
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯಾ ತಿಥಿಯಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2025 ರಲ್ಲಿ ಅಕ್ಷಯ ತೃತೀಯ ಏಪ್ರಿಲ್ 30ಕ್ಕೆ ಬಂದಿದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಚಿನ್ನ ಬೆಳ್ಳಿ ಖರೀದಿಸುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹಲವರು ನಂಬುತ್ತಾರೆ. ಇವುಗಳನ್ನು ಖರೀದಿಸುವುದರ ಜೊತೆಗೆ ಈ ವಿಶೇಷ ದಿನದಂದು ದೀಪಗಳನ್ನು ಬೆಳಗಿಸುವುದು ಕೂಡ ಮಹತ್ವದ್ದಾಗಿದೆ. ಶಾಶ್ವತ ಫಲಗಳನ್ನು ಪಡೆಯಲು ಈ ದಿನ ನೀವು ಮನೆಯಲ್ಲಿ ಯಾವ ಸ್ಥಳದಲ್ಲಿ ದೀಪ ಹಚ್ಚಬೇಕು ಎಂಬುದನ್ನು ಇಲ್ಲಿ ತಿಲಿದುಕೊಳ್ಳಿ.
ಮನೆಯ ಉತ್ತರ ದಿಕ್ಕನ್ನು ಸಂಪತ್ತಿನ ದೇವರು ಕುಬೇರ ಮತ್ತು ಲಕ್ಷ್ಮಿ ದೇವಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯದಂದು ಮನೆಯ ಈ ದಿಕ್ಕಿನಲ್ಲಿ ದೀಪ ಹಚ್ಚುವುದರಿಂದ ಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಅಡುಗೆಮನೆಯಲ್ಲಿ ಕುಡಿಯುವ ನೀರನ್ನು ಇಡಲು ಒಂದು ವಿಶೇಷ ಸ್ಥಳವಿದೆ. ಅಕ್ಷಯ ತೃತೀಯದ ಸಂಜೆ, ಇಲ್ಲಿಯೂ ದೀಪ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮ ಮೇಲೆ ಉಳಿಯುತ್ತದೆ ಮತ್ತು ಮುಂಬರುವ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ನಿಮ್ಮ ಮನೆಯ ಸುತ್ತಲೂ ಬಾವಿ, ಕೊಳ ಅಥವಾ ಇತರ ನೀರಿನ ಮೂಲಗಳಿದ್ದರೆ, ಅಲ್ಲಿಯೂ ದೀಪವನ್ನು ಬೆಳಗಿಸಬೇಕು. ನೀರಿನ ಮೂಲಗಳ ಬಳಿ ದೀಪಗಳನ್ನು ಹಚ್ಚುವುದು ಪ್ರಕೃತಿ ಮತ್ತು ದೇವರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ.
ಇದನ್ನೂ ಓದಿ: ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಚಿನ್ನದ ಲಾಕೆಟ್ ವಿತರಣೆ; ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?
ಅಕ್ಷಯ ತೃತೀಯದ ಸಂಜೆ, ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ತುಪ್ಪದ ಮಣ್ಣಿನ ದೀಪಗಳನ್ನು ಬೆಳಗಿಸಿ. ಇಲ್ಲಿಂದಲೇ ಲಕ್ಷ್ಮಿ ದೇವಿಯು ಆಗಮಿಸುತ್ತಾಳೆ. ಬೆಳಕು ಮತ್ತು ಸ್ವಚ್ಛತೆ ಇರುವಲ್ಲಿ ಮಾತ್ರ ಲಕ್ಷ್ಮಿ ದೇವಿ ವಾಸಿಸುತ್ತಾಳೆ. ಇಲ್ಲಿ ದೀಪ ಹಚ್ಚುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ