ಲಕ್ಷ್ಮೀ ಮಂತ್ರ ಪಠಿಣ ಮಾಡುವುದರಿಂದ ಯಾವ ರೀತಿಯ ಭೋಗ – ಭಾಗ್ಯಗಳು ಪ್ರಾಪ್ತಿಯಾಗುತ್ತೆ? 

ದೇವಿಯ ಆಶೀರ್ವಾದ ಪಡೆಯಬೇಕೆನ್ನುವವರು ಮೊದಲು ಆಕೆಯನ್ನು ಭಕ್ತಿ -ಭಾವದಿಂದ ಪೂಜಿಸಬೇಕಾಗುತ್ತದೆ. ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಅದೃಷ್ಟ ಮತ್ತು ಸಂಪತ್ತು ಸಿಗುತ್ತದೆ ಮತ್ತು ಭಕ್ತರಿಗೆ ಸಂತೋಷ ಮತ್ತು ಶಾಂತಿಯನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ. ನಿಮ್ಮ ಎಲ್ಲಾ ಋಣಭಾರಗಳು ಶೀಘ್ರದಲ್ಲೇ ತೀರಿಹೋಗಬೇಕು ಮತ್ತು ಶಾಂತಿ ಮತ್ತು ಸಮೃದ್ಧಿ ಬಯಸುವವರು ಈ ಶಕ್ತಿಯುತ ಮಂತ್ರಗಳನ್ನು ಪಠಿಸಿ.

ಲಕ್ಷ್ಮೀ ಮಂತ್ರ ಪಠಿಣ ಮಾಡುವುದರಿಂದ ಯಾವ ರೀತಿಯ ಭೋಗ - ಭಾಗ್ಯಗಳು ಪ್ರಾಪ್ತಿಯಾಗುತ್ತೆ? 
Edited By:

Updated on: Jan 16, 2024 | 4:27 PM

ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆರಾಧನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ದೇವಿಯ ಆಶೀರ್ವಾದ ಪಡೆಯಬೇಕೆನ್ನುವವರು ಮೊದಲು ಆಕೆಯನ್ನು ಭಕ್ತಿ -ಭಾವದಿಂದ ಪೂಜಿಸಬೇಕಾಗುತ್ತದೆ. ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಅದೃಷ್ಟ ಮತ್ತು ಸಂಪತ್ತು ಸಿಗುತ್ತದೆ ಮತ್ತು ಭಕ್ತರಿಗೆ ಸಂತೋಷ ಮತ್ತು ಶಾಂತಿಯನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ. ನಿಮ್ಮ ಎಲ್ಲಾ ಋಣಭಾರಗಳು ಶೀಘ್ರದಲ್ಲೇ ತೀರಿಹೋಗಬೇಕು ಮತ್ತು ಶಾಂತಿ ಮತ್ತು ಸಮೃದ್ಧಿ ಬಯಸುವವರು ಈ ಶಕ್ತಿಯುತ ಮಂತ್ರಗಳನ್ನು ಪಠಿಸಿ.

ಶಾಂತಿ, ಸಂಪತ್ತು ಮತ್ತು ಸಮೃದ್ಧಿಗಾಗಿ;

1. ಲಕ್ಷ್ಮೀ ಬೀಜ ಮಂತ್ರ:

– ಓಂ ಹ್ರೀಂ ಶ್ರೀಂ ಲಕ್ಷ್ಮೀಭಯೋ ನಮಃ

2. ಮಹಾಲಕ್ಷ್ಮೀ ಮಂತ್ರ:

-ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್,
ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೈ ನಮಃ
– ”ಓಂ ಮಹಾ ಲಕ್ಷ್ಮಯೈ ನಮೋ ನಮಃ”
– ”ಓಂ ವಿಷ್ಣು ಪ್ರಿಯಾಯೀ ನಮೋ ನಮಃ”
– ” ಓಂ ಧನ ಪ್ರದಾಯೀ ನಮೋ ನಮಃ”
– ”ಓಂ ವಿಶ್ವ ಜನನಯೀ ನಮೋ ನಮಃ”

3. ಲಕ್ಷ್ಮೀ ಗಾಯತ್ರಿ ಮಂತ್ರ

” ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ
ವಿಷ್ಣು ಪತ್ನ್ಯೈ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್‌ ಓಂ”

ಇದನ್ನೂ ಓದಿ: ಗಣೇಶನ ಪೂಜೆಗೆ ಯಾವ ವಸ್ತುಗಳನ್ನು ಅರ್ಪಿಸಬೇಕು, ಅರ್ಪಿಸಬಾರದು?

4. ಮಹಾಲಕ್ಷ್ಮೀ ಬೀಜ ಮಂತ್ರ

-ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ”

ಲಕ್ಷ್ಮೀ ಮಂತ್ರಗಳನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳೇನು?

1. ಈ ಮಂತ್ರಗಳನ್ನು ಪಠಿಸುವ ಮೂಲಕ ಜನರು ಸಮೃದ್ಧಿ, ಅದೃಷ್ಟ ಮತ್ತು ಸಂಪತ್ತನ್ನು ಪಡೆಯಬಹುದು.

2. ಶುಕ್ರವಾರ ಮತ್ತು ಮಂಗಳವಾರದ ಸಂಜೆ ಸಮಯದಲ್ಲಿ ಅಂದರೆ ಸೂರ್ಯ ಮುಳುಗುವ ವೇಳೆಯಲ್ಲಿ ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ, ಅಪೇಕ್ಷಿತ ಬಯಕೆಗಳು ಈಡೇರುತ್ತವೆ ಎನ್ನಲಾಗುತ್ತದೆ.

3. ಈ ಮಂತ್ರಗಳನ್ನು ಪಠಿಸುವ ಮೂಲಕ ಜನರು ಶಾಂತಿ, ಸಮೃದ್ಧಿಯನ್ನು ಕೂಡ ಪಡೆಯಬಹುದು.

4. ಈ ಮಂತ್ರಗಳನ್ನು ಅಪಾರ ಭಕ್ತಿಯಿಂದ ಪಠಿಸುವ ಭಕ್ತರು ಆರ್ಥಿಕ ಪ್ರಗತಿಯನ್ನು ಪಡೆಯುತ್ತಾರೆ ಎಂದು ಪುರಾಣಗಳು ಹೇಳುತ್ತದೆ.

5. ಯಾವುದೇ ಉದ್ಯೋಗವನ್ನು ಪಡೆಯಲು ಸಾಧ್ಯವಾಗದವರು, ಅಪೇಕ್ಷಿತ ಉದ್ಯೋಗವನ್ನು ಪಡೆಯಲು ಈ ಮಂತ್ರಗಳನ್ನು ಪಠಿಸಬೇಕು.

6. ಲಕ್ಷ್ಮೀ ದೇವಿಯು ಆಶೀರ್ವಾದ ಪಡೆಯಲು ಈ ಮಂತ್ರಗಳ ಪಠಣ ಮಾಡಿ.

ಲಕ್ಷ್ಮೀ ದೇವಿಗೆ ಈ ಮಂತ್ರ ಪ್ರಿಯವಾಗಿದ್ದು, ಇದನ್ನು ಪ್ರತಿನಿತ್ಯ ಪೂಜೆ ಮಾಡುವಾಗ ಪಠಣ ಮಾಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಬಹುದಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us