2008ರ ನವೆಂಬರ್ 26ರಿಂದ 29ರ ಮಧ್ಯೆ ಭಾರತದ ಹಣಕಾಸು ರಾಜಧಾನಿ ಮುಂಬೈ ಮೇಲೆ ನಡೆದ ಭಯೋತ್ಪಾದನೆ ದಾಳಿಯ ನಂತರ ಆ “ಬಗೆಯ” ದಾಳಿ ಉಳಿದೆಡೆಗೆ ಮಾದರಿ ಎಂಬಂತೆ ಉಳಿದುಹೋಯಿತು. ಮುಂಬೈ ಮೇಲೆ ನಡೆದ ದಾಳಿ ವೇಳೆ 10 ಮಂದಿ ಭಯೋತ್ಪಾದಕರು 164 ಮಂದಿಯನ್ನು ಕೊಂದಿದ್ದರು ಹಾಗೂ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯನ್ನು ಭಯೋತ್ಪಾದಕರು ಹಾಗೂ ಭಯೋತ್ಪಾದಕ ವಿರೋಧಿ ದಳ ಎರಡಕ್ಕೂ ಅಧ್ಯಯನಕ್ಕೆ ಪಠ್ಯಪುಸ್ತಕ ಎಂಬಂತಾಗಿದೆ. ಅಂಥದ್ದೇನಿದೆ ಈ ದಾಳಿಯಲ್ಲಿ ಅಂತೀರಾ? ಧರ್ಮೋನ್ಮಾದದಿಂದ ಕೂಡಿದ ಸಣ್ಣ ಗುಂಪೊಂದು ದೊಡ್ಡ ನಗರವನ್ನೇ ಸ್ತಬ್ಧಗೊಳಿಸಿತು. ಜಾಗತಿಕವಾಗಿ ಗಮನ ಸೆಳೆಯಿತು. ಇಡೀ ವ್ಯವಸ್ಥೆ ಅಸ್ತವ್ಯಸ್ತ ಆಗುವಂತೆ ಮಾಡಿತು. ಆದರೆ ಹೀಗಾಗುವಂತೆ ಮಾಡಿದ್ದು ಸಣ್ಣ ಸಂಖ್ಯೆಯಲ್ಲಿದ್ದ ಉಗ್ರಗಾಮಿಗಳ ಗುಂಪು.
ನಿಮಗೆ ನೆನಪಿದೆ ಅನ್ನೋದಾದರೆ ಪ್ಯಾರಿಸ್ ಮೇಲೆ ನಡೆದ ಭಯೋತ್ಪಾದನೆ ದಾಳಿ ಕೂಡ ಇಂಥದ್ದೇ. ನಗರ ಪ್ರದೇಶಗಳಲ್ಲಿ ಸುಲಭಕ್ಕೆ ದಾಳಿಗೆ ತುತ್ತಾಗಬಹುದಾದ ಸ್ಥಳಗಳನ್ನು ಗುರಿಯಾಗಿ ಮಾಡಿಕೊಂಡು, ಏಕಕಾಲಕ್ಕೆ ಹಲವು ಕಡೆಗೆ ಎರಗುವುದು ಕಾರ್ಯತಂತ್ರ. ದಾಳಿಯಲ್ಲಿ ಮತ್ತೂ ಹೆಚ್ಚು ಹಾನಿ ಮಾಡಬೇಕು ಅಂತ ಪ್ಯಾರಿಸ್ನಲ್ಲಿ ಆತ್ಮಹತ್ಯಾ ಬಾಂಬರ್ ಕೂಡ ಬಳಕೆ ಮಾಡಲಾಯಿತು. ಮುಂಬೈ ದಾಳಿ ವೇಳೆ ಒಬ್ಬ ಉಗ್ರ ಮಾತ್ರ ತನ್ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಯ ಆಣತಿಯಂತೆ ಪ್ರಾಣದ ಹಂಗನ್ನು ತ್ಯಜಿಸಿ ಹತ್ಯೆಯನ್ನು ಎಸಗುತ್ತಿದ್ದ. ಪಾಕಿಸ್ತಾನದಲ್ಲಿ ಕೂತಿದ್ದ ತಮ್ಮ ಧಣಿಗಳ ಆಣತಿಯನ್ನು ಕೇಳಿಸಿಕೊಳ್ಳಲು ಸಂವಹನಕ್ಕೆ ಬಳಸಿದ್ದು ಸೆಲ್ಫೋನ್ಗಳನ್ನು. ಆದರೆ ಈ ಥರದ ಆಧುನೀಕತೆ, ಸಂಘಟನೆ, ನಿಯಂತ್ರಣ ಪ್ಯಾರಿಸ್ ದಾಳಿಯಲ್ಲಿ ಇರಲಿಲ್ಲ.
ಸೋಮಾಲಿಯಾ ಉಗ್ರರು ಅನುಸರಿಸಿದ್ದರು
ಮುಂಬೈ ದಾಳಿಯನ್ನು ನಡೆಸಿದ್ದು ಲಷ್ಕರ್-ಇ-ತೈಬಾ ಅಥವಾ ಶುದ್ಧ ಸೇನೆ. ಅದಕ್ಕೆ ಬೆಂಬಲ ನೀಡಿದ್ದು ಪಾಕಿಸ್ತಾನದ ಗುಪ್ತಚರ ದಳದ ಐಎಸ್ಐ ಮತ್ತು ಅಲ್-ಕೈದಾ. ಈ ದಾಳಿ ಸಂಘಟಿಸುವ ಮುಂಚೆ ಮೂರು ವರ್ಷ ಯೋಜನೆ ರೂಪಿಸಲಾಗಿತ್ತು. ತಮ್ಮ ಗುರಿ ಯಾವುದು ಎಂಬುದನ್ನು ಎಚ್ಚರವಾಗಿ ಅಧ್ಯಯನ ಮಾಡಿ, ಬಹಳ ಮುಂಚಿತವಾಗಿ ಪರಿಶೀಲನೆ ಮಾಡಿಟ್ಟುಕೊಳ್ಳಲಾಗಿತ್ತು. ಆ ನಂತರ 2009ನೇ ಇಸವಿಯಲ್ಲಿ ಕೋಪನ್ಹೇಗನ್ನಲ್ಲಿ ಅಲ್- ಕೈದಾ ಮುಂಬೈ ಮಾದರಿಯಲ್ಲಿ ದಾಳಿ ಸಂಘಟಿಸಿತ್ತು. ಆದರೆ ಎಫ್ಬಿಐನಿಂದ ಈ ದಾಳಿಯ ರೂವಾರಿ ಪಾಕಿಸ್ತಾನಿ- ಅಮೆರಿಕನ್ನಲ್ಲಿ ಬಂಧಿಸಲಾಯಿತು. ಅದೇ ರೀತಿ 2013ರಲ್ಲಿ ನೈರೋಬಿಯ ವೆಸ್ಟ್ಗೇಟ್ ಮಾಲ್ನಲ್ಲಿಯೂ ಮುಂಬೈ ದಾಳಿ ಮಾದರಿಯನ್ನು ಸೋಮಾಲಿಯಾದ ಉಗ್ರರು ಅನುಸರಿಸಿದ್ದರು.
ಪ್ಯಾರಿಸ್ನಲ್ಲಿ ನಡೆದಿದ್ದ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಗುಂಪು, ಮುಂಬೈ ಮಾದರಿಯನ್ನು ಇರಾಕ್ನಲ್ಲಿ ಹಲವು ಕಡೆ ಬಳಸಿತು. ಅದಕ್ಕೆ ಕಾರಣ ಏನೆಂದರೆ, ದಾಳಿಯು ಸುದೀರ್ಘ ಅವಧಿಯದ್ದಾಗಿರುತ್ತದೆ. ಅಂದಹಾಗೆ ಕೆಲವು ವರ್ಷಗಳ ಹಿಂದೆ ಸ್ಪ್ಯಾನಿಷ್ ಪೊಲೀಸರು ಐಎಸ್ ಆಪರೇಟಿವ್ಸ್ಗಳನ್ನು ಬಂಧಿಸಿದ್ದರು. ಬಂಧಿತರು ಮುಂಬೈನಲ್ಲಿ ನಡೆದಂಥ ದಾಳಿಯ ಮಾದರಿಯಲ್ಲೇ ಮ್ಯಾಡ್ರಿಡ್ನಲ್ಲಿ ಕೃತ್ಯ ಎಸಗಲು ಯೋಜಿಸಿದ್ದರು. ವಿಶ್ವದ ನಾನಾ ದೇಶಗಳು ಮುಂಬೈ 26/11 ದಾಳಿಯನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡಿ, ಮುಖ್ಯವಾದ ಅಂಶಗಳನ್ನು ಕಲಿತಿದ್ದು ಇದೆ. 2008ರಲ್ಲಿ 26/11 ದಾಳಿಯ ವೇಳೆ ಭಾರತದ ಪೊಲೀಸರಿಗಿಂತ ಉತ್ತಮವಾಗಿ ಸಿದ್ಧರಾಗಿರಿ ಹಾಗೂ ಸನ್ನದ್ಧರಾಗಿರಿ ಎಂಬುದು ಮುಖ್ಯ ಕಲಿಕೆ. ಉನ್ನತ ಮಟ್ಟದ ಸೇನಾಪಡೆಯನ್ನು ನಿಯೋಜನೆ ಮಾಡಲಾಯಿತಾದರೂ ದೆಹಲಿಯಿಂದ ಮುಂಬೈಗೆ ತಂಡವು ಬರುವಷ್ಟರಲ್ಲಿ ಗಂಟೆಗಳೇ ಕಳೆದು ಹೋಗಿದ್ದವು. ಇದರಿಂದ ಭಾರೀ ನಷ್ಟ ಆಗಿಹೋಗಿತ್ತು.
ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಲಷ್ಕರ್ ನಾಯಕರು
ಲಷ್ಕರ್-ಇ-ತೈಬಾ ಮಾಡಿದ ತಪ್ಪಿಗೆ, ಅದರ ಬೆನ್ನಿಗೆ ನಿಂತ ಪಾಕಿಸ್ತಾನ ಗುಪ್ತಚರ ಇಲಾಖೆಗೆ ಹೀಗೆ ಮುಂಬೈ ದಾಳಿಯ ರೂವಾರಿಗಳು, ಕೈವಾಡ ಇದ್ದವರಿಗೆ ನಿರೀಕ್ಷಿತ ರೀತಿಯಲ್ಲಿ ಶಿಕ್ಷೆ ಆಗಲಿಲ್ಲ. ಲಷ್ಕರ್ನ ಹಿರಿಯ ನಾಯಕರು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಪಾಕಿಸ್ತಾನ ಸೇನೆಯ ಭದ್ರತೆ ಬೇರೆ ಸಿಕ್ಕಿದೆ. ಈ ಹಿಂದೆಂದಿಗಿಂತಲೂ ಲಷ್ಕರ್ ಹೆಚ್ಚು ಬಲಿಷ್ಠ ಹಾಗೂ ದೃಢವಾಗಿದೆ.
ಕೊನೆ ಮಾತು: ಹಾಗಿದ್ದರೆ ಮುಂಬೈ ದಾಳಿಯಿಂದ ಭಯೋತ್ಪಾದಕರು ಕಲಿತಿದ್ದೇನು? ಕಡಿಮೆ ಖರ್ಚಲ್ಲಿ ಹೆಚ್ಚು ಘಾಸಿ, ಹಾನಿ ಮಾಡಬೇಕು ಎಂಬುದು ಉಗ್ರರ ಉದ್ದೇಶ. ಅದಕ್ಕಾಗಿ ಅವರು ಬಳಸಿದ್ದು ಸಹ ಪಳಗಿದ ಉಗ್ರರನ್ನೂ ಅಲ್ಲ. ಟೆಕ್ನಾಲಜಿ, ಕಮ್ಯುನಿಕೇಷನ್ ಹಾಗೂ ವ್ಯವಸ್ಥೆಯಲ್ಲಿನ ವಿಳಂಬವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು, ಗರಿಷ್ಠ ಮಟ್ಟದಲ್ಲಿ ದಾಳಿ ಮಾಡಿದರು.
ಹಾಗಿದ್ದರೆ ಸರ್ಕಾರಗಳಿಗೆ ಪಾಠವೇನು? ಉಗ್ರರನ್ನು ಹೊಸಕಿ ಹಾಕುವ ವಿಚಾರದಲ್ಲಿ ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು. ಇದಕ್ಕಾಗಿ ತರಬೇತಿಯೊಂದಿಗೆ ಸಿದ್ಧಗೊಂಡ ತಂಡ ಇರಬೇಕು. ಭದ್ರತಾ ವಿಚಾರದಲ್ಲಿ ಸಣ್ಣ ಲೋಪವೂ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಇವೆಲ್ಲ ಮೇಲ್ನೋಟಕ್ಕೆ ಬಹಳ ಸರಳ ಅನಿಸಬಹುದು. ಆದರೆ ನವೆಂಬರ್ 26, 2008ರ ನಂತರ ಇಡೀ ಜಗತ್ತು ಬದಲಾಗಿದೆ. ಹೌದು, “ಬದಲು” ಆಗಿದೆ.
ಇದನ್ನೂ ಓದಿ: 26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ