ಸಂತೋಷದ ವೈವಾಹಿಕ ಜೀವನ: ಹೆಂಡತಿಯ ಈ ಅಭ್ಯಾಸಗಳು ಪತಿಯ ಪ್ರಗತಿಗೆ ಅಡ್ಡಗಾಲು!

Chanakya Niti: ಚಾಣಕ್ಯನ ಪ್ರಕಾರ, ಅನೇಕ ಬಾರಿ ಮಹಿಳೆಯರು ತಮ್ಮ ಗಂಡನ ವೈಯಕ್ತಿಕ ಜೀವನವನ್ನು ತೀಕ್ಷಣವಾಗಿ/ಅತಿಯಾಗಿ ನೋಡುತ್ತಾರೆ. ಇದರಿಂದಾಗಿ ಅವರ ಸಂಬಂಧವು ಶೀಘ್ರವೇ ಮುರಿಯುವ ಅಂಚಿಗೆ ಬರುತ್ತದೆ. ನಿಮಗೂ ತಿಳಿಯಬೇಕಾದರೆ ನಿಮ್ಮ ಗಂಡನ ಮನಸ್ಥಿತಿ ಮತ್ತು ವಾತಾವರಣ ಎರಡನ್ನೂ ಗಮನಿಸಿ ನಂತರ ಆರಾಮವಾಗಿ ಕೇಳಿ.

ಸಂತೋಷದ ವೈವಾಹಿಕ ಜೀವನ: ಹೆಂಡತಿಯ ಈ ಅಭ್ಯಾಸಗಳು ಪತಿಯ ಪ್ರಗತಿಗೆ ಅಡ್ಡಗಾಲು!
ಹೆಂಡತಿಯ ಈ ಅಭ್ಯಾಸಗಳು ಪತಿಯ ಪ್ರಗತಿಗೆ ಅಡ್ಡಗಾಲು!
Follow us
ಸಾಧು ಶ್ರೀನಾಥ್​
|

Updated on: Jul 05, 2024 | 6:06 AM

ಚಾಣಕ್ಯ ನೀತಿ: ವೈವಾಹಿಕ ಜೀವನದಲ್ಲಿ ಸಂತೋಷವನ್ನು (Happy Married Life) ಕಾಪಾಡಿಕೊಳ್ಳಲು, ಗಂಡ ಮತ್ತು ಹೆಂಡತಿ (Husband, Wife) ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು, ಅನೇಕ ಬಾರಿ ಹೆಂಡತಿ ಅಂತಹ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಪತಿ ತನ್ನ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಪತಿ ಮತ್ತು ಪತ್ನಿಯ ನಡುವೆ ಉತ್ತಮ ಸಂಬಂಧವನ್ನು ಹೊಂದಲು, ಹೆಂಡತಿ ತನ್ನ ಕೆಲವು ಅಭ್ಯಾಸಗಳನ್ನು ಸುಧಾರಿಸಿಕೊಳ್ಳಬೇಕು. ಸಂತೋಷದ ದಾಂಪತ್ಯ ಜೀವನಕ್ಕೆ ಪತಿ-ಪತ್ನಿ ಪರಸ್ಪರ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯ (Chanakya Niti). ಅನೇಕ ಬಾರಿ ಹೆಂಡತಿಯರು ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಗಂಡಂದಿರು ಕೋಪಗೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ದುಃಖದಿಂದ ಮನಸ್ಸು ಮುದುಡುತ್ತದೆ.

ಆಗಾಗ್ಗೆ ಮಹಿಳೆಯರು ತಮ್ಮ ಗಂಡನನ್ನು ಅನಗತ್ಯವಾಗಿ ಅನುಮಾನಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಪತಿ ಕೋಪಗೊಳ್ಳುತ್ತಾನೆ ಮತ್ತು ಅವರ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಅನೇಕ ಬಾರಿ, ತಮ್ಮ ಗಂಡ ಹೇಳಿದಾಗ, ಹೆಂಡತಿಯರು ಅವರ ಸಲಹೆಯನ್ನು ನಿರ್ಲಕ್ಷಿಸುತ್ತಾರೆ ಮತ್ತು ಪತಿ ಬೇಡ ಎನ್ನುವ ಕೆಲಸವನ್ನೇ ಮಾಡುತ್ತಾರೆ. ಹೆಂಗಸರು ತಪ್ಪು ಮಾಡಿದರೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ತಪ್ಪಾದಾಗಲೂ ತಾವು ಸರಿ ಎಂದು ಹೇಳಿಕೊಳ್ಳುತ್ತಾರೆ ಮತ್ತು ಇದು ಗಂಡಂದಿರನ್ನು ಅಸಮಾಧಾನಗೊಳಿಸುತ್ತದೆ.

Also Read: ಪಂಜಾಬ್ ನ್ಯಾಷನಲ್ ಬ್ಯಾಂಕ್: ಅಪ್ರೆಂಟಿಸ್ ನೇಮಕಾತಿ 2024, ಕರ್ನಾಟಕದಲ್ಲಿ 32 ಹುದ್ದೆಗಳಿವೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಮಹಿಳೆಯರ ಕೆಟ್ಟ ಅಭ್ಯಾಸಗಳು

ಚಾಣಕ್ಯನ ಪ್ರಕಾರ, ಅನೇಕ ಬಾರಿ ಮಹಿಳೆಯರು ತಮ್ಮ ಗಂಡನ ವೈಯಕ್ತಿಕ ಜೀವನವನ್ನು ತೀಕ್ಷಣವಾಗಿ/ಅತಿಯಾಗಿ ನೋಡುತ್ತಾರೆ. ಇದರಿಂದಾಗಿ ಅವರ ಸಂಬಂಧವು ಶೀಘ್ರವೇ ಮುರಿಯುವ ಅಂಚಿಗೆ ಬರುತ್ತದೆ. ನಿಮಗೂ ತಿಳಿಯಬೇಕಾದರೆ ನಿಮ್ಮ ಗಂಡನ ಮನಸ್ಥಿತಿ ಮತ್ತು ವಾತಾವರಣ ಎರಡನ್ನೂ ಗಮನಿಸಿ ನಂತರ ಆರಾಮವಾಗಿ ಕೇಳಿ. ಏಕೆಂದರೆ ಪತಿಯು ಅನೇಕ ಜವಾಬ್ದಾರಿಗಳಿಂದ ಸುತ್ತುವರೆದಿರುತ್ತಾರೆ.

ಶಾಸ್ತ್ರಗಳ ಪ್ರಕಾರ, ಮಹಿಳೆಯರು ಬೆಳಿಗ್ಗೆ ತಡವಾಗಿ ಏಳುವ ಮತ್ತು ರಾತ್ರಿ ತಡವಾಗಿ ಮಲಗುವ ಅಥವಾ ಸಂಜೆ ಸೂರ್ಯಾಸ್ತವಾದ ತಕ್ಷಣ ಮಲಗುವ ಅಭ್ಯಾಸವು ಮನೆಯಲ್ಲಿ ಬಡತನವನ್ನು ಆಹ್ವಾನಿಸುತ್ತದೆ.

ಹೆಚ್ಚಿನ ಮಹಿಳೆಯರು ರೊಟ್ಟಿ ಮಾಡಲು ಒಂದೇ ಬಾರಿಗೆ ಹೆಚ್ಚು ಹಿಟ್ಟನ್ನು ಕಲಿಸಿಡುತ್ತಾರೆ. ಮತ್ತು ಅದನ್ನು ಮರುಬಳಕೆ ಮಾಡುತ್ತಾರೆ. ಆದರೆ ಇದನ್ನು ಧರ್ಮಗ್ರಂಥಗಳಲ್ಲಿ ಉತ್ತಮವೆಂದು ಪರಿಗಣಿಸಲಾಗಿಲ್ಲ. ಹೀಗೆ ಮಾಡುವುದರಿಂದ ಮನೆಯ ಸುಖ-ಸಮೃದ್ಧಿ ಹಾಳಾಗುತ್ತದೆ.

ಧರ್ಮಗ್ರಂಥಗಳಲ್ಲಿ ಗುರುವಾರ, ಏಕಾದಶಿ ಮತ್ತು ಅಮವಾಸ್ಯೆಯಂದು ಮಹಿಳೆಯರು ತಲೆಗೆ ಸ್ನಾನ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಗೌರವ ನಷ್ಟವಾಗುತ್ತದೆ.

Also Read: Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಮಹಿಳೆಯರು ಮೊದಲು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ನಂತರ ಸ್ನಾನ ಮಾಡಿ ಪೂಜೆ ಸಲ್ಲಿಸಬೇಕು. ಇದನ್ನು ಮಾಡದಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ.

ರಾತ್ರಿ ಮಲಗುವ ಮೊದಲು, ನೀವು ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು. ಲಕ್ಷ್ಮಿ ದೇವಿಯು ಮುಂಜಾನೆ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಮನೆಯಲ್ಲಿ ಕೊಳೆಯನ್ನು ನೋಡಿ ಕೋಪಗೊಂಡು ಹಿಂತಿರುಗುತ್ತಾಳೆ ಎಂದು ನಂಬಲಾಗಿದೆ.

ಗಂಡನನ್ನು ಹೀಯಾಳಿಸುವುದು: ಮಹಿಳೆಯರು ತಾವಾಗಿಯೇ ಅನೇಕ ವಿಚಾರಗಳನ್ನು ಆಲೋಚಿಸುತ್ತಾರೆ ಮತ್ತು ಅದರಿಂದಾಗಿ ಅವರು ತಮ್ಮ ಪತಿಯನ್ನು ಹೀಯಾಳಿಸುವಲ್ಲಿ ಹಿಂದೆ ಬೀಳುವುದಿಲ್ಲ. ನೀವು ಪ್ರತಿ ಬಾರಿಯೂ… ಸರಿಯಾಗಿಲ್ಲದಿದ್ದರೂ, ನಿಮ್ಮ ಪತಿ ಖಂಡಿತವಾಗಿಯೂ ನಿಮ್ಮಿಂದ ಕಿರಿಕಿರಿಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಅದೇ ಸಮಯದಲ್ಲಿ, ಪತಿ ತಪ್ಪಾಗಿ ಏನನ್ನಾದರೂ ಮರೆತರೆ, ಮಹಿಳೆಯರು ಆಗಾಗ್ಗೆ ಅವನನ್ನು ದೂಷಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ಅದು ತಿಳಿದೇ ಮಾಡಲಾಗಿಲ್ಲ ಎಂದು ಅವರು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)