ನಿಮ್ಮ ಮಕ್ಕಳಿಗೆ ಬೊಜ್ಜು ಇದೆಯೇ? ಅದನ್ನು ಕರಗಿಸಲು ಇಲ್ಲಿದೆ ಸರಳ ಸೂತ್ರ

ಇಪ್ಪತ್ತೂಂದನೆಯ ಶತಮಾನದ ಅತಿ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದು ಮಕ್ಕಳು ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದು. ಈ ಸಮಸ್ಯೆ ಜಾಗತಿಕವಾದುದು ಹಾಗೂ ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿದೆ. ಮಗು ಆತನ/ ಆಕೆಯ ವಯಸ್ಸು ಮತ್ತು ಎತ್ತರಕ್ಕೆ ಸಹಜವಾದ ಅಥವಾ ಆರೋಗ್ಯಕರವಾದ ದೇಹತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದರೆ ಅದನ್ನು ಬೊಜ್ಜು ಎನ್ನಲಾಗುತ್ತದೆ. ಬಾಲ್ಯದಲ್ಲಿಯೇ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಕ್ಕಳು ಪ್ರೌಢವಯಸ್ಕರಾದಾಗಲೂ ಈ ಸಮಸ್ಯೆ ಹಾಗೆಯೇ ಉಳಿದುಬಿಡುವ ಸಾಧ್ಯತೆಗಳು ಹೆಚ್ಚು. […]

ನಿಮ್ಮ ಮಕ್ಕಳಿಗೆ ಬೊಜ್ಜು ಇದೆಯೇ? ಅದನ್ನು ಕರಗಿಸಲು ಇಲ್ಲಿದೆ ಸರಳ ಸೂತ್ರ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 12:22 PM

ಇಪ್ಪತ್ತೂಂದನೆಯ ಶತಮಾನದ ಅತಿ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದು ಮಕ್ಕಳು ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದು. ಈ ಸಮಸ್ಯೆ ಜಾಗತಿಕವಾದುದು ಹಾಗೂ ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿದೆ.

ಮಗು ಆತನ/ ಆಕೆಯ ವಯಸ್ಸು ಮತ್ತು ಎತ್ತರಕ್ಕೆ ಸಹಜವಾದ ಅಥವಾ ಆರೋಗ್ಯಕರವಾದ ದೇಹತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದರೆ ಅದನ್ನು ಬೊಜ್ಜು ಎನ್ನಲಾಗುತ್ತದೆ. ಬಾಲ್ಯದಲ್ಲಿಯೇ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಕ್ಕಳು ಪ್ರೌಢವಯಸ್ಕರಾದಾಗಲೂ ಈ ಸಮಸ್ಯೆ ಹಾಗೆಯೇ ಉಳಿದುಬಿಡುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದ್ರೋಗಗಳಂತಹ ತೊಂದರೆಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಅಧಿಕ ದೇಹತೂಕ ಅಥವಾ ಬೊಜ್ಜು ಹಾಗೂ ಇವುಗಳಿಗೆ ಸಂಬಂಧಿಸಿದ ಇತರ ಕಾಯಿಲೆಗಳು ಬಹುತೇಕವಾಗಿ ತಡೆಗಟ್ಟಬಲ್ಲಂಥವು. ಆದ್ದರಿಂದ ಬಾಲ್ಯದಲ್ಲಿಯೇ ಬೊಜ್ಜು ಬೆಳೆಯುವುದನ್ನು ತಡೆಗಟ್ಟುವುದಕ್ಕೆ ಹೆಚ್ಚು ಪ್ರಾಮುಖತೆಯನ್ನು ನೀಡಬೇಕಾದ ಅಗತ್ಯವಿದೆ.

ಬೊಜ್ಜು ಆರೋಗ್ಯ ಸಮಸ್ಯೆಯಾಗಿ ಪರಿಗಣಿತವಾಗಿರುವುದು ಯಾಕೆ? ಬಾಲ್ಯದಲ್ಲಿ ಬೊಜ್ಜು ಅಥವಾ ಅಧಿಕ ದೇಹತೂಕ ಉಂಟಾದರೆ ಅದು ಅನೇಕ ರೀತಿಗಳಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬೊಜ್ಜು ಹೊಂದಿರುವ ಮಕ್ಕಳು ಈ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕ.

ಹೆತ್ತವರ ಉದ್ಯೋಗ ಜೀವನದ ಇಡುಕಿರದ ಕಾರ್ಯಭಾರದಿಂದಾಗಿ ಅವರಿಗೆ ಮಕ್ಕಳಿಗಾಗಿ ಸಮಯ ನೀಡಲು ಆಗುವುದಿಲ್ಲ. ಇದರಿಂದ ಮಕ್ಕಳಿಗೆ ಹೆತ್ತವರ ಮಾರ್ಗದರ್ಶನದ ಕೊರತೆ ಉಂಟಾಗುತ್ತದೆ. ಹೀಗಾಗಿ ಸರಿಯಾದ ಪೌಷ್ಟಿಕಾಂಶ ಸೇವನೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದಕ್ಕೆ ಹೆತ್ತವರ ಬಳಿ ಸಮಯವಿರುವುದಿಲ್ಲ. ಹೆತ್ತವರ ಕಾರ್ಯಭಾರದಿಂದಾಗಿ ಅನೇಕ ಮಕ್ಕಳು ಮನೆಯೂಟ ಬದಲಾಗಿ ಯಾವುದೋ ಫಾಸ್ಟ್‌ಫ‌ುಡ್‌ ರೆಸ್ಟೋರೆಂಟ್‌ಗಳಲ್ಲಿ ಊಟ-ಉಪಾಹಾರಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ.

ಅನೇಕ ಮಕ್ಕಳಿಗೆ ಸಾಕಷ್ಟು ದೈಹಿಕ ಚಟುವಟಿಕೆ, ವ್ಯಾಯಾಮ ಸಿಗುವುದಿಲ್ಲ. ಹೊರಾಂಗಣದಲ್ಲಿ ಆಟವಾಡುವ ಬದಲಾಗಿ ಮನೆಯೊಳಗೆ ಡಿಜಿಟಲ್ ಉಪಕರಣಗಳ ಜತೆಗೆ ಆಟವಾಡುವುದರಲ್ಲಿಯೇ ಮಕ್ಕಳು ಹೆಚ್ಚು ಕಾಲ ಕಳೆಯುತ್ತಾರೆ. ದಿನಕ್ಕೆ ಎರಡು ತಾಸು ಅಥವಾ ಅದಕ್ಕಿಂತ ಕಡಿಮೆ ಕಾಲ ಟಿವಿ ವೀಕ್ಷಿಸುವ ಮಕ್ಕಳಿಗಿಂತ ದಿನಕ್ಕೆ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ಟಿವಿ ವೀಕ್ಷಿಸುವ ಮಕ್ಕಳು ಬೊಜ್ಜು ಬೆಳೆಸಿಕೊಳ್ಳುವ ಸಾಧ್ಯತೆ ಅಧಿಕ.

ಮಕ್ಕಳ ದೇಹತೂಕದಲ್ಲಿ ವಂಶವಾಹಿಗಳೂ ಪಾತ್ರ ವಹಿಸುತ್ತವೆ. ನಮ್ಮ ದೇಹವಿಧ ಮತ್ತು ದೇಹವು ಎಷ್ಟು ಮತ್ತು ಹೇಗೆ ಕೊಬ್ಬನ್ನು ದಹಿಸಬೇಕು ಮತ್ತು ಶೇಖರಿಸಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ವಂಶವಾಹಿಗಳು ಸಹಾಯ ಮಾಡುತ್ತವೆ. ಹೆತ್ತವರು ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿದವರಾಗಿದ್ದರೆ ಮಗು ಕೂಡ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆಗಳು ಅಧಿಕ.

ಮಗುವಿಗೆ ಹೆಚ್ಚು ಕಾಲ ಎದೆಹಾಲು ಉಣಿಸಿದರೆ ಮಗು ಬೆಳೆದಂತೆ ಅಧಿಕ ದೇಹತೂಕ, ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

Published On - 3:09 pm, Sun, 19 January 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ