ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ಮುಚ್ಚಿಡಬಾರದು! ಇಲ್ಲದಿದ್ದರೆ ಮುಂದೆ ತಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ, ಎಚ್ಚರಾ
ಚಾಣಕ್ಯ ನೀತಿಯ ಪ್ರಕಾರ ಹೆಚ್ಚಿನ ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ತಮ್ಮ ಮನೆಯವರು ಮತ್ತು ಅತ್ತೆಯವರಿಂದ ಮರೆಮಾಚುತ್ತಾರೆ. ಕಾಲಕ್ರಮೇಣ ಸುಳ್ಳು ಹೇಳುವ ಈ ಅಭ್ಯಾಸವು ಗಂಡನಲ್ಲಿ ತುಂಬಾ ಹೆಚ್ಚಾಗುತ್ತದೆ. ನಂತರ ಅವರು ಅದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Chanakya Niti: ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಪತಿ ಎಷ್ಟೇ ಒಳ್ಳೆಯವರಾಗಿರಲಿ ಅಥವಾ ಕೆಟ್ಟವರಾಗಿರಲಿ, ಮಹಿಳೆಯರು ಎಂದಿಗೂ ತಮ್ಮ ಕೆಟ್ಟ ಅಭ್ಯಾಸಗಳನ್ನು ಅಥವಾ ಕೆಲವು ಕಹಿ ಸತ್ಯಗಳನ್ನು ಮರೆಮಾಚಬಾರದು. ಆದರೆ ಇದು ಶುದ್ಧ ತಪ್ಪು ಆದೀತು. ಏಕೆಂದರೆ ಮುಂದೆ ಅಂತಹ ಮಹಿಳೆಯರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎನ್ನುತ್ತಾರೆ ಚಾಣಕ್ಯ.
- ಸುಳ್ಳು ಹೇಳುವುದು: ಚಾಣಕ್ಯ ನೀತಿಯ ಪ್ರಕಾರ ಹೆಚ್ಚಿನ ಮಹಿಳೆಯರು ತಮ್ಮ ಗಂಡನ ಸುಳ್ಳು ಅಭ್ಯಾಸಗಳನ್ನು ತಮ್ಮ ಮನೆಯವರು ಮತ್ತು ಅತ್ತೆಯವರಿಂದ ಮರೆಮಾಚುತ್ತಾರೆ. ಕಾಲಕ್ರಮೇಣ ಸುಳ್ಳು ಹೇಳುವ ಈ ಅಭ್ಯಾಸವು ಗಂಡನಲ್ಲಿ ತುಂಬಾ ಹೆಚ್ಚಾಗುತ್ತದೆ. ನಂತರ ಅವರು ಅದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
- ಹೆಂಡತಿಯ ಮೇಲೆ ಅನುಮಾನ: ಮದುವೆಯಾದ ಕೆಲವು ವರ್ಷಗಳ ನಂತರ, ಕೆಲವೊಮ್ಮೆ ಅಂತಹ ಸಂದರ್ಭಗಳು ಉದ್ಭವಿಸುತ್ತವೆ. ಪತಿ ತನ್ನ ಹೆಂಡತಿಯನ್ನು ಅನುಮಾನಿಸಲು ಪ್ರಾರಂಭಿಸುತ್ತಾನೆ. ಈ ಅನುಮಾನದ ಅಭ್ಯಾಸವು ಅವರ ಮನಸ್ಸನ್ನು ಘಾಸಿಗೊಳಿಸಿ, ದೆವ್ವದಂತೆ ಹೊಕ್ಕಿಬಿಡುತ್ತದೆ. ಮಹಿಳೆಯರು ಈ ಕೆಟ್ಟ ಅಭ್ಯಾಸವನ್ನು ಎಂದಿಗೂ ಇತರರಿಂದ ಮುಚ್ಚಿಡಬಾರದು.
- ಕೋಪದ ಸ್ವಭಾವ: ಕೋಪವು ಒಂದು ಮನೋ ವಿಕಾರ ಭಾವನೆ. ಯಾರಾದರೂ ಆದರ ಮಿತಿ ಮೀರಿ ಕೋಪ ಮಾಡಿಕೊಂಡರೆ ಅದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಚಾಣಕ್ಯ ಹೇಳುತ್ತಾನೆ ಕೋಪವನ್ನು ನಿಯಂತ್ರಿಸುವವನು ಮಾತ್ರ ಯಶಸ್ವಿ ವ್ಯಕ್ತಿಯಾಗಬಲ್ಲ. ಪ್ರೀತಿ ಅಥವಾ ಇತರ ಕಾರಣಗಳಿಗಾಗಿ ಗಂಡನ ಕೋಪದ ನಡವಳಿಕೆಯನ್ನು ಸಹಿಸಿಕೊಳ್ಳುವ ತಪ್ಪನ್ನು ಮಹಿಳೆಯರು ಮಾಡುತ್ತಾರೆ. ಒಂದು ಹಂತದಲ್ಲಿ, ಈ ಕೋಪವು ಹಿಂಸೆಯ ರೂಪವನ್ನೂ ಪಡೆಯಬಹುದು.
- ಇತರ ಮಹಿಳೆಯರೊಂದಿಗೆ ಮಾತನಾಡುವುದು: ನಿಮ್ಮ ಗಂಡನ ಮೇಲೆ ನಂಬಿಕೆ ಇಡುವುದು ಒಳಿತೇ ಎನ್ನುತ್ತದೆ ಚಾಣಕ್ಯ ನೀತಿ. ಆದರೆ ಕೆಲವೊಮ್ಮೆ ಕೆಲ ಪುರುಷರು ತಮ್ಮ ಹೆಂಡತಿಯ ನಂಬಿಕೆಯನ್ನು ಮುರಿದು ಇತರ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಹೆಂಡತಿಯರು ತಮ್ಮ ಈ ಅಭ್ಯಾಸವನ್ನು ಎಂದಿಗೂ ಮರೆಮಾಚಬಾರದು. ಅಂತಹ ವಿಷಯವನ್ನು ಮರೆಮಾಚುವುದು ನಂತರ ತಮ್ಮ ವೈವಾಹಿಕ ಜೀವನಕ್ಕೇ ಅಪಾಯ ತಂದಿಟ್ಟುಕೊಂಡಂತೆ.