Mahakumbh 2025: ಮಹಾಕುಂಭದ ಮೊದಲ ಅಮೃತ ಸ್ನಾನ; ಈ ಸ್ನಾನದ ಪವಿತ್ರತೆ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ

2025ರ ಮಹಾಕುಂಭ ಮೇಳದ ಮೂರು ಅಮೃತ ಸ್ನಾನಗಳ ದಿನಾಂಕಗಳು ಮತ್ತು ಅವುಗಳ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಜನವರಿ 14, ಜನವರಿ 29 ಮತ್ತು ಫೆಬ್ರವರಿ 3 ರಂದು ನಡೆಯುವ ಈ ಪವಿತ್ರ ಸ್ನಾನಗಳಲ್ಲಿ ಪಾಲ್ಗೊಳ್ಳುವವರಿಗೆ ಮಾರ್ಗಸೂಚಿಗಳನ್ನು ಮತ್ತು ನಿಯಮಗಳನ್ನು ಒಳಗೊಂಡಿದೆ. ಪ್ರತಿ ಅಮೃತ ಸ್ನಾನದ ಹಿಂದಿನ ಧಾರ್ಮಿಕ ನಂಬಿಕೆಗಳು ಮತ್ತು ಅವುಗಳ ಪುಣ್ಯ ಫಲಿತಾಂಶಗಳ ಬಗ್ಗೆ ವಿವರಿಸಲಾಗಿದೆ.

Mahakumbh 2025: ಮಹಾಕುಂಭದ ಮೊದಲ ಅಮೃತ ಸ್ನಾನ; ಈ ಸ್ನಾನದ ಪವಿತ್ರತೆ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ
Maha Kumbh 2025
Follow us
ಅಕ್ಷತಾ ವರ್ಕಾಡಿ
|

Updated on: Jan 14, 2025 | 7:40 AM

ಮಹಾಕುಂಭದ ಮೊದಲ ಅಮೃತ ಸ್ನಾನ ಅಥವಾ ಶಾಹಿ ಸ್ನಾನವನ್ನು ಇಂದು ಅಂದರೆ ಜನವರಿ 14 ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಡೆಯುತ್ತದೆ. ಕುಂಭದಲ್ಲಿ ಈ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ನಾಗಾ ಸಾಧುಗಳು ಮತ್ತು ಇತರ ಸಂತರು ಅಮೃತ ಸ್ನಾನ ಮಾಡುತ್ತಾರೆ.

ಶಾಹಿ ಸ್ನಾನದ ದಿನದಂದು ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವುದು ವಿಶೇಷ ಫಲಿತಾಂಶವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಆದರೆ ಅಮೃತ ಸ್ನಾನದ ಕೆಲವು ನಿಯಮಗಳಿವೆ, ಅದನ್ನು ಅನುಸರಿಸುವುದು ಬಹಳ ಮುಖ್ಯ. ಅಮೃತ ಸ್ನಾನದ ದಿನದಂದು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

2025 ರ ಮಹಾಕುಂಭದಲ್ಲಿ ಎಷ್ಟು ಅಮೃತ ಸ್ನಾನವನ್ನು ನಡೆಸಲಾಗುತ್ತದೆ?

ಈ ಬಾರಿ ಮಹಾಕುಂಭದಲ್ಲಿ, 3 ಅಮೃತ ಸ್ನಾನವನ್ನು ನಡೆಸಲಾಗುವುದು ಮತ್ತು ಅವುಗಳ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ:

ಮಹಾಕುಂಭ ಮೊದಲ ಅಮೃತ ಸ್ನಾನ:

ಮಹಾಕುಂಭದ ಮೊದಲ ರಾಜ ಸ್ನಾನ ಇಂದು ಅಂದರೆ ಜನವರಿ 14ರಂದು ನಡೆಯಲಿದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಮಕರ ರಾಶಿಗೆ ತೆರಳುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಗಂಗಾ ನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಫಲ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಅಲ್ಲದೆ, ಈ ದಿನ ಪೂಜೆ ಪುನಸ್ಕಾರ ಮತ್ತು ಎಳ್ಳು, ಬೆಲ್ಲ ದಾನ ಮಾಡುವುದು ತುಂಬಾ ಒಳ್ಳೆಯದು.

ಮೊದಲ ಅಮೃತ ಸ್ನಾನದ ಶುಭ ಸಮಯ:

  • ಬ್ರಹ್ಮ ಮುಹೂರ್ತ – ಬೆಳಿಗ್ಗೆ 5:27 ರಿಂದ 6:21 ರವರೆಗೆ
  • ಮಹಾಪುಣ್ಯಕಾಲ – ಬೆಳಿಗ್ಗೆ 9:03 ನಿಮಿಷದಿಂದ 10:48 ನಿಮಿಷಗಳವರೆಗೆ
  • ಪುಣ್ಯಕಾಲ – ಬೆಳಿಗ್ಗೆ 9:03 ರಿಂದ ಸಂಜೆ 5:46 ರವರೆಗೆ

ಮಹಾಕುಂಭ ಎರಡನೇ ಅಮೃತ ಸ್ನಾನ:

ಮಹಾಕುಂಭದ ಎರಡನೇ ಅಮೃತ ಸ್ನಾನವು 29 ಜನವರಿ 2025 ರಂದು ನಡೆಯಲಿದೆ. ಈ ದಿನ ಮೌನಿ ಅಮವಾಸ್ಯೆ ಬರುತ್ತದೆ. ಹಿಂದೂ ಧರ್ಮದಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಮೌನಿ ಅಮವಾಸ್ಯೆಯಂದು ಸ್ನಾನ, ದಾನ, ಮೌನ ವ್ರತ ಮಾಡುವ ಸಂಪ್ರದಾಯವಿದೆ. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ದುಪಟ್ಟು ಹೆಚ್ಚು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ.

ಮಹಾಕುಂಭ ಮೂರನೇ ಅಮೃತ ಸ್ನಾನ:

ಮಹಾಕುಂಭದ ಮೂರನೇ ಮತ್ತು ಕೊನೆಯ ಅಮೃತ ಸ್ನಾನವು 3 ಫೆಬ್ರವರಿ 2025 ರಂದು ನಡೆಯಲಿದೆ. ಈ ದಿನ ವಸಂತ ಪಂಚಮಿ ಹಬ್ಬ ಬರುತ್ತಿದೆ. ವಸಂತ ಪಂಚಮಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಪೂಜೆ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ವಸಂತ ಪಂಚಮಿಯ ದಿನದಂದು ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

ಇದನ್ನೂ ಓದಿ: ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ಈ ದೇವಸ್ಥಾನಕ್ಕೆ ಭೇಟಿ ನೀಡಿ ನಾಣ್ಯವನ್ನು ಅರ್ಪಿಸಿ!

ಅಮೃತ ಸ್ನಾನದ ನಿಯಮಗಳು:

  • ಅಮೃತ ಸ್ನಾನದ ದಿನದಂದು ನಾಗಾ ಸಾಧುಗಳಿಗೆ ಮೊದಲು ಸ್ನಾನ ಮಾಡುವ ಹಕ್ಕಿದೆ. ಇದರ ನಂತರ, ಇತರ ಪ್ರಮುಖ ಋಷಿಗಳು ಮತ್ತು ಸಂತರು ಸ್ನಾನ ಮಾಡುತ್ತಾರೆ.
  • ಅಮೃತ ಸ್ನಾನದ ದಿನದಂದು ಋಷಿಗಳು, ಸಂತರು ಮತ್ತು ನಾಗಬಾಬಾ ಸ್ನಾನ ಮಾಡಿದ ನಂತರವೇ ಸ್ನಾನ ಮಾಡಬೇಕು, ಇಲ್ಲದಿದ್ದರೆ ಕುಂಭಸ್ನಾನದ ಫಲಿತಾಂಶವನ್ನು ಲಭಿಸುವುದಿಲ್ಲ ಎಂಬ ನಂಬಿಕೆ.
  • ನೀವು ಅಮೃತ ಸ್ನಾನದ ದಿನದಂದು ಮಹಾಕುಂಭದಲ್ಲಿ ಸ್ನಾನ ಮಾಡಲು ಹೋದರೆ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಗಂಗಾ ಸ್ನಾನ ಮಾಡುವಾಗ ಸೋಪು ಮತ್ತು ಶಾಂಪೂ ಬಳಸಬಾರದು.
  • ಮಹಾಕುಂಭ ಸ್ನಾನದ ನಂತರ, ಮಲಗಿರುವ ಹನುಮಂತ ಮತ್ತು ಸಂಗಮ ದಡದಲ್ಲಿರುವ ಅಕ್ಷಯ ವತ್ ದೇವಾಲಯಕ್ಕೆ ಭೇಟಿ ನೀಡಬೇಕು.
  • ಮಹಾಕುಂಭದಲ್ಲಿ ಅಮೃತ ಸ್ನಾನ ಮಾಡಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ಅನ್ನ, ಹಣ, ವಸ್ತ್ರ, ಎಳ್ಳು ಇತ್ಯಾದಿಗಳನ್ನು ದಾನ ಮಾಡಬೇಕು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ