Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ಗುರುವಾರ ಪೂಜಿಸಲು ಇಲ್ಲಿವೆ ಕಾರಣಗಳು

ವಿಷ್ಣು ಹಾಲಿನ ಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಚಿತ್ರಗಳನ್ನು ನೀವು ನೋಡಿರಬಹುದು. ಹಾಲಿನ ಸಾಗರವು ಸಂತೋಷ ಮತ್ತು ದುಃಖದ ಅವಶೇಷಗಳನ್ನು ಸಂಕೇತಿಸುತ್ತದೆ.

ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ಗುರುವಾರ ಪೂಜಿಸಲು ಇಲ್ಲಿವೆ ಕಾರಣಗಳು
ವಿಷ್ಣು ದೇವರು
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 9:53 PM

ಪುರಾಣಗಳಲ್ಲಿ ಪ್ರತಿ ವಾರವನ್ನು ಯಾವುದಾದರೂ ದೇವತೆಗೆ ಸಮರ್ಪಿಸಲಾಗಿದೆ. ಸೋಮವಾರ ಶಿವನಿಗೆ, ಮಂಗಳವಾರ ಹನುಮನಿಗೆ ಮತ್ತು ಬುಧವಾರ ಅಯ್ಯಪ್ಪನಿಗೆ ಸಮರ್ಪಿಸಲಾಗಿದೆ. ಗುರುವಾರ ಶಿರಡಿ ಸಾಯಿಯನ್ನು ಪೂಜಿಸುತ್ತೇವೆ. ಇದರ ಜತೆಗೆ ಗುರುವಾರ ನಾವು ವಿಷ್ಣು ದೇವರನ್ನು ಕೂಡ ಪೂಜಿಸುತ್ತೇವೆ. ಹಿಂದೂ ಪುರಾಣದ ಪ್ರಕಾರ, ಗುರುವಾರ ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ಅಲ್ಲದೆ ವಿಷ್ಣುವನ್ನು ಹರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಿಷ್ಣುವನ್ನು ಹರಿ ಎಂದು ಏಕೆ ಕರೆಯಲಾಗುತ್ತದೆ ಮತ್ತು ಗುರುವಾರ ವಿಷ್ಣುವನ್ನು ಏಕೆ ಪೂಜಿಸಲಾಗುತ್ತದೆ ಎಂಬುದಕ್ಕೆ ಇಲ್ಲಿದೆ ವಿವರ.

ವಿಷ್ಣುವನ್ನು ಹರಿ ಎಂದು ಏಕೆ ಕರೆಯುತ್ತಾರೆ? ಹರಿ ಹರತಿ ಪಾಪಾನಿ ಎಂದರೆ ಹರಿ ಎಂದು ಕರೆದರೆ ನಮ್ಮ ಜೀವನದ ಎಲ್ಲಾ ಪಾಪಗಳು ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹರಿ ಎಂದರೆ ಕಷ್ಟಗಳನ್ನು ನಾಶ ಮಾಡುವವನು ಎಂಬರ್ಥವಿದೆ. ವಿಷ್ಣುವನ್ನು ಆರಾಧಿಸುವ ಭಕ್ತನ ಎಲ್ಲಾ ಪಾಪಗಳನ್ನು ವಿಷ್ಣು ತೆಗೆದುಹಾಕುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಎಷ್ಟೇ ದೊಡ್ಡ ಸಮಸ್ಯೆಗಳಿದ್ದರೂ ಹರಿ ಪರಿಹರಿಸುತ್ತಾನೆ. ಅದಕ್ಕಾಗಿಯೇ ಅವನನ್ನು ಭಕ್ತಿಪೂರ್ವಕವಾಗಿ ಹರಿ, ಶ್ರೀಹರಿ ಎಂದು ಕರೆಯಲಾಗುತ್ತದೆ.

ವಿಷ್ಣುವನ್ನು ಗುರುವಾರ ಪೂಜಿಸೋದೇಕೆ? ಪುರಾಣಗಳ ಪ್ರಕಾರ, ಪಕ್ಷಿಗಳಲ್ಲಿ ದೊಡ್ಡದು ಗರುಡ. ಇದು ವಿಷ್ಣುವಿನ ವಾಹನ ಕೂಡ ಹೌದು. ಗರುಡ ಕಠಿಣ ತಪಸ್ಸಿನ ಮೂಲಕ ವಿಷ್ಣುವಿನ ಗಮನ ಸೆಳೆದಿತ್ತು. ಗರುಡ ಪಕ್ಷಿಯ ತಪಸ್ಸಿನಿಂದ ಸಂತಸಗೊಂಡ ವಿಷ್ಣು ಅದನ್ನು ತನ್ನ ವಾಹನನ್ನಾಗಿ ಮಾಡಿಕೊಂಡನು. ಗುರು ಎಂದರೆ ಭಾರ ಎಂಬ ಅರ್ಥವಿದೆ. ಪಕ್ಷಿಗಳಲ್ಲೇ ದೊಡ್ಡದಾದ ಪಕ್ಷಿ ಗರುಡ. ಗರುಡ ಎಂದರೆ ಕಠಿಣ ಯಶಸ್ಸನ್ನು ಸಾಧಿಸುವವನು. ಈ ಕಾರಣಕ್ಕಾಗಿಯೇ ವಿಷ್ಣುವನ್ನು ಗುರುವಾರ ಪೂಜಿಸಲಾಗುತ್ತದೆ.

ವಿಷ್ಣು ಹಾವಿನ ಮೇಲೆ ಏಕೆ ಮಲಗುತ್ತಾನೆ? ವಿಷ್ಣು ಹಾಲಿನ ಸಾಗರದಲ್ಲಿ ಹಾವಿನ ಮೇಲೆ ಮಲಗಿರುವ ಚಿತ್ರಗಳನ್ನು ನೀವು ನೋಡಿರಬಹುದು. ಹಾಲಿನ ಸಾಗರವು ದುಃಖದ ಲೇಪವೂ ಇಲ್ಲದ ಸಂತೋಷವನ್ನು ಸಂಕೇತಿಸುತ್ತದೆ. ಈ ರೂಪವು ಮಾನವರು ಸಂತೋಷ ಮತ್ತು ಅತೃಪ್ತಿ ಎರಡರಲ್ಲೂ ಒಂದೇ ರೀತಿಯಲ್ಲಿ ಬದುಕಬೇಕು ಎಂದು ಸೂಚಿಸುತ್ತದೆ.

ಇದನ್ನೂ ಓದಿ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠವೇಕೆ? ಈ ಮರ ಹುಟ್ಟಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ