AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2022: ಹೊಸ ವರ್ಷದಲ್ಲಿ ನಿಮ್ಮ ಮನ-ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ದಿ ನೆಲೆಸಲು ಸಾತ್ವಿಕವಾದ ಈ ಸಲಹೆಗಳ ಪಾಲಿಸಿ

ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗಾಗಿ ಕೆಲವು ಸಲಹೆಗಳು ಇಲ್ಲಿವೆ. ಇವು ವಾಸ್ತು, ಧಾರ್ಮಿಕತೆ, ಜ್ಯೋತಿಷ್ಯದ ಪ್ರಭಾವಗಳ ಆಧಾರಲ್ಲಿದೆ. ಅವು ಏನು ಎಂಬುದನ್ನು ತಿಳಿಯಿರಿ. ನಿಮಗೆ ಸಮಯವಿಲ್ಲದಿದ್ದರೂ ಈ ನಿಯಮಗಳಲ್ಲಿ ಕೆಲವನ್ನಾದರೂ ಪಾಲಿಸಿ. ಅದರಿಂದ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ.

New Year 2022: ಹೊಸ ವರ್ಷದಲ್ಲಿ ನಿಮ್ಮ ಮನ-ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ದಿ ನೆಲೆಸಲು ಸಾತ್ವಿಕವಾದ ಈ ಸಲಹೆಗಳ ಪಾಲಿಸಿ
ಹೊಸ ವರ್ಷದಲ್ಲಿ ನಿಮ್ಮ ಮನ- ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ದಿ ನೆಲೆಸಲು ಸಾತ್ವಿಕವಾದ ಈ ಸಲಹೆಗಳ ಪಾಲಿಸಿ
TV9 Web
| Edited By: |

Updated on: Jan 01, 2022 | 6:06 AM

Share

ಮನೆಯ ಸಮೃದ್ದಿ ಮತ್ತು ಸಾತ್ವಿಕತೆಗಾಗಿ ಕೆಲವು ಸಲಹೆಗಳು ಇಲ್ಲಿವೆ. ಇವು ವಾಸ್ತು, ಧಾರ್ಮಿಕತೆ, ಜ್ಯೋತಿಷ್ಯದ ಪ್ರಭಾವಗಳ ಆಧಾರಲ್ಲಿದೆ. ಅವು ಏನು ಎಂಬುದನ್ನು ತಿಳಿಯಿರಿ. ನಿಮಗೆ ಸಮಯವಿಲ್ಲದಿದ್ದರೂ ಈ ನಿಯಮಗಳಲ್ಲಿ ಕೆಲವನ್ನಾದರೂ ಪಾಲಿಸಿ. ಅದರಿಂದ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಏನೆಲ್ಲ ಖರೀದಿಬಹುದು, ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನಲ್ಲ! ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯಗಳನ್ನು ಆಚರಿಸಿದಾಗ ಮಾತ್ರ ಸಾಧ್ಯ.

1. ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಮನೆಯಲ್ಲಿ ಇಡಬೇಡಿ; ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. 2. ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುತ್ತಿರಬಾರದು; ಅದರಿಂದ ಹಣ ವ್ಯಯ ಸಂಭವ ಇರುತ್ತದೆ. 3. ಮನೆಯ ಆವರಣದಲ್ಲಿ ಒಣಗಿದ ಗಿಡಗಳನ್ನು ಇಡಬೇಡಿ; ಇದರಿಂದ ಮನಸ್ಸನಲ್ಲಿ ಖಿನ್ನತೆ ಉಂಟಾಗುವ ಸಂಭವ ಇರುತ್ತದೆ. 4. ಸಾಧ್ಯವಾದಷ್ಟು ದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ. ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು. ಶುದ್ಧ ಮಾಡಿ ಉಪಯೋಗಿಸಬೇಕು. ಇಲ್ಲದಿದ್ದರೆ ಮನೆಯ ಅಡುಗೆ ಸಾಮಗ್ರಿ ಹಾಳಾಗುವ ಸಂಭವ ಇರುತ್ತದೆ. 5. ನಿಂತ ಗಡಿಯಾರವು ಅಶುಭ ಲಕ್ಷಣ. ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ.

6. ದೇವರ ಕೋಣೆಯ ಮೇಲೆ ಅತಿಯಾದ ಭಾರ ಇಡಬಾರದು. ಒಡೆದುಹೋದ ದೇವರಮೂರ್ತಿ, ಫೋಟೋಗಳನ್ನು ಇಡಬೇಡಿ. 7. ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು. ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ. 8. ದೇವರ ಕೋಣೆಯಲ್ಲಿ ಒಂಟಿ ದೀಪ ಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ. 9. ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು. 10. ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು.

11. ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು. ಇದರಿಂದ ವಸ್ತುವಿನಲ್ಲಿ ಇದ್ದ ಕಲಿ ದೋಷ ದೂರವಾಗುವುದು. 12. ಕುಲದೇವರಿಗೆ, ಇಷ್ಟ ದೇವರಿಗೆ, ಗ್ರಾಮ ದೇವರಿಗೆ ಮನೆಯ ಎಲ್ಲ ಶುಭಕಾರ್ಯಗಳಲ್ಲಿ ಕಾಣಿಕೆ ತೆಗೆದು ಇಡುವುದನ್ನು ರೂಢಿ ಮಾಡಿ. 13. ಜೇಡರ ಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ಅನ್ನು ಕಿತ್ತುಹಾಕಿ -ಅದು ಅಶುಭ ತರುವ ಸಂಕೇತ. ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟೂ ದೈವಿಕ ಕಳೆ ವೃದ್ಧಿಸುತ್ತದೆ. 14. ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ – ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು. 15. ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು. ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ.

16. ಬಾವುಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ. 17. ಹಿರಿಯರು ನಂಬಿಕೊಂಡು ಬಂದ ದೈವಗಳಿಗೆ, ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ. 18. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು. 19. ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದು ಮಾಡಬೇಡಿ. 20. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಯಲ್ಲಿರಲಿ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ (ಭಜನೆ) ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯ ವ್ಯವಸ್ಥೆ ಮಾಡಿ. ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ.

21. ಆಗ್ನೇಯ ದಿಕ್ಕಿನಲ್ಲಿ ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು. 22. ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ ಎನರ್ಜಿ ಅಪಾಯವಿರುತ್ತದೆ. 23. ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ. 24. ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿ ಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ. 25. ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ. ಇದರಿಂದ ವಾಸ್ತು ಸದೃಢವಾಗಿರುತ್ತದೆ.

26. ವರ್ಷಕ್ಕೆ ಒಮ್ಮೆಯಾದರೂ ಬ್ರಾಹ್ಮಣ ಸುವಾಸಿನಿ (ಅತಿಥಿ ಸತ್ಕಾರ ) ಪೂಜೆ ಮಾಡಿ. ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ. ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದ ದೇವಾಲಯ ಮತ್ತು ಗ್ರಾಮದೇವರ ದರ್ಶನ ಉತ್ತಮ. 27. ಮನೆಯ ಹಾಲ್ ನಲ್ಲಿ ಅಕ್ವೇರಿಯಂ ಇದ್ದರೆ, ಆಗ್ನೇಯ (ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಒಳ್ಳೆಯದು. 28. ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ. ಅನ್ನವು ದೇವರಿಗೆ ಸಮಾನ ಎಂಬುದನ್ನು ಮರೆಯಬೇಡಿ. (ಸಂಗ್ರಹ: ನಿತ್ಯಸತ್ಯ)

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ