುತ್ತೇನೆ ಎಂದು ತೊಂಭತ್ತು ದಾಟಿದ ವಯಸ್ಸಿನಲ್ಲೂ ಉತ್ಸಾಹ ತೋರಿದ್ದರು. ಅವರಿಗೆ ಡೋಲು ಬಾರಿಸಲು ಅಂತಹ ವೇದಿಕೆ, ಜನರ ಚಪ್ಪಾಳೆ, ಅಭಿಮಾನ ಸಿಕ್ಕಿದ್ದು ಬಹಳ ಸಂತೋಷವಾಗಿತ್ತು ಎಂದು ಅಂದಿನ ದಿನವನ್ನು ಗಣೇಶ್ ನೆನಪಿಸಿಕೊಂಡಿದ್ದಾರೆ.

ಗುರುವರ ಸಾವಿಗೆ ಡೋಲು ನಾದದ ಸಂತಾಪ ಕರಾವಳಿಯ ಗುತ್ತಿನ ಮನೆಗಳಲ್ಲಿ ಯಾರಾದರೂ ನಿಧನರಾದಾಗ ಕೊರಗರ ಡೋಲು ಬಾರಿಸುವ ಸಂಪ್ರದಾಯ ಇದೆ. ಆದರೆ, ಅದನ್ನು ಸ್ವತಃ ಕೊರಗ ಸಮುದಾಯದ ಯಾರಾದರೂ ಮರಣಿಸಿದಾಗ ಬಾರಿಸುವ ಕ್ರಮವಿಲ್ಲ. ಆದರೆ, ಇವತ್ತು ಮೊದಲ ಬಾರಿಗೆ ಎಂಬಂತೆ ಕೊರಗ ಸಮುದಾಯದ ಹಿರಿಯರೊಬ್ಬರು ತೀರಿಕೊಂಡಾಗ ಡೋಲು ಬಾರಿಸಿ ಸಂತಾಪ ಸೂಚಿಸಲಾಯಿತು.

ದೇವಾಲಯದೊಳಕ್ಕೆ ಯಾಕೆ ಹೋಗುವುದಿಲ್ಲ? ತಮ್ಮ ಮತ್ತು ಗುರುವರ ನಡುವೆ ನಡೆದ ಒಂದು ಮಾತುಕತೆಯನ್ನು ಗಣೇಶ್ ನೆನಪಿಸಿಕೊಂಡಿದ್ದಾರೆ. ಒಮ್ಮೆ ಗಣೇಶ್‌ರು ಗುರುವರ ಬಳಿ ಕೇಳಿದ್ದರಂತೆ. ನೀವು ಇಷ್ಟೊಂದು ವರ್ಷಗಳಿಂದ ದೇವಾಲಯಗಳಲ್ಲಿ ಡೋಲು ಬಾರಿಸುತ್ತಿದ್ದರು ಕೂಡ ಒಮ್ಮೆಯೂ ದೇವಸ್ಥಾನದ ಒಳಗೆ ಹೋಗಿಲ್ಲ. ಒಳಗೆ ಹೋಗಬೇಕು, ದೇವರನ್ನು ನೋಡಬೇಕು ಎಂದು ನಿಮಗೆ ಅನಿಸಿಲ್ಲವೇ? ಅದಕ್ಕೆ ಗುರುವರು, ಒಳಗೆ ಹೋಗಿ ನನಗೇನಾಗಬೇಕು ಎಂದು ಉತ್ತರಿಸಿದ್ದರಂತೆ. ದೇವರನ್ನು ನೋಡಬೇಡವೇ? ಎಂದಾಗ ನಾ ನಿತ್ತಲ್ಲೇ ದೇವರು ಇದ್ದಾರೆ ಎಂದು ಹೇಳಿದ್ದರಂತೆ.

ಭಾಷೆ, ಕಲೆ‌ ಎರಡನ್ನೂ ಉಳಿಸಿಕೊಂಡವರು: ಸಂಜೀವ ಸುವರ್ಣ ಡೋಲು ಬಾರಿಸುವುದು ಎಂದರೆ ಸುಮ್ಮನೇ ಬಡಿಯುವುದಲ್ಲ. ಸತ್ತ ಮನೆಯಲ್ಲಿ ಡೋಲು ಬಾರಿಸುವುದು, ಮಗು ಹುಟ್ಟಿದ ಮನೆಯಲ್ಲಿ, ಬೊಜ್ಜದ ದಿನ, ಮದುವೆಯಲ್ಲಿ, ಕೋಲ, ಉತ್ಸವ, ಜಾತ್ರೆ, ಪೂಜೆ ಇತ್ಯಾದಿಗಳಲ್ಲಿ ಡೋಲು ಬಾರಿಸಲು ಬೇರೆಬೇರೆ ಟಕ್ಕುಗಳಿವೆ. ಅದೆಲ್ಲವನ್ನೂ ಬಾರಿಸಿ ಅನುಭವ ಇದ್ದವರು ಮತ್ತು ಈಗಿನ ಯುವಕರಿಗೆ ಕಲಿಸಿದವರು ಗುರುವರು. ಅವರು ಈಗ ಕೇಳಸಿಗುವುದೇ ಇಲ್ಲ‌ ಎನ್ನುವಂಥ ಕೊರಗ ಭಾಷೆಯನ್ನು ಕೂಡ ಮಾತನಾಡುತ್ತಿದ್ದರು. ಅದನ್ನು ಉಳಿಸಿಕೊಂಡಿದ್ದರು. ವಿನಯವಂತರು, ಪ್ರಾಮಾಣಿಕರೂ ಆಗಿದ್ದರು ಎಂದು ಬನ್ನಂಜೆ ಸಂಜೀವ ಸುವರ್ಣ ತಿಳಿಸಿದ್ದಾರೆ.

ಕಡ್ಡಾಯಿ ಕಲಾವಿದ ಗುರುವ ಕೊರಗರ ನಿಧನಕ್ಕೆ ನಿಕಟಪೂರ್ವ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ, ಸಂಶೋಧಕರಾದ ಎಸ್.ಎ ಕೃಷ್ಣಯ್ಯ, ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಸಂಶೋಧಕರಾದ ಡಾ. ಪುರುಷೋತ್ತಮ ಬಿಳಿಮಲೆ‌, ಹಿರಿಯಡ್ಕ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ, ಪ್ರೊ. ಸುಜಯ ಕೆ.ಎಸ್. ತಮ್ಮ ಸಂತಾಪ ಸೂಚಿಸಿದ್ದಾರೆ.

ನಿರೂಪಣೆ: ಗಣಪತಿ ದಿವಾಣ

ಇದನ್ನೂ ಓದಿ: 

Yakshagana: ಭೂಜಾತೆ ಸೀತೆಗೆ ಭೂಮಿಯಷ್ಟೇ ಸಹನೆ; ಅದು ನಮಗೆ ದಾರಿದೀಪ

Yakshagana: ಬಡತನವೋ ಸಿರಿತನವೋ ಎಳೆಯರನ್ನು ಬಾಧಿಸದಿರಲಿ

(Senior Kaddayi artist Karnataka Rajyothsava Awardee Guruva Koraga dies at age of 106 in Udupi)

Published On - 10:14 pm, Sun, 22 August 21

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್