Gau Pooja: ಗೋ ಪೂಜೆಯ ಮಹತ್ವ ಮತ್ತು ಅದರ ವೈಶಿಷ್ಟತೆ ಏನು?
Gau Mata: ದಾನಗಳಲ್ಲಿ ಶ್ರೇಷ್ಟವಾದ ದಾನ ಗೋ ದಾನ. ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ನಾವು ಮೊದಲು ಗೋವು ಮತ್ತು ಅದರ ಕರುವನ್ನು ಮನೆಗೆ ಪ್ರವೇಶ ಮಾಡಿಸುತ್ತೇವೆ. ಹೊಸ ಮನೆ ಸಂಪತ್ತು, ಸಮೃದ್ಧಿಯಿಂದ ಕೂಡಿರಲಿ ಎಂದು ಮನೆಯೊಳಗೆ ಗೋವಿನ ಕೆಚ್ಚಲಿಂದ ಹಾಲು ಹಿಂಡುತ್ತೇವೆ.
ಹಿಂದೂಗಳು ವೇದಕಾಲದಿಂದಲೂ ಹಸುವನ್ನು (Cow) ದೇವತಾಸ್ವರೂಪದಿಂದ ಕಾಣುತ್ತಿದ್ದಾರೆ. ಭಾರತೀಯ ಶಕ್ತಿ, ಭಾರತೀಯ ಸಂಪತ್ತು, ಭಾರತೀಯರ ಸರ್ವಸ್ವವೂ ಗೋಮಾತೆಯೇ (Gau Mata) ಆಗಿದೆ. ವರುಣಶ್ಚೈವ ಗೋಮೂತ್ರೇ ಗೋಮಯೇ ಹವ್ಯವಾಹನಃ | ದಧೇ ವಾಯುಃ ಸಮುದ್ದಿಷ್ಟಃ ಸೋಮಃಕ್ಷೀರೇ ಘೃತೇ ರವಿಃ || ಪರಾಶರ ಸ್ಮೃತಿ: 21-33
ಗೋ ಮೂತ್ರದಲ್ಲಿ ವರುಣ ದೇವರು, ಗೋಮಯದಲ್ಲಿ (ಸಗಣಿ) ಅಗ್ನಿ ದೇವನು, ಮೊಸರಿನಲ್ಲಿ ವಾಯು ದೇವನು, ಗೋವಿನ ಹಾಲಿನಲ್ಲಿ ಚಂದ್ರನು, ತುಪ್ಪದಲ್ಲಿ ಸೂರ್ಯ ದೇವನು ಇದ್ದಾರೆ. ಗೋಮಾತೆಯ ಒಂದೊಂದು ಅವಯವದಲ್ಲಿ ಒಂದೊಂದು ದೇವತೆ ಇದ್ದಾರೆಂದು ವೇದಗಳು ಹೇಳುತ್ತವೆ. ಒಂದು ಸಲ ಗೋಮಾತೆಯ ಪ್ರದಕ್ಷಿಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುತ್ತದೆ. ಪ್ರತಿ ದಿನವೂ ಗೋ ಮಾತೆಯನ್ನು ಪೂಜಿಸುವವರಿಗೆ ಲಕ್ಷ್ಮೀಕಟಾಕ್ಷ ಸಿದ್ಧಿಸುತ್ತದೆ. ಆಕಳುಗಳನ್ನು ಸಾಕುವವರಿಗೆ ಆಯುಷ್ಯ ಜಾಸ್ತಿ ಇರುತ್ತದೆಂದು ಹೇಳುತ್ತಾರೆ. ಆಕಳ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ತಿನ್ನುವವರು ಆರೋಗ್ಯವಂತರಾಗಿದ್ದು ಹೆಚ್ಚಿನ ಕಾಲ ಜೀವಿಸುತ್ತಾರೆಂದು ಪರಿಶೋಧಿಸಿದ್ದಾರೆ (Gau Pooja).
ದಾನಗಳಲ್ಲಿ ಶ್ರೇಷ್ಟವಾದ ದಾನ ಗೋ ದಾನ. ನೂತನ ಗೃಹ ಪ್ರವೇಶದ ಸಂದರ್ಭದಲ್ಲಿ ನಾವು ಮೊದಲು ಗೋವು ಮತ್ತು ಅದರ ಕರುವನ್ನು ಮನೆಗೆ ಪ್ರವೇಶ ಮಾಡಿಸುತ್ತೇವೆ. ಹೊಸ ಮನೆ ಸಂಪತ್ತು, ಸಮೃದ್ಧಿಯಿಂದ ಕೂಡಿರಲಿ ಎಂದು ಮನೆಯೊಳಗೆ ಗೋವಿನ ಕೆಚ್ಚಲಿಂದ ಹಾಲು ಹಿಂಡುತ್ತೇವೆ. ಗೋಮೂತ್ರದಲ್ಲಿ ಗೋಮಯದಲ್ಲಿ ರೋಗನಿರೋಧಕ ಶಕ್ತಿ ಇದೆ. ಗೋಮೂತ್ರದಿಂದ ಕೆಲವು ರೋಗಗಳಿಗೆ ಔಷಧವನ್ನೂ ಕಂಡುಹಿಡಿದಿದ್ದಾರೆ.
ಈಗಿನ ಕಾಲಕ್ಕೆ ಎಷ್ಟು ಲಕ್ಷಗಳ, ಎಷ್ಟು ಕೋಟಿಗಳ ರೂಪಾಯಿಗಳಿದ್ದರೆ ಅಷ್ಟು ಶ್ರೀಮಂತನೆಂದು ಭಾವಿಸುತ್ತೇವೆಯೋ ಹಾಗೆ ಪೂರ್ವಕಾಲದಲ್ಲಿ ಎಷ್ಟು ಗೋವುಗಳ ಸಂಖ್ಯೆಯಿದ್ದರೆ ಅಷ್ಟು ಶ್ರೀಮಂತನೆಂದು ಭಾವಿಸುತ್ತಿದ್ದರು. ಒಬ್ಬೊಬ್ಬರಿಗೆ ನೂರು, ಸಾವಿರ, ಹತ್ತು ಸಾವಿರ ಸಂಖ್ಯೆಯ ಗೋವುಗಳಿರುತ್ತಿದ್ದವು. ವ್ಯವಸಾಯದಂತೆ ಹೈನುಗಾರಿಕೆಯೂ ಮುಖ್ಯ ಕಸುಬಾಗಿತ್ತು. ಈಗ ಭೂಸ್ವಾಮಿಗಳಿಗೆ ಮನ್ನಣೆಯಿದ್ದರೆ ಆಗ ಗೋಸ್ವಾಮಿಗಳಿಗೆ ಮನ್ನಣೆ ಇತ್ತು!
ಶ್ರೀ ವಿಷ್ಣುವನ್ನು “ಗೋವಿಂದ” ಅನ್ನುತ್ತಾರೆ. ಶ್ರೀ ಕೃಷ್ಣನನ್ನು “ಗೋಪಾಲ” ಅನ್ನುತ್ತಾರೆ.
ಪೂರ್ವಕಾಲದಲ್ಲಿ ಎಂಥಾ ಬಡವನಿಗಾದರೂ ನಾಲ್ಕೈದು ಹಸುಗಳು ಮನೆಯ ಮುಂದೆ ಇರುತ್ತಿದ್ದವು. ಚಿಕ್ಕಮಕ್ಕಳು ಬೆಳಿಗ್ಗೆ ಆಕಳ ಹಾಲನ್ನು ಕುಡಿಯುತ್ತಿದ್ದವು. ಆಗಿನ ಕಾಲದ ಗೃಹಿಣಿಯರು ಮಹಾ ಸಂತಾನವತಿಯರಾಗಿದ್ದರು. ಹತ್ತರಿಂದ ಹದಿನಾರು ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಆದರೆ ಮಕ್ಕಳಿಗೆ ಸಾಕಾಗುವಷ್ಟು ಎದೆ ಹಾಲು ಸಿಗುತ್ತಿರಲಿಲ್ಲ. ಆಕಳ ಹಾಲು ಕುಡಿಸಿ ಬೆಳೆಸುತ್ತಿದ್ದರು. ಈ ಕಾರಣದಿಂದಲೇ ‘ಗೋಮಾತೆ’ ಎನ್ನುವ ಸಂಪ್ರದಾಯವು ಬಂದಿದೆ. ಚಿಕ್ಕವಯಸ್ಸಿನ ಮಕ್ಕಳಿಗೆ ನಾವು ಆಕಳು ಹಾಲು ಕುಡಿಸಿದರೆ ರೋಗನಿರೋಧಕ ಶಕ್ತಿ ಬೆಳೆದು ರೋಗಗಳು ಹತ್ತಿರ ಸುಳಿಯುವುದಿಲ್ಲ. ದೇಶೀಯ ಆಕಳು ಹೆಚ್ಚಿನ ಹಾಲು ಕೊಡುವುದಿಲ್ಲ ಎಂಬ ಕಾರಣಗಳಿಂದ ಈಗ ಯಾರೂ ಹಸುಗಳನ್ನು ಸಾಕುತ್ತಿಲ್ಲ. ಎಲ್ಲಾ ವ್ಯಾಪಾರ ಪ್ರಪಂಚವಾಗಿಬಿಟ್ಟಿದೆ.
ನಮ್ಮ ಪೂರ್ವಜರನ್ನು ಸಾಕಿ ಸಲುಹಿದ ಗೋಸಂತತಿಯನ್ನು ನಾವು ಗೌರವಿಸಿ ಉಳಿಸಿಕೊಳ್ಳಬೇಕು. ಟ್ರಾಕ್ಟರ್‌ಗಳು ಬರುವುದಕ್ಕೆ ಮುಂಚಿತದಲ್ಲಿ ನಮ್ಮನ್ನು ಸಾಕಿ ಸಲುಹಿ, ಭೂಮಿ ಉಳಲು, ಬೇಸಾಯಕ್ಕೆ ಎತ್ತುಗಳನ್ನು ಕೊಡುತ್ತಿದ್ದ ಗೋ ಮಾತೆಗೆ ಗೋಸಂತತಿಗೆ ನಾವು ಏನು ಕೊಟ್ಟರೂ ಋಣ ತೀರದು.
ಗೋವಿಗೆ ಸಂಬಂಧಿಸಿದ ಈ ಕೆಳಗಿನ ಪದ, ಪದಪುಂಜಗಳು ಸುಮ್ಮನೇ ಬಂದಿಲ್ಲ. ಇವು ನಮ್ಮ ಪೂರ್ವಜರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದವು. ೧. ಗೋವಿಂದ ೨. ಗೋಪಾಲ ೩. ಗೋವರ್ಧನ ೪. ಗೋಸ್ವಾಮಿ ೫. ಗೋಸಾಯಿ ೬. ಗೋಕರ್ಣ ೭. ಗೋಕ್ಷೀರ ೮. ಗೋಮಾತಾ ೯. ಗೋಮಾತೆ ೧೦. ಗೋಮತಿ ೧೧. ಗೋಮುಖ ೧೨. ಗೋಮಯ ೧೩. ಗೋರಖನಾಥ ೧೪. ಗೋರಕ್ಷ ೧೫. ಗೋತ್ರ ೧೬. ಗೋಮೂತ್ರ ೧೭. ಗೋಪ್ರಿಯ ೧೮. ಗೋಧೂಳಿ ೧೯. ಗೋಕುಲ ೨೦. ಗೋವಿನಜೋಳ ೨೧. ಗೋಗ್ರಾಸ ೨೨. ಗೋಮಾಳ ೨೩. ಗೋಶಾಲೆ ೨೪. ಗೋಪೂಜೆ ೨೫. ಗೋಪಾದ ೨೬. ಗೋಪಾಲಕ ೨೭. ಗೋಪಿಚಂದನ ೨೮. ಗೋಪಿಲೋಲ ೨೯. ಗೋಪಬಾಲ ೩೦. ಗೋ ಅರ್ಕ ೩೧. ಗೋದಲಿ ೩೨. ಗೋವಳ ೩೩. ಗೋಕುಲನಂದನ ೩೪. ಗೋದಾವರಿ ೩೫. ಗೋದಾನ ೩೬. ಗೋಮುಖವ್ಯಾಘ್ರ ೩೭. ಗೋರಖಪುರ ೩೮. ಗೋಮ ೩೯. ಗೋಸಂರಕ್ಷಕ ೪೦. ಗೋಸಂತತಿ ೪೧. ಗೋರಾಂಜನ ೪೨. ಗೋಗರ್ಭ ೪೩. ಗೋಪುರ ೪೪. ಗೋಕುಲದಾಸ ೪೫. ಗೋಗ್ರಹಣ (ಸಂಗ್ರಹ : ಸದ್ವಿಚಾರ ತರಂಗಿಣಿ)