Makar Sankranti 2025: ಮಕರ ಸಂಕ್ರಾಂತಿ; ಸೂರ್ಯ ಸಂಕ್ರಮಣ, ಆಚರಣೆ ಮತ್ತು ಮಹತ್ವ

ಮಕರ ಸಂಕ್ರಾಂತಿಯು ಸೂರ್ಯನ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಸಂಕ್ರಮಣವನ್ನು ಸೂಚಿಸುತ್ತದೆ. ಈ ದಿನ ಹಗಲು ರಾತ್ರಿಗಳು ಸಮಾನವಾಗಿರುತ್ತವೆ. ಎಳ್ಳುಬೆಲ್ಲದ ವಿತರಣೆ, ಹೊಸ ಧಾನ್ಯಗಳನ್ನು ಸೂರ್ಯನಿಗೆ ಅರ್ಪಿಸುವುದು ಮುಂತಾದ ಆಚರಣೆಗಳು ನಡೆಯುತ್ತವೆ. ನದೀ ಸ್ನಾನ, ಸೂರ್ಯನಮಸ್ಕಾರ, ಆದಿತ್ಯಹೃದಯ ಪಠಣ ಮುಂತಾದವು ಆರೋಗ್ಯಕರ ಮತ್ತು ಶ್ರೇಯಸ್ಕರವೆಂದು ಪರಿಗಣಿಸಲಾಗಿದೆ.

Makar Sankranti 2025: ಮಕರ ಸಂಕ್ರಾಂತಿ; ಸೂರ್ಯ ಸಂಕ್ರಮಣ, ಆಚರಣೆ ಮತ್ತು ಮಹತ್ವ
Makar Sankranti 2025
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ

Updated on:Jan 14, 2025 | 9:57 AM

ಸೂರ್ಯನಿಗೆ ಕರ್ಮಸಾಕ್ಷೀ, ಜಗಚ್ಚಕ್ಷು ಎನ್ನುವ ನಾಮಂತರಗಳಿವೆ. ಈ ಪ್ರಪಂಚದಲ್ಲಿ ಕಾಣುವ ಎಲ್ಲ ಬೆಳಕಿಗೂ ಆ ಸೂರ್ಯನೇ ಮೂಲ. ಅವನ ಬೆಳಕಿಲ್ಲದೇ ಪ್ರಪಂಚದ ಯಾವ ಜೀವಿಗೂ ಚೈತನ್ಯ ಇರದು, ತೇಜಸ್ಸು ಇರದು. ಅವಂತ ಸರ್ವಶ್ರೇಷ್ಠ ಹಾಗೂ ಎಲ್ಲರನ್ನೂ ಬದುಕಿಸುವ ಶಕ್ತಿ ಇರುವುದು ಒಬ್ಬ ಸೂರ್ಯನಿಗೆ ಎಂದಾದರೆ ದೇವರ ಸೃಷ್ಟಿ ಎಂತಹ ಚಮತ್ಕಾರ, ವೈಶಿಷ್ಟ್ಯಗಳಿಂದ ಕೂಡಿರಬಹುದು ಎನ್ನುವುದು ಊಹಿಸಲಾಗದು.

ಇಂತಹ ಸೂರ್ಯ ತನ್ನ ದಿಕ್ಕನ್ನು ಬದಲಿಸಿದ್ದಾನೆ. ಸೂರ್ಯನು ಸಂಚರಿಸುವ ಮಾರ್ಗಕ್ಕೆ ಕ್ರಾಂತಿವೃತ್ತ ಎಂದು ಹೆಸರು. ಇದು ಆಕಾಶದ ಮಧ್ಯಭಾಗದಲ್ಲಿ ಇರುವ ನಾಡೀವೃತ್ತದ ಎರಡು ಪಾರ್ಶ್ವಗಳಲ್ಲಿ ಇರುತ್ತದೆ. ಸೂರ್ಯನು ಈ ವೃತ್ತದಲ್ಲಿ ಸಂಚರಿಸುವಾಗ ದಕ್ಷಿಣಾಯನ ಉತ್ತರಾಯಣಗಳು ಆಗುತ್ತವೆ. ದಕ್ಷಿಣ ದಿಕ್ಕಿನ ಕ್ರಾಂತಿವೃತ್ತದಲ್ಲಿ ಸಂಚರಿಸಿದರೆ ದಕ್ಷಿಣಾಯನ, ಉತ್ತೆರದ ಕ್ರಾಂತಿವೃತ್ತದಲ್ಲಿ ಸಂಚರಿಸಿದರೆ ಉತ್ತರಾಯಣವಾಗುತ್ತದೆ.

ಇದು ದೈವಮಾರ್ಗಾನುಸಾರಿಗಳಿಗೆ ಬಹಳ ಶ್ರೇಯಸ್ಕರ. ಹನ್ನೆರಡು ಸಂಕ್ರಾಂತಿಗಳಿದ್ದರೂ ಇದು ಸೂರ್ಯನು ಪಥವನ್ನೇ ಬದಲಿಸುವ ಕಾರಣ ಶ್ರೇಷ್ಠ. ದಕ್ಷಿಣಗೋಲದಲ್ಲಿ ಸೂರ್ಯನ ಸಂಚಾರವಾಗಲಿದೆ. ಇದು ದಕ್ಷಿಣಗೋಲದ ಮಧ್ಯಭಾಗ. ವರ್ಷದ ಎರಡು ಬಾರಿ ಹಗಲು ರಾತ್ರಿಗಳು ಸಮವಾಗಿರುತ್ತವೆ. ಮೇಷ ಹಾಗೂ ತುಲಾ ಮಾಸದಲ್ಲಿ. ಮಕರದಿಂದ ಆರಂಭಿಸದರೆ ಮೇಷಕ್ಕೆ ಸರಿಯಾಗಿ ಉತ್ತರಾಯಣ ನಾಲ್ಕು ತಿಂಗಳು. ಆಗ ಮಧ್ಯಕಾಲ. ಅಲ್ಲಿಂದ ಕರ್ಕದವರೆಗೆ ನಾಲ್ಕು ಅಂತ್ಯಕಾಲ. ಪುನಃ ತುಲಾದ ವರೆಗೆ ಮಧ್ಯಕಾಲ.‌ ಅಲ್ಲಿ ಮತ್ತೆ ರಾತ್ರಿ ಹಗಲುಗಳು ಸಮಾನವಾಗಿರಲಿದೆ.

ಎಳ್ಳುಬೆಲ್ಲ ವಿತರಣೆ :

ಈ ಸಂಕ್ರಾತಿಯು ಶಿಶಿರ ಋತುವಿನ ಆರಂಭ ಆಗುತ್ತದೆ. ಚಳಿಗಾಲ ಅಂದರೆ ವಾತವೃದ್ಧಿಯ ಕಾಲ. ವಾತಶಮನಕ್ಕೆ ಬೇಕಾದ ದ್ರವ್ಯವನ್ನು ಬಳಸುವುದೂ ಹಬ್ಬದ ವಿಶೇಷವೇ. ಎಳ್ಳು, ಬೆಲ್ಲ, ತೆಂಗಿನ ಕಾಯಿ ಇವೆಲ್ಲವೂ ವಾತಶಮನ ಮಾಡಿ ಪಿತ್ತ ಹಾಗೂ ಕಫವನ್ನು ಹೆಚ್ಚಿಸುವ ಪದಾರ್ಥಗಳಾಗಿವೆ.

ಇದನ್ನೂ ಓದಿ: ಮಹಾಕುಂಭ ಮೊದಲ ಬಾರಿ ನಡೆದಿದ್ದು ಎಲ್ಲಿ ಮತ್ತು ಯಾವಾಗ?

ಸುಗ್ಗಿ ಕಾಲ :

ದೇಶದ ಕೆಲವು ಭಾಗಗಳಲ್ಲಿ ತಾವು ಬೆಳೆದ ಹೊಸ ಧಾನ್ಯಗಳನ್ನು ತಂದು ಸೂರ್ಯನಿಗೆ ಅರ್ಪಿಸಿ ತಿನ್ನುವ ಸಂಪ್ರದಾಯವೂ ಇದೆ. ಏಕೆಂದರೆ ಸೂರ್ಯನಿಂದಲೇ ಮಳೆ ಬೆಳೆಗಳು ಆಗುವ ಕಾರಣ ಸೂರ್ಯನಿಗೆ ಕೃತಜ್ಞತೆಯನ್ನು ಅರ್ಪಿಸುವುದು ಇದಾಗಿದೆ.

ಏನು ಮಾಡಬೇಕು?

ನದೀ ಸ್ನಾನ ಮಾಡಿ ತರ್ಪಣಾದಿಗಳನ್ನು ಬಿಡಬಹುದು. ಸೂರ್ಯನ ನಮಸ್ಕಾರ ಮಾಡಿದರೆ ಆರೋಗ್ಯದಲ್ಲಿ ಪುಷ್ಟಿಯಾಗಲಿದೆ. ಆದಿತ್ಯಹೃದಯ ಅಥವಾ ಸೂರ್ಯಾಷ್ಟಕ, ಸೂರ್ಯಸ್ತೋತ್ರವನ್ನು ಮಾಡಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Tue, 14 January 25

ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ