AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2024 Day 9: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ಆರಾಧನೆ

ನವರಾತ್ರಿಯ ಒಂಬತ್ತನೇ ದಿನದಂದು ಆ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಆ ಮಹಾ ತಾಯಿ. ದೇವಿಗೆ ನಾಲ್ಕು ಭುಜಗಳು. ಆಕೆಯ ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ.

Navratri 2024 Day 9: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರೀ ಆರಾಧನೆ
Siddhidatri
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on:Oct 03, 2024 | 2:49 PM

Share

ನವರಾತ್ರಿಯ ಒಂಬತ್ತನೇ ದಿನದಂದು ಆ ದೇವಿಯ ಸ್ವರೂಪದ ಹೆಸರು ಸಿದ್ಧಿದಾತ್ರೀ. ಹೆಸರೇ ಸೂಚಿಸುವಂತೆ ಸಿದ್ಧಿಯನ್ನು ಅನುಗ್ರಹಿಸುವವಳು ಅಥವಾ ನೀಡುವವಳು ಆ ಮಹಾ ತಾಯಿ. ಮಾರ್ಕಂಡೇಯ ಪುರಾಣದ ಪ್ರಕಾರವಾಗಿ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಹಾಗೂ ವಶಿತ್ವ ಹೀಗೆ ಎಂಟು ಸಿದ್ಧಿಗಳನ್ನು ಹೇಳಲಾಗಿದೆ. ಆದರೆ ಬ್ರಹ್ಮವೈವರ್ತ ಪುರಾಣದ ಶ್ರೀಕೃಷ್ಜನ್ಮಖಂಡದಲ್ಲಿ ಈ ಸಂಖ್ಯೆಯನ್ನು ಹದಿನೆಂಟು ಎಂದು ಹೇಳಲಾಗಿದೆ. ಆ ಜಗಜ್ಜನನಿಯನ್ನು ಆರಾಧನೆ ಮಾಡುವುದರಿಂದ, ಅದರಲ್ಲೂ ಶರನ್ನವರಾತ್ರಿಯ ಒಂಬತ್ತನೇ ದಿನದಂದು ಸಿದ್ಧಿದಾತ್ರೀ ಸ್ವರೂಪದಲ್ಲಿ ಆರಾಧಿಸುವುದರಿಂದ ಈ ಎಲ್ಲ ಸಿದ್ಧಿಗಳು ದೊರೆಯುತ್ತವೆ. ದೇವಿಪುರಾಣದಲ್ಲಿನ ಉಲ್ಲೇಖದ ಪ್ರಕಾರ, ಆ ಮಹಾಶಿವನಿಗೆ ಇವಳ ಕೃಪೆಯಿಂದಲೇ ಈ ಎಲ್ಲ ಸಿದ್ಧಿಗಳು ದೊರೆತಿತ್ತು. ಅಷ್ಟೇ ಅಲ್ಲ, ಇವಳ ಅನುಗ್ರಹದಿಂದಲೇ ಶಿವನ ಅರ್ಧ ಶರೀರವು ದೇವಿಯದಾಗಿತ್ತು. ಆದ್ದರಿಂದಲೇ ಶಿವನು ಜಗತ್ತಿನಲ್ಲಿ ‘ಅರ್ಧನಾರೀಶ್ವರ’ ಎಂಬ ಹೆಸರಿನಿಂದ ಪ್ರಖ್ಯಾತನಾದ, ಆದರ್ಶನಾದ.

ಸಿದ್ಧಿದಾತ್ರೀ ದೇವಿಯ ಸ್ವರೂಪ:

ಆ ದೇವಿಗೆ ನಾಲ್ಕು ಭುಜಗಳು. ಆಕೆಯ ವಾಹನ ಸಿಂಹ. ಈಕೆ ಕಮಲದ ಹೂವಿನ ಮೇಲೆ ಕುಳಿತಿದ್ದಾಳೆ. ತಾಯಿಯ ಕೆಳಗಿನ ಬಲಗೈಯಲ್ಲಿ ಚಕ್ರವಿದೆ, ಮೇಲಿನದರಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಹಿಡಿದಿದ್ದರೆ, ಮೇಲಿನ ಕೈಯಲ್ಲಿ ಕಮಲದ ಹೂವಿದೆ. ಯಾವ ವ್ಯಕ್ತಿಯು ಶರನ್ನವರಾತ್ರಿಯ ಒಂಬತ್ತನೇ ದಿನದಂದು ಈ ಸಿದ್ಧಿ ದಾತ್ರೀ ದೇವಿಯ ಆರಾಧನೆ ಮಾಡುತ್ತಾರೋ ಅಂಥವರಿಗೆ ಎಲ್ಲ ಸಿದ್ಧಿಗಳನ್ನು ಆ ತಾಯಿಯು ಅನುಗ್ರಹಿಸುತ್ತಾಳೆ. ಈ ಸೃಷ್ಟಿಯಲ್ಲಿ ಆ ವ್ಯಕ್ತಿಗೆ ನಿಲುಕಲಾರದ್ದು ಎಂಬುದು ಯಾವುದೂ ಇರುವುದಿಲ್ಲ.

ನವರಾತ್ರಿಯಲ್ಲಿ ದೇವಿಯ ಒಂಬತ್ತು ಸ್ವರೂಪಗಳನ್ನು ವಿವರಿಸುತ್ತಾ ಕೊನೆಯದಾಗಿ ಬರುವುದು ಸಿದ್ಧಿದಾತ್ರೀ ದೇವಿ ಸ್ವರೂಪವಾಗಿದೆ. ಉಳಿದ ಎಂಟು ದಿನಗಳಂತೆ ಒಂಬತ್ತನೇ ದಿನದಂದು ಸಹ ಈ ದೇವಿಯ ಆರಾಧನೆ ಮಾಡುವುದರಿಂದ ಆರಾಧಕರ ಲೌಕಿಕ- ಪಾರಮಾರ್ಥಿಕ ಎಲ್ಲ ಬಗೆಯ ಕೋರಿಕೆಗಳು ನೆರವೇರುತ್ತವೆ. ಆ ಭಗವತಿ ಸಿದ್ಧಿದಾತ್ರೀ ದೇವಿ ಅನುಗ್ರಹಿಸಿದ ಮೇಲೆ ಬೇರೆ ಯಾವ ಕೃಪೆ, ಅನುಗ್ರಹ, ರಕ್ಷಣೆಯ ಅಗತ್ಯವು ಸಹ ಆ ಆರಾಧಕರಿಗೆ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: ನವರಾತ್ರಿಯ 8ನೇ ದಿನದ ಸ್ವರೂಪ ಮಹಾಗೌರಿಯ ಕಥೆ ಹಾಗೂ ಪೂಜಾ ವಿಧಾನ

ಹದಿನೆಂಟು ಸಿದ್ಧಿಗಳ ಹೆಸರು ಯಾವ್ಯಾವು ಎಂಬುದರ ವಿವರ:

ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಮಹಿಮಾ, ಈಶಿತ್ವ ಹಾಗೂ ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:48 pm, Thu, 3 October 24

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ