Faith is the rule of Vastu Shastra: ನಂಬಿಕೆಯೇ ವಾಸ್ತುಶಾಸ್ತ್ರಕ್ಕೆ ಬುನಾದಿ, ವಾಸ್ತು ಪದ್ಧತಿಯನ್ನು ಎಷ್ಟು ಬೇಕೋ ಅಷ್ಟು ನಂಬಬೇಕು!

ವಾಸ್ತುಶಾಸ್ತ್ರವು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿರಬಹುದೆಂದು ಭಾವಿಸಬಹುದಾದರೂ ಆ ಕಾಲದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವಷ್ಟು ಭೂಮಿ ಉದಾರವಾಗಿ ಸಿಗುತ್ತಿತ್ತು. ಹೇಗೆ ಬೇಕಾದರೂ ಮನೆ, ಅರಮನೆ, ಮಂದಿರ, ಮಹಾಮಂದಿರ ನಿರ್ಮಾಣ ಮಾಡಬಹುದಾಗಿತ್ತು. ಆದರೆ ಈಗಿನ ನಗರ, ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಮನೆಗಳಿರುವ ಈ ಕಾಲದಲ್ಲಿ ವಾಸ್ತುಶಾಸ್ತ್ರ ಸಂಪ್ರದಾಯವನ್ನು ಪರಿಪಾಲಿಸುವುದು ಅಸಿಧಾರಾ ವ್ರತದಂತೆಯೇ (ಖಡ್ಗದ ಅಲಗು) ಬಹಳ ಕಷ್ಟ..!

Faith is the rule of Vastu Shastra: ನಂಬಿಕೆಯೇ ವಾಸ್ತುಶಾಸ್ತ್ರಕ್ಕೆ ಬುನಾದಿ, ವಾಸ್ತು ಪದ್ಧತಿಯನ್ನು ಎಷ್ಟು ಬೇಕೋ ಅಷ್ಟು ನಂಬಬೇಕು!
ನಂಬಿಕೆಯೇ ವಾಸ್ತುಶಾಸ್ತ್ರಕ್ಕೆ ಬುನಾದಿ, ವಾಸ್ತು ಪದ್ಧತಿಯನ್ನು ಎಷ್ಟು ಬೇಕೋ ಅಷ್ಟು ನಂಬಬೇಕು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 27, 2022 | 6:06 AM

ನಂಬಿಕೆಯೇ ವಾಸ್ತುಶಾಸ್ತ್ರಕ್ಕೆ (Vastu Shastra) ಬುನಾದಿ. ವಾಸ್ತು ಪದ್ಧತಿಯನ್ನು ಎಷ್ಟು ಬೇಕೋ ಅಷ್ಟು ನಂಬಬೇಕು. ವಾಸ್ತುಶಾಸ್ತ್ರದಿಂದಲೇ ಎಲ್ಲವೂ ಅಲ್ಲ. ಹೀಗೆಂದಾಕ್ಷಣ ವಾಸ್ತುಶಾಸ್ತ್ರವನ್ನು ಸುಳ್ಳೆಂದಾಗಲೀ, ಆಧಾರರಹಿತವೆಂದಾಗಲೀ ಆಚರಣಾ ಯೋಗ್ಯವಲ್ಲವೆಂದಾಗಲೀ ಹೇಳುತ್ತಿಲ್ಲ. ಆದರೆ ಕುಟುಂಬದಲ್ಲಿ ನಡೆಯುವ ಪ್ರತಿಯೊಂದು ಆಗುಹೋಗುಗಳಿಗೂ ಮನೆಯ ವಾಸ್ತುವೇ ಕಾರಣವಾಗುವುದಿಲ್ಲ. ಅಡುಗೆಗೆ, ಊಟಕ್ಕೆ ಉಪ್ಪು ಅವಶ್ಯಕ. ಹಾಗಂತ ಉಪ್ಪೇ ಊಟವಾಗಲಾರದು ಅಲ್ಲವೇ..? ಇದೂ ಹಾಗೆ (Faith is the rule of Vastu Shastra).

ವಾಸ್ತುಶಾಸ್ತ್ರವು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿರಬಹುದೆಂದೇ ಭಾವಿಸಬಹುದಾದರೂ ಆ ಕಾಲಕ್ಕೆ ಭಾರತ ದೇಶದ ಹಾಗೂ ಪ್ರಪಂಚದ ಜನಸಂಖ್ಯೆ ಬಹು ಕಡಿಮೆ. ಆ ಕಾಲದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವಷ್ಟು ಭೂಮಿ ಉದಾರವಾಗಿ ಸಿಗುತ್ತಿತ್ತು. ಹೇಗೆ ಬೇಕಾದರೂ ಮನೆ, ಅರಮನೆ, ಮಂದಿರ, ಮಹಾಮಂದಿರಗಳನ್ನು ನಿರ್ಮಾಣ ಮಾಡಬಹುದಾಗಿತ್ತು. ಅತಿ ಜನಸಂಖ್ಯೆ ಇರುವ, ಜೊತೆಗೆ ಜನಸಾಂದ್ರತೆ ಹೆಚ್ಚಿರುವ ನಗರ, ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಮನೆಗಳಿರುವ ಈ ಕಾಲದಲ್ಲಿ ವಾಸ್ತುಶಾಸ್ತ್ರ ಸಂಪ್ರದಾಯವನ್ನು ಪರಿಪಾಲಿಸುವುದು ಅಸಿಧಾರಾ ವ್ರತದಂತೆಯೇ (ಖಡ್ಗದ ಅಲಗು) ಬಹಳ ಕಷ್ಟ..!

100 ವರ್ಷಗಳ ಹಿಂದೆ ವಾಸ್ತು ಪ್ರಭಾವ ಇಷ್ಟು ತೀವ್ರವಾಗಿರಲಿಲ್ಲ.

ನಾವು ಅನುಭವಿಸುವ ಕಷ್ಟನಷ್ಟಗಳೆಲ್ಲವೂ ನಾವು ನಮ್ಮ ಕೈಗಳಿಂದ ಮಾಡಿಕೊಂಡವೇ ! ನಮ್ಮ ಎಲ್ಲಾ ದುಃಖಗಳಿಗೆ ನಾವೇ ಕಾರಣರಾಗಿರುತ್ತೇವೆ. ನೀವು ಏಕಾಂತವಾಗಿದ್ದುಕೊಂಡು ಒಮ್ಮೆ ಯೋಚಿಸಿ ನೋಡಿರಿ. ನಮ್ಮ ಅಲಸ್ಯಕ್ಕೆ, ನಮ್ಮ ಅಸಮರ್ಥತೆಗೆ, ನಮ್ಮ ಅವಿವೇಕಕ್ಕೆ, ನಮ್ಮ ದುಡುಕುತನಕ್ಕೆ, ನಮ್ಮ ಆತ್ಯಾಸೆಗೆ, ನಮ್ಮ ಅತಿ ನಂಬಿಕೆಗೆ, ನಮ್ಮ ಬೇಜವಾಬ್ದಾರಿತನಕ್ಕೆ, ನಮ್ಮ ವ್ಯಸನಕ್ಕೆ ವಾಸ್ತುಶಾಸ್ತ್ರವು ಕಾರಣವಾಗಿರುವುದಿಲ್ಲ. ಮೋಟರ್‌ ಸೈಕಲ್ ನಡೆಸುವವನಿಗೆ ಆಕ್ಸಿಡೆಂಟ್‌ಗಳು ಸಹಜ. ರಾಜಕಾರಣಿಗಳಿಗೆ ಸೋಲು ಸಹಜ. ವ್ಯಾಪಾರಸ್ತರಿಗೆ ನಷ್ಟ ಸಹಜ. ತಿಂಗಳಿಗೊಮ್ಮೆ ಅಮಾವಾಸ್ಯೆ, ಹುಣ್ಣಿಮೆ ಸಹಜವಲ್ಲವೇ! ಜೀವನವೂ ಅಷ್ಟೇ ಏರುಪೇರುಗಳಿದ್ದದ್ದೇ.

ಜೀವನದಲ್ಲಿ ಸುಖವೊಂದೇ ಇರುವುದಿಲ್ಲ. ದುಃಖವೂ ಇರುತ್ತದೆ. ನಾವು ಕೃಷಿಯನ್ನು ಅಂದರೆ ಕಾಯಕವನ್ನು ನಂಬಬೇಕು. ನಮ್ಮ ತಪ್ಪುಗಳನ್ನು ಸರಿಮಾಡಿಕೊಳ್ಳಬೇಕು. ವಿಮರ್ಶೆಗಳನ್ನು ಗೌರವಿಸಬೇಕು. ತಪ್ಪುಗಳನ್ನು ಅಂಗೀಕರಿಸಬೇಕು. ಹೊಗಳಿಕೆಗೆ ದೂರವಿರಬೇಕು. ವ್ಯಸನಗಳನ್ನು ಮರೆಯಬೇಕು. ನಮ್ಮ ಕೆಲಸವನ್ನು ದೇವರಂತೇ ನಾವು ಗೌರವಿಸಿ ಪೂಜಿಸಬೇಕು. ಆಗ ಬೇಡ ಬೇಡವೆಂದರೂ ವಿಜಯಲಕ್ಷ್ಮಿ, ನಮ್ಮ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಾಳೆ.

“ವಾಸ್ತು ಆಸ್ತಿಯನ್ನು ಬೆಳೆಸುವುದಿಲ್ಲ, ವಾಸ್ತು ಹಣೆಯ ಬರಹವನ್ನು ಪೂರ್ಣ ಬದಲಾಯಿಸುವುದಿಲ್ಲ.”

ಸ್ವಾಮೀ ! ಸರಿಯಿಲ್ಲದ್ದು ನಮ್ಮ ಮನೆಯ ವಾಸ್ತು ಅಲ್ಲ! ನಮ್ಮ ಬುದ್ಧಿಗಳು, ನಮ್ಮ ಆಲೋಚನೆಗಳು, ನಮ್ಮ ನಡವಳಿಕೆಗಳು ಸರಿಯಾಗಿಲ್ಲ. ಲೋಪವೆಲ್ಲಿದೆಯೋ ಹುಡುಕೋಣ! ದಿಢೀರನೇ ಶ್ರೀಮಂತನಾಗಬೇಕೆಂಬ ದುರಾಸೆಯನ್ನು ಬಿಡೋಣ, ಆಕಾಶವನ್ನು ನೋಡುತ್ತಾ ನಡೆಯುವುದನ್ನು ನಿಲ್ಲಿಸೋಣ, ಹತ್ತಿರವಾಗುತ್ತದೆಂದು ಅಡ್ಡದಾರಿಯಲ್ಲಿ ಓಡುವುದನ್ನು ಬಿಡೋಣ!

ಕನಸು ಕಾಣುವುದು ಬೇಡ! ಕನಸಿನ ಜೊತೆಗೆ ಕರ್ತವ್ಯವನ್ನು ಬಿಡುವುದು ಬೇಡ!

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವೆಂಬ ನಾಲ್ಕು ದಿಕ್ಕುಗಳು ; ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯವೆಂಬ ನಾಲ್ಕು ಉಪದಿಕ್ಕುಗಳು. ಒಟ್ಟು ಎಂಟು ದಿಕ್ಕುಗಳು! ಆಗ್ನೇಯದಲ್ಲಿ ಅಡುಗೆ, ನೈರುತ್ಯದಲ್ಲಿ ನಿದ್ದೆ, ವಾಯುವ್ಯದಲ್ಲಿ ಸಂಪತ್ತು, ಈಶಾನ್ಯದಲ್ಲಿ ಪೂಜೆ, ನೈರುತ್ಯದಲ್ಲಿ ಭಾರ, ಈಶಾನ್ಯದಲ್ಲಿ ಹಗುರ ಇಷ್ಟು ಮಾತ್ರ ಆಚರಿಸಿದರೆ ಸಾಕು. ನಮ್ಮ ವೈಯಕ್ತಿಕ ಲೋಪದೋಷಗಳಿಗೆ ವಾಸ್ತುವನ್ನು ಬಾಧ್ಯತೆಯನ್ನಾಗಿ ಮಾಡುವುದಲ್ಲ.

ಒಬ್ಬ ಮನುಷ್ಯ ಒಂದು ಮನೆಯಲ್ಲಿ ವಾಸವಾಗಿರುತ್ತ ಏಳೆಂಟು ವರ್ಷಗಳಾಗಿವೆ ಅಂದುಕೊಳ್ಳೋಣ. ಅಲ್ಲಿಯವರೆಗೂ ಆ ಮನೆಯಲ್ಲಿ ಚೆನ್ನಾಗಿದ್ದ ಮನುಷ್ಯ ಯಾವಾಗ ವಾಸ್ತುಗೆ ಶರಣಾಗುತ್ತಾನೆಂದರೆ ಆತನಿಗೆ ಯಾವುದೋ ಒಂದು ರೀತಿಯ ಕಷ್ಟನಷ್ಟ ಬರಬೇಕು, ಊಹಿಸದ ರೀತಿಯ ಪರಿಣಾಮಗಳಾಗಿರಬೇಕು, ವ್ಯಾಪಾರ ಮಾರ್ಗದಲ್ಲಿ ಆಕಸ್ಮಿಕ ನಷ್ಟ ಬರಬೇಕು.. ಅಂತಹ ಸಮಯದಲ್ಲೇ ವಾಸ್ತುಗೆ ಶರಣಾಗುತ್ತಾನೆ. ಹಾಗಾದರೆ ಚೆನ್ನಾಗಿದ್ದ ಈ ಏಳೆಂಟು ವರ್ಷಗಳಲ್ಲಿ ಆ ಮನೆಯ ವಾಸ್ತು ಚೆನ್ನಾಗಿಯೇ ಇರಲಿಲ್ಲವೇ? ಎಲ್ಲಿ ಹೋಯಿತು ಅದರ ಪ್ರಭಾವ..!?

ವಾಸ್ತು ಶಾಸ್ತ್ರವನ್ನು ಅತಿಯಾಗಿ ನಂಬುವವರು ರಾಜಕೀಯದವರು, ವ್ಯಾಪಾರೀ ವರ್ಗದವರು, ಅಧಿಕಾರೀ ವರ್ಗದವರು ಮಾತ್ರ. ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದವರು ಇದನ್ನು ಅಷ್ಟಾಗಿ ನಂಬುವುದಿಲ್ಲ. ನೌಕರಿದಾರರು ಹೆಚ್ಚಾಗಲ್ಲದಿದ್ದರೂ ಈಗೀಗ ಅಷ್ಟಿಷ್ಟು ಗಮನ ಕೊಡುತ್ತಿದ್ದಾರೆ. ವಾಸ್ತು ಪದ್ಧತಿಯನ್ನು ಪಾಲಿಸಬಾರದೆಂದು ಇಲ್ಲಿ ಅಭಿಪ್ರಾಯವಲ್ಲ. ಎಷ್ಟು ಬೇಕೋ ಅಷ್ಟು, ಹಿತಮಿತವಾಗಿದ್ದರೆ ಎಲ್ಲರಿಗೂ ಒಳ್ಳೆಯದು. ವಾಸ್ತುನಿಂದಲೇ ಎಲ್ಲವೂ ನಡೆಯುವುದಿಲ್ಲ. (ಬರಹದ ಮೂಲ -ಸದ್ವಿಚಾರ ತರಂಗಿಣಿ)

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ