AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Day; Valentine’s Week: ಎದೆಬಡಿತ ಲೆಕ್ಕ ಹಾಕುತ್ತಾ ಕೂರದೇ ಮನದಮಾತು ಥಟ್ಟಂತ ಹೇಳಿಬಿಡು ಗೆಳತಿ

ಹೌದಲ್ವಾ. ಇನ್ನೇನು ಇಂದು (ಫೆ.7) ರೋಸ್ ಡೇ ಆಗಿತ್ತು. ಪ್ರೀತಿಯ ವಿಷಯವನ್ನು ಹೇಳ ಬೇಕು ಅನ್ನುವಷ್ಟರಲ್ಲೇ ಮುಗಿದೇ ಹೋಯ್ತು ದಿನ.‌ ಹೀಗೇ ಅಂದುಕೊಂಡು ಸುಮ್ಮನಾಗಿ ಬಿಡಬೇಡಿ. ಇನ್ನೂ ಕಾಲ ಮಿಂಚಿಲ್ಲ ಹೇಳಿ ಬಿಡಿ ಪ್ರೇಮ ನಿವೇದನೆಯನ್ನು..

Rose Day; Valentine's Week: ಎದೆಬಡಿತ ಲೆಕ್ಕ ಹಾಕುತ್ತಾ ಕೂರದೇ ಮನದಮಾತು ಥಟ್ಟಂತ ಹೇಳಿಬಿಡು ಗೆಳತಿ
ಪ್ರೇಮಿಗಳ ದಿನ
shruti hegde
| Updated By: Skanda|

Updated on:Feb 15, 2021 | 2:12 PM

Share

ಟೈಂ ಅನ್ನೋದು ಯಾವುದಕ್ಕೂ ಕಾಯಲ್ಲ. ಹೇಳಬೇಕು ಅಂದ್ಕೊಂಡಿದ್ದ ಮಾತು ನೀವು ಹೇಳದೇ ಇದ್ದರೆ ಎಷ್ಟೋ ಸಲ ಎದುರಿಗಿದ್ದವರಿಗೆ ಅರ್ಥವೂ ಆಗಲ್ಲ. ಅವರಿಗೆ ಅರ್ಥವಾಗ್ತಿಲ್ಲ ಅಂತ ನೀವು ಸಿಟ್ಟು ಮಾಡಿಕೊಂಡರೂ ಪ್ರಯೋಜನವಾಗುವುದಿಲ್ಲ. ಇಷ್ಟಪಟ್ಟವ ಎದುರಿಗೇ ಇದ್ದಾಗ ಮನದಮಾತು ಹೇಳಿಕೊಳ್ಳಲು ನಾಚಿಕೆಯ ಹಂಗೇಕೆ? ಒಮ್ಮೆ ಮನಬಿಚ್ಚಿ ಮಾತಾಡಿ ನೋಡಿ, ಏನಾದ್ರೂ ಮ್ಯಾಜಿಕ್ ಆದ್ರೂ ಆದೀತು ಎನ್ನುತ್ತದೆ ಈ ಲಘು ಬರಹ.

ಪ್ರೇಮಿಗಳ ದಿನದಲ್ಲಿ ಒಂದಿನ ಕಳೆದೇ ಹೋಯ್ತಲ್ವಾ. ಇನ್ನೇನು ಯೋಚಿಸುತ್ತೀದ್ದೀಯಾ ಗೆಳತಿ? ನೀನಿಷ್ಟಪಡುವ ಹುಡುಗನಿಗೆ ಹೇಳು ನಿನ್ನ ಪ್ರೇಮ ನಿವೇದನೆಯನ್ನು. ಹೌದಲ್ವಾ. ಇಂದು (ಫೆ.7) ರೋಸ್ ಡೇ ಆಗಿತ್ತು. ಪ್ರೀತಿಯ ವಿಷಯವನ್ನು ಹೇಳಬೇಕು ಅನ್ನುವಷ್ಟರಲ್ಲೇ ಮುಗಿದೇ ಹೋಯ್ತು ದಿನ.‌ ಹೀಗೆ ಅಂದುಕೊಂಡು ಸುಮ್ಮನಾಗಿ ಬಿಡಬೇಡ. ಇನ್ನೂ ಕಾಲ ಮಿಂಚಿಲ್ಲ ಹೇಳಿ ಬಿಡು ನಿನ್ನ ಪ್ರೇಮವನ್ನು ಗೆಳತಿ.

ಹುಡುಗರೇ ಮೊದಲು ಪ್ರಪೋಸ್ ಮಾಡಬೇಕಂತೇನಿಲ್ಲ ಹುಡುಗರಿಗೆ ಹೋಲಿಸಿದರೆ, ಹುಡುಗಿಗೆ ನಾಚಿಕೆ ಸ್ವಭಾವ ಜಾಸ್ತಿ. ಅದರಲ್ಲೂ ಪ್ರೀತಿ ವಿಷಯ ಬಂದಾಗಲಂತೂ ಕೊಂಚ ಜಾಸ್ತಿಯೇ ನಾಚಿಕೆಯಾಗುತ್ತೆ. ಹಾಗಂತ ತಾನು ಇಷ್ಟ ಪಡುವ ಹುಡುಗನೇ ಬಂದು ಪ್ರೀತಿಯನ್ನು ನನ್ನೆದುರು ಹೇಳಿಕೊಳ್ಳಲಿ ಎಂದು ಕಾಯುತ್ತಾ ಕುಳಿತರೆ ಸಮಯ ವ್ಯರ್ಥವಾದೀತು. ಪ್ರೇಮಿಗಳಿಗಾಗಿಯೇ ಇರುವಂತಹ ಈ ದಿನದಲ್ಲಿ ಹಿಂಜರಿಯದೇ ಪ್ರೇಮ ನಿವೇದನೆ ಮಾಡಿಬಿಡು ಗೆಳತಿ.

ಹೃದಯ ಕದಿಯುವ ಸಮಯವಿದು ಮನದಾಳದ ಮಾತನ್ನು ಬಿಚ್ಚಿಡುವ ಸಮಯ ಎದುರೇ ಇದ್ದಾಗ ಇನ್ನೂ ಯೋಚಿಸುವುದು ಸರಿ ಅಲ್ಲ. ಇಷ್ಟವಾಗುವ ಉಡುಗೊರೆಯ ಜೊತೆಯಲ್ಲಿ, ನೇರವಾಗಿರಲಿ ಪ್ರೀತಿಯ ಮಾತು. ಕೊಂಚವೂ ಗೊಂದಲ ಬೇಡ. ಹೃದಯಕ್ಕೆ ಹೃದಯ ಬೆರೆಯುವ ಸಮಯವದು.. ಎದೆ ಬಡಿತದ ಕ್ಷಣಗಣನೆಗೆ ತಡಬೇಡ.

ಹೇಗೆ ಹೇಳಲಿ ನನ್ನೀ ಪ್ರೀತಿಯ? ಹೀಗೆಲ್ಲಾ ಒಂದಿಷ್ಟು ಗೊಂದಲಗಳು ಮೂಡುವುದು ಸಹಜ. ಇಷ್ಟಪಟ್ಟ ಹುಡುಗ ಎದುರು ನಿಂತಾಗ ಎದೆ ಬಡಿತ ಜೋರಾಗಿ, ಮಾತು ತಪ್ಪುವುದೆನೋ.. ಹಾಗಾಗುವುದು ಕೂಡಾ ಪ್ರೀತಿಯ ಒಂದು ಲಕ್ಷಣ. ತೊಂದರೆ ಏನಿಲ್ಲ, ನೇರವಾಗಿ ಮಾತಿನ ಮೂಲಕ ಪದ ಬಿಡಿಸಿ ಹೃದಯ ಕದಿಯುವುದು ಒಳ್ಳೆಯದೇನೋ.. ( ಯೋಚಿಸು)

ನೀ ಕೊಡುವ ಉಡುಗೊರೆ ಚಂದದ್ದಾಗಿರಲಿ ಪ್ರೇಮ ನಿವೇದನೆ ಮಾಡುವಾಗ ಮುಖದಲ್ಲಿ ನಗುವಿರಲಿ, ಸ್ವಲ್ಪ ನಾಚಿಕೆಯಿಂದ ತಲೆ ಬಾಗಿರಲಿ. ಆಗಾಗ ಕಣ್ಣು ಕಣ್ಣು ಬೆಸೆಯುತ್ತಿರಲಿ. ಶುರುವಾಗಲಿ ಪ್ರೀತಿ ಬೆಸೆಯುವ ಪದದ ಸಾಲುಗಳು. ಉಡುಗೊರೆಯನ್ನು ಮುಂದಿಟ್ಟು.. ಪ್ರೇಮ ನಿವೇದನೆಯಾಗಲಿ. ಹೃದಯಗಳು ಒಂದಾಗಲಿ..

Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್​ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !

Published On - 3:18 pm, Sun, 7 February 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!