Garuda Purana: ಈ ಐದು ಸೂತ್ರಗಳನ್ನು ನೆನಪಿಟ್ಟುಕೊಂಡರೆ ಯಶಸ್ಸು ನಿಮ್ಮ ನೆರಳಂತೆ ಜತೆಗೆ ಬರುತ್ತದೆ

ಗರುಡ ಪುರಾಣದ ಈ 5 ವಿಷಯಗಳನ್ನು ನೀವು ಅರ್ಥಮಾಡಿಕೊಂಡರೆ, ನಿಮ್ಮನ್ನು ಯಶಸ್ವಿಯಾಗದಂತೆ ಯಾರೂ ತಡೆಯಲು ಸಾಧ್ಯವಿಲ್ಲ. ಗರುಡ ಪುರಾಣದಲ್ಲಿ, ಇಂತಹ ಅನೇಕ ವಿಷಯಗಳನ್ನು ವ್ಯಕ್ತಿಗೆ ಹೇಳಲಾಗಿದೆ, ಅದರ ಮೂಲಕ ಜೀವನ ನಿರ್ವಹಣೆಯ ತಂತ್ರಗಳನ್ನು ಕಲಿಯಬಹುದು. ನಿಮ್ಮ ಯಶಸ್ಸಿಗೆ ಸಹಾಯಕವಾಗುವ ವಿಷಯಗಳ ಬಗ್ಗೆ ಇಲ್ಲಿ ತಿಳಿಯಿರಿ. ಗರುಡ ಪುರಾಣ: ಗರುಡ ಪುರಾಣದ ಈ 5 ವಿಷಯಗಳನ್ನು ನೀವು ಅರ್ಥಮಾಡಿಕೊಂಡರೆ, ನಿಮ್ಮನ್ನು ಯಶಸ್ವಿಯಾಗದಂತೆ ಯಾರೂ ತಡೆಯಲು ಸಾಧ್ಯವಿಲ್ಲ.

Garuda Purana: ಈ ಐದು ಸೂತ್ರಗಳನ್ನು ನೆನಪಿಟ್ಟುಕೊಂಡರೆ ಯಶಸ್ಸು ನಿಮ್ಮ ನೆರಳಂತೆ ಜತೆಗೆ ಬರುತ್ತದೆ
ಗರುಡ ಪುರಾಣ
Follow us
TV9 Web
| Updated By: ಆಯೇಷಾ ಬಾನು

Updated on: Sep 14, 2021 | 7:00 AM

ಸನಾತನ ಧರ್ಮದಲ್ಲಿ ವೇದಗಳು ಮತ್ತು ಪುರಾಣಗಳಿಗೆ ಬಹುದೊಡ್ಡ ಸ್ಥಾನವನ್ನು ನೀಡಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಬರೆದಿರುವ ಎಲ್ಲಾ ವಿಚಾರಗಳೂ ಮಾನವ ಕುಲದ ಕಲ್ಯಾಣಕ್ಕಾಗಿ ಸಾಕಷ್ಟು ಮಾರ್ಗಗಗಳನ್ನು ವಿವರಿಸುತ್ತವೆ. ಈ ಧರ್ಮಗ್ರಂಥ, ಪುರಾಣಗಳ ಪೈಕಿ ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹಾಪುರಾಣ ಎಂಬ ಪಟ್ಟವನ್ನು ನೀಡಲಾಗಿದೆ. ಅದರಲ್ಲಿ ಹೇಳಲಾದ ಎಲ್ಲಾ ವಿಷಯಗಳನ್ನು ವಿಷ್ಣುವು ಸ್ವತಃ ತನ್ನ ವಾಹನ ಗರುಡನಿಗೆ ಹೇಳಿದ್ದಾನೆ ಎಂದು ನಂಬಲಾಗಿದೆ. ಆದರೆ, ಗರುಡ ಪುರಾಣದಲ್ಲಿ ಸ್ವರ್ಗ-ನರಕ ಮತ್ತು ಮರಣಾನಂತರದ ಪರಿಸ್ಥಿತಿಗಳನ್ನು ಮಾತ್ರ ಹೇಳಲಾಗಿದೆ ಎಂದು ಇಂದಿಗೂ ಅನೇಕ ಜನ ಭಾವಿಸಿದ್ದಾರೆ. ಗರುಡ ಪುರಾಣ ಓದುವುದಕ್ಕೂ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿಕೊಂಡಿದ್ದಾರೆ. ವಾಸ್ತವವಾಗಿ ಗರುಡ ಪುರಾಣ ಮರಣಾ ನಂತರದ ವಿಷಯಗಳಿಗೆ ಮಾತ್ರ ಸೀಮಿತ ಸಲ್ಲ. ಬದುಕಿಗೆ ಪೂರಕವಾದ ಅನೇಕ ವಿಷಯಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇಂದಿನ ಲೇಖನದಲ್ಲಿ ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ 5 ಯಶಸ್ಸಿನ ಮಂತ್ರಗಳು ಯಾವುವು ಎಂದು ನೋಡೋಣ.

1. ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿ ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಎನ್ನುವುದನ್ನು ಹೇಳಲಾಗಿದೆ. ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುವುದಕ್ಕೆ ಅದು ಹಾದಿಯಾಗುತ್ತದೆ ಎಂದು ಎಚ್ಚರಿಸಲಾಗಿದೆ. ನಾವು ಈ ಹೇಳಿಕೆಯನ್ನು ವೈಜ್ಞಾನಿಕವಾಗಿ ನೋಡಿದರೂ ಸದರಿ ವಿಷಯವನ್ನು ಸಂಪೂರ್ಣ ಒಪ್ಪಿಕೊಳ್ಳಬಹುದು. ಏಕೆಂದರೆ ಕೊಳಕು ಅಥವಾ ಅಶುಚಿತ್ವದ ನಡುವೆ ವಾಸಿಸುವರಿಗೆ ಆರೋಗ್ಯ ಸಮಸ್ಯೆ ಎಂದಿಗೂ ಕಾಡುತ್ತದೆ. ರೋಗಿಷ್ಠ ವ್ಯಕ್ತಿಯು ಎಂದಿಗೂ ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯವಿಲ್ಲ. ಯಾವ ಕೆಲಸವನ್ನೂ ಸರಿಯಾಗಿ ಮಾಡದಿದ್ದರೆ ಯಶಸ್ಸನ್ನು ಎಂದಿಗೂ ಸಾಧಿಸಲಾಗುವುದಿಲ್ಲ. ಅಲ್ಲದೇ ರೋಗದಿಂದ ಗುಣಮುಖರಾಗಲು ಔಷಧ, ವೈದ್ಯಕೀಯ ಚಿಕಿತ್ಸೆಯ ಮೊರೆ ಹೋದಾಗ ಸಹಜವಾಗಿ ಹಣ ಖರ್ಚಾಗುತ್ತದೆ ಅಂದರೆ ಆರ್ಥಿಕ ನಷ್ಟ ಉಂಟಾಗುತ್ತದೆ.

2. ನಿಮ್ಮನ್ನು ದ್ವೇಷಿಸುವವರಿಂದ ಯಾವಾಗಲೂ ದೂರವಿರಿ ಮತ್ತು ಜಾಗರೂಕರಾಗಿರಿ ಎಂದು ಗರುಡ ಪುರಾಣದಲ್ಲಿ ಪ್ರತಿಯೊಬ್ಬರಿಗೂ ಕಿವಿಮಾತು ಹೇಳಲಾಗಿದೆ. ದ್ವೇಷ, ಅಸೂಯೆಯ ಜನರು ನಿಮ್ಮ ಯಶಸ್ಸಿನಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ದ್ವೇಷಿಸುವವರು ಯಾವಾಗಲೂ ನಿಮ್ಮ ಶತ್ರುಗಳಾಗಿಯೇ ಇರಬೇಕು ಎನ್ನುವುದು ಅನಿವಾರ್ಯ ಅಲ್ಲವಾದರೂ ಅವರಿಂದ ಅಂತರ ಕಾಪಾಡಿಕೊಳ್ಳುವುದು ಉತ್ತಮ ಎಂದು ಹೇಳಲಾಗಿದೆ.

3. ಯಶಸ್ಸಿನ ಮೂರನೇ ಸೂತ್ರವೆಂದರೆ ಅಭ್ಯಾಸ. ನೀವು ಏನನ್ನಾದರೂ ಸಾಧಿಸಬೇಕಾದರೆ ಮೊದಲು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು. ಯಾವುದೇ ವ್ಯಕ್ತಿಯು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಏನನ್ನಾದರೂ ಸಾಧಿಸಲು ಪ್ರಯತ್ನಿಸಿದರೆ ಅವನು ತನ್ನ ದುರಾದೃಷ್ಟವನ್ನು ಕೂಡಾ ತನಗೆ ಬೇಕಾದಂತೆ ಒಳ್ಳೆಯ ರೀತಿಯಲ್ಲಿ ಬದಲಿಸಿಕೊಳ್ಳಬಹುದು. ಆದರೆ, ಯಶಸ್ಸು ಲಭ್ಯವಾಗಬೇಕೆಂದರೆ ಒಂದು ವಿಷಯವನ್ನು ನಿರಂತರವಾಗಿ ಅಭ್ಯಾಸ ಮಾಡಲೇಬೇಕು. ಅಭ್ಯಾಸವು ಕೆಲಸದಲ್ಲಿ ದಕ್ಷತೆಯನ್ನು ತರುತ್ತದೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

4. ಪ್ರತಿಯೊಬ್ಬ ವ್ಯಕ್ತಿಯು ಜೀರ್ಣವಾಗುವ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು ಎನ್ನುವುದು ನಾಲ್ಕನೇ ಸಲಹೆ. ಏಕೆಂದರೆ ಆಹಾರವು ದೇಹಕ್ಕೆ ಶಕ್ತಿಯನ್ನು ನೀಡಲು ಹೇಗೆ ಮುಖ್ಯ ಕಾರಣವೋ ಹಾಗೆಯೇ ರೋಗಗಳಿಗೆ ಕೂಡಾ ಮೂಲ ಎಂಬ ಮಾತಿದೆ. ನೀವು ಮಿತವಾಗಿ ಆಹಾರವನ್ನು ಸೇವಿಸದಿದ್ದರೆ ಎಲ್ಲಾ ರೋಗಗಳು ನಿಮ್ಮನ್ನು ಸುತ್ತುವರಿಯುತ್ತವೆ ಮತ್ತು ಈ ರೋಗಗಳು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತವೆ. ಆದ್ದರಿಂದ, ನೀವು ಯಶಸ್ವಿಯಾಗಲು ಬಯಸಿದರೆ, ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಿ ಮತ್ತು ಮಿತವಾಗಿ ತಿನ್ನಿರಿ ಎನ್ನುವ ಸಲಹೆ ಗರುಡ ಪುರಾಣದಲ್ಲಿದೆ.

5. ಧರ್ಮವು ಒಬ್ಬ ವ್ಯಕ್ತಿಯನ್ನು ಸಂಯಮದಿಂದ ಬದುಕಲು ಕಲಿಸುತ್ತದೆ. ನೀವು ಯಶಸ್ವಿಯಾಗಲು ಮತ್ತು ಹೆಚ್ಚಿನ ಗೌರವವನ್ನು ಗಳಿಸಲು ಬಯಸಿದರೆ ನೀವು ಯಾವಾಗಲೂ ಧರ್ಮದ ಮಾರ್ಗವನ್ನು ಅನುಸರಿಸಬೇಕು. ಅದು ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ರಾಜಮಾರ್ಗವಾಗುತ್ತದೆ. ಧರ್ಮವನ್ನು ಅವಮಾನಿಸುವ ಜನರು ಜೀವನದಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಎಂದಿಗೂ ಮರೆಯಬೇಡಿ ಎಂಬುದಾಗಿ ಗರುಡ ಪುರಾಣ ಎಚ್ಚರಿಸುತ್ತದೆ.

ಇದನ್ನೂ ಓದಿ: Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ 

Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ