World Ozone Day 2022: ಓಝೋನ್ ಪದರ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ದಿನದ ಇತಿಹಾಸ ಮತ್ತು ಮಹತ್ವ

ವಿಪರೀತ ವಾಯುಮಾಲಿನ್ಯದಿಂದಾಗಿ ಕ್ಷೀಣಿಸುತ್ತಿರುವ ಓಝೋನ್ ಪದರದ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆ.16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ.

World Ozone Day 2022: ಓಝೋನ್ ಪದರ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ದಿನದ ಇತಿಹಾಸ ಮತ್ತು ಮಹತ್ವ
ವಿಶ್ವ ಓಝೋನ್ ದಿನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Sep 16, 2022 | 7:30 AM

ವಾಹನಗಳು ಮತ್ತು ತಂತ್ರಜ್ಞಾನಗಳ ಹೆಚ್ಚಳದಿಂದ ಮಾಲಿನ್ಯವು ಎಷ್ಟರಮಟ್ಟಿಗೆ ಹೆಚ್ಚುತ್ತಿದೆ ಎಂಬುದನ್ನು ಯಾರಿಂದಲೂ ಮರೆಮಾಡಲಾಗಿಲ್ಲ. ಪ್ರಪಂಚದಾದ್ಯಂತ, ವಿಶೇಷವಾಗಿ ದೊಡ್ಡ ನಗರಗಳಲ್ಲಿ ವಾಯುಮಾಲಿನ್ಯವು ತುಂಬಾ ಹೆಚ್ಚಾಗಿದೆ, ಜನರು ಉಸಿರಾಡಲು ಸಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮಾಲಿನ್ಯದಿಂದಾಗಿ ಮಕ್ಕಳು ಮತ್ತು ವಯಸ್ಕರ ಆರೋಗ್ಯವು ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ವಾತಾವರಣದಲ್ಲಿರುವ ಓಝೋನ್ ಪದರವು ನಿರಂತರವಾಗಿ ಹಾನಿಗೊಳಗಾಗುತ್ತಿದೆ. ಹೀಗಾಗಿ ಓಝೋನ್ ಅನ್ನು ರಕ್ಷಿಸುವ ಮತ್ತು ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆ.16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಓಝೋನ್ ದಿನದ ಇತಿಹಾಸ

1994 ರಲ್ಲಿ, UN ಜನರಲ್ ಅಸೆಂಬ್ಲಿ ಸೆಪ್ಟೆಂಬರ್ 16 ಅನ್ನು ಓಝೋನ್ ಪದರವನ್ನು ಸಂರಕ್ಷಿಸಲು ವಾರ್ಷಿಕ ಅಂತರಾಷ್ಟ್ರೀಯ ದಿನವೆಂದು ಘೋಷಿಸಿತು. ಜಗತ್ತಿನಾದ್ಯಂತ 46 ದೇಶಗಳ ಸರ್ಕಾರಗಳು 1987 ರಲ್ಲಿ “ಓಝೋನ್ ಪದರವನ್ನು ಸವಕಳಿ ಮಾಡುವ ವಸ್ತುಗಳ ಮೇಲೆ ಮಾಂಟ್ರಿಯಲ್ ಪ್ರೋಟೋಕಾಲ್” ಗೆ ಸಹಿ ಹಾಕಿದವು ಮತ್ತು ಆ ಘಟನೆಯನ್ನು ಆಚರಿಸಲು ಇದನ್ನು ಮಾಡಲಾಯಿತು. “ಮಾಂಟ್ರಿಯಲ್ ಪ್ರೋಟೋಕಾಲ್” ಎಂಬುದು ಇದರ ಮತ್ತೊಂದು ಹೆಸರು.

ಪ್ರತಿ ವರ್ಷ ವಿಶ್ವ ಓಝೋನ್ ದಿನವನ್ನು ಒಂದೊಂದು ಥೀಮ್ ಮುಂದಿಟ್ಟುಕೊಂಡು ಆಚರಣೆಯೊಂದಿಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಬರಲಾಗುತ್ತಿದೆ. ಈ ವರ್ಷ ‘ಮಾಂಟ್ರಿಯಲ್ ಪ್ರೋಟೋಕಾಲ್ @ 35: ಭೂಮಿಯ ಮೇಲಿನ ಜೀವನವನ್ನು ರಕ್ಷಿಸುವ ಜಾಗತಿಕ ಸಹಕಾರ’ ಎಂಬೂದಾಗಿದೆ ಆಗಿದೆ.

ವಿಶ್ವ ಓಝೋನ್ ದಿನದ ಮಹತ್ವಗಳು

ಹೆಚ್ಚಿನವರಿಗೆ ತಿಳಿದಂತೆ ಸೂರ್ಯನ ವಿಕಿರಣವು ಭೂಮಿಗೆ ನೇರವಾಗಿ ಅಪ್ಪಳಿಸುವುದರ ಜೊತೆಗೆ ಜೀವ ಸಂಕುಲಗಳಿಗೆ ಹಾನಿಯನ್ನು ಉಂಟು ಮಾಡುತ್ತದದೆ. ವಿಕಿರಣವು ಚರ್ಮದ ಕ್ಯಾನ್ಸರ್, ಕಣ್ಣಿನ ಪೊರೆಗಳು ಮತ್ತು ಹಲವಾರು ಇತರ ಆರೋಗ್ಯ ಸಂಬಂಧಿತ ತೊಡಕುಗಳಿಗೆ ಕಾರಣವಾಗಬಹುದು. ಆದರೆ ಸೂರ್ಯನ ವಿಕಿರಣವು ಭೂಮಿಗೆ ನೇರವಾಳಿ ಬೀಳದಂತೆ ಒಝೋನ್ ಪದರವು ಹೀರಿಕೊಳ್ಳುತ್ತದೆ ಮತ್ತು ಭೂಮಿಗೆ ತಲುಪುವ ವಿಕಿರಣದ ಪ್ರಮಾಣವನ್ನು ಮಿತಿಗೊಳಿಸುತ್ತದೆ. ಆದರೆ ಉತ್ತರ ಗೋಳಾರ್ಧದ ಓಝೋನ್ ಪದರದ ದಪ್ಪವು ವಾರ್ಷಿಕವಾಗಿ 4 ಪ್ರತಿಶತದಷ್ಟು ಕುಸಿದಿದೆ ಎಂದು ಸೂಚಿಸುವ ವರದಿಗಳಿವೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನ ಮಹತ್ವದ್ದಾಗಿದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ