
ತಮಿಳುನಾಡಿನ ಪ್ರಸಿದ್ಧ ಕ್ಷೇತ್ರವಾದ ತಿರುವಣ್ಣಾಮಲೈಯ ಅಣ್ಣಾಮಲೈಯರ್ (ಅರುಣಾಚಲಂ) ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿ ಪ್ರಮುಖ ಸೂಚನೆಯೊಂದನ್ನು ನೀಡಿದೆ. ದೇವಾಲಯದ ಪಾವಿತ್ರ್ಯವನ್ನು ರಕ್ಷಿಸುವ ಮತ್ತು ಗರ್ಭಗುಡಿಯ ಪ್ರದೇಶದಲ್ಲಿ ಫೋಟೋ, ವಿಡಿಯೋ ಹಾಗೂ ರೀಲ್ಸ್ ಚಿತ್ರೀಕರಣವನ್ನು ತಡೆಯುವ ಉದ್ದೇಶದಿಂದ ಸೆಪ್ಟೆಂಬರ್ 1 ರಿಂದ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ದೇವಾಲಯಗಳ ಆಗಮ ಸಂಪ್ರದಾಯಗಳನ್ನು ಕಾಪಾಡಲು ಈ ಕ್ರಮ ಕೈಗೊಂಡಿದೆ. ದರ್ಶನದ ವೇಳೆ ಭಕ್ತರು ಕ್ಯಾಮೆರಾ ಅಥವಾ ಫೋನ್ ಬಳಸಿ ಸಮಯ ವ್ಯರ್ಥ ಮಾಡುವುದನ್ನು ಮತ್ತು ದರ್ಶನಕ್ಕೆ ಅಡ್ಡಿಪಡಿಸುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಜೊತೆಗೆ, ಸೆಲೆಬ್ರಿಟಿಗಳು ಹಾಗೂ ವಿಐಪಿಗಳು ಭೇಟಿ ನೀಡಿದಾಗ ಫೋಟೋ-ವಿಡಿಯೋ ತೆಗೆಯುವುದರ ಮೇಲೆಯೂ ವಿಶೇಷ ನಿರ್ಬಂಧ ವಿಧಿಸಲಾಗಿದ್ದು, ವಿಐಪಿ ಭೇಟಿಯ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕೆಂದು ಸೂಚಿಸಲಾಗಿದೆ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!
ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮೊಬೈಲ್ ಫೋನ್‌ಗಳನ್ನು ಸುರಕ್ಷಿತವಾಗಿಡಲು ದೇವಾಲಯದ ಪ್ರಮುಖ ಗೋಪುರಗಳ ಬಳಿ ವಿಶೇಷ ಭದ್ರತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ:
ಪ್ರತಿ ಮೊಬೈಲ್ ಫೋನ್‌ಗೆ 5 ರೂ. ಶುಲ್ಕ ಪಾವತಿಸಿ, ಟೋಕನ್ ಪಡೆದು ಫೋನ್ ಹಸ್ತಾಂತರಿಸಬಹುದು. ದರ್ಶನ ಮುಗಿದ ನಂತರ ಟೋಕನ್ ತೋರಿಸಿ ಫೋನ್ ಮರಳಿ ಪಡೆಯಬಹುದು.
ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತದೆ. ನಿಯಮ ಮೀರಿ ಮೊಬೈಲ್ ಫೋನ್ ಒಳಗೆ ಒಯ್ದು ಬಳಸುವುದು ಕಂಡುಬಂದರೆ, ತಕ್ಷಣವೇ ಫೋನ್ ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Fri, 21 August 26