Basava Jayanti 2021: ಬಸವಣ್ಣನವರ ತತ್ವಾದರ್ಶಗಳು ಯುವ ಪಿಳಿಗೆಗೆ ಹುರುಪು ನೀಡುವ ಸಂದೇಶಗಳಾಗಿವೆ

Basaveshwara Jayanti 2021: ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಸವಣ್ಣನವರ ಈ ಪರಿಕಲ್ಪನೆ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯಕವಾಗಿದೆ. ಹೀಗಾಗಿ ವಿಶ್ವಗುರು ಬಸವಣ್ಣನವರು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ.

Basava Jayanti 2021: ಬಸವಣ್ಣನವರ ತತ್ವಾದರ್ಶಗಳು ಯುವ ಪಿಳಿಗೆಗೆ ಹುರುಪು ನೀಡುವ ಸಂದೇಶಗಳಾಗಿವೆ
ಬಸವ ಜಯಂತಿ
Follow us
preethi shettigar
|

Updated on: May 14, 2021 | 9:44 AM

ಬಸವ ಜಯಂತಿಯನ್ನು 12 ನೇ ಶತಮಾನದ ಕವಿ, ದಾರ್ಶನಿಕ ಮತ್ತು ಲಿಂಗಾಯತ ಎಂಬ ಪರಿಕಲ್ಪನೆಯ ಸ್ಥಾಪಕ ಸಂತ ಭಗವಾನ್ ಬಸವಣ್ಣನವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಲಿಂಗಾಯತ ಸಮುದಾಯದ ಜನರು ಹೆಚ್ಚಾಗಿ ಆಚರಿಸುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಭಾಗಗಳಲ್ಲಿ ಹೆಚ್ಚಿನ ಅಭಿಮಾನಿಗಳೊಂದಿಗೆ ಆಚರಿಸಲ್ಪಡುವ ಈ ದಿನ ಅತ್ಯಂತ ವಿಶೇಷತೆಯನ್ನು ಒಳಗೊಂಡ ದಿನವಾಗಿದೆ.

ಈ ದಿನದಂದು ಜನರು ಶುಭಾಶಯದ ಸಂದೇಶವನ್ನು ಪರಸ್ಪರ ಕೋರುತ್ತಾರೆ. ಈ ಶುಭಾಶಯದ ಸಂದೇಶಗಳು ಬಸವಣ್ಣನವರ ವಚನಗಳ ರೂಪದಲ್ಲಿರುತ್ತದೆ ಎನ್ನುವುದು ಮತ್ತೊಂದು ವಿಶೇಷ. ಆ ಮೂಲಕ ಅವರ ಬೋಧನೆಗಳು ಮತ್ತು ವಚನಗಳನ್ನು ಪಠಿಸುತ್ತಾರೆ ಮತ್ತು ಬಸವಣ್ಣನವರನ್ನು ಸ್ಮರಿಸುತ್ತಾರೆ. ‘ವಾಸುದೈವ ಕುಟುಂಬಕಂ’ (ಸಾರ್ವತ್ರಿಕ ಭ್ರಾತೃತ್ವ) ಸಂದೇಶವನ್ನು ರವಾನಿಸುವುದು ಬಸವ ಜಯಂತಿಯ ಉದ್ದೇಶ. ದೇವರು ಮತ್ತು ಜೀವನವನ್ನು ನೋಡುವ ಹೊಸ ಮಾರ್ಗವನ್ನು ವ್ಯಾಖ್ಯಾನಿಸುವ ಬಸವಣ್ಣನವರ ವಚನಗಳು ಇಂದಿಗೂ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ ಹಾಗೂ ಜನರಿಗೆ ಹೊಸ ಹುರುಪನ್ನು ನೀಡುತ್ತದೆ.

ಅನುಭವ ಮಂಟಪದ ಸ್ಥಾಪಕ: ಬಸವಣ್ಣನವರ ಅನುಭವ ಮಂಟಪ ಎನ್ನುವ ಅದ್ಭುತ ಪರಿಕಲ್ಪನೆ ನಿಜಕ್ಕೂ ಮಾದರಿಯುತವಾದದ್ದು, ಇದು ಎಲ್ಲಾ ವರ್ಗದವರನ್ನು ಒಂದೆಡೆ ತರುವ ಪ್ರಯತ್ನವಾಗಿತ್ತು. ಆ ಮೂಲಕ ಸಮಾಜದಲ್ಲಿ ಬೇರೂರಿದ್ದ ತಾರತಮ್ಯ, ಅಂದಶ್ರದ್ಧೆಯನ್ನು ದೂರ ಮಾಡುವ ಕಾರ್ಯಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಮೇಲೇರಲು ಸಮಾನ ಅವಕಾಶವನ್ನು ನೀಡಿದ ಬಸವಣ್ಣನವರ ತತ್ವಾದರ್ಶಗಳು ಇಂದಿಗೂ ಮಾದರಿ. ಹೀಗಾಗಿ ಮೇ 14 ರಂದು ಅವರ ನೆನಪಿಗಾಗಿ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ.

ಹೆಣ್ಣು ಮಕ್ಕಳಿಗೂ ಕೂಡ ಸಮಾನ ಶಿಕ್ಷಣ ನೀಡಬೇಕು ಎನ್ನುವ ಬಸವಣ್ಣನವರ ಈ ಪರಿಕಲ್ಪನೆ ಇಂದು ಹೆಣ್ಣು ಮಕ್ಕಳು ಸಾಧನೆಯತ್ತ ಮುಂದೆ ಸಾಗಲು ಸಹಾಯಕವಾಗಿದೆ. ಹೀಗಾಗಿ ವಿಶ್ವಗುರು ಬಸವಣ್ಣನವರು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ ಮತ್ತು ಅವರ ತತ್ವಾದರ್ಶಗಳು ಇಂದಿಗೂ ಯುವ ಪಿಳಿಗೆಗೆ ಸ್ಪೂರ್ತಿದಾಯಕವಾಗಿದೆ.

ಇದನ್ನೂ ಓದಿ:

Akshaya Tritiya 2021: ಅಕ್ಷಯ ತೃತೀಯ ಹಬ್ಬದ, ಮಹತ್ವ, ವಿಶೇಷತೆ ಮತ್ತು ಪೂಜಾ ವಿಧಾನ ಇಲ್ಲಿದೆ

Gold Silver Rate Today: ಅಕ್ಷಯ ತೃತೀಯದಂದು ಚಿನ್ನ ಕೊಳ್ಳಿರಿ; ಶುಭ ದಿನದಂದು ಚಿನ್ನ, ಬೆಳ್ಳಿ ದರ ಹೀಗಿದೆ!

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ