Srirangapatna Dasara 2022: ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಬಗ್ಗೆ ಸ್ಪಷ್ಟತೆ ಇಲ್ಲ ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ
ಶ್ರೀರಂಗಪಟ್ಟಣದ ದಸರಾ ಮಹೋತ್ಸವದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಶಾಸಕರ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀರಂಗಪಟ್ಟಣದ ದಸರಾ ಮಹೋತ್ಸವದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಶಾಸಕರ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ 5 ದಿನಗಳ ಕಾಲ ದಸರಾ ಕಾರ್ಯಕ್ರಮ ನಡೆಯಲಿದೆ ಎಂದು ಮುದ್ರಿಸಲಾಗಿದ್ದರೂ ಕೂಡ, ಕೇವಲ 3 ದಿನ ಮಾತ್ರ ದಸರಾ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ, ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ, ಸಚಿವರು, ಅಧಿಕಾರಿಗಳ ನಡೆಗೆ ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಕಾರ್ಯಕ್ರಮಗಳ ಪಟ್ಟಿ ಇನ್ನೂ ಸಿದ್ಧವಾಗಿಲ್ಲ, ಗಜಪಡೆ ಸ್ವಾಗತಕ್ಕೆ ಯಾರೂ ಕೂಡ ಆಗಮಿಸಿಲ್ಲ ಎಂದಿದ್ದಾರೆ. ಹಿಂದೆಲ್ಲಾ ಸಚಿವರು, ಜಿಲ್ಲಾಡಳಿತದ ಅಧಿಕಾರಿಗಳು ಬಂದು ಖುದ್ದಾಗಿ ಸ್ವಾಗತ ಮಾಡುತ್ತಿದ್ದರು, ಈ ಬಾರಿ ಸಚಿವರು ಇಲ್ಲ, ಅಧಿಕಾರಿಗಳು ಕೂಡ ಭಾಗವಹಿಸಿಲ್ಲ, ನಾಡ ಹಬ್ಬದ ವಿಚಾರದಲ್ಲಿ ಇಷ್ಟೊಂದು ತಾತ್ಸಾರ ಏಕಿದೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾಡ ಹಬ್ಬ, ನಾಡಿನ ಒಳಿತಾಗಿ ಪೂಜಿಸುವ ವಿಚಾರ ಅಂತಾ ಸುಮ್ಮನಿದ್ದೇವೆ, ಸಚಿವರು, ಅಧಿಕಾರಿಗಳು ಯಾರೂ ಏನೂ ಹೇಳುತ್ತಿಲ್ಲ, ಇಲ್ಲಿ ಏನೇನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ನುಡಿದಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ