ಇಷ್ಟಾರ್ಥ ಸಿದ್ಧಿಗಾಗಿ ಅಷ್ಟೇ ಅಲ್ಲ; ಉತ್ತಮ ಆರೋಗ್ಯಕ್ಕಾಗಿಯೂ ಯಜ್ಞ-ಯಾಗಾದಿ ಮಾಡ್ತಾರೆ: ಏನಿದರ ವಿಶೇಷ

ಯಜ್ಞ-ಯಾಗಾದಿಗಳನ್ನು ಎಲ್ಲರೂ ಮಾಡುವಂತಹುದ್ದಲ್ಲ. ಮಾಡುವಂತಹವರೂ ಸಹಾ ಹೇಗೋ ಮಾಡಿದರೆ ಫಲ ಸಿಗಲ್ಲ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಯಜ್ಞ-ಯಾಗಾದಿಗಳನ್ನು ಸರಿಯಾಗಿ ಮಾಡದಿದ್ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

  • TV9 Web Team
  • Published On - 6:40 AM, 22 Apr 2021
ಇಷ್ಟಾರ್ಥ ಸಿದ್ಧಿಗಾಗಿ ಅಷ್ಟೇ ಅಲ್ಲ; ಉತ್ತಮ ಆರೋಗ್ಯಕ್ಕಾಗಿಯೂ ಯಜ್ಞ-ಯಾಗಾದಿ ಮಾಡ್ತಾರೆ: ಏನಿದರ ವಿಶೇಷ
ಸಾಂದರ್ಭಿಕ ಚಿತ್ರ

ಅನಾದಿ ಕಾಲದಿಂದಲೂ ಭಾರತೀಯ ಸಂಪ್ರದಾಯದಲ್ಲಿ ಋಷಿಮುನಿಗಳು, ಸಿದ್ಧಿ ಸಾಧಕರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಆರೋಗ್ಯಕ್ಕಾಗಿ ದೇವತೆಗಳನ್ನು ಸಂತೃಪ್ತಗೊಳಿಸುವುದಕ್ಕಾಗಿ ನಾನಾ ಬಗೆಯ ಯಜ್ಞ-ಯಾಗಾದಿಗಳನ್ನು ಮಾಡುತ್ತಿದ್ದರು. ಆ ಮೂಲಕ ದೇವತೆಗಳನ್ನು ಸಂತೃಪ್ತಗೊಳಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ರು. ಇಂತಹ ಯಜ್ಞಗಳನ್ನು ಮಾಡುವುದರಿಂದ ವಾತವಾರಣವೂ ಶುದ್ಧಿಯಾಗಿ ಉಸಿರಾಡಲು ಶುದ್ಧಗಾಳಿ ಸಿಗುತ್ತಿತ್ತು. ನಿಮಗೆ ಗೊತ್ತಾ? ಮಹತ್ವಪೂರ್ಣವಾದ ಯಜ್ಞ-ಯಾಗಾದಿಗಳನ್ನು ಮಾಡಲು ಹಲವು ನಿಯಮಗಳಿವೆ. ಆ ನಿಯಮಗಳ ಬಗ್ಗೆ ಇಲ್ಲಿ ತಿಳಿಯಿರಿ…

ಯಾವ ಯಜ್ಞವನ್ನು ಯಾರು ಮಾಡಬೇಕು?
– ಪುತ್ರಕಾಮೇಷ್ಟಿ ಯಾಗವನ್ನು ಸಂತಾನವಿಲ್ಲದವರೇ ಮಾಡಬೇಕು.
– ಅಶ್ವಮೇಧಯಾಗವನ್ನು ಕ್ಷತ್ರಿಯರೇ ನಿರ್ವಹಿಸಬೇಕು.
– ರಾಜಸೂಯ ಯಾಗವನ್ನು ನಾಲ್ಕು ದಿಕ್ಕಿನ ರಾಜರನ್ನು ಸೋಲಿಸಿದ ನಂತರವೇ ಮಾಡಬೇಕು.

ಯಜ್ಞ-ಯಾಗಾದಿಗಳನ್ನು ಎಲ್ಲರೂ ಮಾಡುವಂತಹುದ್ದಲ್ಲ. ಮಾಡುವಂತಹವರೂ ಸಹಾ ಹೇಗೋ ಮಾಡಿದರೆ ಫಲ ಸಿಗಲ್ಲ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಯಜ್ಞ-ಯಾಗಾದಿಗಳನ್ನು ಸರಿಯಾಗಿ ಮಾಡದಿದ್ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

ಯಜ್ಞ-ಯಾಗಾದಿಗಳನ್ನು ಮಾಡುವ ನಿಯಮಗಳು
-ಹೋಮಗಳನ್ನು ನಿರ್ವಿಘ್ನವಾಗಿ ಪರಿಸಮಾಪ್ತಿ ಮಾಡಲು ಮೊದಲು ಗಣಪತಿ ಪೂಜೆ ಮಾಡಬೇಕು. -ಅಗ್ನಿಯ ಪ್ರತಿಷ್ಠಾಪನೆ, ಅಲಂಕಾರ, ಪರಿಸ್ತರಣ, ಪರಿಶಿಂಚನೆ ಮಾಡಬೇಕು.
-ಹೋಮದ ಪೂರ್ವ ತಂತ್ರಗಳನ್ನು ಮಾಡಿ
-ಕೂಷ್ಮಾಂಡ ಹೋಮವನ್ನು ಮಾಡಿ
-ಪ್ರಧಾನ ಹೋಮ ಮಾಡಬೇಕು.
-ಕೊನೆಗೆ ಪೂರ್ಣಾಹುತಿಯನ್ನು ನೀಡಬೇಕು.
-ಹೋಮದ ಸಮಾಪ್ತಿಯನ್ನು ಉತ್ತರ ಪರಿಷೇಚನೆ, ಅಗ್ನಿ ಉಪಸ್ಥಾನ, ನಮಸ್ಕಾರ, ರಕ್ಷಾಧಾರಣೆಗಳ ಮೂಲಕ ಮಾಡಬೇಕು.

ಹಲವಾರು ರೀತಿಯಲ್ಲಿ ಯಜ್ಞಗಳನ್ನು ವಿಭಾಗಿಸಬಹುದಾಗಿದೆ. ಅವುಗಳಲ್ಲಿ ಮುಖ್ಯವಾಗಿ ಪಾಕ ಯಜ್ಞ, ಹವಿರ್ಯಜ್ಞ ಮತ್ತು ಸೋಮಯಜ್ಞಗಳೆಂಬ ಮೂರು ಬಗೆಯ ಯಜ್ಞಗಳಿವೆ. ಇವುಗಳನ್ನು ನಿತ್ಯ ಮತ್ತು ನೈಮಿತ್ತಿಕ ಯಜ್ಞಗಳೆಂದೂ ಗುರುತಿಸಬಹುದು. ಗೃಹಾಗ್ನಿಯಲ್ಲಿ ಮಾಡುವುದನ್ನು ಪಾಕ ಯಜ್ಞಗಳೆಂದೂ, ಆಹವನೀಯ ಅಗ್ನಿಯಲ್ಲಿ ಮಾಡುವ ಯಜ್ಞಗಳನ್ನು ಹವಿರ್ಯಜ್ಞಗಳೆಂದೂ ಹೇಳಬಹುದು. ಸೋಮರಸಗಳನ್ನು ಉಪಯೋಗಿಸುವ ಯಜ್ಞಗಳನ್ನು ಸೋಮಯಜ್ಞ ಎನ್ನಬಹುದು. ಮಾಡಲೇಬೇಕಾದ ಯಜ್ಞಗಳನ್ನು ನಿತ್ಯವೆಂದೂ, ಒಂದು ಉದ್ದೇಶಕ್ಕಾಗಿ ಮಾಡುವ ಯಜ್ಞವನ್ನು ನೈಮಿತ್ತಿಕ ಯಜ್ಞವೆಂದು ಕರೆಯಲಾಗುತ್ತೆ. ಹೀಗೆ ಅಂದಿನಿಂದ ಇಂದಿನವರೆಗೂ ನಮ್ಮ ಸಂಪ್ರದಾಯದಲ್ಲಿ ಯಜ್ಞ-ಯಾಗಾದಿಗಳು ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ.

ಇದನ್ನೂ ಓದಿ:ದೇವರ ಆರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮಗಳು ಯಾವುವು?